ಹೈದರಾಬಾದ್: ಖಾರಿಫ್ ಮತ್ತು ರಾಬಿ ಋತುಮಾನಗಳು ಬೆಲೆಗಳ ಸೀಸನ್ ಎಂದೇ ಗುರುತಿಸಲಾಗಿದೆ. ಈ ಸಮಯದಲ್ಲಿ ಬೇಳೆ ಕಾಳು ಮತ್ತು ತರಕಾರಿಗಳ ಬೆಲೆಗಳು ಗಗನಮುಖಿಯಾಗುತ್ತದೆ. ಈರುಳ್ಳಿ ಮತ್ತು ಟೊಮೆಟೊಗಳು ಶತಕದ ಗಡಿ ದಾಟಿ ಗ್ರಾಹಕರಲ್ಲಿ ಕಣ್ಣೀರು ಬರುವಂತೆ ಮಾಡುತ್ತದೆ. ಈ ಬಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಟೊಮೆಟೊ ದರಗಳು 50 ರೂ ಆಗಿದ್ದು, ಇದೀಗ 30 ರೂಗೆ ಇಳಿದಿದ್ದರೂ ಹಿಂದಿನ ಮಟ್ಟಕ್ಕೆ ಇಳಿದಿಲ್ಲ. ತರಕಾರಿಗಳು 70 ಮತ್ತು 80 ರೂ ಕೆಜಿಗೆ ಇದ್ದು, ಬೆಳೆ ಕಾಳುಗಳ ದರ 40 ರಿಂದ 70 ರೂ ಇದೆ.
ಬೆಳೆಗಳ ದರ: ಎರಡು ತಿಂಗಳ ಹಿಂದೆ 150 ರೂ ಇದ್ದ ಬೇಳೆ ಬೆಲೆ ಇದೀಗ 220 ಆಗಿದೆ. ಅಲ್ಲದೇ, ಇತರ ಕಾಳುಗಳ ದರವೂ 20 ರಿಂದ 30 ರೂ ಆಗಿದೆ. ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ತಿಂಡಿಗಳಾದ ಇಡ್ಲಿ ಮತ್ತು ದೋಸೆಗಳೀಗ ಭಾರಿ ಹೊರೆಯಾಗಿ ಪರಿಣಮಿಸಿವೆ. ಕಾರಣ ಉದ್ದಿನ ಬೆಳೆ ದರ ಕೆಜಿಗೆ 180 ರೂ ಆಗಿದೆ. ಹೆಸರು ಕಾಳಿನ ದರ 100 ರೂ ಇದ್ದು, ಇದು ಕೂಡ 140 ರೂ ಅಂಚಿಗೆ ಬರುತ್ತಿದೆ.
ತರಕಾರಿ ಕೂಡ ದುಬಾರಿ: 10 ದಿನದ ಹಿಂದೆ ಹೀರೆಕಾಯಿಯ ಬೆಲೆ ಕೆಜಿಗೆ 80 ರೂ ಇದ್ದು, ಬೆಂಡೆಕಾಯಿ ದರ ಕೆಜಿಗೆ 35 ರೂ ಇತ್ತು. ಇದೀಗ ಇವು 70 ರೂ ಆಗಿದೆ. ಬಹುತೇಕ ತರಕಾರಿಗಳು ಕೆಜಿಗೆ 70-80 ರೂ ಆಗಿದೆ. ಶುಂಠಿ ಬೆಲೆ ಕೆಜಿಗೆ 160 ರೂ ಇದ್ದು, ಬೆಳ್ಳುಳ್ಳಿ ಕೆಜಿಗೆ 370 ರೂನಂತೆ ಮಾರಾಟವಾಗುತ್ತಿದೆ.
ಗಗನ ಮುಖಿಯಾಗುತ್ತಿರುವ ದರಗಳು: ರೈತರು ತಮಗೆ ಕೈಗೆಟಕುವ ದರ ಸಿಗುತ್ತದೆಯಾ ಅಥವಾ ಇಲ್ಲವೇ ಎಂಬ ಚಿಂತೆ ಮಾಡುತ್ತಿದ್ದರೆ, ಗ್ರಾಹಕರು ಈ ಬೆಲೆಗಳಲ್ಲಿ ತಮಗೆ ನಿತ್ಯ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಯೋಚಿಸುತ್ತಿದ್ದಾರೆ. ನವೆಂಬರ್ನಲ್ಲಿ ಸೋನಾ ಮಸೂರಿ ಅಕ್ಕಿ ಕೆಜಿಗೆ 60 ರೂ ಇತ್ತು ಆದರೆ, ಇದೀಗ ಡಿಸೆಂಬರ್ನಲ್ಲಿ ಕೆಜಿಗೆ 67 ರೂನಂತೆ ಮಾರಾಟವಾಗುತ್ತಿದೆ. ಇಷ್ಟೇ ಅಲ್ಲದೆ ಸಾಮಾನ್ಯ ಅಕ್ಕಿ ದರ ಕೂಡ ಕೆಜಿಗೆ 50 ರಿಂದ 55 ರೂನಂತೆ ಮಾರಾಟವಾಗುತ್ತಿದೆ. ಸೋನಾಮಸೂರಿಯಲ್ಲಿ ಅನೇಕ ವಿಧಗಳಿದ್ದು, 25 ಕೆಜಿ ಬ್ಯಾಗ್ಗೆ 1650 ರಿಂದ 1700 ರೂವರೆಗೆ ಮಾರಾಟವಾಗುತ್ತಿದೆ. ಇನ್ನು ಕಳೆದ ಒಂದು ತಿಂಗಳಲ್ಲಿ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಅಕ್ಕಿ ಮತ್ತು ಬೆಳೆಕಾಳಿನ ದರ 25 ಬ್ಯಾಗ್ ದರ 200 ರೂ ಹೆಚ್ಚಾಗಿದೆ ಎಂದು ಕೃಷ್ಣನಗರ್ ಜಿಲ್ಲೆಯ ಹೋಲ್ಸೇಲ್ ಮಾರುಕಟ್ಟೆ ಮ್ಯಾನೇಜರ್ ಗಣೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಜೊಮಾಟೊ 2023 ಟ್ರೆಂಡ್ಸ್; ಬಿರಿಯಾನಿಗಾಗಿ 10 ಕೋಟಿ ಆರ್ಡರ್, 2ನೇ ಸ್ಥಾನದಲ್ಲಿ ಪಿಜ್ಜಾ