ಹೈದರಾಬಾದ್: 2020ರಲ್ಲಿ ಕಿಯಾ ಸೊನೆಟ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಮತ್ತಷ್ಟು ಉತ್ಕೃಷ್ಟ ಮಟ್ಟದಲ್ಲಿ 2024 ಕಿಯಾ ಸೊನೆಟ್ ಬಿಡುಗಡೆಗೊಂಡಿದೆ. ಎಸ್ಯುವಿ ಕಾರಿನ ಸೌಲಭ್ಯ ಹೊಂದಿರುವ ಈ ಆವೃತ್ತಿಯ ಬುಕ್ಕಿಂಗ್ ಇದೇ ಡಿಸೆಂಬರ್ 20ರಿಂದ ಆರಂಭವಾಗಲಿದೆ.
ಹೊರಾಂಗಣ ವಿನ್ಯಾಸ: ಹೊಸ ಆವೃತ್ತಿಯ ಕಿಯಾ ಸೋನೆಟ್ ಸಂಪೂರ್ಣವಾಗಿ ಹೊಸ ರೂಪದ ಬದಲಾವಣೆಯೊಂದಿಗೆ ವಿಕಸನಗೊಳ್ಳುತ್ತಿದೆ. ಇದರ ಮೊದಲ ಅಳವಡಿಕೆಯಲ್ಲಿ ಗಮನ ಸೆಳೆಯುವುದು ದೊಡ್ಡದಾದ ಎಲ್ಇಡಿ ಹೆಡ್ಲೈಟ್ಗಳು. ಇದೀಗ ಇದರ ಜೊತೆಗೆ ಮೂರು ಬದಿಯಲ್ಲಿ ಎಲ್ಇಡಿ ಡೇಲೈಟ್ ರನ್ನಿಂಗ್ ಲೈಟ್ಗಳು ಪ್ರಮುಖ ಆಕರ್ಷಣೆ ಆಗಲಿವೆ. ಕಾರಿನ ಫ್ರಂಟ್ ಬಂಪರ್ ಕೂಡ ಹೊಸ ವಿನ್ಯಾಸದಲ್ಲಿ ರೂಪಿಸಲಾಗಿದೆ. ಸ್ಕಿಡ್ ಪ್ಲೇಟ್ಸ್ ಹೊಸದಾನಿ ಮರುವಿನ್ಯಾಸ ಮಾಡಲಾಗಿದೆ. ಮೌಂಟೆಡ್ ಎಲ್ಇಡಿ ಪಾಗ್ ಲೈಟ್ ಕೂಡ ಕಾಣಿಸಲಿದೆ. ಅಲ್ಲದೇ ಹೊಸ 16 ಇಂಚಿನ ಅಲೊಯ್ ವೀಲ್ಗಳು ಕೂಡ ಇದಕ್ಕೆ ಹೊಸ ಲುಕ್ ನೀಡುತ್ತಿದೆ.
ಒಳಾಂಗಣದ ಮಾರ್ಪಡುಗಳು: ಕಾರಿನ ಹೊಸ ವಿನ್ಯಾಗಳು ಮೂಲದಂತೆ ಇರಲಿದೆ. ಈ ಮೊದಲಿದ್ದ ಹವಾಮಾನ ನಿಯಂತ್ರಣ ಪ್ಯಾನೆಲ್ ಮತ್ತು ಸೀಟ್ಗಳು ಕೂಡ ಮರು ವಿನ್ಯಾಸದಿಂದ ಕೂಡಿರಲಿದೆ. 2024 ಸೊನೆಟ್ನಲ್ಲಿ 10.25 ಇಂಚಿನ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್, ವೈರ್ಲೆಸ್ ಫೋನ್ ಚಾರ್ಚಿಂಗ್ ಮತ್ತು ಒಳಗೆ ಅಳವಡಿಕೆಯ ಏರ್ ಪೂರಿಫೈಯರ್ ಅನ್ನು ಹೊಂದಿರಲಿದೆ. ಜೊತೆಗೆ ಸುರಕ್ಷತೆಯಲ್ಲೂ ಮುಂಜಾಗ್ರತೆ ವಹಿಸಿದ್ದು, 6 ಏರ್ಬ್ಯಾಗ್ಸ್, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಡ್ರಲ್ ಹಾಗೂ 10 ಅಭಿವೃದ್ದಿ ಚಾಲನ ಸಹಾಯ ವ್ಯವಸ್ಥೆ (ಎಡಿಎಸ್) ಹೊಂದಿರಲಿದೆ.
7 ವಿಧದಲ್ಲಿ ಅನಾವರಣ : ಈ ಹೊಸ 2024 ಸೊನೆಟ್ 7 ವೈವಿಧ್ಯದಲ್ಲಿ ಸಿಗಲಿದೆ. ಎಚ್ಟಿಇ, ಎಚ್ಟಿಕೆ, ಎಚ್ಟಿಕೆ+, ಎಚ್ಟಿಎಕ್ಸ್, ಎಚ್ಟಿಎಕ್ಸ್+ ಮತ್ತು ಎಕ್ಸ್ ಲೇನ್ನಲ್ಲಿ ಲಭ್ಯವಿದೆ. ಗ್ಲೆಸಿಯರ್ ವೈಟ್ ಪರ್ಲ್, ಸ್ಪರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಔರೊರಾ ಬ್ಲಾಕ್ ಪರ್ಲ್, ಇಂಟೆಂಸ್ ರೆಡ್, ಇಂಪಿರಿಯಲ್ ಬ್ಲೂ, ಕ್ಲಿಯರ್ ವೈಲ್, ಪಿವ್ಟೆರ್ ಆಲಿವ್ ಮತ್ತು ಮ್ಯಾಟ್ ಗ್ರಾಫೈಟ್ ಜೊತೆಗೆ ಡ್ಯೂಯೆಲ್ ಬಣ್ಣದಲ್ಲಿ ಇಂಟೆನ್ಸ್ ರೆಡ್ ಮತ್ತು ಗ್ಲೆಸಿಯರ್ ವೈಟ್ ಪರ್ಲ್ ಜೊತೆಗೆ ಬ್ಲಾಕ್ ರೂಫ್ ಬಳಲ್ಲಿ ಕಾರಿನ ಬಣ್ಣ ಲಭ್ಯವಿದೆ.
ಮೆಕಾನಿಸಂ: ಪವರ್ಸ್ಸ್ಟ್ರೈನ್ ಆಯ್ಕೆಯೊಂದಿಗೆ 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್, 1.5 ಲೀಟರ್ ಡಿಸೇಲ್ ಎಂಜಿನ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋ ಇಂಜಿನ್ ಇದೆ ಟ್ರಾನ್ಸಮಿಷನ್ನಲ್ಲಿ ಐದು ಸ್ಪೀಡ್ ಮ್ಯಾನುಯಲ್, 6 ಸ್ಪೀಡ್ ಮ್ಯಾನುಯಲ್, 6 ಸ್ಪೀಡ್ ಐಎಂಟಿ, ಸಿಕ್ಸ್ ಸ್ಪೀಡ್ ಆಟೋಮೆಟಿಕ್ ಮತ್ತು ಸೆವೆನ್ ಸ್ಪೀಡ್ ಡಿಸಿಟಿ ಗೇರ್ಬಾಕ್ಸ್ ಆಯ್ಕೆ ಹೊಂದಬಹುದು
ದರ: ಕಿಯಾದ ಹೊಸ ಕಾರಿನ ದರ ಜನವರಿಯಲ್ಲಿ ಬಹಿರಂಗವಾಗಲಿದೆ. ಪೂರ್ವ- ಸೌಲಭ್ಯ ಸೊನೆಟ್ 1.2 ಪೆಟ್ರೋಲ್ ಕಾರು 7.79 ಲಕ್ಷದಿಂದ 14.95(ಹಿಂದಿನ ಶೋರೂಂ ಬೆಲೆ, ದೆಹಲಿ) ಲಭ್ಯವಿದೆ. ಇದೀಗ ಹೊಸ ವಿನ್ಯಾಸದ ಕಿಯಾ ಸೊನೆಟ್ ಬೆಲೆ ಎಷ್ಟಿರಬಹುದು ಎಂಬ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ಭಾರತದ ಆ್ಯಪಲ್ ಘಟಕಕ್ಕೆ 1 ಬಿಲಿಯನ್ ಡಾಲರ್ ಹೂಡಿಕೆಗೆ ಅನುಮೋದನೆ ಪಡೆದ ಫಾಕ್ಸ್ಕಾನ್