ETV Bharat / business

ಕಂಪನಿ ವಿಳಾಸಗಳ ಜಿಯೋಟ್ಯಾಗಿಂಗ್ ಕಡ್ಡಾಯ: ನಕಲಿ ನೋಂದಣಿ ತಡೆಗೆ ಕ್ರಮ

ನಕಲಿ ಕಂಪನಿಗಳ ನೋಂದಣಿಯನ್ನು ತಡೆಗಟ್ಟಲು ಕಂಪನಿಗಳ ವಿಳಾಸವನ್ನು ಜಿಯೋಟ್ಯಾಗ್ ಮಾಡುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿಯಮ ರೂಪಿಸುತ್ತಿದೆ.

Centre plans to make geotagging
Centre plans to make geotagging
author img

By

Published : Jul 2, 2023, 2:07 PM IST

ನವದೆಹಲಿ : ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳು ಮತ್ತು ಬೋಗಸ್ ಕಂಪನಿಗಳ ವಹಿವಾಟುಗಳನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ಕಂಪನಿಗಳ ವಿಳಾಸಗಳನ್ನು ಜಿಯೋಟ್ಯಾಗ್ ಮಾಡುವುದನ್ನು ಕಡ್ಡಾಯಗೊಳಿಸಲು ಯೋಜಿಸುತ್ತಿದೆ. ಅಲ್ಲದೆ ಅಪಾಯಕಾರಿ ಎಂದು ಕಂಡು ಬರುವ ಕಂಪನಿಗಳಿಗೆ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವ ಯೋಜನೆ ಇದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಜಿಎಸ್‌ಟಿ ವ್ಯವಸ್ಥೆಯನ್ನು ಬಲಪಡಿಸಲು ಈ ಕ್ರಮಗಳು ಸಹಾಯ ಮಾಡುತ್ತವೆ ಎಂದು ಮೂಲಗಳು ಹೇಳಿವೆ.

“ನಾವು ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹೊಸ ಕಂಪನಿಗಳ ನೋಂದಣಿ ಸಮಯದಲ್ಲಿನ ವೆರಿಫಿಕೇಶನ್ ಅನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ಪ್ರಸ್ತುತ, ನಾವು ಆಧಾರ್ ಮತ್ತು ಪ್ಯಾನ್ ಬಳಸಿಕೊಂಡು ಓಟಿಪಿ ಆಧರಿತ ದೃಢೀಕರಣದ ಮೂಲಕ ವ್ಯಕ್ತಿಯ ಗುರುತನ್ನು ಕಂಡು ಹಿಡಿಯುತ್ತೇವೆ. ಅಪಾಯಕಾರಿ ಘಟಕಗಳಿಗೆ ನಾವು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸುತ್ತೇವೆ. ಅನುಮಾನಾಸ್ಪದ ಪ್ರಕರಣಗಳಲ್ಲಿ ವ್ಯಕ್ತಿಗಳಿಗೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಕೇಳಲಾಗುತ್ತದೆ" ಎಂದು ಸಿಬಿಐಸಿ ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದರು.

ಜಿಎಸ್‌ಟಿ ಕಾನೂನಿನ ಅಡಿಯಲ್ಲಿ ವ್ಯಾಪಾರದ ಸ್ಥಳವು ಭೌತಿಕವಾಗಿ ಗುರುತಿಸುವಂತಿರಬೇಕು. ಅನೇಕ ಸಂದರ್ಭಗಳಲ್ಲಿ ಕಂಪನಿಗಳ ವಿಳಾಸಗಳು ನಕಲಿ ಎಂದು ಕಂಡುಬಂದಿದೆ. ನಾವು ವಿಳಾಸವನ್ನು ಜಿಯೋ-ಟ್ಯಾಗ್ ಮಾಡಲು 2 ರಿಂದ 3 ರಾಜ್ಯಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದರಿಂದ ನಿಖರವಾದ ಲೊಕೇಶನ್ ಲಭ್ಯವಾಗಲಿದೆ. ಕೇವಲ ವೆರಿಫಿಕೇಶನ್​​ಗಾಗಿ ಕೆಲ ಕಂಪನಿಗಳು ವಿಳಾಸ ನೀಡುತ್ತವೆ. ಆದರೆ ಅದರ ನಂತರ ಕಂಪನಿ ಅಲ್ಲಿರುವುದಿಲ್ಲ. ಇದನ್ನು ತಡೆಗಟ್ಟಲು ಕಂಪನಿಯ ಕಚೇರಿಯ ಸ್ಥಳವನ್ನು ಜಿಯೋ-ಟ್ಯಾಗಿಂಗ್ ಮಾಡುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಪ್ರಾಯೋಗಿಕ ಹಂತದ ನಂತರ ಇದಕ್ಕೆ ಬೇಕಾದ ಮೂಲಸೌಕರ್ಯ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ವಿವರಗಳನ್ನು ರೂಪಿಸಲಾಗುತ್ತದೆ. ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ 49ನೇ ಸಭೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿತ್ತು.

“ಪ್ರಾಯೋಗಿಕ ಹಂತಗಳ ನಂತರ ಇದನ್ನು ಕಡ್ಡಾಯಗೊಳಿಸುವುದನ್ನು ಜಿಎಸ್‌ಟಿ ಕೌನ್ಸಿಲ್ ಅನುಮೋದನೆಗಾಗಿ ಚರ್ಚಿಸಲಿದೆ. ಎಲ್ಲಾ ಕಂಪನಿಗಳು ಜಿಯೋಟ್ಯಾಗ್ ಮಾಡುವುದು ಕಡ್ಡಾಯವಾಗಿದ್ದರೂ, ನಿಯಮಗಳ ಪ್ರಕಾರ ರಿಸ್ಕಿ ವಹಿವಾಟು ಎಂದು ಪತ್ತೆಯಾದರೆ ಅಸ್ತಿತ್ವದಲ್ಲಿರುವ ಮತ್ತು ಹೊಸ ನೋಂದಣಿಗಳಿಗೆ ಬಯೋಮೆಟ್ರಿಕ್ ಕಡ್ಡಾಯವಾಗಿರುತ್ತದೆ" ಎಂದು ಅವರು ಹೇಳಿದರು.

ಸರಕು ಅಥವಾ ಸೇವೆಗಳ ನೈಜ ಪೂರೈಕೆ ಇಲ್ಲದಿರುವಾಗಲೂ ಇನ್‌ವಾಯ್ಸ್‌ಗಳನ್ನು ನೀಡುವುದು ನಕಲಿ ಇನ್‌ವಾಯ್ಸಿಂಗ್ ಆಗಿದೆ. ಈ ಇನ್‌ವಾಯ್ಸ್‌ಗಳನ್ನು ನಂತರ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಲು ಬಳಸಲಾಗುತ್ತದೆ. ಐಟಿಸಿಯನ್ನು ಪಡೆಯಲು ಜಿಎಸ್‌ಟಿ ಅಡಿಯಲ್ಲಿ ಕಂಪನಿಗಳು ನಕಲಿ ನೋಂದಣಿಗಳನ್ನು ಸಹ ಮಾಡಿಕೊಳ್ಳುತ್ತವೆ. ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತದೆ.

ಜಿಯೋಟ್ಯಾಗಿಂಗ್ ಎನ್ನುವುದು ನಿರ್ದಿಷ್ಟ ಸ್ಥಳವೊಂದರ ಭೌಗೋಳಿಕ ನಿರ್ದೇಶಾಂಕಗಳನ್ನು ಸೇರಿಸುವ ಪ್ರಕ್ರಿಯೆಯಾಗಿದೆ. ಫೋಟೋಗಳು, ವೀಡಿಯೊಗಳು, ವೆಬ್‌ಸೈಟ್‌ಗಳು, ಪಠ್ಯ ಸಂದೇಶಗಳು ಮತ್ತು QR ಕೋಡ್‌ಗಳನ್ನು ಜಿಯೋಟ್ಯಾಗ್‌ ಮಾಡಬಹುದು. ಇದು ಟೈಮ್ ಸ್ಟಾಂಪಿಂಗ್ ಅಥವಾ ಇತರ ಸಂದರ್ಭೋಚಿತ ಮಾಹಿತಿಯನ್ನು ಸಹ ಒಳಗೊಂಡಿರಬಹುದು.

ಇದನ್ನೂ ಓದಿ : Journalist abducted: ಗುಂಡಿನ ದಾಳಿಯಾದರೂ ಅದೃಷ್ಟವಶಾತ್ ಬದುಕುಳಿದ ಪತ್ರಕರ್ತ: ಗ್ವಾಲಿಯರ್​ನಲ್ಲಿ ಆತಂಕಕಾರಿ ಘಟನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.