ನವದೆಹಲಿ: ಇ-ಕಾಮರ್ಸ್ ದೈತ್ಯಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಮೈಂತ್ರಾ ಮತ್ತು ಮೀಸೋ ಸೇರಿದಂತೆ ಇತರ ಆನ್‌ಲೈನ್ ಸೇಲ್ ಕಂಪನಿಗಳು ಭಾನುವಾರದಿಂದ ದೇಶದಲ್ಲಿ ಹಬ್ಬದ ಮಾರಾಟ ಶುರು ಮಾಡಿವೆ. ಭರ್ಜರಿ ಆಫರ್ಗಳನ್ನು ನೀಡಿದ್ದು, ನಾಮುಂದು- ತಾಮುಂದು ಎಂಬಂತೆ ಕೊಡುಗೆಗಳನ್ನು ಘೋಷಿಸಿದ್ದು, ಭರ್ಜರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿವೆ. ಹಬ್ಬದ ತಿಂಗಳಲ್ಲಿ ಸರಿ ಸುಮಾರು 90,000 ಕೋಟಿ ಮೌಲ್ಯದ ಆನ್‌ಲೈನ್ ಸರಕುಗಳನ್ನು ಮಾರಾಟ ಮಾಡುವ ನಿರೀಕ್ಷೆ ಇಟ್ಟುಕೊಂಡಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಈ ಮಾರಾಟ ಸುಮಾರು ಶೇ 18-20 ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಸುಮಾರು 140 ಮಿಲಿಯನ್ ಶಾಪರ್‌ಗಳು, ಆನ್‌ಲೈನ್ ಮಾರಾಟಗಾರರು, ವಿಶೇಷವಾಗಿ ಸಣ್ಣ ಮಾರಾಟಗಾರರು, ವರ್ಷದಿಂದ ವರ್ಷಕ್ಕೆ ಅಂದರೆ ಹಬ್ಬದ ಮಾರಾಟದಲ್ಲಿ ಕನಿಷ್ಠ 10ರಿಂದ 15 ರಷ್ಟು ಪ್ರತಿಶತದಷ್ಟು ಹೆಚ್ಚಳವನ್ನು ನಿರೀಕ್ಷೆ ಮಾಡುತ್ತಾರಂತೆ. ಈ ಬಾರಿಯ ಅಂದಾಜಿನಂತೆ ಸುಮಾರು ಶೇ. 26 ರಷ್ಟು ಮಾರಾಟ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಮಾರುಕಟ್ಟೆ ಗುಪ್ತಚರ ಸಂಸ್ಥೆ ರೆಡ್‌ಸೀರ್ ತಿಳಿಸಿದೆ.
ಒಂದು ಲಕ್ಷ ತಾತ್ಕಾಲಿಕ ಹುದ್ದೆ ಸೃಷ್ಟಿ: ಅಮೆಜಾನ್ ಇಂಡಿಯಾ ಹಬ್ಬದ ಋತುವಿಗಾಗಿ ಸುಮಾರು 1 00,000 ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ, ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಲಕ್ನೋ ಮತ್ತು ಚೆನ್ನೈನಂತಹ ನಗರಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಈ ಅಂದಾಜಿನಲ್ಲಿ ಸೇರಿವೆ. 23 ಲಕ್ಷಕ್ಕೂ ಹೆಚ್ಚು ಫ್ಯಾಷನ್, ಸೌಂದರ್ಯ ಮತ್ತು ಜೀವನಶೈಲಿ ಉತ್ಪನ್ನಗಳೊಂದಿಗೆ 6,000 ಪ್ರಮುಖ ಅಂತಾರಾಷ್ಟ್ರೀಯ, ದೇಶೀಯ ಮತ್ತು D2C ಬ್ರ್ಯಾಂಡ್‌ಗಳೊಂದಿಗೆ Myntra's Big Fashion Festival ಆರಂಭಿಸಿದೆ.
ಯಾವ್ಯಾವ ಕಾರ್ಡ್ಗಳ ಮೇಲೆ ರಿಯಾಯಿತಿ: ಈ ಈವೆಂಟ್‌ನಲ್ಲಿ ಗ್ರಾಹಕರು, ಸಾವಿರಾರು ದೇಶೀಯ ಮತ್ತು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳಲ್ಲಿ ನಾನಾ ಬಗೆಯ ಕೊಡುಗೆಗಳನ್ನು ಪಡೆದುಕೊಳ್ಳಲಿದ್ದಾರೆ. ಜೊತೆಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಹಯೋಗದೊಂದಿಗೆ Myntra ನ ಸಹ-ಬ್ರಾಂಡ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ 15 ಶೇಕಡಾ ರಿಯಾಯಿತಿ ನೀಡುತ್ತಿದೆ. ಇನ್ನು ಹೆಚ್ಚುವರಿಯಾಗಿ, ICICI, Kotak, Paytm ಮತ್ತು Cred ನಂತಹ ಕ್ರೆಡಿಟ್, ಡೆಬಿಟ್ ಕಾರ್ಡ್ಗಳ ಮೂಲಕ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಸ್ನಾಪ್‌ಡೀಲ್ ಭರ್ಜರಿ ಕೊಡುಗೆ: ಮತ್ತೊಂದು ಕಡೆ, ಸ್ನಾಪ್‌ಡೀಲ್ ಅಕ್ಟೋಬರ್ 8-15 ರವರೆಗೆ 'ತೂಫಾನಿ ಸೇಲ್-ಫೆಸ್ಟಿವ್ ಧಮಾಕಾ' ಎಂಬ ಘೋಷಣೆಯೊಂದಿಗೆ ಮಾರಾಟ ಪ್ರಾರಂಭಿಸಿದೆ. ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಬಹು ನಿರೀಕ್ಷಿತ ಹಬ್ಬದ ಋತುವಿಗಾಗಿ ತನ್ನ ವ್ಯಾಪಕ ಶ್ರೇಣಿಯ ಟೆಲಿವಿಷನ್‌ಗಳಲ್ಲಿ ಮೆಗಾ ಡೀಲ್ಗಳೊಂದಿಗೆ ಹೊರ ತಂದಿದೆ.
ನಿಯೋ QLED TV, OLED TV, Crystal 4K iSmart TV, Crystal Vision 4K TV, QLED 4K TV, The Frame TV ಖರೀದಿ ಹೆಚ್ಚಿನ ಆಫರ್ಗಳನ್ನು ನೀಡಲಾಗಿದೆ. ಈ ಬಾರಿ ಹಬ್ಬದ ಸಂತಸ ಹೆಚ್ಚಿಸಲು ವಿಶಿಷ್ಟ ಕೊಡುಗೆಗಳನ್ನು ನೀಡಿದ್ದೇವೆ. ಇದು ಗ್ರಾಹಕರಿಗೆ ಖುಷಿ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್‌ಪ್ಲೇ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಹೇಳಿದ್ದಾರೆ.
ಆಯ್ದ Neo QLED 8K ಮತ್ತು 4K ಟಿವಿಗಳನ್ನು ಖರೀದಿಸಿದಾಗ ಗ್ರಾಹಕರು 124,999 ರೂ ಮೌಲ್ಯದ ಉಚಿತ Galaxy S23 Ultra 5G, 69,990 ರೂ ಮೌಲ್ಯದ 50-ಇಂಚಿನ The Serif TV, 59,990 ರೂ ಮೌಲ್ಯದ ಫ್ರೀಸ್ಟೈಲ್ ಪ್ರೊಜೆಕ್ಟರ್ ಅಥವಾ ರೂ 49,990 ಮೌಲ್ಯದ ಸೌಂಡ್‌ಬಾರ್ ಅನ್ನು ಪಡೆಯಬಹುದು. ನಿಯೋ QLED ಟಿವಿಗಳಿಗೆ 3-ವರ್ಷದ ಸಮಗ್ರ ವಾರಂಟಿ ಕೂಡಾ ನೀಡಲಾಗಿದೆ,
ಫ್ಲಿಪ್‌ಕಾರ್ಟ್‌ನೊಂದಿಗೆ ಬ್ಲಾಪುಂಕ್ಟ್ ವಿಶೇಷ ಒಪ್ಪಂದ: ಫ್ಲಿಪ್‌ಕಾರ್ಟ್‌ನೊಂದಿಗೆ ಜರ್ಮನ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಬ್ಲಾಪುಂಕ್ಟ್ ವಿಶೇಷ ಸಹಭಾಗಿತ್ವ ಮಾಡಿಕೊಂಡಿದೆ, ಫ್ಲಿಪ್‌ಕಾರ್ಟ್‌ನ 'ಬಿಗ್ ಬಿಲಿಯನ್ ಡೇಸ್' ವೇಳೆ, ಟಿವಿಗಳ ಶ್ರೇಣಿಯ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. Blaupunkt ಗ್ರಾಹಕರಿಗೆ ಸ್ಮಾರ್ಟ್ ಟಿವಿಗಳು ಮತ್ತು ಉಪಕರಣಗಳಲ್ಲಿ 80 ಪ್ರತಿಶತದವರೆಗೆ ರಿಯಾಯಿತಿಗಳನ್ನು ಘೋಷಿಸಿದೆ. ಎಲ್ಲಾ ಹೊಸ ಟಿವಿಗಳು 6,299 ರೂಪಾಯಿಗಳ ಆಕರ್ಷಕ ಕನಿಷ್ಠ ಬೆಲೆಯೊಂದಿಗೆ ಪ್ರಾರಂಭವಾಗುತ್ತವೆ. ಹೊಸದಾಗಿ ಬಿಡುಗಡೆಯಾದ 43-ಇಂಚಿನ QLED ಟಿವಿ ಕೇವಲ 28,999 ರೂಗಳಲ್ಲಿ ಲಭ್ಯವಿದೆ. ಈ ಹಬ್ಬದ ಸೀಸನ್ನಲ್ಲಿ 500 ಕೋಟಿ ರೂಪಾಯಿ ಮೌಲ್ಯದ ಒಟ್ಟಾರೆ ವ್ಯವಹಾರದ ಗುರಿಯನ್ನು SPPL ಹೊಂದಿದೆ.
ಪೈಪೋಟಿಯಲ್ಲಿ ಆಫರ್ ನೀಡಿರುವ ಸ್ಮಾರ್ಟ್ಫೋನ್ ಕಂಪನಿಗಳು: ಸ್ಮಾರ್ಟ್ಫೋನ್ ವಿಭಾಗದಲ್ಲಿ ಎಲ್ಲಾ ಪ್ರಮುಖ ಕಂಪನಿಗಳು ಹಾಗೂ ಬ್ರಾಂಡ್ಗಳು ಅತ್ಯಾಕರ್ಷಕ ಆಫರ್ಗಳನ್ನು ಘೋಷಿಸಿವೆ, ಈ ಹಬ್ಬದ ಋತುವಿನಲ್ಲಿ ಸುಮಾರು 42 ಪ್ರತಿಶತ ಭಾರತೀಯರು ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸಿದ್ದಾರೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ಹೇಳಿದೆ.
ಸ್ಯಾಮ್‌ಸಂಗ್, ಆ್ಯಪಲ್ ಮತ್ತು ಒನ್‌ಪ್ಲಸ್ ಈ ಹಬ್ಬದ ಋತುವಿನಲ್ಲಿ ಹೆಚ್ಚು ಆದ್ಯತೆಯನ್ನು ಪಡೆದುಕೊಂಡಿರುವ ಬ್ರಾಂಡ್‌ಗಳಾಗಿವೆ. ಭಾರತದಲ್ಲಿ ಇತ್ತೀಚಿನ HONOR 90 5G ಗಾಗಿ 11,000 ವರೆಗೆ ರಿಯಾಯಿತಿ ನೀಡುತ್ತದೆ. (ಐಎಎನ್‌ಎಸ್)
ಇದನ್ನು ಓದಿ:ಪ್ರಾಜೆಕ್ಟ್ ಕೈಪರ್: ಇಂಟರ್ನೆಟ್ ಸೇವೆಗಾಗಿ ಪರೀಕ್ಷಾ ಉಪಗ್ರಹಗಳನ್ನು ಉಡಾವಣೆ ಮಾಡಿದ ಅಮೆಜಾನ್