ETV Bharat / business

ರೆಪೋದರ ಯಥಾಸ್ಥಿತಿ: ಶೇ 6.5ರಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧಾರ - ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

ಈ ಬಾರಿ ತನ್ನ ರೆಪೋದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧರಿಸಿದೆ. ರೆಪೋದರ ಶೇ 6.5 ರಲ್ಲಿಯೇ ಮುಂದುವರಿಯಲಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದ್ದಾರೆ.

RBI decides to keep repo rate unchanged at 6.5 pc

author img

By

Published : Apr 6, 2023, 1:40 PM IST

ನವದೆಹಲಿ: ಪ್ರಮುಖ ಬೆಂಚ್​ಮಾರ್ಕ್​ ಬಡ್ಡಿದರ ಆಗಿರುವ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಪ್ರಸ್ತುತ ರೆಪೋದರ ಈ ಹಿಂದಿನ ಶೇ 6.5 ದರದಲ್ಲೇ ಮುಂದುವರಿಯಲಿದೆ ಹಾಗೂ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಇದನ್ನು ಮರುಪರಿಶೀಲಿಸಲು ಆರ್​ಬಿಐ ಸಿದ್ಧವಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಪ್ರಕಟಿಸಿದರು. ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ (MPC) ಸಭೆಯ ನಂತರ ಇದನ್ನು ಪ್ರಕಟಿಸಲಾಗಿದೆ.

ಅಭಿವೃದ್ಧಿಯ ಬಗ್ಗೆ ಗುರಿಯನ್ನು ಕೇಂದ್ರೀಕೃತವಾಗಿಟ್ಟುಕೊಂಡು, ಹಣದುಬ್ಬರವು ಗುರಿಯೊಂದಿಗೆ ಸಮನ್ವಯತೆ ಸಾಧಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಎಂಪಿಸಿಯ ಆರರಲ್ಲಿ ಐವರು ಸದಸ್ಯರು ರೆಪೋ ದರ ಹೆಚ್ಚಿಸದಿರಲು ವೋಟ್ ಮಾಡಿದರು ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಈ ಹಿಂದೆ ಆರು ಬಾರಿ ಸತತವಾಗಿ ರೆಪೋ ದರ ಹೆಚ್ಚಳ ಮಾಡಿದ ನಂತರ ಈ ಬಾರಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ರಿಸರ್ವ್​ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ.

ಅದರಂತೆ ಆರ್‌ಬಿಐ ಸ್ಥಾಯಿ ಠೇವಣಿ ಸೌಲಭ್ಯವನ್ನು (ಎಸ್‌ಡಿಎಫ್) 6.25 ಶೇಕಡಾ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ಮತ್ತು ಬ್ಯಾಂಕ್ ದರಗಳನ್ನು ಶೇಕಡಾ 6.75 ರಲ್ಲಿ ಬದಲಾಯಿಸದೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ತನ್ನ ಏಪ್ರಿಲ್ 3, ಏಪ್ರಿಲ್ 5 ಮತ್ತು ಏಪ್ರಿಲ್ 6 ರಂದು ತನ್ನ ಮೂರು ದಿನಗಳ ಸಭೆ ನಡೆಸಿತು. ಫೆಬ್ರವರಿ ಆರಂಭದಲ್ಲಿ ನಡೆದಿದ್ದ ಆರ್‌ಬಿಐನ ಹಿಂದಿನ ಎಂಪಿಸಿ ಸಭೆಯಲ್ಲಿ, ಹಣದುಬ್ಬರ ನಿರ್ವಹಿಸಲು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 6.5 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಇಲ್ಲಿಯವರೆಗೆ, RBI ಮೇ 2022 ರಿಂದ ರೆಪೋ ದರವನ್ನು (ಬ್ಯಾಂಕುಗಳಿಗೆ ಸಾಲ ನೀಡುವ ದರ) 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

ಬಡ್ಡಿದರಗಳನ್ನು ಹೆಚ್ಚಿಸುವ ಕ್ರಮವು ವಿತ್ತೀಯ ನೀತಿ ಸಾಧನವಾಗಿದ್ದು, ಅದು ಸಾಮಾನ್ಯವಾಗಿ ಆರ್ಥಿಕತೆಯಲ್ಲಿ ಬೇಡಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆ ಮೂಲಕ ಹಣದುಬ್ಬರ ದರ ಇಳಿಕೆಗೆ ಸಹಾಯ ಮಾಡುತ್ತದೆ. ಹಣದುಬ್ಬರವು ಜನವರಿಯಿಂದ ಸತತ ಎರಡು ತಿಂಗಳುಗಳ ಕಾಲ ಆರ್‌ಬಿಐನ ಸಹಿಷ್ಣುತೆಯ ಮಿತಿಯಾದ ಶೇಕಡಾ 6 ಕ್ಕಿಂತ ಹೆಚ್ಚಿತ್ತು. ಫೆಬ್ರವರಿಯಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ 6.44ರಷ್ಟಿದ್ದರೆ, ಜನವರಿಯಲ್ಲಿ ಶೇ 6.52ರಷ್ಟಿತ್ತು. ಆಹಾರೇತರ ಹಾಗೂ ಇಂಧನ ಹೊರತಾದ ಮೂಲ ಹಣದುಬ್ಬರ ದರವು ಸತತ ನಾಲ್ಕನೇ ತಿಂಗಳಲ್ಲಿ ಶೇ 6ರ ಮೇಲೆ ಮುಂದುವರೆದಿದೆ. ಇದರಿಂದ ಏಪ್ರಿಲ್​​ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ರೆಪೋದರವನ್ನು 24 ಮೂಲಾಂಕಗಳಷ್ಟು ಹೆಚ್ಚಿಸಬಹುದು ಎನ್ನಲಾಗಿತ್ತು.

ಭಾರತೀಯ ರಿಸರ್ವ ಬ್ಯಾಂಕ್ ಒಂದು ವರ್ಷದಲ್ಲಿ ತನ್ನ ಹಣಕಾಸು ನೀತಿಯ ಆರು ದ್ವೈಮಾಸಿಕ ವಿಮರ್ಶಾ ಸಭೆಗಳನ್ನು ನಡೆಸುತ್ತದೆ. ಆದಾಗ್ಯೂ ತುರ್ತು ಸಮಯದಲ್ಲಿ ಆರ್​ಬಿಐ ಹೆಚ್ಚುವರಿ ಸಭೆಗಳನ್ನು ಕೂಡ ನಡೆಸುತ್ತದೆ. ಇಂದು ಹಣಕಾಸು ವರ್ಷ 2024 ರ RBI ನ ಮೊದಲ ದ್ವೈಮಾಸಿಕ ಹಣಕಾಸು ನೀತಿ ಸಭೆಯ ಮೊದಲ ಘೋಷಣೆ ಮಾಡಲಾಗಿದೆ. ಆರ್‌ಬಿಐ ರೆಪೋ ದರವನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ : ಹೆಚ್ಚು ಸಾಲ ಪಡೆದಿದ್ದೀರಾ?: ಬಡ್ಡಿ ಹೊರೆ ಕಡಿಮೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.