ETV Bharat / business

ಬಜೆಟ್​ ಶ್ರೇಣಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್ಸ್​: ಬೆಲೆ 7.98 ಲಕ್ಷ - ಸ್ಮಾರ್ಟ್ ಎಲೆಕ್ಟ್ರಿಕ್ ವೆಹಿಕಲ್ ಕಾಮೆಟ್ ಇವಿ

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ರೂ 7,98,000 ಆಗಿದೆ.

ಬಜೆಟ್​ ಶ್ರೇಣಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್ಸ್​: ಬೆಲೆ 7.98 ಲಕ್ಷ
MG Motor launches cheapest EV in India, starting at Rs 7.98 lakh
author img

By

Published : Apr 26, 2023, 7:15 PM IST

ನವದೆಹಲಿ : ಬ್ರಿಟನ್ ಕಾರು ತಯಾರಕ ಕಂಪನಿ ಎಂಜಿ ಮೋಟಾರ್ ಇಂಡಿಯಾ ಬುಧವಾರ ತನ್ನ ಸ್ಮಾರ್ಟ್ ಎಲೆಕ್ಟ್ರಿಕ್ ವೆಹಿಕಲ್ ಕಾಮೆಟ್ ಇವಿಯನ್ನು (Comet EV) ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಕಾರಿನ ಆರಂಭಿಕ ಬೆಲೆ ರೂ 7,98,000 ಆಗಿದೆ. ಇದು ಒಂದೇ ಚಾರ್ಜ್‌ನಲ್ಲಿ ಸುಮಾರು 230 ಕಿಮೀ ಪ್ರಮಾಣೀಕೃತ ಬ್ಯಾಟರಿ ಸಾಮರ್ಥವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಕಂಪನಿಯ ಪ್ರಕಾರ, ಹೊಸ ಕಾಮೆಟ್ EVಗೆ ತಿಂಗಳಿಗೆ 519 ರೂಪಾಯಿಗಳಷ್ಟು ಅತಿ ಕಡಿಮೆ ಚಾರ್ಜಿಂಗ್ ವೆಚ್ಚ ಆಗಲಿದೆ. ಕಾಮೆಟ್ EV ಎಂಜಿ ಮೋಟಾರ್ ಇಂಡಿಯಾದ ಪೋರ್ಟ್​ಫೋಲಿಯೊದಲ್ಲಿ ಎರಡನೇ ಎಲೆಕ್ಟ್ರಿಕ್ ವಾಹನವಾಗಿದೆ ಮತ್ತು ಫ್ಯೂಚರಿಸ್ಟಿಕ್ ಮತ್ತು ಬಳಕೆದಾರ ಸ್ನೇಹಿ ಸ್ಮಾರ್ಟ್ ತಂತ್ರಜ್ಞಾನಗಳನ್ನು ಹೊಂದಿದೆ.

ಕಾಮೆಟ್ EV ಅನ್ನು ಸಂಪೂರ್ಣ ಎಲೆಕ್ಟ್ರಿಕ್ GSEV ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಜಾಗತಿಕವಾಗಿ 1 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾದ EV ಕಾರ್ ಆಗಿದೆ. ಕಾರು ಮನಸಿಗೊಪ್ಪುವ ಶೈಲಿ, ತಂತ್ರಜ್ಞಾನ ಮತ್ತು ಸಾಮರ್ಥ್ಯಗಳ ಸಂಯೋಜನೆಯಾಗಿದೆ. ಸಾಟಿಯಿಲ್ಲದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಹುಮುಖ ಮತ್ತು ವಿಶಾಲವಾದ ಸವಾರಿಯನ್ನು ನೀಡುತ್ತದೆ. ಭವಿಷ್ಯದಲ್ಲಿ ಚಲನಶೀಲತೆಯು ಎಲೆಕ್ಟ್ರಿಕ್ ಆಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

MG ಕಾಮೆಟ್ EV ಅನ್ನು 'ಬಿಗ್ ಇನ್‌ಸೈಡ್, ಕಾಂಪ್ಯಾಕ್ಟ್ ಔಟ್‌ಸೈಡ್' BICO ಪರಿಕಲ್ಪನೆಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಆರಾಮದಾಯಕವಾದ ವಿಶಾಲವಾದ ಮತ್ತು ಹೆಚ್ಚುವರಿ ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದರಲ್ಲಿವೆ. ಇದು ಆರಾಮದಾಯಕ ಮತ್ತು ವಿಶಾಲವಾದ ಕ್ಯಾಬಿನ್ ಅನ್ನು 4-ಆಸನಗಳ ಸಂರಚನೆಯೊಂದಿಗೆ ಎರಡನೇ ಸಾಲಿನ ಸೀಟ್‌ಗಳಲ್ಲಿ 50:50 ಸೆಟ್ಟಿಂಗ್‌ಗಳನ್ನು ಹೊಂದಿದೆ. ಇದರ ಜೊತೆಗೆ, ಸೆಂಟರ್ ಕನ್ಸೋಲ್ ಎಲೆಕ್ಟ್ರಿಕ್ ವಿಂಡೋ ಆಪರೇಷನ್ ಬಟನ್‌ಗಳು ಮತ್ತು 12-ವೋಲ್ಟ್ ಚಾರ್ಜಿಂಗ್ ಪೋರ್ಟ್‌ನಂತಹ ಉಪಯುಕ್ತ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ.

ಇದಲ್ಲದೆ, ಇದು 17.3 kWh Li-ion ಬ್ಯಾಟರಿಯೊಂದಿಗೆ ಚಾಲಿತವಾಗಿದೆ. ಜೊತೆಗೆ IP67-ರೇಟೆಡ್ ಆಗಿದೆ. ಇದು ನೀರು ಮತ್ತು ಧೂಳಿಗೆ ಹೆಚ್ಚು ನಿರೋಧಕವಾಗಿದೆ. ಹೊಸ ಕಾಮೆಟ್ ಇವಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ + ಇಬಿಡಿ, ಫ್ರಂಟ್ ಮತ್ತು ರಿಯರ್ 3 ಪಿಟಿಯಂತಹ ಸೆಗ್ಮೆಂಟ್-ಲೀಡಿಂಗ್ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸೀಟ್ ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಸಂವೇದಕ, TPMS (ಪರೋಕ್ಷ) ಮತ್ತು ಐಸೋಫಿಕ್ಸ್​ (International Standard Organisation Fix - ISOFIX) ಚೈಲ್ಡ್ ಸೀಟ್ ಈ ಎಲ್ಲ ವೈಶಿಷ್ಟ್ಯಗಳು ಇದರಲ್ಲಿವೆ. ಇದಲ್ಲದೆ MG ಮೋಟಾರ್ ಕಾಮೆಟ್ EV ಯ, ಗೇಮರ್ ಆವೃತ್ತಿ ಮತ್ತು LIT ಆವೃತ್ತಿ ಹೆಸರಿನ ಎರಡು ವಿಶೇಷ ಆವೃತ್ತಿಗಳನ್ನು ಪರಿಚಯಿಸಿದೆ.

ಎಂಜಿ ಮೋಟಾರ್ ಯುಕೆ ಲಿಮಿಟೆಡ್ (MG ಮೋಟಾರ್) ಇದು SAIC ಮೋಟಾರ್ UK ಒಡೆತನದ ವಾಹನ ಕಂಪನಿಯಾಗಿದ್ದು, ಲಂಡನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ಶಾಂಘೈ ಮೂಲದ ಚೀನಾದ ಸರ್ಕಾರಿ ಸ್ವಾಮ್ಯದ ವಾಹನ ತಯಾರಕರ ಒಡೆತನದಲ್ಲಿದೆ.

ಇದನ್ನೂ ಓದಿ: ವೈರಸ್​ ವಾಹಕಗಳಾಗಬಹುದು ಸ್ಮಾರ್ಟ್​ಫೋನ್​ಗಳು.. ದಿನವೂ ಸ್ವಚ್ಛಗೊಳಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.