ಹೈದರಾಬಾದ್: ಪ್ರಸ್ತುತ ಆರ್ಥಿಕ ವರ್ಷದಲ್ಲಿ 7 ತಿಂಗಳಲ್ಲಿ ಮೊಬೈಲ್ ರಫ್ತು ವಹಿವಾಟು 8 ಬಿಲಿಯನ್ ತಲುಪಿದೆ. ಕಳೆದ ವರ್ಷ ಇದೇ 7 ತಿಂಗಳ ಅವಧಿಗೆ ಹೋಲಿಕೆ ಮಾಡಿದಾಗ 4.97 ಬಿಲಿಯನ್ ಹೆಚ್ಚಿದ್ದು ಸರಾಸರಿ 1 ಬಿಲಿಯನ್ಗೂ ಹೆಚ್ಚಿನ ಮೊಬೈಲ್ ಈ ತಿಂಗಳಲ್ಲಿ ರಫ್ತಾಗಿದೆ ಎಂದು ಸಂವಹನ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.
ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಈ ಪ್ರಸ್ತುತ ವರ್ಷದಲ್ಲಿ ಮೊಬೈಲ್ ರಫ್ತು 8 ಬಿಲಿಯನ್ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಬೆಳವಣಿಗೆ ದರ 4.97ಬಿಲಿಯನ್ ಡಾಲರ್ ಇದೆ ಎಂದು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಮಾತನಾಡಿದ್ದ ಅಶ್ವಿನ್ ವೈಷ್ಣವ್, ಭಾರತದಲ್ಲಿನ ಟೆಲಿಕಾಂ ಉದ್ಯಮವೂ ಬಂಡಾವಾಳ ಆಧಾರಿತವಾಗುತ್ತಿದೆ. ಇದರಿಂದ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ಮೊಬೈಲ್ ರಫ್ತಿನ ಮಾರುಕಟ್ಟೆ 10 ಬಿಲಿಯನ್ ಅಮೆಕನ್ ಡಾಲರ್ ತಲುಪಲಿದೆ ಎಂದಿದ್ದರು.
ಎಲ್ಲ ಘಟಕ ವ್ಯವಸ್ಥೆಗಳು ಭಾರತದಲ್ಲಿವೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆ, ಟೆಲಿಕಾಂ ಉತ್ಪಾದನೆಯು ವೇಗವಾಗಿ ಬೆಳೆಯುತ್ತದೆ ಎಂದು ಸಚಿವರು ತಿಳಿಸಿದರು. ಆತ್ಮನಿರ್ಭರ್ ಯೋಜನೆಯ ಭಾಗವಾಗಿ ಸರ್ಕಾರ ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಲು, ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ವಿವಿಧ ವಲಯಗಳಲ್ಲಿ ಉತ್ಪಾದನಾ ಸಂಬಂಧಿ ಪ್ರೋತ್ಸಾಹಕ ಯೋಜನೆಗಳನ್ನು ಪ್ರಾರಂಭಿಸಿತು.
ನೇಮಕಾತಿ ವಲಯದಲ್ಲಿ, ಐಫೋನ್ ಉತ್ಪಾದನಾ ಕಂಪನಿ ಆ್ಯಪಲ್ ಭಾರತದಲ್ಲಿ ಕಳೆದೊಂದುವರೆ ವರ್ಷದಿಂದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ ಎಂದರು
ಇತ್ತೀಚಿಗೆ ತಮಿಳುನಾಡಿನಲ್ಲಿ ಐಫೋನ್ 11, 12, 13, 14 ಮತ್ತು 15 ಮಾದರ ಉತ್ಪಾದಿಸುವ ಘಟಕ ಹೊಂದಿದ್ದು, ಇದರ ಜೊತೆಗೆ ತೈವಾನಿನ ದೊಡ್ಡ ಕಂಪನಿಗಳು ಫಾಕ್ಸ್ಕಾನ್ ಮತ್ತು ಪೆಗಟ್ರೊನ್ ಸಂಸ್ಥೆಗಳು ಕೂಡ ಸೇರುತ್ತದೆ. ಜೊತೆಗೆ ಟಾಟಾ ಎಲೆಕ್ಟ್ರಾನಿಕ್ಸ್ ಆ್ಯಪಲ್ ಐಫೋನ್ ಉತ್ಪಾದನೆಯೊಂದಿಗೆ ಸೇರುತ್ತಿರುವ ಮೊದಲ ಭಾರತೀಯ ಸಂಸ್ಥೆಯಾಗಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಕರ್ನಾಟಕದಲ್ಲಿರುವ ವಿಸ್ಟ್ರಾನ್‌ನ ಅಸೆಂಬ್ಲಿ ಲೈನ್‌ಗಳಲ್ಲಿ ಶೇ 100ರಷ್ಟು ಈಕ್ವಿಟಿ ಪಾಲನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Wi-Fiಗೆ ಪರ್ಯಾಯ Li-Fi ತಂತ್ರಜ್ಞಾನ ಕಂಡುಹಿಡಿದ ಒಡಿಯಾ ವಿದ್ಯಾರ್ಥಿ