ETV Bharat / business

ಬಹು ವಾರ್ಷಿಕ ಆರೋಗ್ಯ ವಿಮಾ ಪಾಲಿಸಿ: ಆರ್ಥಿಕ ಲಾಭದೊಂದಿಗೆ ತಡೆ ರಹಿತ ಆರೋಗ್ಯ ರಕ್ಷಣೆ ಖಾತ್ರಿ - ಈಟಿವಿ ಭಾರತ ಕನ್ನಡ

ವಾರ್ಷಿಕ ಪಾಲಿಸಿಗಳಿಗೆ ಹೋಲಿಸಿದರೆ ದೀರ್ಘಾವಧಿಯ ಪಾಲಿಸಿಗಳಿಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಆದರೂ ಇಂಥ ದೀರ್ಘಾವಧಿಯ ಪಾಲಿಸಿಗಳು ಕೆಲ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿರುತ್ತವೆ. ಈ ಪಾಲಿಸಿಗಳಲ್ಲಿ ಎರಡು ಅಥವಾ ಮೂರು ವರ್ಷಗಳವರೆಗೆ ಪಾಲಿಸಿದಾರರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಈ ರಿಯಾಯಿತಿ 5-10 ಪ್ರತಿಶತದವರೆಗೆ ಇರುತ್ತದೆ. ವಿಮಾದಾರರನ್ನು ಅವಲಂಬಿಸಿ ಅದು ಬದಲಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಪಾಲಿಸಿದಾರರಿಗೆ ಆರ್ಥಿಕವಾಗಿ ಲಾಭಕರ ಎಂದು ಹೇಳಬಹುದು.

ಬಹುವಾರ್ಷಿಕ ಆರೋಗ್ಯ ವಿಮಾ ಪಾಲಿಸಿ: ಆರ್ಥಿಕ ಲಾಭದೊಂದಿಗೆ ತಡೆರಹಿತ ಆರೋಗ್ಯ ರಕ್ಷಣೆಯ ಖಾತ್ರಿ
Multi Year Health Insurance Policy: Guaranteed uninterrupted healthcare with financial benefits
author img

By

Published : Dec 12, 2022, 5:49 PM IST

ಹೈದರಾಬಾದ್: ವೈದ್ಯಕೀಯ ಹಣದುಬ್ಬರ ದಿನೇ ದಿನೆ ಏರಿಕೆಯಾಗುತ್ತಿರುವುದರಿಂದ, ಸಮಗ್ರ ಆರೋಗ್ಯ ವಿಮಾ ಪಾಲಿಸಿ (comprehensive health insurance) ಪಡೆದುಕೊಳ್ಳುವ ಅಗತ್ಯ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ಬಹು ವರ್ಷದ ಆರೋಗ್ಯ ವಿಮಾ ಪಾಲಿಸಿಗಳು ಪಾಲಿಸಿದಾರರಿಗೆ ಯಾವುದೇ ತೊಂದರೆಗಳಿಲ್ಲದೇ ಆರೋಗ್ಯ ರಕ್ಷಣೆ ನೀಡುತ್ತವೆ. ನೀವು ಒಂದೇ ಬಾರಿಗೆ ಎರಡರಿಂದ ಮೂರು ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬಹುದು ಮತ್ತು ತಡೆರಹಿತ ಆರೋಗ್ಯ ರಕ್ಷಣೆಯ ಖಾತ್ರಿ ಪಡೆಯಬಹುದು.

ಅನೇಕರು ಪ್ರತಿ ವರ್ಷ ನವೀಕರಿಸಬೇಕಾಗುವ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಮಾ ಕಂಪನಿಗಳು ಬಹು - ವರ್ಷದ, ದೀರ್ಘಾವಧಿಯ ಪಾಲಿಸಿಗಳನ್ನು ನೀಡುತ್ತಿವೆ. ಇದು ಎರಡು ಅಥವಾ ಮೂರು ವರ್ಷಗಳವರೆಗೆ ಒಂದೇ ಬಾರಿಗೆ ಪ್ರೀಮಿಯಂ ಪಾವತಿಸುವ ಮೂಲಕ ದೀರ್ಘಕಾಲದವರೆಗೆ ಪಾಲಿಸಿ ಕವರೇಜ್ ಖಚಿತಪಡಿಸುತ್ತದೆ. ವಾರ್ಷಿಕ ಪಾಲಿಸಿಯಲ್ಲಿ, ಕವರೇಜ್ ಒಂದು ವರ್ಷದವರೆಗೆ ಮುಂದುವರಿಯುತ್ತದೆ. ನವೀಕರಣ ಮಾಡಿಸಿದರೆ ಮಾತ್ರ ಕವರೇಜ್ ಮುಂದುವರಿಯುತ್ತದೆ. ಆದರೆ ಇದರ ಬದಲಾಗಿ ಬಹುವರ್ಷದ ಪಾಲಿಸಿ ಪಡೆದರೆ ಪದೇ ಪದೆ ನವೀಕರಣದ ಸಮಸ್ಯೆಯನ್ನು ತಪ್ಪಿಸಬಹುದು.

ದುಬಾರಿಯಾದರೂ ಲಾಭಕರ: ವಾರ್ಷಿಕ ಪಾಲಿಸಿಗಳಿಗೆ ಹೋಲಿಸಿದರೆ ದೀರ್ಘಾವಧಿಯ ಪಾಲಿಸಿಗಳಿಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಆದರೂ ಇಂಥ ದೀರ್ಘಾವಧಿಯ ಪಾಲಿಸಿಗಳು ಕೆಲ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿರುತ್ತವೆ. ಈ ಪಾಲಿಸಿಗಳಲ್ಲಿ ಎರಡು ಅಥವಾ ಮೂರು ವರ್ಷಗಳವರೆಗೆ ಪಾಲಿಸಿದಾರರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಈ ರಿಯಾಯಿತಿ 5-10 ಪ್ರತಿಶತದವರೆಗೆ ಇರುತ್ತದೆ. ವಿಮಾದಾರರನ್ನು ಅವಲಂಬಿಸಿ ಅದು ಬದಲಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಪಾಲಿಸಿದಾರರಿಗೆ ಆರ್ಥಿಕವಾಗಿ ಲಾಭಕರ ಎಂದು ಹೇಳಬಹುದು.

ಹಣವಿದ್ದಾಗ ದೀರ್ಘಾವಧಿ ಪಾಲಿಸಿಗಳನ್ನ ಕೊಳ್ಳಬಹುದು: ಹೆಚ್ಚುತ್ತಿರುವ ವೈದ್ಯಕೀಯ ಚಿಕಿತ್ಸಾ ವೆಚ್ಚಗಳ ಕಾರಣ, ವಿಮಾ ಕಂಪನಿಗಳು ಪ್ರತಿ ವರ್ಷ ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂಗಳನ್ನು ಹೆಚ್ಚಿಸುತ್ತಿವೆ. ಎರಡು ಅಥವಾ ಮೂರು ವರ್ಷಗಳ ಅವಧಿಯ ಪಾಲಿಸಿಗಳಲ್ಲಿ, ಪ್ರೀಮಿಯಂ ಮೊತ್ತವನ್ನು ಮುಂಗಡವಾಗಿ ಪಾವತಿಸಲಾಗುತ್ತದೆ. ಆದ್ದರಿಂದ, ಪಾಲಿಸಿದಾರನು ಅಂತಹ ಹಣದುಬ್ಬರದ ಪ್ರೀಮಿಯಂ ಹೆಚ್ಚಳದಿಂದ ರಕ್ಷಿಸಲ್ಪಡುತ್ತಾನೆ.

ಅನಿರೀಕ್ಷಿತ ಆದಾಯದ ನಷ್ಟ, ಅನಾರೋಗ್ಯದಂತಹ ನಿರ್ಣಾಯಕ ಸಂದರ್ಭಗಳ ಕಾರಣದಿಂದ ಕೆಲಬಾರಿ ಪ್ರೀಮಿಯಂ ಪಾವತಿ ಸಾಧ್ಯವಾಗದಿರಬಹುದು. ಅಂಥ ಸಂದರ್ಭಗಳನ್ನು ತಪ್ಪಿಸಲು ನಿಮ್ಮ ಬಳಿ ಹಣವಿರುವಾಗ ನೀವು ದೀರ್ಘಾವಧಿಯ ಪಾಲಿಸಿಗಳನ್ನು ಕೊಳ್ಳಬಹುದು.

ಪ್ರೀಮಿಯಂಗೆ ಸೆಕ್ಷನ್​ 80 D ಅಡಿ ತೆರಿಗೆ ವಿನಾಯಿತಿ: ಇದಲ್ಲದೆ, ವಾರ್ಷಿಕ ಆರೋಗ್ಯ ವಿಮಾ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D ಅಡಿಯಲ್ಲಿ ವಿನಾಯಿತಿ ಇದೆ. ವಿನಾಯಿತಿಯು ಅನುಪಾತದ ಆಧಾರದ ಮೇಲೆ ಅನ್ವಯಿಸುತ್ತದೆ. ಬಹು-ವರ್ಷದ ಯೋಜನೆಗಳಲ್ಲಿಯೂ ಸಹ ಪ್ರತಿ ವರ್ಷಕ್ಕೆ ವಿಮಾ ಕಂಪನಿಯು ನಿಮಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D ಅಡಿಯಲ್ಲಿ ಪ್ರಮಾಣಪತ್ರವನ್ನು ಒದಗಿಸುತ್ತದೆ.

ಪಾಲಿಸಿ ಖರೀದಿಗೆ ಮುನ್ನ ಷರತ್ತುಗಳನ್ನೊಮ್ಮೆ ಗಮನಿಸಿ: ಬಹು ವರ್ಷದ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು, ವಿಮಾ ಕಂಪನಿಯ ಆಯ್ಕೆಯ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು. ವೈದ್ಯಕೀಯ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿ ಮೊತ್ತವನ್ನು ನಿರ್ಧರಿಸಬೇಕು. ಎರಡು ಅಥವಾ ಮೂರು ವರ್ಷಗಳಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ಎಷ್ಟರ ಮಟ್ಟಿಗೆ ಹೆಚ್ಚಾಗಬಹುದು ಎಂಬುದನ್ನು ನಿರೀಕ್ಷಿಸಿ ಮತ್ತು ಪಾಲಿಸಿಯು ಸಮರ್ಪಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿ.

ಅದೇ ಸಮಯದಲ್ಲಿ ಪಾಲಿಸಿಯ ಅವಧಿ ಮುಗಿಯುವವರೆಗೆ ಅದನ್ನು ಮತ್ತೊಂದು ಕಂಪನಿಗೆ ವರ್ಗಾಯಿಸಲಾಗುವುದಿಲ್ಲ. ಆದ್ದರಿಂದ, ವಿಮಾ ಕಂಪನಿಯನ್ನು ಆಯ್ಕೆಮಾಡುವಾಗ ಎಲ್ಲ ಅಂಶಗಳನ್ನು ಪರಿಗಣಿಸಬೇಕು. ಕಂಪನಿಯ ಕ್ಲೈಮ್ ಪಾವತಿ ಹಿಸ್ಟರಿ ಮತ್ತು ಸೇವೆಗಳನ್ನು ಪರಿಶೀಲಿಸಿ. ವಾರ್ಷಿಕ ಪಾಲಿಸಿಯನ್ನು ತೆಗೆದುಕೊಳ್ಳುವಾಗ ಇವು ಮುಖ್ಯವಾಗುತ್ತವೆ.

ವಿಮಾ ಕಂಪನಿಗಳು ಈಗ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡುತ್ತಿವೆ. ಹೀಗಾಗಿ ಒಂದೇ ಬಾರಿಗೆ ದೊಡ್ಡ ಮೊತ್ತ ಹೇಗೆ ಪಾವತಿಸುವುದು ಎಂದು ಚಿಂತೆ ಮಾಡುವ ಅಗತ್ಯವಿಲ್ಲ. ಒಮ್ಮೆ ಪಾಲಿಸಿ ತೆಗೆದುಕೊಂಡರೆ, ನಾವು ಅದನ್ನು ಜೀವನದ ಕೊನೆಯವರೆಗೂ ನಿಯತಕಾಲಿಕವಾಗಿ ನವೀಕರಿಸಬೇಕು.

ಆಗ ಮಾತ್ರ ಯಾವುದೇ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅದು ನಮಗೆ ಉಪಯೋಗಕ್ಕೆ ಬರುತ್ತದೆ. ಒಮ್ಮೆ ಪ್ರೀಮಿಯಂ ವಿಳಂಬವಾದರೆ ಅಥವಾ ಪಾವತಿಸದಿದ್ದರೆ, ನಿಮಗೆ ವಿಮಾ ಕವರೇಜ್​ ಸಿಗಲಾರದು.

ಇದನ್ನೂ ಓದಿ: ಕುಟುಂಬ ಆರೋಗ್ಯ ರಕ್ಷಣೆಗಿರಲಿ ಒಂದಕ್ಕಿಂತ ಹೆಚ್ಚು ಹೆಲ್ತ್​ ಇನ್ಸೂರೆನ್ಸ್​ ಪಾಲಿಸಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.