ETV Bharat / business

ಎಲ್​​​ಐಸಿ ಷೇರುಗಳ ಪರಿಸ್ಥಿತಿ ಹೇಗಿದೆ... ! - ಹೆಚ್ಚು ಹಣವನ್ನು ಎಲ್​ಐಸಿ ಷೇರುಗಳ ಕಾರಣದಿಂದ

ದೇಶದ ಅತಿದೊಡ್ಡ ಐಪಿಒ ಎಂದು ಹೆಸರಾಗಿದ್ದ ಎಲ್​ಐಸಿ ಐಪಿಓ ಸಮಯದಲ್ಲಿ ಷೇರು ಖರೀದಿಸಿದವರು ಈಗ ಭಾರಿ ನಷ್ಟಕ್ಕೆ ಒಳಗಾಗಿದ್ದಾರೆ. ಎಲ್​ಐಸಿ ಷೇರು ಬೆಲೆಗಳು ಸತತವಾಗಿ ಕುಸಿಯುತ್ತಿರುವುದರಿಂದ ಹೂಡಿಕೆದಾರರಿಗೆ ಸುಮಾರು 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

LIC Stock Performance
LIC Stock Performance
author img

By

Published : May 18, 2023, 4:07 PM IST

Updated : May 18, 2023, 4:28 PM IST

ನವದೆಹಲಿ : ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್​ಐಸಿ 17 ಮೇ 2022 ರಂದು ದೇಶದ ಅತಿದೊಡ್ಡ ಐಪಿಓ ಅನ್ನು ಹೊರತಂದಿತ್ತು. ಇದು 17 ಮೇ 2023 ರಂದು ಲಿಸ್ಟಿಂಗ್ ಆಗಿದ್ದು, ಈಗ ಒಂದು ವರ್ಷ ಪೂರ್ಣಗೊಂಡಿದೆ. ಆಗ ಎಲ್​ಐಸಿ ತನ್ನ ಷೇರುಗಳನ್ನು ಪ್ರತಿಷೇರಿಗೆ ರೂ 949 ದರದಲ್ಲಿ ಇಶ್ಯು ಮಾಡಿತ್ತು. ಆದರೆ ಈ ಷೇರುಗಳ ಲಿಸ್ಟಿಂಗ್ ಶೇಕಡಾ 9 ರಷ್ಟು ಕುಸಿತದೊಂದಿಗೆ 867.20 ರೂ. ಯಲ್ಲಿ ಆರಂಭವಾಗಿತ್ತು. ಆದರೆ ಈಗ ಒಂದು ವರ್ಷದ ನಂತರ ಹೂಡಿಕೆ ಮಾಡಿದ ಜನರಿಗೆ ಬಹು ದೊಡ್ಡ ಹೊಡೆತ ಬಿದ್ದಿದೆ. ಹೂಡಿಕೆದಾರರು 2 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಎಲ್​ಐಸಿ ಷೇರುಗಳ ಕಾರಣದಿಂದ ಕಳೆದುಕೊಂಡಿದ್ದಾರೆ.

ಎಲ್​ಐಸಿ ಐಪಿಓ ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಓ ಎಂದು ವರ್ಣಿಸಲಾಗಿತ್ತು. ಇದರ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡಬಹುದು ಎಂಬ ಆಸೆಯಿಂದ ಚಿಕ್ಕ ಹಾಗೂ ದೊಡ್ಡ ಹೂಡಿಕೆದಾರರು ಇದರಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿದ್ದರು. ಆದರೆ ಲಾಭ ಬರುವುದು ಹಾಗಿರಲಿ, ಹಾಕಿದ ಬಂಡವಾಳವೂ ಈಗ ವಾಪಸ್ ಬರುತ್ತಿಲ್ಲ. ಇನ್ನಷ್ಟು ನಷ್ಟ ಆಗುವುದು ಬೇಡವೆಂದು ಕೆಲ ಹೂಡಿಕೆದಾರರು ಸಿಕ್ಕ ಬೆಲೆಗೆ ತಮ್ಮ ಷೇರುಗಳನ್ನು ಮಾರಿದ್ದಾರೆ. ಆದರೆ ಇನ್ನೂ ಕೆಲವರು ಇಂದಲ್ಲ ನಾಳೆ ಷೇರು ಬೆಲೆ ಹೆಚ್ಚಾಗಬಹುದು ಎಂದು ಕಾದು ಕುಳಿತಿದ್ದಾರೆ. ಈಗ ಆ ಹೂಡಿಕೆದಾರರು ಒಂದು ವರ್ಷದ ನಂತರ ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ. ಎಲ್‌ಐಸಿ ಷೇರುಗಳು ಶೇ 40ರಷ್ಟು ಕುಸಿತ ಕಂಡಿವೆ. ಇದರಿಂದ ಹೂಡಿಕೆದಾರರು 2.40 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಹೂಡಿಕೆದಾರರಿಗೆ ಭಾರೀ ನಷ್ಟದ ಹಿಂದೆ ವಿಮಾ ಮಾರುಕಟ್ಟೆಯಲ್ಲಿನ ನಿಧಾನಗತಿಯ ವಹಿವಾಟು ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಎಲ್‌ಐಸಿ ಮಾತ್ರವಲ್ಲದೆ ಹಲವು ವಿಮಾ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಲ್ಐಸಿ) ಹೊರತುಪಡಿಸಿ, ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿಯ ಷೇರು ಶೇ 13 ರಷ್ಟು ಮತ್ತು ಮ್ಯಾಕ್ಸ್ ಫೈನಾನ್ಷಿಯಲ್ ಷೇರು ಶೇ 8 ರಷ್ಟು ಕುಸಿದಿವೆ. ಇದರ ಹೊರತಾಗಿ, ಎಲ್​ಐಸಿ ಐಪಿಓ ದ ಕಡಿಮೆ ಚಂದಾದಾರಿಕೆಯು ಕೂಡ ಕಂಪನಿಯ ಷೇರುಗಳ ಈ ಸ್ಥಿತಿಗೆ ಕಾರಣವಾಗಿದೆ.

ಎಲ್​ಐಸಿ ಐಪಿಓ ಕಳೆದ ವರ್ಷ 4 ಮೇ 2022 ರಂದು ಸಬ್​ಸ್ಕ್ರಿಪ್ಷನ್​​ಗಾಗಿ ಓಪನ್ ಆಗಿತ್ತು ಮತ್ತು ಮೇ 9 ರಂದು ಕ್ಲೋಸ್ ಆಗಿತ್ತು. ಈ ಐಪಿಓಗೆ ಸುಮಾರು ಮೂರು ಪಟ್ಟು ಸಬ್​ಸ್ಕ್ರಿಪ್ಷನ್ ಸಿಕ್ಕಿತ್ತು. ಈ ಮೂಲಕ ಸರ್ಕಾರವು ಎಲ್‌ಐಸಿಯಲ್ಲಿ ತನ್ನ ಶೇಕಡ ಮೂರೂವರೆ ಪಾಲನ್ನು ಮಾರಾಟ ಮಾಡಿದ್ದು, ಇದರಿಂದ ಸರ್ಕಾರಕ್ಕೆ 20,577 ಕೋಟಿ ರೂ. ಸಿಕ್ಕಿತ್ತು. ಐಪಿಓ ಕ್ಲೋಸ್ ಆದ ನಂತರ ಕಂಪನಿಯ ಷೇರುಗಳನ್ನು ಮೇ 12 ರಂದು ಬಿಡ್​ದಾರರಿಗೆ ಹಂಚಲಾಗಿತ್ತು.

ಇದನ್ನೂ ಓದಿ : ಪ್ರಥಮ ಬಾರಿಗೆ ಲಾಭ ಗಳಿಸಿದ ಸ್ವಿಗ್ಗಿ: ಸಿಇಒ ಶ್ರೀಹರ್ಷ ಮೆಜೆಟಿ ಹೇಳಿಕೆ

Last Updated : May 18, 2023, 4:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.