ETV Bharat / business

ನೀಟ್​ ಪರೀಕ್ಷೆ ಬರೆಯದೇ, ವೈದ್ಯಕೀಯ ವೃತ್ತಿ ಆರಿಸಿಕೊಳ್ಳಬಹುದು: ಈ ಕೋರ್ಸ್​ ಮಾಡಿ ಸಾಕು!

author img

By

Published : Jun 3, 2023, 12:54 PM IST

ವೈದ್ಯಕೀಯ ಕ್ಷೇತ್ರ ಎಂದರೆ ಅಲ್ಲಿ ಕೇವಲ ವೈದ್ಯರೊಬ್ಬರಿಗೆ ಮಹತ್ವ ಇಲ್ಲ. ಅವರಿಗೆ ಸಹಾಯವಾಗಿ ಅನೇಕ ಮಂದಿ ಇರುತ್ತಾರೆ. ಅಂತಹ ಕೋರ್ಸ್​ಗಳ ಮಾಹಿತಿ ಇಲ್ಲಿದೆ.

one-can-opt-for-medical-profession-without-writing-neet

ಹೈದರಾಬಾದ್​: ವೈದ್ಯ ಕ್ಷೇತ್ರವನ್ನು ಆಯ್ಜೆ ಮಾಡಿಕೊಳ್ಳುವುದು ಅನೇಕರ ಕನಸು. ನೀಟ್​​ ಪರೀಕ್ಷೆ ಬರೆಯುವ ಮೂಲಕವೇ ನೀವು ರೋಗಿಗಳ ಸೇವೆ ಮಾಡಬೇಕು ಎಂದಿಲ್ಲ. ಅನೇಕ ಇತರ ಮಾರ್ಗಗಳಿದ್ದು, ಅವುಗಳ ಮೂಲಕ ವೈದ್ಯ ವೃತ್ತಿ ನಿರ್ವಹಿಸಬಹುದು. ವೈದ್ಯರು ರೋಗಿಯನ್ನು ತಪಾಸಣೆ ಮಾಡಿದರೂ, ಇತರ ಕೆಲವು ತಜ್ಞರು ಅವರಿಗೆ ಹಲವು ವಿಧದಲ್ಲಿ ಸಹಾಯ ಮಾಡುತ್ತದೆ. ಅಂತಹವರಿಗೆ ಸದ್ಯ ಬೇಡಿಕೆ ಹೆಚ್ಚಿದೆ. ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಆಸಕ್ತಿ ಹೊಂದಿರುವವರು ಈ ವೃತ್ತಿಯನ್ನು ತಿಳಿಯುವುದು ಅವಶ್ಯ.

ಪ್ರತಿವರ್ಷ ದೇಶದಲ್ಲಿ 18 ರಿಂದ 20 ಲಕ್ಷ ಮಂದಿ ನೀಟ್​ ಪರೀಕ್ಷೆ ಬರೆಯುತ್ತಾರೆ. ಆದರೆ, ಇದರಲ್ಲಿ ಆಯ್ಕೆ ಆಗಿ ಕಾಲೇಜು ಸೇರುವ ಮಂದಿ ಕೇವಲ 7 ರಿಂದ 8 ಪ್ರತಿಶತ ಮಂದಿ. ಉಳಿದವರ ಕಥೆ ಏನು ಆಗ? ಇದೇ ಕಾರಣದಿಂದ ಎಂಬಿಬಿಎಸ್​ ಅಥವಾ ಬಿಡಿಎಸ್​ ಹೊರತುಪಡಿಸಿ ಅನೇಕ ವಿಧದ ವೈದ್ಯಕೀಯ ಕೋರ್ಸ್​​ಗಳು ಲಭ್ಯವಿದೆ. ಈ ಕೋರ್ಸ್​​ಗಳಿಗೆ ನೀಟ್​ ಬರೆಯದೇ ಸೇರಬಹುದಾಗಿದ್ದು, ಗೌರವಾನ್ವಿತ ಹುದ್ದೆ ಜೊತೆಗೆ ಉತ್ತಮ ವೇತನವನ್ನು ಪಡೆಯಬಹುದಾಗಿದೆ.

ಬಿಎಸ್ಸಿ ನರ್ಸಿಂಗ್​: ವೈದ್ಯರ ಬಳಿಕ ಹೆಚ್ಚು ಪ್ರಮಾಣಿತ ಪದವಿ ಇದಾಗಿದೆ. ರೋಗಿಗಳ ಸೇವೆಯಲ್ಲಿ ದಾದಿಯರ ಪಾತ್ರ ಅಪಾರ. ನಾಲ್ಕು ವರ್ಷದ ಯುಜಿ ಕೋರ್ಸ್​ ಇದಾಗಿದ್ದು, ವೈದ್ಯರಿಗೆ ಎಲ್ಲ ರೀತಿಯ ಬೆಂಬವ ನೀಡುವ ತರಬೇತಿ ನೀಡಲಾಗುವುದು. ಐಸಿಯು, ಸಿಸಿಯು, ಇಆರ್​ ಮತ್ತು ಒಟಿಯಂತಹ ಹಲವು ವಿಭಾಗದಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಈ ಕೋರ್ಸ್​ ಪೂರೈಸುವ ಮೂಲಕ ಸ್ಟಾಫ್​​ ನರ್ಸ್​​, ರಿಜಿಸ್ಟ್ರೇರ್ಡ್​ ನರ್ಸ್​ ಅಥವಾ ನರ್ಸ್​ ಶಿಕ್ಷಕರು ಆಗಬಹುದು.

ಬಿ ಫಾರ್ಮಸಿ: ನಾಲ್ಕು ವರ್ಷದ ಪದವಿ ಕೂರ್ಸ್​ ಇದಾಗಿದ್ದು, ಫಾರ್ಮಾಸ್ಯಟಿಕಲ್​ ಉದ್ಯಮದಲ್ಲಿ ಆಸಕ್ತಿ ಹೊಂದಿರುವವರು ಆಯ್ಕೆ ಮಾಡಬಹುದು. ಸುರಕ್ಷತೆ, ಆವಿಷ್ಕಾರ, ವೈದ್ಯಕೀಯ ರಸಾಯನಶಾಸ್ತ್ರ, ಇಂಡಸ್ಟ್ರಿಯಲ್​ ಫಾರ್ಮಸಿ ಮತ್ತು ಕ್ಲಿನಿಕಲ್​ ಪ್ರಾಕ್ಟ್ರಿಸ್​ಗಳನ್ನು ಈ ಕೋರ್ಸ್​ ಅಡಿ ಅಧ್ಯಯನ ಮಾಡಬಹುದು. ಇದರಲ್ಲಿ ಡಿಪ್ಲೊಮಾ ಪದವಿ ಕೂಡ ಲಭ್ಯವಿದೆ. ಈ ಪದವಿ ಪೂರ್ಣಮಾಡಿರುವ ಅಭ್ಯರ್ಥಿಗಳು ಕೆಮಿಕಲ್​ ಟೆಕ್ನಿಷಿಯನ್​, ಹೆಲ್ತ್​ ಇನ್ಸ್​ಪೆಕ್ಟರ್​ ಮತ್ತು ಫಾರ್ಮಸಿಸ್ಟ್​ ಆಗಿ ಕಾರ್ಯ ನಿರ್ವಹಿಸಬಹುದು.

ಪಿಜಿಯೋಥೆರಪಿ: ಇತ್ತೀಚಿನ ದಿನದಲ್ಲಿ ಬಹು ಬೇಡಿಕೆಯ ಹೊಂದಿರುವ ಕ್ಷೇತ್ರ ಇದಾಗಿದೆ. ವಿವಿಧ ಕಾರಣಗಳಿಂದ ಹಾನಿಗೊಳಗಾದ ದೇಹದ ಭಾಗಗಳ ಚಲನೆಯನ್ನು ಪುನಃಸ್ಥಾಪಿಸುವಲ್ಲಿ ಭೌತಚಿಕಿತ್ಸೆಯು ಪ್ರಮುಖವಾಗಿದೆ. ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತು ಅವರ ಹಿಂದಿನ ಜೀವನವನ್ನು ಮರಳಿ ಪಡೆಯಲು ಸಹಾಯ ಮಾಡುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಆರೋಗ್ಯ - ಫಿಟ್‌ನೆಸ್ ಕ್ಲಿನಿಕ್‌ಗಳು, ವಿಶೇಷ ಶಾಲೆಗಳು ಮತ್ತು ಕೈಗಾರಿಕಾ ಆರೋಗ್ಯ ಕ್ಷೇತ್ರಗಳಲ್ಲಿ ಭೌತಚಿಕಿತ್ಸಕರಾಗಿ ಉದ್ಯೋಗಗಳನ್ನು ನಿರೀಕ್ಷಿಸಬಹುದು. ನೀವು ವರ್ಷಕ್ಕೆ ಸರಾಸರಿ ರೂ.3 ರಿಂದ ರೂ.7 ಲಕ್ಷ ಗಳಿಸಬಹುದು.

ಬಿಎಸ್ಸಿ- ಬಯೋಟೆಕ್ನಾಲಾಜಿ: ಇದು ಮೂರು ವರ್ಷದ ಪದವಿ ಆಗಿದ್ದು. ಆಣ್ವಿಕ ಮತ್ತು ಜೀವರಸಾಯನಶಾಸ್ತ್ರದಲ್ಲಿ ಪರಿಣತಿ ಪಡೆಯಬಹುದು. ಇದನ್ನು ಪೂರ್ಣ ಮತ್ತು ಅಲ್ಪ ಸಮಯದಲ್ಲಿ ಕಲಿಯಬಹುದಾಗಿದೆ. ಇದರಲ್ಲಿ ದೂರ ಶಿಕ್ಷಣವೂ ಲಭ್ಯವಿದೆ. ಸಂಶೋಧನಾ ಯೋಜನೆಗಳಲ್ಲಿ ಬಳಸಬಹುದಾದ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಯಬಹುದು. ನೈಸರ್ಗಿಕ ರೀತಿಯಲ್ಲಿ ಜೀವಶಾಸ್ತ್ರ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕೃಷಿ, ಫಾರ್ಮಾ, ಆಹಾರ, ಜೀನೋಮಿಕ್ಸ್ ಮತ್ತು ರಸಾಯನಶಾಸ್ತ್ರದಂತಹ ವಿವಿಧ ಕ್ಷೇತ್ರಗಳನ್ನು ಪ್ರವೇಶಿಸಬಹುದು. ಬಯೋಕೆಮಿಸ್ಟ್, ಎಪಿಡೆಮಿಯಾಲಜಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್‌ನಂತಹ ಉದ್ಯೋಗಗಳಿವೆ

ಬಿಎಸ್ಸಿ, ಬಿಎ ಮನಶಾಸ್ತ್ರ: ಮಾನವನ ಮಿದುಳು ಮತ್ತು ಮನಸ್ಸನ್ನು ಕಲಿಯುವ ವಿಜ್ಞಾನ ಇದಾಗಿದೆ. ಮಾನವ ಅಭಿವೃದ್ಧಿ, ಕ್ರೀಡೆ, ಆರೋಗ್ಯಮ ಕ್ಲಿನಿಕಲ್​, ಫಾರೆನ್ಸಿಕ್​, ರಕ್ಷಣೆ, ಸಾಮಾಜಿಕ ನಡುವಳಿಕೆ ಮತ್ತು ಅರಿವಿನ ಪ್ರಕ್ರಿಯೆ ಹೀಗೆ ಇದರಲ್ಲಿ ಅನೇಕ ವಿಧದ ಕೋರ್ಸ್​ಗಳಿವೆ. ಹೆಚ್ಚುತ್ತಿರುವ ಒತ್ತಡ ಮತ್ತು ಬದಲಾಗುತ್ತಿರುವ ಜೀವನಶೈಲಿಯೊಂದಿಗೆ, ಈ ತಜ್ಞರ ಸೇವೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ವಿಶ್ವವಿದ್ಯಾಲಯಗಳು, ಸರ್ಕಾರಿ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಅವಕಾಶವಿದೆ. ಕೆರಿಯರ್ ಕೌನ್ಸಿಲರ್, ಕ್ಲಿನಿಕಲ್ ಸೈಕಾಲಜಿಸ್ಟ್, ನ್ಯೂರೋಸೈಕಾಲಜಿಸ್ಟ್, ಸೈಕೋಥೆರಪಿಸ್ಟ್, ಕನ್ಸಲ್ಟೆಂಟ್ ಆಗಿ ಹಲವು ಉದ್ಯೋಗಗ ಅವಕಾಶಗಳು ಇವೆ.

ಬಿಎಸ್ಸಿ ಗೃದ್ರೋಗ ತಂತ್ರಜ್ಞಾನ: ಈ ಪದವಿಯಲ್ಲಿ, ವಿದ್ಯಾರ್ಥಿಗಳು ಮಾನವ ಅಂಗರಚನಾಶಾಸ್ತ್ರ, ಜೀವರಸಾಯನಶಾಸ್ತ್ರ, ಶರೀರಶಾಸ್ತ್ರ, ರಕ್ತ ಬ್ಯಾಂಕಿಂಗ್ ಮತ್ತು ಹೆಮಟಾಲಜಿಯಂತಹ ವಿಷಯಗಳನ್ನು ಅಧ್ಯಯನ ಮಾಡಬಹುದು ಹೃದ್ರೋಗ ಸಹಾಯಕರನ್ನು ಸಿದ್ಧಪಡಿಸುವ ಕ್ಷೇತ್ರದಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ವೈದ್ಯರಿಗೆ ಸಹಾಯ ಮಾಡುತ್ತಾರೆ ಇವರು. ರೋಗಿಗಳಿಗೆ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್​​ಗಳನ್ನು ನಡೆಸುವಲ್ಲಿ ಅವರ ಪಾತ್ರವು ಮುಖ್ಯವಾಗಿದೆ. ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಅವಕಾಶಗಳಿವೆ. ನಿಮ್ಮ ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ನೀವು ವರ್ಷಕ್ಕೆ ಸರಾಸರಿ ರೂ.3 ಲಕ್ಷದಿಂದ ರೂ.13 ಲಕ್ಷ ಗಳಿಸಬಹುದು

ಬಿಎನ್​ವೈಎಸ್​​: ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಐದೂವರೆ ವರ್ಷಗಳ ಪದವಿ ಆಗಿದೆ. ಅಕ್ಯುಪಂಕ್ಚರ್, ಪೋಷಣೆ ಮತ್ತು ಗಿಡಮೂಲಿಕೆ ಔಷಧಿಗಳಂತಹ ವಿವಿಧ ವಿಧಾನಗಳನ್ನು ಬಳಸಿಕೊಂಡು ನೈಸರ್ಗಿಕ ವಿಧಾನ ಮೂಲಕ ಚಿಕಿತ್ಸೆ ನೀಡಲಾಗುವುದು. ನೈಸರ್ಗಿಕತೆ ಬಗ್ಗೆ ಅರಿವು, ಆಸಕ್ತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಿದೆ.

ಬಿಎಸ್ಸಿ ಫುಡ್​ ಟೆಕ್ನಾಲಾಜಿ: ಆಹಾರ ಸಂಸ್ಕರಣೆ, ಸಂರಕ್ಷಣೆ, ಉತ್ಪಾದನೆ ಮತ್ತು ಸಂಗ್ರಹಣೆ ಈ ಪದವಿಯಲ್ಲಿ ಒಳಗೊಂಡಿದೆ. ರಸಾಯನಶಾಸ್ತ್ರ, ಜೀವಶಾಸ್ತ್ರ, ಪೌಷ್ಟಿಕಾಂಶ, ಜೀವರಸಾಯನಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಇತ್ಯಾದಿ ಅನೇಕ ವಿಷಯಗಳು ಅದರ ಭಾಗವಾಗಿದೆ. ಈ ವೃತ್ತಿಪರರಿಗೆ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉತ್ತಮ ಅವಕಾಶಗಳಿವೆ. ಇದರಲ್ಲಿ ಬಿಟೆಕ್ ಕೂಡ ಮಾಡಬಹುದು. ಇವರಿಗೆ ಸಂಶೋಧನಾ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ.

ನ್ಯೂಟ್ರಿಷಿಯನ್​ ಮತ್ತು ಡಯಟಿಷಿಯನ್​: ವ್ಯಕ್ತಿಯ ದೈಹಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಹಾರ ಮತ್ತು ಅನುಸರಿಸಬೇಕಾದ ಅಭ್ಯಾಸಗಳನ್ನು ಸೂಚಿಸುತ್ತಾರೆ. ಕ್ರೀಡೆ, ಸಾರ್ವಜನಿಕ ಆರೋಗ್ಯದಂತಹ ವಿವಿಧ ವಲಯದಲ್ಲಿ ಇದಕ್ಕೆ ಬೇಡಿಕೆ ಹೆಚ್ಚಿದೆ. ಇದರ ಹೊರತಾಗಿ ಸಾಮಾನ್ಯ ಜನರು ತಮ್ಮ ಆಹಾರ ಕ್ರಮ ಅನುಸರಿಸಲು ಡಯಟಿಷಿಯನ್, ನ್ಯೂಟ್ರಿಶಿಯನ್, ಪ್ರಾಜೆಕ್ಟ್ ಅಸಿಸ್ಟೆಂಟ್​ ಸಲಹೆಯನ್ನು ಪಡೆಯುತ್ತಿದ್ದಾರೆ.

ವಿದ್ಯಾರ್ಹತೆ: ಈ ಮೇಲಿನ ವೃತ್ತಿಪರ ಕೋರ್ಸ್​​ಗಳ ಆಯ್ಕೆ ಮಾಡುವವರು ಪಿಯುಸಿ ಅಥವಾ 12ನೇ ತರಗತಿ ಪೂರ್ಣಗೊಳಿಸಿರಬೆಕು. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ (ಪಿಸಿಎಂ/ ಪಿಸಿಬಿ) ಅಭ್ಯಾಸ ಮಾಡಿರಬೇಕು. ಈ ಕೋರ್ಸ್​ಗಳಿಗೆ 3 ರಿಂದ 10 ಲಕ್ಷದವರೆಗೆ ಖರ್ಚಾಗಲಿದೆ. ಈ ಕೋರ್ಸ್​​ಗಳ ಕಲಿಕೆ ಅವಧಿ ಮೂರರಿಂದ ಐದೂವರೆ ವರ್ಷವಾಗಿದೆ. ಈ ಕೋರ್ಸ್​​ಗಳಿಗೆ ಮೆರಿಟ್​ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

ಇದನ್ನೋ ಓದಿ: ಮಹಿಳೆಯರಲ್ಲಿನ ಹೃದಯಾಘಾತಕ್ಕೆ ಕಾರಣವಾಗುವ ಹೊಸ ವಂಶವಾಹಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.