ETV Bharat / business

ಏರಿಕೆ ಹಾದಿ ಹಿಡಿದ ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆ.. ಶೇ 13 ರಷ್ಟು ಏರಿಕೆ ದಾಖಲಿಸಿದ ಸ್ಟಾಕ್ಸ್​!

ಹಿಂಡನ್​ಬರ್ಗ್​ ವರದಿ ಬಳಿಕ ಕುಸಿತದ ಹಾದಿ ಹಿಡಿದಿದ್ದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳ ಬೆಲೆ ಭಾರಿ ಏರಿಕೆ ಕಂಡು ಬಂದಿದೆ. ಕಂಪನಿಯ 10 ಷೇರುಗಳ ಪೈಕಿ ಎಂಟು ಷೇರುಗಳು ಇಂದಿನ ವ್ಯವಹಾರದಲ್ಲಿ ಲಾಭದ ಹಾದಿಯಲ್ಲಿವೆ.

author img

By

Published : Feb 8, 2023, 1:23 PM IST

most-adani-group-firms-rise
ಏರಿಕೆ ಹಾದಿ ಹಿಡಿದ ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆ.. ಶೇ 13 ರಷ್ಟು ಏರಿಕೆ ದಾಖಲಿಸಿದ ಸ್ಟಾಕ್ಸ್​!

ನವದೆಹಲಿ: ಹಿಂಡನ್​ಬರ್ಗ್​ ವರದಿ ಬಳಿಕ ನಿರಂತರವಾಗಿ ಕುಸಿಯುತ್ತಾ ಸಾಗಿದ್ದ ಅದಾನಿ ಕಂಪನಿ ಷೇರುಗಳ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ. ಮುಂಬೈ ಷೇರುಪೇಟೆಯ ಬೆಳಗಿನ ವ್ಯವಹಾರದಲ್ಲಿ ಇಂದು ಶೇ 13 ರಷ್ಟು ಚೇತರಿಕೆ ಕಂಡು ಬಂದಿದೆ ಎಂದು ಷೇರುಪೇಟೆ ಮೂಲಗಳು ತಿಳಿಸಿವೆ. ಬಹುತೇಕ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಲಾಭ ಗಳಿಸಿದ್ದು, ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್ ಶೇ.13ರಷ್ಟು ಏರಿಕೆ ದಾಖಲಿಸಿದೆ.

ಎಂಟು ಅದಾನಿ ಗ್ರೂಪ್ ಸಂಸ್ಥೆಗಳು ಸಕಾರಾತ್ಮಕವಾಗಿ ವಹಿವಾಟು ನಡೆಸುತ್ತಿದ್ದರೆ, ಎರಡು ಷೇರುಗಳು ಇನ್ನೂ ಚೇತರಿಕೆ ಕಂಡಿಲ್ಲ. ಬಿಎಸ್‌ಇಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ನ ಸ್ಕ್ರಿಪ್ 13.07 ಪ್ರತಿಶತ ಏರಿಕೆ ಕಾಣುವ ಮೂಲಕ 2,038 ರೂಗಳೊಂದಿಗೆ ವಹಿವಾಟು ನಡೆಸಿತು. ಈ ಮೂಲಕ ಅದರ ಮಾರುಕಟ್ಟೆ ಬಂಡವಾಳವು 2.32 ಲಕ್ಷ ಕೋಟಿಗೆ ಏರಿಕೆ ಕಂಡಿತು ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯದ ಷೇರುಗಳ ಬೆಲೆಯಲ್ಲಿ ಶೇ.7.24ರಷ್ಟು ಹೆಚ್ಚಳ ಕಂಡು 593.35ಕ್ಕೆ ತಲುಪಿದ್ದು, ಮಾರುಕಟ್ಟೆ ಮೌಲ್ಯ ರೂ.1.28 ಲಕ್ಷ ಕೋಟಿಗೆ ಏರಿಕೆ ದಾಖಲಿಸಿದೆ.

ಇದನ್ನು ಓದಿ: ಅಡೆತಡೆಗಳ ನಡುವೆ.. ಅದಾನಿ ಬಂದರುಗಳು - ಎಸ್​​​​ಇಜೆಡ್​​​​ ಕಂಪನಿ ಆದಾಯ ಶೇ.18ರಷ್ಟು ಏರಿಕೆ..

ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 5 ರಷ್ಟು ಏರಿಕೆಯಾಗಿ 1,314.25 ರೂ.ಗೆ ಹಾಗೂ ಅದಾನಿ ಪವರ್ ಶೇಕಡಾ 4.99 ರಷ್ಟು ಏರಿಕೆಯಾಗಿ 182 ರೂಪಾಯಿಗಳೊಂದಿಗೆ ವಹಿವಾಟು ನಡೆಸುತ್ತಿದೆ. ಅದಾನಿ ವಿಲ್ಮರ್ ಶೇಕಡಾ 4.99 ರಷ್ಟು ಏರಿಕೆಯಾಗಿ 419.35 ಕ್ಕೆ ತಲುಪಿದೆ. ಇನ್ನು ಎನ್​ಡಿಟಿವಿ ಶೇ.3.94ರಷ್ಟು ಏರಿಕೆಯಾಗಿ ರೂ.225.50 ರೂ ಗಳೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಅಂಬುಜಾ ಸಿಮೆಂಟ್ಸ್ ಶೇ.1.15ರಷ್ಟು ಏರಿಕೆಯಾಗಿ ರೂ.388.10ಕ್ಕೆ ಮತ್ತು ಎಸಿಸಿ ಶೇ.0.43ರಷ್ಟು ಏರಿಕೆ ಕಂಡು ರೂ.2,004ಕ್ಕೆ ತಲುಪಿದೆ.

ಇದನ್ನು ಓದಿ: ಮಾರುಕಟ್ಟೆ ಮೌಲ್ಯಕ್ಕಿಂತ ಅರ್ಧದಷ್ಟು ಕುಸಿತ ಕಂಡ ಅದಾನಿ ಸಮೂಹದ ಷೇರುಗಳ ಬೆಲೆ

ಅದಾನಿ ಗ್ರೂಪ್‌ನ ಹತ್ತು ಪಟ್ಟಿ ಮಾಡಲಾದ ಕಂಪನಿಗಳ ಪೈಕಿ ಎರಡು ಮಾತ್ರ ಇನ್ನು ಇಳಿಕೆಯಲ್ಲೇ ಇವೆ. ಅದಾನಿ ಟೋಟಲ್ ಗ್ಯಾಸ್ ಶೇಕಡಾ 5 ರಷ್ಟು ಕುಸಿತ ಕಂಡು ಹೂಡಿಕೆದಾರರ ಆತಂಕವನ್ನು ದೂರ ಮಾಡಲಿಲ್ಲ. ಮಂಗಳವಾರದ ವಹುವಾಟಿನಲ್ಲಿ ಅದಾನಿ ಕಂಪನಿಯ ಆರು ಕಂಪನಿಗಳು ಲಾಭದೊಂದಿಗೆ ದಿನದ ವ್ಯವಹಾರ ಮುಗಿಸಿದರೆ, ನಾಲ್ಕು ಷೇರುಗಳು ನಷ್ಟದೊಂದಿಗೆ ದಿನವನ್ನು ಮುಗಿಸಿದ್ದವು.

ಅಮೆರಿಕ ಮೂಲದ ಕಿರು - ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್​​ ಜನವರಿ 24 ರಂದು ತನ್ನ ವರದಿಯನ್ನು ಪ್ರಕಟಿಸಿದ ಬಳಿಕ ಅದಾನಿ ಸಮೂಹ ಸಂಸ್ಥೆಗಳ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿತ್ತು. ಕಳೆದ 10 ವಹಿವಾಟುಗಳಲ್ಲಿ ಅವರ ಹತ್ತು ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು ಸುಮಾರು 9.2 ಲಕ್ಷ ಕೋಟಿಗಳಷ್ಟು ಕುಸಿತ ಕಂಡು ಹೂಡಿಕೆದಾರರನ್ನು ನಡುಗಿಸಿತ್ತು.

ಇದನ್ನು ಓದಿ: ಸತತ 6ನೇ ಬಾರಿಗೆ ಬಡ್ಡಿ ಏರಿಕೆ: ಆರ್‌ಬಿಐ ರೆಪೊ ದರ ಶೇ.6.5 ರಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.