ETV Bharat / business

ಮಾ.31 ರವರೆಗೆ ಶಾಖೆಗಳನ್ನು ತೆರೆದಿಡಲು ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ

2022-2023 ಹಣಕಾಸು ವರ್ಷದ ಖಾತೆಗಳ ವಾರ್ಷಿಕ ಮುಕ್ತಾಯಕ್ಕಾಗಿ ಮಾರ್ಚ್​ 31ರವರೆಗೆ ಬ್ಯಾಂಕ್​ಗಳನ್ನು ತೆರೆದಿರುವಂತೆ ಆರ್​​ಬಿಐ ಸೂಚನೆ ನೀಡಿದೆ.

RBI directs all banks to keep branches open till March 31 for annual closing
ಮಾ.31 ರವರೆಗೆ ಶಾಖೆಗಳನ್ನು ತೆರೆದಿಡಲು ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ
author img

By

Published : Mar 22, 2023, 1:07 PM IST

ನವದೆಹಲಿ : 2022- 2023ರ ಹಣಕಾಸು ವರ್ಷ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​​ನ(ಆರ್‌ಬಿಐ) ಅಡಿಯಲ್ಲಿ ಬರುವ ಎಲ್ಲಾ ಬ್ಯಾಂಕ್​ಗಳು ತಮ್ಮ ವಿವಿಧ ಶಾಖೆಗಳನ್ನು ಕೆಲಸದ ಅವಧಿಯಲ್ಲಿ ತೆರೆದಿರುವಂತೆ ಸೂಚನೆ ನೀಡಿದೆ. ಮಾ.31ಕ್ಕೆ 2022-2023ರ ಹಣಕಾಸು ವರ್ಷ ಕೊನೆಯಾಗಿವುದರಿಂದ, ಖಾತೆಗಳ ವಾರ್ಷಿಕ ಮುಕ್ತಾಯಕ್ಕಾಗಿ ಮಾರ್ಚ್ 31ರವರೆಗೆ ಬ್ಯಾಂಕ್​ ತೆರೆದಿರುವಂತೆ ತಿಳಿಸಲಾಗಿದೆ.

ಈ ಸಂಬಂಧ ಮಂಗಳವಾರ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳಿಗೆ ಪತ್ರ ಬರೆದಿರುವ ಆರ್‌ಬಿಐ, 2022-23ಕ್ಕೆ ಏಜೆನ್ಸಿ ಬ್ಯಾಂಕ್‌ಗಳು ಮಾಡಿರುವ ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಇದೇ ಹಣಕಾಸು ವರ್ಷದೊಳಗೆ ಲೆಕ್ಕ ಹಾಕಬೇಕು ಎಂದು ಸೂಚಿಸಿದೆ.

''ಎಲ್ಲಾ ಬ್ಯಾಂಕುಗಳು 2023ರ ಮಾರ್ಚ್ 31ರಂದು ಸಾಮಾನ್ಯ ಕೆಲಸದ ಸಮಯದವರೆಗೆ ಸರ್ಕಾರಿ ವಹಿವಾಟುಗಳಿಗೆ ಗೊತ್ತುಪಡಿಸಿದ ಹಣಕಾಸು ವ್ಯವಹಾರದ ಶಾಖೆಗಳನ್ನು ತೆರೆದಿರಬೇಕು" ಎಂದು ಆರ್​ಬಿಐ ತನ್ನ ಪತ್ರದಲ್ಲಿ ತಿಳಿಸಿದೆ. ಅಲ್ಲದೇ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ (NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ಮೂಲಕ ವಹಿವಾಟು ನಡೆಸಲು ಮಾರ್ಚ್ 31 ಮಧ್ಯರಾತ್ರಿ 12 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 31 ರಂದು ಸರ್ಕಾರಿ ಚೆಕ್‌ಗಳ ಸಂಗ್ರಹಕ್ಕಾಗಿ ವಿಶೇಷ ಕ್ಲಿಯರಿಂಗ್ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಆರ್‌ಬಿಐನ ಪಾವತಿ ಮತ್ತು ಸೆಟಲ್‌ಮೆಂಟ್ ಸಿಸ್ಟಮ್ಸ್ (ಡಿಪಿಎಸ್‌ಎಸ್) ಇಲಾಖೆ ಅಗತ್ಯ ಸೂಚನೆಗಳನ್ನು ನೀಡುತ್ತದೆ ಎಂದು ಅದು ಹೇಳಿದೆ.

ಇನ್ನು, GST ಅಥವಾ TIN2.0 ಇ-ರಶೀದಿಗಳ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಸೇರಿದಂತೆ ವಿವಿಧ ವಹಿವಾಟುಗಳ ವರದಿಗೆ ಸಂಬಂಧಿಸಿದಂತೆ, ಮಾರ್ಚ್ 31ರ ವರದಿಯನ್ನು ಏಪ್ರಿಲ್ 1 ರ ಮಧ್ಯಾಹ್ನ 12 ಗಂಟೆವರೆಗೆ ವರದಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಆರ್​​ಬಿಐ ಎಲ್ಲಾ ಬ್ಯಾಂಕುಗಳಿಗೆ ತಿಳಿಸಿದೆ.

ಇದನ್ನೂ ಓದಿ : ಮತ್ತೆ 9,000 ಜಾಬ್ ಕಟ್‌: ಉದ್ಯೋಗಿಗಳಿಗೆ ಶಾಕ್ ಕೊಟ್ಟ ಅಮೆಜಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.