ETV Bharat / business

ಜಿ20 ರಾಷ್ಟ್ರಗಳನ್ನು ಮೀರಿಸಲಿದೆ ಭಾರತದ ಆರ್ಥಿಕ ಬೆಳವಣಿಗೆ; ಮೂಡೀಸ್ ವರದಿ

G20 growth to moderate Moody: ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ ಎಂದು ಮೂಡೀಸ್ ವರದಿ ಹೇಳಿದೆ.

Indias economy to outperform G20 growth to moderate Moody

author img

By ETV Bharat Karnataka Team

Published : Nov 9, 2023, 5:00 PM IST

ನವದೆಹಲಿ : ಜಿ-20 ಗುಂಪಿನ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯು 2023ರಲ್ಲಿ ಶೇ 2.8 ರಿಂದ ಶೇ 2.1ಕ್ಕೆ ಕುಸಿತವಾಗಲಿದೆ ಮತ್ತು 2025ರಲ್ಲಿ ಶೇ 2.6ಕ್ಕೆ ಏರಿಕೆಯಾಗಲಿದೆ ಎಂದು ಮೂಡೀಸ್ ತನ್ನ ಜಾಗತಿಕ ಸ್ಥೂಲ ಆರ್ಥಿಕ ದೃಷ್ಟಿಕೋನ 2024 - 25ರ ವರದಿಯಲ್ಲಿ ತಿಳಿಸಿದೆ. ಉದಯೋನ್ಮುಖ ಮಾರುಕಟ್ಟೆ ದೇಶಗಳಲ್ಲಿನ ಹಣಕಾಸು ಪರಿಸ್ಥಿತಿಗಳು ಗಮನಾರ್ಹವಾಗಿ ಬದಲಾಗಲಿದ್ದು ಭಾರತ, ಬ್ರೆಜಿಲ್, ಮೆಕ್ಸಿಕೊ ಮತ್ತು ಇಂಡೋನೇಷ್ಯಾದಂತಹ ಕೆಲ ದೇಶಗಳ ಆರ್ಥಿಕತೆಗಳು ನಿರೀಕ್ಷೆಗಳಿಗಿಂತ ಉತ್ತಮವಾಗಿ ಬೆಳವಣಿಗೆಯಾಗಲಿವೆ. ಆದರೆ, ಟರ್ಕಿ ಮತ್ತು ಅರ್ಜೆಂಟೀನಾದ ದೃಷ್ಟಿಕೋನಗಳು ಹೆಚ್ಚು ಅನಿಶ್ಚಿತವಾಗಿವೆ ಎಂದು ವರದಿ ಹೇಳಿದೆ.

ಭಾರತದ ಸುಸ್ಥಿರ ದೇಶೀಯ ಬೇಡಿಕೆಯ ಬೆಳವಣಿಗೆಯು ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ದೃಢವಾದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ, ಹೆಚ್ಚುತ್ತಿರುವ ವಾಹನ ಮಾರಾಟ, ಹೆಚ್ಚುತ್ತಿರುವ ಗ್ರಾಹಕರ ಆಶಾವಾದ ಮತ್ತು ಎರಡಂಕಿ ಸಾಲದ ಬೆಳವಣಿಗೆಯು ಪ್ರಸ್ತುತ ಹಬ್ಬದ ಋತುವಿನಲ್ಲಿ ನಗರ ಬಳಕೆಯ ಬೇಡಿಕೆ ಏರಿಕೆಯಲ್ಲಿ ಉಳಿಯುತ್ತದೆ ಎಂಬುದನ್ನು ಸೂಚಿಸುತ್ತದೆ.

ಇನ್ನು ಗ್ರಾಮೀಣ ಪ್ರದೇಶಗಳನ್ನು ನೋಡುವುದಾದರೆ - ಆರಂಭದಲ್ಲಿ ಸುಧಾರಣೆ ಚಿಹ್ನೆಗಳನ್ನು ತೋರಿಸಿದ್ದ ಗ್ರಾಮೀಣ ಆರ್ಥಿಕತೆ ಮಾನ್ಸೂನ್ ಕೊರತೆಯಿಂದ ಅಪಾಯಕ್ಕೀಡಾಗಿದೆ. ಮಾನ್ಸೂನ್ ಕೊರತೆಯು ಬೆಳೆಗಳ ಇಳುವರಿಯನ್ನು ಕಡಿಮೆ ಮಾಡಲಿದ್ದು, ಇದರಿಂದ ಆದಾಯ ಕೊರತೆಯಾಗಲಿದೆ ಎಂದು ವರದಿ ತಿಳಿಸಿದೆ.

ಮುಂದುವರಿದ ಜಿ 20 ಆರ್ಥಿಕತೆಗಳಲ್ಲಿ ನಿಜವಾದ ಆರ್ಥಿಕ ಚಟುವಟಿಕೆಯು 2023 ರಲ್ಲಿ ಅಂದಾಜು 1.7 ಪ್ರತಿಶತದಿಂದ 2024 ರಲ್ಲಿ ಕೇವಲ 1.0 ಪ್ರತಿಶತಕ್ಕೆ ಇಳಿಯುತ್ತದೆ ಮತ್ತು 2025 ರಲ್ಲಿ 1.8 ಪ್ರತಿಶತಕ್ಕೆ ಚೇತರಿಸಿಕೊಳ್ಳಲಿದೆ ಎಂದು ಸಿಎಸ್​ಆರ್ ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್​ನ ಹಿರಿಯ ಉಪಾಧ್ಯಕ್ಷ ಮಾಧವಿ ಬೊಕಿಲ್ ಹೇಳಿದ್ದಾರೆ.

ಜಿ 20 ಉದಯೋನ್ಮುಖ ಮಾರುಕಟ್ಟೆಗಳಲ್ಲಿನ ಬೆಳವಣಿಗೆಯು 2023 ರಲ್ಲಿ ಶೇಕಡಾ 4.4 ರಿಂದ 2024 ರಲ್ಲಿ ಶೇಕಡಾ 3.7 ಕ್ಕೆ ಮತ್ತು 2025 ರಲ್ಲಿ ಶೇಕಡಾ 3.8 ಕ್ಕೆ ಇಳಿಯಲಿದೆ. ಚೀನಾವನ್ನು ಹೊರತುಪಡಿಸಿ ಜಿ 20 ಇಎಂ ಬೆಳವಣಿಗೆಯು 2023 ರಲ್ಲಿ ಅಂದಾಜು ಶೇಕಡಾ 3.5 ರಿಂದ 2024 ರಲ್ಲಿ ಶೇಕಡಾ 3.3 ಕ್ಕೆ ಇಳಿಯುತ್ತದೆ ಮತ್ತು ನಂತರ 2025 ರಲ್ಲಿ ಶೇಕಡಾ 3.5 ಕ್ಕೆ ವೇಗಗೊಳ್ಳುತ್ತದೆ ಎಂದು ಮೂಡೀಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ : ವಾಟ್ಸ್​ಆ್ಯಪ್​ನಲ್ಲೂ ಕಾಣಿಸಲಿವೆ ಜಾಹೀರಾತು; ಆದರೆ ಮೇನ್ ಬಾಕ್ಸ್​ನಲ್ಲಿ ಅಲ್ಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.