ETV Bharat / business

ಕೈಗಾರಿಕಾ ಬೆಳವಣಿಗೆ ದರ ನವೆಂಬರ್​ನಲ್ಲಿ ಶೇ 2.4ಕ್ಕೆ ಕುಸಿತ - ಉತ್ಪಾದನಾ ವಲಯ

ಭಾರತದ ಕೈಗಾರಿಕಾ ಬೆಳವಣಿಗೆ ದರ ನವೆಂಬರ್​ನಲ್ಲಿ ಶೇ 2.4ಕ್ಕೆ ಕುಸಿದಿದೆ.

Industrial growth slumps to 2.4% in November

author img

By ETV Bharat Karnataka Team

Published : Jan 12, 2024, 7:58 PM IST

ನವದೆಹಲಿ: ಭಾರತದ ಕೈಗಾರಿಕಾ ಬೆಳವಣಿಗೆ ದರವು ನವೆಂಬರ್​ನಲ್ಲಿ 8 ತಿಂಗಳ ಕನಿಷ್ಠ ಮಟ್ಟವಾದ ಶೇ 2.4ಕ್ಕೆ ಕುಸಿದಿದೆ ಎಂದು ಅಂಕಿ- ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ನವೆಂಬರ್ 2022 ರಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಶೇಕಡಾ 7.6 ರಷ್ಟು ಹೆಚ್ಚಾಗಿತ್ತು.

ಅಕ್ಟೋಬರ್​ನಲ್ಲಿ ಶೇಕಡಾ 10.2 ರಷ್ಟು ಹೆಚ್ಚಳ ದಾಖಲಿಸಿದ ನಂತರ ಉತ್ಪಾದನಾ ವಲಯದ ಬೆಳವಣಿಗೆ ದರ ನವೆಂಬರ್​ನಲ್ಲಿ ಕೆಳಗಿಳಿದಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 1.2 ರಷ್ಟು ಕಡಿಮೆಯಾಗಿದೆ. ವಿದ್ಯುತ್ ಉತ್ಪಾದನೆಯು ಅಕ್ಟೋಬರ್​ನ ಶೇಕಡಾ 20.4 ರ ಹೆಚ್ಚಿನ ಎರಡಂಕಿ ಬೆಳವಣಿಗೆಗೆ ಹೋಲಿಸಿದರೆ ಶೇಕಡಾ 5.8 ರಷ್ಟು ನಿಧಾನಗತಿಯಲ್ಲಿ ಬೆಳೆದಿದೆ. ಹಾಗೆಯೇ ಗಣಿಗಾರಿಕೆ ಬೆಳವಣಿಗೆಯು ಅಕ್ಟೋಬರ್​ನಲ್ಲಿ ಶೇಕಡಾ 13.1 ರಿಂದ ಶೇಕಡಾ 6.8 ಕ್ಕೆ ಇಳಿದಿದೆ.

ಹಬ್ಬಗಳ ಕಾರಣದಿಂದಾಗಿ ನವೆಂಬರ್​ನಲ್ಲಿ ಬಂದ ಹೆಚ್ಚಿನ ಸಂಖ್ಯೆಯ ರಜಾದಿನಗಳು ಕೂಡ ಉತ್ಪಾದನಾ ವಲಯದ ಬೆಳವಣಿಗೆ ಕುಸಿತಕ್ಕೆ ಕೆಲ ಮಟ್ಟಿಗೆ ಕಾರಣವಾಗಿದೆ. ಏಪ್ರಿಲ್ - ನವೆಂಬರ್ 2023 ರಲ್ಲಿ, ಐಐಪಿ ಬೆಳವಣಿಗೆಯು ಪ್ರಸ್ತುತ ಶೇಕಡಾ 6.4 ರಷ್ಟಿದೆ. ಇದು 2022-23 ರ ಮೊದಲ ಎಂಟು ತಿಂಗಳಲ್ಲಿ ಇದ್ದ ಶೇಕಡಾ 5.6 ರಷ್ಟು ಬೆಳವಣಿಗೆಗಿಂತ ಹೆಚ್ಚಾಗಿದೆ.

ಉತ್ಪಾದನಾ ವಲಯದ ಐಐಪಿ ಅಂಕಿ - ಅಂಶಗಳು ಕುಸಿದಿವೆ. ಇದು ಆರ್ಥಿಕ ವರ್ಷದ ಆರಂಭದಲ್ಲಿ ಉತ್ತಮ ಆವೇಗದ ನಂತರ 13 ತಿಂಗಳಲ್ಲಿ ಶೇಕಡಾ 1.2 ರಷ್ಟು ಕಡಿಮೆ ವಾರ್ಷಿಕ ಬೆಳವಣಿಗೆ ದಾಖಲಿಸಿದೆ. ಹಬ್ಬದ ನಂತರದ ಋತುವಿನಲ್ಲಿ ಕೈಗಾರಿಕಾ ಚಟುವಟಿಕೆಯಲ್ಲಿ ಮಿತಗೊಳಿಸುವಿಕೆ ಸಾಮಾನ್ಯವಾಗಿ ಕಂಡು ಬರುತ್ತದೆಯಾದರೂ, ಇದು ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬೇಡಿಕೆ ಕುಸಿತದ ಸೂಚನೆಯಾಗಿರಬಹುದು ಎಂದು ಅಕ್ಯೂಟ್ ರೇಟಿಂಗ್ಸ್ ಮತ್ತು ರಿಸರ್ಚ್​ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ಮುಖ್ಯಸ್ಥ ಸುಮನ್ ಚೌಧರಿ ಹೇಳಿದ್ದಾರೆ.

ನವೆಂಬರ್-23 ರಲ್ಲಿ ಗ್ರಾಹಕ ಬಾಳಿಕೆ ಬರುವ ಮತ್ತು ಬಾಳಿಕೆ ಬರುವ ವಸ್ತುಗಳ ಉತ್ಪಾದನೆಯಲ್ಲಿ ಸಂಕೋಚನ ಕಂಡು ಬಂದಿದೆ. ಇದು ಗ್ರಾಹಕ ಸರಕುಗಳ ವಲಯದಲ್ಲಿ ಒಟ್ಟಾರೆ ಶೇಕಡಾ 4.2 ರಷ್ಟು ಸಂಕೋಚನಕ್ಕೆ ಕಾರಣವಾಗಿದೆ.

"ನವೆಂಬರ್ 2023 ರಲ್ಲಿ ಐಐಪಿ ಬೆಳವಣಿಗೆಯಲ್ಲಿ ತೀವ್ರ ಇಳಿಕೆಯ ಹೊರತಾಗಿಯೂ, ಏಪ್ರಿಲ್-ನವೆಂಬರ್ 23 ರ ಅವಧಿಯಲ್ಲಿ ಸಂಚಿತ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ಶೇಕಡಾ 6.4 ರಷ್ಟಿದೆ ಮತ್ತು ಇಡೀ ಹಣಕಾಸು ವರ್ಷದಲ್ಲಿ ಆ ಅಂಕಿ - ಅಂಶವು ಶೇಕಡಾ 6.0 ಕ್ಕಿಂತ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇದೆ. ಆದಾಗ್ಯೂ, ಐಐಪಿಯ ದತ್ತಾಂಶವು ಹಣಕಾಸು ವರ್ಷ 24 ರ ನಾಲ್ಕನೇ ತ್ರೈಮಾಸಿಕದಲ್ಲಿ ಬೆಳವಣಿಗೆಯಲ್ಲಿ ಮಿತಗೊಳಿಸುವಿಕೆಯ ಆರಂಭಿಕ ಸೂಚಕವಾಗಿದೆ." ಎಂದು ಸುಮನ್ ಚೌಧರಿ ಹೇಳಿದರು.

ಇದನ್ನೂ ಓದಿ : ಆ್ಯಪಲ್ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕಂಪನಿಯಾದ ಮೈಕ್ರೊಸಾಫ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.