ETV Bharat / business

ಬೇರೆ ಬೇರೆ ಇಪಿಎಫ್ ಖಾತೆಗಳು ಇವೆಯೇ, ವಿಲೀನವಾಗದಿದ್ದರೆ ಏನಾಗುತ್ತದೆ?.. ಇಲ್ಲಿದೇ ಸಂಪೂರ್ಣ ಮಾಹಿತಿ

ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಹೊಂದಿರುವಿರಾ?.. ನೀವು ವಿಲೀನಗೊಳಿಸದಿದ್ದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದರ ಜೊತೆಗೆ ವಿಲೀನಗೊಳಿಸುವುದು ಹೇಗೆ ಎಂಬುದನ್ನು ಅರ್ಥೈಸಿಕೊಳ್ಳಿ.. ಅದಕ್ಕೂ ಮುನ್ನ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದುವ ಸಮಸ್ಯೆಗಳ ಬಗ್ಗೆ ತಿಳಿಯೋಣಾ ಬನ್ನಿ..

merging multiple epf accounts  merging multiple epf accounts under single uan  epf accounts details  ಬೇರೆ ಬೇರೆ ಇಪಿಎಫ್ ಖಾತೆಗಳು ಇದ್ದಾವೆ  ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆ  ಉತ್ತಮ ಸಂಬಳದ ನಿರೀಕ್ಷೆ  ಉತ್ತಮ ಸಂಬಳದ ನಿರೀಕ್ಷೆಯಲ್ಲಿ ಬೇರೆ ಉದ್ಯೋಗ  ತಿ ಬಾರಿ ಉದ್ಯೋಗ ಬದಲಾವಣೆ  ಹೊಸ ಇಪಿಎಫ್ ಖಾತೆ  ಪ್ರತಿ ಬಾರಿ ಉದ್ಯೋಗ ಬದಲಾವಣೆ  EPFO ​​ವೆಬ್‌ಸೈಟ್‌  ಇ ಸೇವಾ ಪೋರ್ಟಲ್‌ಗೆ ಲಾಗ್ ಇನ್
ಇಲ್ಲಿದೇ ಸಂಪೂರ್ಣ ಮಾಹಿತಿ
author img

By

Published : Jul 27, 2023, 3:11 PM IST

ಹೈದರಾಬಾದ್​: ಹೊಸ ಅವಕಾಶಗಳು ಮತ್ತು ಉತ್ತಮ ಸಂಬಳದ ನಿರೀಕ್ಷೆಯಲ್ಲಿ ಬೇರೆ ಉದ್ಯೋಗಗಳಿಗೆ ಹೋಗುವುದು ಸಹಜ. ಪ್ರತಿ ಬಾರಿ ಉದ್ಯೋಗ ಬದಲಾವಣೆಯಾದಾಗ ಹೊಸ ಇಪಿಎಫ್ ಖಾತೆಗಳನ್ನು ತೆರೆಯಲಾಗುತ್ತದೆ. ಆದರೆ, ಅವುಗಳನ್ನು ವಿಲೀನಗೊಳಿಸಿರುವುದಿಲ್ಲ. ಕೆಲವರಿಗೆ ವಿಲೀನ ಮಾಡುವುದು ಹೇಗೆ ಎಂದು ತಿಳಿದಿರುವುದಿಲ್ಲ. ಇನ್ನು ಕೆಲವರು ಇದನ್ನು ನಿರ್ಲಕ್ಷಿಸುತ್ತಾ ಸಾಗುತ್ತಾರೆ. ಒಂದು ವೇಳೆ ನೀವು ಬೇರೆ ಬೇರೆ EPF ಖಾತೆಗಳನ್ನು ಹೊಂದಿದ್ದರೆ ಅವುಗಳನ್ನು ಹೇಗೆ ವಿಲೀನಗೊಳಿಸುವುದು ಹೇಗೆ ಎಂದು ತಿಳಿಯಿರಿ.

ಒಬ್ಬ ವ್ಯಕ್ತಿ ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಅವರ ಬಳಿ ಒಂದೇ ಯುಎಎನ್ ಇರುತ್ತದೆ. ಯುಎಎನ್ ಎಂದರೆ ಯುನಿವರ್ಸಲ್ ಅಕೌಂಟ್ ನಂಬರ್. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಆಧಾರ್ ಸಂಖ್ಯೆಯಂತೆ. ಪ್ರತಿಯೊಬ್ಬ ಇಪಿಎಫ್ ಖಾತೆದಾರರಿಗೆ ಯುಎಎನ್ ಅನ್ನು ನಿಗದಿಪಡಿಸಲಾಗಿದೆ. ಪ್ರತಿ ಬಾರಿ ಉದ್ಯೋಗ ಬದಲಾವಣೆಯಾದಾಗ ಆಯಾ ಸಂಸ್ಥೆಗಳು ಈ ಯುಎಎನ್ ಸಂಖ್ಯೆಯಡಿ ವಿವಿಧ ಖಾತೆಗಳನ್ನು ತೆರೆಯುತ್ತವೆ. ಇಪಿಎಫ್ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಯುಎಎನ್ ಸಂಖ್ಯೆ ಹೊಂದುವಂತಿಲ್ಲ. ಹಾಗಿದ್ದಲ್ಲಿ, ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ. ನೀವು ಬೇರೆ ಕಂಪನಿಗೆ ಸೇರಿದರೆ ಹಳೆಯ UAN ಸಂಖ್ಯೆಯನ್ನು ನೀಡಲು ಇಪಿಎಫ್‌ಒ ಸೂಚಿಸುತ್ತದೆ.

PF ಖಾತೆಗಳಿಗೆ ಸಂಬಂಧಿಸಿದಂತೆ, ಪ್ರತಿ ಬಾರಿ ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ, ಒಂದು ಖಾತೆ ರಚಿಸಲಾಗುತ್ತದೆ. ಅವುಗಳನ್ನು ಪ್ರತ್ಯೇಕವಾಗಿ ಬಿಡುವುದು ಕೆಲವು ಪ್ರಯೋಜನಗಳನ್ನು ಕಳೆದುಕೊಳ್ಳಬಹುದು ಮತ್ತು ತೆರಿಗೆಗೆ ಕಾರಣವಾಗಬಹುದು. ಸತತ ಮೂರು ವರ್ಷಗಳ ಕಾಲ PF ಖಾತೆಯಲ್ಲಿ ಹಣವನ್ನು ಠೇವಣಿ ಮಾಡದಿದ್ದರೆ, EPFO ​​ಆ ಖಾತೆಯಲ್ಲಿರುವ ಹಣದ ಮೇಲೆ ಯಾವುದೇ ಬಡ್ಡಿಯನ್ನು ನೀಡುವುದಿಲ್ಲ. ಸಾಮಾನ್ಯವಾಗಿ, ಪಿಎಫ್ ಖಾತೆಯು ಐದು ವರ್ಷಕ್ಕಿಂತ ಹಳೆಯದಾಗಿದ್ದರೆ, ಹಿಂಪಡೆಯುವಿಕೆಗೆ ಯಾವುದೇ ತೆರಿಗೆ ಇರುವುದಿಲ್ಲ. ಇದು ಐದು ವರ್ಷಕ್ಕಿಂತ ಕಡಿಮೆಯಿದ್ದರೆ ಹಿಂಪಡೆಯುವ ಸಮಯದಲ್ಲಿ ಶೇ 10% TDS ಅನ್ನು ಕಡಿತಗೊಳಿಸಲಾಗುತ್ತದೆ. ಆ ಖಾತೆಯಲ್ಲಿ ರೂ. 50 ಸಾವಿರಕ್ಕಿಂತ ಕಡಿಮೆ ಮೊತ್ತ ಇದ್ದಲ್ಲಿ ಈ ನಿಯಮ ಅನ್ವಯಿಸುವುದಿಲ್ಲ. ಅದಕ್ಕಾಗಿಯೇ ಖಾತೆಗಳನ್ನು ವಿಲೀನಗೊಳಿಸುವುದು ಉತ್ತಮ.

ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಒಬ್ಬ ವ್ಯಕ್ತಿ ಪ್ರತಿ ಕಂಪನಿಯಲ್ಲಿ ಎರಡು ವರ್ಷಗಳಲ್ಲಿ ನಾಲ್ಕು ಕಂಪನಿಗಳನ್ನು ಬದಲಾಯಿಸಿದ್ದಾನೆ ಎಂದಿಟ್ಟುಕೊಳ್ಳಿ. ನಂತರ ಅವರು ಆಯಾ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸಿದರು. ಹೀಗಾಗಿ ಆ ವ್ಯಕ್ತಿಯ ಸೇವಾ ಅವಧಿಯನ್ನು ಎಂಟು ವರ್ಷ ಎಂದು ಪರಿಗಣಿಸಲಾಗುತ್ತದೆ. ಅದೇ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಆಯಾ ಖಾತೆಗಳ ಸೇವಾ ಅವಧಿ ಎರಡು ವರ್ಷ ಎಂದು ಪರಿಗಣಿಸಲಾಗುತ್ತದೆ ಮತ್ತು ಹಿಂಪಡೆಯುವಿಕೆಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.

ವಿಲೀನ ಮಾಡುವ ವಿಧಾನ ಹೀಗಿದೆ..

* ಮೊದಲು EPFO ​​ವೆಬ್‌ಸೈಟ್‌ಗೆ ಹೋಗಿ..

* ಸೇವೆಗಳ ವಿಭಾಗದಲ್ಲಿ, 'ಒಬ್ಬ ಉದ್ಯೋಗಿ - ಒಬ್ಬ ಇಪಿಎಫ್ ಖಾತೆ' ಆಯ್ಕೆಯನ್ನು ಆಯ್ದುಕೊಳ್ಳಿ.

* ಸದಸ್ಯ ಇ ಸೇವಾ ಪೋರ್ಟಲ್‌ಗೆ ಲಾಗ್ ಇನ್ ಆದ ನಂತರ ನಿಮ್ಮ ವೈಯಕ್ತಿಕ ವಿವರಗಳು ಗೋಚರಿಸುತ್ತವೆ.

* ಅದರ ನಂತರ ಹಳೆಯ ಖಾತೆ ಸಂಖ್ಯೆಗಳನ್ನು ವಿಲೀನಗೊಳಿಸಲು ವಿನಂತಿಯನ್ನು ಕಳುಹಿಸಬೇಕು.

* ಇದಕ್ಕಾಗಿ, ಮೊಬೈಲ್ ಸಂಖ್ಯೆ, ಪ್ರಸ್ತುತ UAN ಮತ್ತು ಸದಸ್ಯ ID ಅನ್ನು ಸಲ್ಲಿಸಬೇಕು.

* ನಿಮ್ಮ ವಿನಂತಿಯನ್ನು ಪ್ರಸ್ತುತ ಸಂಸ್ಥೆಯು ಅನುಮೋದಿಸಿದ ನಂತರ, EPFO ​​ನಿಮ್ಮ ಎಲ್ಲ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಖಾತೆ ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.

* ವಿಭಿನ್ನ UAN ಸಂಖ್ಯೆಗಳಲ್ಲಿ ವಿಭಿನ್ನ ಖಾತೆಗಳನ್ನು ವಿಲೀನಗೊಳಿಸಿದರೆ EPFO ​​ಗೆ ಮೇಲ್ ಮಾಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.