ಹೈದರಾಬಾದ್: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಅಗತ್ಯಗಳನ್ನು ಪೂರೈಸುವ ಕಾಳಜಿ ವಹಿಸುತ್ತಾರೆ. ಹೆಣ್ಣು ಮಕ್ಕಳ ವಿಷಯಕ್ಕೆ ಬಂದರಂತೂ ಆ ಬಗ್ಗೆ ಅವರು ಹೆಚ್ಚು ಜಾಗ್ರತೆ ಹಾಗೂ ಆರ್ಥಿಕ ಸುಭದ್ರತೆಗೆ ಒತ್ತು ನೀಡುತ್ತಾರೆ. ಅಂತಹವರಿಗಾಗಿ ಕೆಲವೊಂದು ಟಿಪ್ಸ್ಗಳಿವೆ.
ಉದಾಹರಣೆಗೆ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಇಟ್ಟುಕೊಳ್ಳೋಣ. ಅಂತಹವರು ಅವರು ತಮ್ಮ ಮಕ್ಕಳ ಲಾಲನೆ - ಪಾಲನೆ ಹಾಗೂ ಭವಿಷ್ಯವನ್ನು ರೂಪಿಸಲು ಕನಿಷ್ಠ 15 ವರ್ಷಗಳವರೆಗೆ ತಿಂಗಳಿಗೆ 10,000 ರೂ.ವರೆಗೆ ಹೂಡಿಕೆ ಮಾಡಬೇಕಾಗಬಹುದು. ಇಲ್ಲವೇ ಈ ಬಗ್ಗೆ ಯೋಚಿಸುತ್ತಿರಬಹುದು. ಹಾಗಾದರೆ ಅಂತಹವರ ಮುಂದಿರುವ ಪರ್ಯಾಯಗಳೇನು ಎಂಬುದನ್ನು ನೋಡುವುದಾದರೆ,
ಪೋಷಕರು ಟರ್ಮ್ ಇನ್ಸೂರೆನ್ಸ್ ಹೊಂದುವುದು ಉತ್ತಮ: ಪೋಷಕರು ಮೊದಲು ತಮ್ಮ ಹೆಣ್ಣುಮಕ್ಕಳ ಭವಿಷ್ಯದ ಆರ್ಥಿಕ ಅಗತ್ಯಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ತಜ್ಞರ ಸಲಹೆ ಆಗಿದೆ. ಇದಕ್ಕಾಗಿ ಅವರು ತಮ್ಮ ವಾರ್ಷಿಕ ಆದಾಯದ ಕನಿಷ್ಠ 10 ಪಟ್ಟು ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ತಮ್ಮ ಹೆಸರಿನಲ್ಲಿ ತೆಗೆದುಕೊಳ್ಳಬಹುದು. ಒಂದೊಮ್ಮೆ ನೀವು 10 ಸಾವಿರ ರೂಪಾಯಿಗಳನ್ನು ಮಕ್ಕಳಿಗಾಗಿ ಹೂಡಿಕೆ ಮಾಡಲು ನಿರ್ಧರಿಸಿದ್ದೀರಿ ಎಂದು ಎಣಿಸುವುದಾದರೆ, ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ 3,000 ರೂ.ಗಳನ್ನು ಹೂಡಿಕೆ ಮಾಡಿ. ಉಳಿದ ರೂ 7,000 ಅನ್ನು ವೈವಿಧ್ಯಮಯ ಇಕ್ವಿಟಿ ಫಂಡ್‌ಗಳಲ್ಲಿ ಶ್ರೇಣೀಕೃತ ಹೂಡಿಕೆ ತಂತ್ರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ ಇದೆ.
ಸಾಧ್ಯವಾದಾಗಲೆಲ್ಲಾ ಅವರು ಈ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಬಹುದು. 15 ವರ್ಷಗಳವರೆಗೆ ತಿಂಗಳಿಗೆ 10,000 ರೂ.ಗಳನ್ನು ಹೂಡಿಕೆ ಮಾಡಿದರೆ, ಸರಾಸರಿ ವಾರ್ಷಿಕ ಆದಾಯವು 12 ಪ್ರತಿಶತದ ಅಂದಾಜುಗಳೊಂದಿಗೆ 44,73,565 ರೂ. ಆಗುವ ಸಾಧ್ಯತೆಗಳಿವೆ.
ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿ: ಕೆಲವು ಜನರು ಕನಿಷ್ಠ ಎಂಟು ವರ್ಷಗಳವರೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ತಿಂಗಳಿಗೆ 25 ಸಾವಿರ ರೂ.ವರೆಗೆ ಹೂಡಿಕೆ ಮಾಡಲು ಬಯಸಬಹುದು. ಅವರಿಗೆ, ಕೆಲವು ಪಾಲಿಸಿಗಳಲ್ಲಿ ಉತ್ತಮ ಆದಾಯದ ಅವಕಾಶಗಳಿವೆ. ಆದರೆ, ಹೆಚ್ಚಿನ ಆದಾಯವನ್ನು ನಿರೀಕ್ಷಿಸಿದಾಗ ಕೆಲವು ಅಪಾಯಗಳು ಇದ್ದೇ ಇರುತ್ತವೆ. ಆಗ ನೀವು ರಿಸ್ಕ್ ತೆಗೆದುಕೊಳ್ಳಲು ಅಣಿ ಆಗಬೇಕಾಗಿರುವುದು ನಿಮ್ಮ ಕರ್ತವ್ಯ. ಹೂಡಿಕೆಯ ಕನಿಷ್ಠ 30 - 40 ಪ್ರತಿಶತವನ್ನು ಮಧ್ಯಮ ಮತ್ತು ಸಣ್ಣ-ಕ್ಯಾಪ್ ಫಂಡ್‌ಗಳಿಗೆ ನಿಯೋಜಿಸಿ. ಉಳಿದ ಮೊತ್ತವನ್ನು ಡೈವರ್ಸಿಫೈಡ್ ಇಕ್ವಿಟಿ ಫಂಡ್‌ಗಳಿಗೆ ಹಂಚಿಕೆ ಮಾಡಿ. ಉತ್ತಮ ಆದಾಯವನ್ನು ನೀಡುವ ಉತ್ತಮ - ಕಾರ್ಯನಿರ್ವಹಣೆಯ ಫಂಡ್‌ಗಳನ್ನು ಆಯ್ಕೆಮಾಡಿ ಮತ್ತು ಹೂಡಿಕೆ ಮಾಡಿ. ವರ್ಷಕ್ಕೊಮ್ಮೆ ನಿಮ್ಮ ಹೂಡಿಕೆಗಳನ್ನು ಪರಿಶೀಲಿಸಿ.
ಇದನ್ನು ಓದಿ; Economy of India: ಆರ್ಥಿಕತೆಯ ಪುನಶ್ಚೇತನಕ್ಕೆ ಬಹುಮುಖಿ ನೀತಿ ಅಗತ್ಯ: ಆರ್‌ಬಿಐ ಡೆಪ್ಯುಟಿ ಗವರ್ನರ್
69 ವರ್ಷ ವಯಸ್ಸಿನ ವ್ಯಕ್ತಿ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳಲು ಸಾಧ್ಯವೇ?: ಈ ಪ್ರಶ್ನೆಗೆ ಉತ್ತರ ಹೌದು, ಮಾಡಿಸಬಹುದು. ಆದರೆ, ಅವರು ಎಲ್ಲಾ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಿದರೆ ಮತ್ತು ನಿವೃತ್ತಿ ನಿಧಿಯನ್ನು ಹೊಂದಿದ್ದರೆ, ಪಾಲಿಸಿಯ ಅಗತ್ಯವಿರುವುದಿಲ್ಲ. ಇದು ಅವರ ವೈಯಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ. 69 ನೇ ವಯಸ್ಸಿನಲ್ಲಿ, ಟರ್ಮ್ ಪಾಲಿಸಿಯ ಪ್ರೀಮಿಯಂ ಹೆಚ್ಚು. ಎರಡು ವಿಮಾ ಕಂಪನಿಗಳನ್ನು ಸಂಪರ್ಕಿಸಿ ಮತ್ತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪಾಲಿಸಿಯನ್ನು ತೆಗೆದುಕೊಳ್ಳುವುದು ಉತ್ತಮ.
ಒಬ್ಬರು ತಮ್ಮ 12 ವರ್ಷದ ಮಗುವನ್ನು ವಿದೇಶಕ್ಕೆ ಕಳುಹಿಸಲು ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಲು ಬಯಸಿದರೆ, ಅವರು ಕನಿಷ್ಠ 11 ಪ್ರತಿಶತವನ್ನು ನೀಡುವ ಯೋಜನೆಗಳಲ್ಲಿ ತಿಂಗಳಿಗೆ ಕನಿಷ್ಠ 50,000 ರೂ.ಗಳನ್ನು ಹೂಡಿಕೆ ಮಾಡಬೇಕು.ಅದರಲ್ಲಿ ಅಮೆರಿಕ ಮೂಲದ ಫಂಡ್‌ಗಳಲ್ಲಿ ಶೇಕಡಾ 20-30 ರಷ್ಟು ಹೂಡಿಕೆ ಮಾಡಬೇಕು. ಉಳಿದ ಮೊತ್ತವನ್ನು ಡೈವರ್ಸಿಫೈಡ್ ಇಕ್ವಿಟಿ ಫಂಡ್‌ಗಳಿಗೆ ಇಲ್ಲಿ ನಿಯೋಜಿಸುವುದರಿಂದ ಉತ್ತರ ರಿಟರ್ನ್ಸ್ ಪಡೆಯಲು ಸಾಧ್ಯವಾಗಬಹುದು.
ಇದನ್ನು ಓದಿ:Life Insurance: ಜೀವವಿಮಾ ಮಾರುಕಟ್ಟೆಗೆ ಮತ್ತೊಂದು ಕಂಪನಿ ಎಂಟ್ರಿ: Go Digitಗೆ ಐಆರ್ಡಿಎಐ ಅನುಮೋದನೆ