ETV Bharat / business

ದೇಶದಲ್ಲಿ ಸುಧಾರಣೆ ಕಂಡ ಇಂಟರ್ನೆಟ್ ವೇಗ: ಜಾಗತಿಕ ಶ್ರೇಯಾಂಕದಲ್ಲಿ 4 ಸ್ಥಾನ ಜಿಗಿದ ಭಾರತ

ಭಾರತವು ಬ್ರಾಡ್‌ಬ್ಯಾಂಡ್ ವೇಗದ ಜಾಗತಿಕ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದೆ.

author img

By

Published : May 18, 2023, 2:29 PM IST

Internet speed in India improves as 5G  5G rollout picks pace  country jumps 4 spots in global ranking  ದೇಶದಲ್ಲಿ ಸುಧಾರಣೆ ಕಂಡ ಇಂಟರ್ನೆಟ್ ವೇಗ  4 ಸ್ಥಾನಗಳ ಮೇಲಕ್ಕೆ ಜಿಗಿದ ಭಾರತ  ಜಾಗತಿಕ ಶ್ರೇಯಾಂಕದಲ್ಲಿ ಸುಧಾರಣೆ  ಡೌನ್‌ಲೋಡ್ ವೇಗದಲ್ಲಿ ದೇಶದ ಕಾರ್ಯಕ್ಷಮತೆ  ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌  5G ರೋಲ್ ಔಟ್ ವೇಗ  ಭಾರತವು ಸರಾಸರಿ ಸ್ಥಿರವಾದ ಬ್ರಾಡ್‌ಬ್ಯಾಂಡ್ ವೇಗ
ದೇಶದಲ್ಲಿ ಸುಧಾರಣೆ ಕಂಡ ಇಂಟರ್ನೆಟ್ ವೇಗ

ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಿಂದಾಗಿ 5G ರೋಲ್ ಔಟ್ ವೇಗವನ್ನು ಪಡೆದುಕೊಂಡಿದ್ದರಿಂದ ಸರಾಸರಿ ಮೊಬೈಲ್ ವೇಗದಲ್ಲಿ ಏಪ್ರಿಲ್‌ನಲ್ಲಿ ಭಾರತವು ನಾಲ್ಕು ಸ್ಥಾನಗಳನ್ನು ಜಿಗಿದು 60 ನೇ ಸ್ಥಾನದಲ್ಲಿದೆ. ಮಾರ್ಚ್‌ನಲ್ಲಿ 64ನೇ ಸ್ಥಾನದಲ್ಲಿತ್ತು. ಬುಧವಾರ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ನೆಟ್‌ವರ್ಕ್ ಇಂಟೆಲಿಜೆನ್ಸ್ ಮತ್ತು ಕನೆಕ್ಟಿವಿಟಿ ಒಳನೋಟಗಳ ಪೂರೈಕೆದಾರ ಓಕ್ಲಾ ಪ್ರಕಾರ, ಭಾರತದಲ್ಲಿ ಸರಾಸರಿ ಮೊಬೈಲ್ ಡೌನ್‌ಲೋಡ್ ವೇಗವು ಮಾರ್ಚ್‌ನಲ್ಲಿ 33.30 MBPS ನಿಂದ ಏಪ್ರಿಲ್‌ನಲ್ಲಿ 36.35 MBPS ಗೆ ಏರಿದೆ ಎಂದು ತಿಳಿಸಿದೆ.

ಒಟ್ಟಾರೆಯಾಗಿ, ಭಾರತವು ಸರಾಸರಿ ಸ್ಥಿರವಾದ ಬ್ರಾಡ್‌ಬ್ಯಾಂಡ್ ವೇಗಕ್ಕಾಗಿ ತನ್ನ ಜಾಗತಿಕ ಶ್ರೇಯಾಂಕದಲ್ಲಿ ಸುಧಾರಣೆಯನ್ನು ತೋರಿಸಿದೆ. ಮಾರ್ಚ್‌ನಲ್ಲಿ 84 ನೇ ಸ್ಥಾನದಿಂದ ಏಪ್ರಿಲ್‌ನಲ್ಲಿ 83 ನೇ ಸ್ಥಾನಕ್ಕೆ ಜಿಗಿದಿದೆ. ಸರಾಸರಿ ಸ್ಥಿರ ಮೊಬೈಲ್ ಡೌನ್‌ಲೋಡ್ ವೇಗದಲ್ಲಿ ದೇಶದ ಕಾರ್ಯಕ್ಷಮತೆಯು ಮಾರ್ಚ್‌ನಲ್ಲಿ 50.71 Mbps ನಿಂದ ಸ್ವಲ್ಪ ಹೆಚ್ಚಳ ತೋರಿಸಿದೆ. ಇದು ಏಪ್ರಿಲ್‌ನಲ್ಲಿ 51.12 MBPS ಆಗಿತ್ತು . ಸರಾಸರಿ ಮೊಬೈಲ್ ವೇಗದಲ್ಲಿ ಕತಾರ್ ಮೊದಲ ಸ್ಥಾನದಲ್ಲಿದ್ದರೆ, ಸೆನೆಗಲ್ 16 ಸ್ಥಾನಕ್ಕೆ ಜಿಗಿದಿದೆ.

ಒಟ್ಟಾರೆ ಸ್ಥಿರ ಸರಾಸರಿ ವೇಗದಲ್ಲಿ, ಸಿಂಗಾಪುರವು ಮೊದಲ ಸ್ಥಾನದಲ್ಲಿದ್ರೆ, ಬಹ್ರೇನ್ 14 ಸ್ಥಾನಗಳಿಂದ ಮೇಲಕ್ಕೆ ಜಿಗಿದಿದೆ. ಜನವರಿಯಲ್ಲಿ ಸರಾಸರಿ ಮೊಬೈಲ್ ವೇಗದಲ್ಲಿ ಭಾರತವು ಜಾಗತಿಕವಾಗಿ 69 ನೇ ಸ್ಥಾನದಲ್ಲಿದ್ದರೆ, ಫೆಬ್ರವರಿಯಲ್ಲಿ ಭಾರತವು 67 ನೇ ಸ್ಥಾನದಲ್ಲಿತ್ತು. Qualcomm ಭಾರತದಲ್ಲಿ ರಿಲಯನ್ಸ್ ಜಿಯೋ ಸಹಯೋಗದೊಂದಿಗೆ 5G ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (FWA) ಅನ್ನು ಹೊರತರುತ್ತಿದೆ ಎಂದು ಚಿಪ್-ಮೇಕರ್‌ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ಟಿಯಾನೋ ಅಮನ್ ಹೇಳಿದ್ದಾರೆ.

ಇದನ್ನೂ ಓದಿ: ಇಂಟರ್ನೆಟ್​ ಸೌಲಭ್ಯ ಮೂಲಭೂತ ಮಾನವ ಹಕ್ಕಾಗಲಿ: ಅಧ್ಯಯನದಲ್ಲಿ ಪ್ರತಿಪಾದನೆ

ದೇಶದಲ್ಲಿ 75 ಕೋಟಿ ಇಂಟರ್ನೆಟ್ ಬಳಕೆದಾರರು: ಭಾರತವು ಈಗ ತಿಂಗಳಿಗೆ ಒಮ್ಮೆಯಾದರೂ ಇಂಟರ್ನೆಟ್ ಬಳಸುವ 759 ಮಿಲಿಯನ್ (75.0 ಕೋಟಿ) 'ಸಕ್ರಿಯ' ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. 2025 ರ ವೇಳೆಗೆ ಈ ಸಂಖ್ಯೆ 900 ಮಿಲಿಯನ್ (90 ಕೋಟಿ) ತಲುಪಲಿದೆ ಎಂದು ವರದಿಯೊಂದು ಈ ಹಿಂದೆ ಬಿಡುಗಡೆಯಾಗಿತ್ತು. ಸದ್ಯ 2022 ರಲ್ಲಿದ್ದಂತೆ ಸಕ್ರಿಯ ಇಂಟರ್ನೆಟ್ ಬಳಕೆದಾರರ ಪೈಕಿ 399 ಮಿಲಿಯನ್ ಜನ ಗ್ರಾಮೀಣ ಭಾಗದವರು ಮತ್ತು 360 ಮಿಲಿಯನ್ ಜನ ನಗರವಾಸಿಗಳು. ಅಂದರೆ ಇಂಟರ್ನೆಟ್ ಬಳಕೆ ಏರಿಕೆಗೆ ಗ್ರಾಮೀಣ ಭಾರತವು ಗಮನಾರ್ಹ ಕೊಡುಗೆ ನೀಡುತ್ತಿದೆ ಎಂಬುದು ಇದರಿಂದ ತಿಳಿದು ಬರುತ್ತದೆ ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಮತ್ತು ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿ ಕಾಂಟರ್ ವರದಿ ಹೇಳಿದೆ.

ಇಂಟರ್ನೆಟ್​ನ ಒಟ್ಟು ಬಳಕೆದಾರರ ಪೈಕಿ ಶೇ 54 ರಷ್ಟು ಪುರುಷರಿದ್ದಾರೆ. ಆದರೆ, 2022 ರಲ್ಲಿ ಬಂದ ಹೊಸ ಬಳಕೆದಾರರ ಪೈಕಿ ಶೇಕಡಾ 57 ರಷ್ಟು ಮಹಿಳೆಯರು ಎಂಬುದು ಗಮನಾರ್ಹ. 2025 ರ ವೇಳೆಗೆ, ಎಲ್ಲಾ ಹೊಸ ಬಳಕೆದಾರರಲ್ಲಿ ಶೇಕಡಾ 65 ರಷ್ಟು ಮಹಿಳೆಯರೇ ಇರುತ್ತಾರೆ ಎಂದು ಅಂದಾಜಿಸಲಾಗಿದೆ. ಇದು ಬಳಕೆದಾರರಲ್ಲಿನ ಲಿಂಗ ತಾರತಮ್ಯವನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.