ETV Bharat / business

ಹಲ್ದಿರಾಮ್ ಸ್ವಾಧೀನಪಡಿಸಿಕೊಳ್ಳುವ ಮಾತುಕತೆ ನಡೆಸುತ್ತಿಲ್ಲ: ಟಾಟಾ ಕನ್ಸೂಮರ್ ಸ್ಪಷ್ಟನೆ

ತಿಂಡಿ ತಿನಿಸು ತಯಾರಕ ಕಂಪನಿ ಹಲ್ದಿರಾಮ್​ ಅನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದು ಟಾಟಾ ಕನ್ಸೂಮರ್ ಹೇಳಿದೆ.

not in negotiations to acquire haldiram : tata

author img

By ETV Bharat Karnataka Team

Published : Sep 6, 2023, 7:45 PM IST

ನವದೆಹಲಿ : ದೇಶದ ಪ್ರಮುಖ ತಿಂಡಿ ತಿನಿಸುಗಳ ತಯಾರಕ ಕಂಪನಿ ಹಲ್ದಿರಾಮ್ ಸ್ವಾಧೀನಪಡಿಸಿಕೊಳ್ಳುವ ಯಾವುದೇ ಮಾತುಕತೆಗಳನ್ನು ನಡೆಸುತ್ತಿಲ್ಲ ಎಂದು ಟಾಟಾ ಕನ್ಸೂಮರ್ ಸ್ಪಷ್ಟಪಡಿಸಿದೆ. ಮಾಧ್ಯಮ ವರದಿಗಳಲ್ಲಿ ವರದಿಯಾದಂತೆ ಹಲ್ದಿರಾಮ್ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂದು ಟಾಟಾ ಕನ್ಸ್ಯೂಮರ್ ಹೇಳಿದೆ.

"ಸೆಬಿ (ಎಲ್ಒಡಿಆರ್) ನಿಯಮಗಳು, 2015 ರ ನಿಯಮ 30 ರ ಅಡಿ ಬಹಿರಂಗಪಡಿಸುವ ಅಗತ್ಯವಿರುವ ಯಾವುದೇ ಮಾಹಿತಿಯನ್ನು ವಿನಿಮಯ ಕೇಂದ್ರಗಳಿಗೆ ಘೋಷಿಸದ ಯಾವುದೇ ವಿಷಯದ ಬಗ್ಗೆ ನಮಗೆ ತಿಳಿದಿಲ್ಲ" ಎಂದು ಟಾಟಾ ಕನ್ಸ್ಯೂಮರ್ ಹೇಳಿದೆ. "ತನ್ನ ವ್ಯವಹಾರ ಬೆಳವಣಿಗೆ ಮತ್ತು ವಿಸ್ತರಣೆಗಾಗಿ ಕಂಪನಿಯು ವಿವಿಧ ಕಾರ್ಯತಂತ್ರದ ಅವಕಾಶಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತದೆ ಎಂದು ನಾವು ತಿಳಿಸಲು ಬಯಸುತ್ತೇವೆ. ಸೆಬಿ (ಎಲ್ಒಡಿಆರ್) ನಿಯಮಗಳು, 2015 ರ ಅಡಿಯಲ್ಲಿನ ಬಾಧ್ಯತೆಗಳಿಗೆ ಅನುಸಾರವಾಗಿ ಅಂತಹ ಯಾವುದೇ ಅಗತ್ಯವಿದ್ದಾಗ ಕಂಪನಿಯು ಸೂಕ್ತ ಪ್ರಕಟಣೆಗಳನ್ನು ನೀಡುತ್ತದೆ" ಎಂದು ಅದು ಹೇಳಿದೆ.

ಟಾಟಾ ಕನ್ಸ್ಯೂಮರ್ ಷೇರು ಬೆಲೆ ಇಂದು ಬಿಎಸ್ಇಯಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಿ 879 ರೂ.ಗೆ ತಲುಪಿದೆ. ಟಾಟಾ ಗ್ರೂಪ್​ನ ಗ್ರಾಹಕ ಘಟಕವಾದ ಟಾಟಾ ಕನ್ಸೂಮರ್ ಜನಪ್ರಿಯ ಭಾರತೀಯ ತಿಂಡಿ ತಿನಿಸುಗಳ ತಯಾರಕ ಕಂಪನಿ ಹಲ್ದಿರಾಮ್​ನಲ್ಲಿ ಕನಿಷ್ಠ ಶೇಕಡಾ 51 ರಷ್ಟು ಪಾಲು ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಭಾರತದಲ್ಲಿ ಮನೆಮಾತಾಗಿರುವ ಹಲ್ದಿರಾಮ್ ಬೈನ್ ಕ್ಯಾಪಿಟಲ್ ಸೇರಿದಂತೆ ಖಾಸಗಿ ಈಕ್ವಿಟಿ ಸಂಸ್ಥೆಗಳೊಂದಿಗೆ ಶೇಕಡಾ 10 ರಷ್ಟು ಪಾಲು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಯುಕೆ ಚಹಾ ಕಂಪನಿ ಟೆಟ್ಲಿಯ ಒಡೆತನ ಹೊಂದಿರುವ ಮತ್ತು ಭಾರತದಲ್ಲಿ ಸ್ಟಾರ್​ಬಕ್ಸ್​ನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಷೇರು ಖರೀದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. ಯುರೋಮಾನಿಟರ್ ಇಂಟರ್​ ನ್ಯಾಷನಲ್ ಪ್ರಕಾರ, ಭಾರತದ 6.2 ಬಿಲಿಯನ್ ಡಾಲರ್ ಖಾರದ ತಿಂಡಿ ಮಾರುಕಟ್ಟೆಯಲ್ಲಿ ಹಲ್ದಿರಾಮ್ಸ್ ಸುಮಾರು 13 ಪ್ರತಿಶತದಷ್ಟು ಪಾಲನ್ನು ಹೊಂದಿದೆ. ಲೇಸ್ ಚಿಪ್ಸ್ ಗೆ ಹೆಸರುವಾಸಿಯಾದ ಪೆಪ್ಸಿ ಸುಮಾರು 13 ಪ್ರತಿಶತದಷ್ಟು ಪಾಲು ಹೊಂದಿದೆ.

ನಾಗ್ಪುರ ಮೂಲದ ಹಲ್ದಿರಾಮ್ ಫುಡ್ಸ್ ಇಂಟರ್​ ನ್ಯಾಷನಲ್ ಅನ್ನು ಹಿರಿಯ ಸಹೋದರ ಶಿವ ಕಿಶನ್ ಅಗರ್ವಾಲ್ ನಡೆಸುತ್ತಿದ್ದರೆ, ದೆಹಲಿ ಮೂಲದ ಹಲ್ದಿರಾಮ್ ಸ್ನ್ಯಾಕ್ಸ್ ಅನ್ನು ಕಿರಿಯ ಸಹೋದರರಾದ ಮನೋಹರ್ ಮತ್ತು ಮಧುಸೂದನ್ ಅಗರ್ವಾಲ್ ನಡೆಸುತ್ತಿದ್ದಾರೆ. ಎಲ್ಲಾ ವ್ಯವಹಾರಗಳು ಸ್ವತಂತ್ರ ಘಟಕಗಳಾಗಿ ನಡೆಯುತ್ತವೆ. ಈ ಪೈಕಿ ದೆಹಲಿ ಘಟಕ 5,000 ಕೋಟಿ ರೂ. ವಹಿವಾಟು ಹೊಂದಿದ್ದು, ನಾಗ್ಪುರ 4,000 ಕೋಟಿ ರೂ. ಮತ್ತು ಬಿಕಾನೇರ್ 1,600 ಕೋಟಿ ರೂ. ವಹಿವಾಟುಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ : ಆಗಸ್ಟ್​ನಲ್ಲಿ ದೇಶದ ವಿದ್ಯುತ್ ಬೇಡಿಕೆ ಶೇ 16ರಷ್ಟು ಏರಿಕೆ; 151 ಬಿಲಿಯನ್ ಯೂನಿಟ್ ಬಳಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.