ಮುಂಬೈ(ಮಹಾರಾಷ್ಟ್ರ): ಸ್ಥಳೀಯ ಡೇಟಾ ಶೇಖರಣಾ ಮಾನದಂಡಗಳನ್ನು ಅನುಸರಿಸಲು ವಿಫಲವಾದ ಕಾರಣ ಮಾಸ್ಟರ್ ಕಾರ್ಡ್ ಮೇಲೆ ಕಳೆದ ವರ್ಷ ವಿಧಿಸಿದ್ದ ವ್ಯವಹಾರದ ನಿರ್ಬಂಧಗಳನ್ನು ಆರ್ಬಿಐ ತೆರವುಗೊಳಿಸಿದೆ.
ಮಾಸ್ಟರ್ ಕಾರ್ಡ್ ಏಷ್ಯಾ/ಪೆಸಿಫಿಕ್ ಪ್ರೈ.ಲಿಮಿಟೆಡ್ ಪಾವತಿ ಸಿಸ್ಟಮ್ ಡೇಟಾ ಸಂಗ್ರಹಣೆಯಲ್ಲಿ ತೃಪ್ತಿದಾಯಕ ಅನುಸರಣೆಯನ್ನು ಪ್ರದರ್ಶಿಸಿದೆ. ಆದ್ದರಿಂದ ಹೊಸ ದೇಶೀಯ ಗ್ರಾಹಕರ ಪರಿಚಿತಗೊಳಿಸುವ ಮೇಲೆ ಹೇರಿದ ನಿರ್ಬಂಧಗಳನ್ನು ತಕ್ಷಣದಿಂದಲೇ ತೆಗೆದುಹಾಕಲಾಗಿದೆ ಎಂದು ಆರ್ಬಿಐ ತಿಳಿಸಿದೆ.
ಪಾವತಿ ಸಿಸ್ಟಮ್ ಡೇಟಾದ ಶೇಖರಣಾ ಮಾನದಂಡಗಳನ್ನು ಅನುಸರಿಸುವವರೆಗೆ ಹೊಸ ದೇಶೀಯ ಗ್ರಾಹಕರನ್ನು (ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೇಯ್ಡ್) ಪರಿಚಯ ಮಾಡದಂತೆ ಮಾಸ್ಟರ್ ಕಾರ್ಡ್ ಏಷ್ಯಾ /ಪೆಸಿಫಿಕ್ ಪಿಟಿಇಗೆ 2021ರ ಜುಲೈ 14ರಿಂದ ನಿರ್ಬಂಧಿಸಲಾಗಿತ್ತು.
ಇದನ್ನೂ ಓದಿ: ಶೇ 0.75ರಷ್ಟು ದಾಖಲೆ ಮಟ್ಟದ ಬಡ್ಡಿದರ ಏರಿಸಿದ ಫೆಡರಲ್ ಬ್ಯಾಂಕ್.. ಸಾಲ ಇನ್ನು ದುಬಾರಿ!!