ಚೆನ್ನೈ : ದರಗಳಲ್ಲಿನ ಬದಲಾವಣೆ, ಅನಿಯಮಿತ 5G ಡೇಟಾ, ವ್ಯಾಪಕ ಶ್ರೇಣಿಯ ಓವರ್-ದಿ-ಟಾಪ್ (OTT) ಕಂಟೆಂಟ್ ಮುಂತಾದುವುಗಳ ಕಾರಣದಿಂದ ಹಣಕಾಸು ವರ್ಷ 2023 ರಲ್ಲಿ ಪೋಸ್ಟ್ಪೇಡ್ ಮೊಬೈಲ್ ಕನೆಕ್ಷನ್ ಬಳಸುವವರ ಸಂಖ್ಯೆ ಶೇ 12ಕ್ಕೆ ತಲುಪುವ ನಿರೀಕ್ಷೆಯಿದೆ. ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯದ (average revenue per user -ARPU) ನಡುವಿನ ಅಂತರವು ಕಡಿಮೆಯಾಗುತ್ತಿದೆ ಎಂದು CRISIL ರೇಟಿಂಗ್ಸ್ ವರದಿಯಲ್ಲಿ ತಿಳಿಸಿದೆ. ಈ ಹಣಕಾಸು ವರ್ಷದಲ್ಲಿ ಒಟ್ಟಾರೆ ವೈರ್‌ಲೆಸ್ ಮೊಬೈಲ್ ಚಂದಾದಾರರಲ್ಲಿ ಪೋಸ್ಟ್‌ಪೇಯ್ಡ್ ಚಂದಾದಾರರ ಪಾಲು ಶೇಕಡಾ 12 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ವರದಿಯ ಪ್ರಕಾರ, ಸೆಕ್ಟರ್‌ನ ಪೋಸ್ಟ್‌ಪೇಯ್ಡ್ ARPU 2021 ರ ಆರ್ಥಿಕ ವರ್ಷದಲ್ಲಿ ಸುಮಾರು 275 ರಿಂದ 2023 ರ ಆರ್ಥಿಕ ವರ್ಷದಲ್ಲಿ ಸುಮಾರು 245 ರೂ.ಗೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ, ಪ್ರಿಪೇಯ್ಡ್ ಎಆರ್ಪಿಯು ಸುಮಾರು 130ರೂಗಳಿಂದ ರೂ 170 ಕ್ಕೆ ಏರಿಕೆಯಾಗಿದೆ. ಇದರಿಂದಾಗಿ 2021-2023ರ ಆರ್ಥಿಕ ವರ್ಷದಲ್ಲಿ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಎಆರ್ಪಿಯು ಗಳ ನಡುವಿನ ಅಂತರವು ಸುಮಾರು 50 ಪ್ರತಿಶತದಷ್ಟು ಕಡಿಮೆಯಾಗಿದೆ.
ಏಆರ್ಪಿಯು ಇದು 2017-2021ರ ಹಣಕಾಸು ವರ್ಷಗಳಲ್ಲಿ ಸ್ಥಿರವಾದ ನಂತರ ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಪೋಸ್ಟ್‌ಪೇಯ್ಡ್ ಚಂದಾದಾರರ ಪಾಲನ್ನು ಸುಮಾರು 300 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 8ಕ್ಕೆ ಹೆಚ್ಚಿಸಿದೆ. ಹೆಚ್ಚುವರಿ OTT ಪ್ರವೇಶ ಪ್ರಯೋಜನಗಳ ಜೊತೆಗೆ ಸ್ಪರ್ಧಾತ್ಮಕ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳ ಪ್ರಾರಂಭದಿಂದ ಅಂತರವನ್ನು ಮತ್ತಷ್ಟು ಕಡಿಮೆ ಮಾಡಲು ಕಾರಣವಾಗುತ್ತದೆ ಎಂದು ವರದಿ ಹೇಳಿದೆ.
ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಎಆರ್‌ಪಿಯುಗಳ ನಡುವಿನ ವ್ಯತ್ಯಾಸವು ಈ ಹಣಕಾಸು ವರ್ಷದಲ್ಲಿ 1.1 ರಿಂದ 1.2 ಪಟ್ಟು ಕಡಿಮೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಈಗ 1.4 ರಿಂದ 1.5 ಪಟ್ಟು ಹೆಚ್ಚಾಗಿದೆ. ಇದು ನವೀಕರಿಸಿದ ಪೋಸ್ಟ್‌ಪೇಯ್ಡ್ ಯೋಜನೆಗಳ ಅಡಿ ಉತ್ತಮ ಪ್ರಯೋಜನಗಳ ಜೊತೆಗೆ ಪೋಸ್ಟ್‌ಪೇಯ್ಡ್ ಚಂದಾದಾರಿಕೆಯ ಪಾಲನ್ನು ಹೆಚ್ಚಿಸುತ್ತದೆ. ಪ್ರಸ್ತುತ ಇದು ಶೇಕಡಾ 8 ರಿಂದ ಶೇಕಡಾ 12 ಆಗಿದೆ. ಆದಾಗ್ಯೂ ಅಮೆರಿಕದಂಥ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಭಾರತವು ಹಿಂದುಳಿದಿದೆ. ಅಲ್ಲಿ ಶೇ 75ಕ್ಕೂ ಹೆಚ್ಚು ಮೊಬೈಲ್ ಬಳಕೆದಾರರು ಪೋಸ್ಟ್ಪೇಡ್ ಕನೆಕ್ಷನ್ ಹೊಂದಿದ್ದಾರೆ ಎಂದು ನಿರ್ದೇಶಕ ನವೀನ್ ವೈದ್ಯನಾಥನ್ ಹೇಳಿದ್ದಾರೆ.
ಹೊಸ ಪೋಸ್ಟ್ಪೇಡ್ ಗ್ರಾಹಕರು ಹೊಸದಾಗಿ 5ಜಿ ನೆಟ್ವರ್ಕ್ ಬಳಕೆದಾರರಾಗುವುದರಿಂದ ಟೆಲ್ಕೊಗಳು ಪೋಸ್ಟ್‌ಪೇಯ್ಡ್ ಚಂದಾದಾರರತ್ತ ತಮ್ಮ ಗಮನ ಕೇಂದ್ರೀಕರಿಸಿವೆ ಎಂದು ಟೀಮ್ ಲೀಡರ್ ರೌನಕ್ ಅಗರ್ವಾಲ್ ಹೇಳಿದರು. ಪೋಸ್ಟ್‌ಪೇಯ್ಡ್ ಎಆರ್‌ಪಿಯುಗಳು 2024 ರ ಆರ್ಥಿಕ ವರ್ಷದಲ್ಲಿ ಸುಮಾರು ಶೇಕಡಾ 6 ರಿಂದ 8 ಇಳಿಯುವ ನಿರೀಕ್ಷೆಯಿದೆ. ಇದು ಸುಮಾರು 225 ರಿಂದ 230 ರೂ.ಗೆ ಕಡಿಮೆಯಾಗಬಹುದು ಎಂದು ಅಗರ್ವಾಲ್ ಹೇಳಿದರು.
ಇದನ್ನೂ ಓದಿ : ಚಾಟ್ಜಿಪಿಟಿಗೆ ಪ್ರತಿಸ್ಪರ್ಧಿ ಟ್ರುಥ್ ಜಿಪಿಟಿ: ಎಲೋನ್ ಮಸ್ಕ್ ಹೊಸ ಪ್ರಾಜೆಕ್ಟ್