ETV Bharat / business

4 ಬಿಲಿಯನ್​ಗೆ ತಲುಪಿದ ಇ-ಕಾಮರ್ಸ್​ ಶಿಪ್​ಮೆಂಟ್ಸ್​: 2028ಕ್ಕೆ 10 ಬಿಲಿಯನ್​ಗೆ ತಲುಪುವ ಸಾಧ್ಯತೆ - ಭಾರತದ ಇಕಾಮರ್ಸ್ ಮಾರುಕಟ್ಟೆ

ಭಾರತದ ಇಕಾಮರ್ಸ್ ಮಾರುಕಟ್ಟೆ ಈ ವರ್ಷದಲ್ಲಿ ಉತ್ತಮ ಬೆಳವಣಿಗೆ ದಾಖಲಿಸಲಿದೆ ಎಂದು ವರದಿಗಳು ಹೇಳಿವೆ. ಈ ವರ್ಷದಲ್ಲಿ ಇ-ಕಾಮರ್ಸ್ ಲಾಜಿಸ್ಟಿಕ್ಸ್​ ಶಿಪ್​ಮೆಂಟ್​ಗಳು 4 ಬಿಲಿಯನ್​ಗೆ ಏರಿಕೆಯಾಗಲಿವೆ.

India's e-commerce logistics industry to cross 10 bn shipments by FY28

author img

By

Published : Apr 11, 2023, 12:11 PM IST

ನವದೆಹಲಿ : ಹಣಕಾಸು ವರ್ಷ 2023ರಲ್ಲಿ ಭಾರತದ ಇ-ಕಾಮರ್ಸ್​ ಲಾಜಿಸ್ಟಿಕ್ಸ್​ ಉದ್ಯಮದ ಶಿಪ್​ಮೆಂಟ್​ಗಳು 4 ಬಿಲಿಯನ್​ಗೆ ಏರಿಕೆಯಾಗಿವೆ. ಹೊಸ ವಿಭಾಗಗಳು, ಡೈರೆಕ್ಟ್-ಟು-ಕನ್ಸೂಮರ್ (D2C) ಬ್ರ್ಯಾಂಡ್‌ಗಳು ಮತ್ತು ಸಣ್ಣ ನಗರಗಳಲ್ಲಿ ಹೆಚ್ಚಿದ ಬೆಳವಣಿಗೆಯ ಕಾರಣದಿಂದ ಇ-ಕಾಮರ್ಸ್ ವಲಯ ಗಮನಾರ್ಹ ಅಭಿವೃದ್ಧಿಯಾಗಿದೆ. ಹಣಕಾಸು ವರ್ಷ 2028ರ ವೇಳೆಗೆ ಇ-ಕಾಮರ್ಸ್​ ವಲಯ 10 ಬಿಲಿಯನ್​ ಶಿಪ್​ಮೆಂಟ್​ ದಾಟುವ ನಿರೀಕ್ಷೆಯಿದೆ ಹಾಗೂ ಈ ವಲಯ ಶೇಕಡಾ 20 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ದಾಖಲಿಸುವ ಸಾಧ್ಯತೆಯಿದೆ.

ತೀವ್ರಗೊಳ್ಳುತ್ತಿರುವ ಪೈಪೋಟಿಯ ಮಧ್ಯೆಯೂ ಡೆಲ್ಹಿವೆರಿ (Delhivery) ಇ-ಲಾಜಿಸ್ಟಿಕ್ಸ್ ವಲಯದ ಮುಂಚೂಣಿ ಕಂಪನಿಯಾಗಿ ಮುಂದುವರೆದಿದೆ. ಇ-ಕಾಮರ್ಸ್/ಇಂಟರ್ನೆಟ್ ವಲಯಗಳಲ್ಲಿ ಹಣಕಾಸಿನ ಬಿಕ್ಕಟ್ಟಿನ ಹೊರತಾಗಿಯೂ, ಇ-ಲಾಜಿಸ್ಟಿಕ್ಸ್ ಕಂಪನಿಗಳಿಗೆ ಹೆಚ್ಚಿನ ಬೆಳವಣಿಗೆ ಮತ್ತು ಹೆಚ್ಚಿನ ಆದಾಯದ ಅವಕಾಶಗಳು ಲಭ್ಯವಿವೆ. D2C ಅಥವಾ ದೊಡ್ಡ ಸರಕುಗಳು ಅಥವಾ ಇಕಾಮರ್ಸ್ ಅಲ್ಲದ ವಿಭಾಗಗಳಲ್ಲಿಯೂ ಇಂಥ ವ್ಯಾಪಾರದ ಅವಕಾಶಗಳು ಲಭ್ಯವಾಗಬಹುದು ಎಂದು ರೆಡ್​ಸೀರ್ ಸ್ಟ್ರಾಟೆಜಿ ಕನ್ಸಲ್ಟಂಟ್​ನ ಪಾಲುದಾರ ಮೃಗಾಂಕ ಗುಲ್ಗುಶಿಯಾ ಹೇಳಿದರು.

ಎಲ್ಲ ವಿಭಾಗಗಳಲ್ಲಿ D2C ಬ್ರ್ಯಾಂಡ್‌ಗಳು ಮುಂದಿನ ಕೆಲವು ವರ್ಷಗಳಲ್ಲಿ ಒಟ್ಟಾರೆ GMV 35 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ. ಈ ಬೆಳವಣಿಗೆಯ ಗಮನಾರ್ಹ ಪಾಲನ್ನು ಬ್ರ್ಯಾಂಡ್ ಡಾಟ್ ಕಾಂ ಹೊಂದಿದೆ. 2027 ನೇ ಇಸ್ವಿಯ ಹೊತ್ತಿಗೆ ಎಲ್ಲಾ ವಿಭಾಗಗಳಲ್ಲಿ D2C ಬ್ರ್ಯಾಂಡ್‌ಗಳಿಂದ ಒಟ್ಟು 33 ಶತಕೋಟಿ ಡಾಲರ್ GMV ಉತ್ಪತ್ತಿಯಾಗುವ ನಿರೀಕ್ಷೆಯಿದೆ. D2C ಬ್ರಾಂಡ್‌ಗಳಿಗೆ ಸಂಬಂಧಿತ ಮತ್ತು ಕಸ್ಟಮೈಸ್ ಮಾಡಿದ ಕೊಡುಗೆಗಳನ್ನು ಹೊಂದಿರುವ ಲಾಜಿಸ್ಟಿಕ್ಸ್ ಕಂಪನಿಗಳು ಈ ಹೆಚ್ಚಿನ ಬೆಳವಣಿಗೆಯ ವಿಭಾಗದಲ್ಲಿ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವ ಉತ್ತಮ ಅವಕಾಶಗಳನ್ನು ಹೊಂದಿದ್ದಾರೆ ಮತ್ತು ಮುಂದೆ ಬಲವಾದ ಆದಾಯವನ್ನು ಪಡೆಯುವ ಸಾಧ್ಯತೆಗಳನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಇ-ಕಾಮರ್ಸ್ ವಲಯದ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಪೂರೈಸಲು ದೃಢವಾದ ಸಾಮರ್ಥ್ಯ ಹೊಂದಿರುವ ಕಂಪನಿಗಳು ಮೂಲಭೂತವಾಗಿ ಈ ಸವಾಲಿನ ಸಮಯದಲ್ಲಿ ಹೆಚ್ಚು ಉನ್ನತಿ ಸಾಧಿಸುತ್ತಾರೆ ಮತ್ತು ಎಂದು ಗುಲ್ಗುಶಿಯಾ ತಿಳಿಸಿದರು.

ಇಕಾಮರ್ಸ್ ಲಾಜಿಸ್ಟಿಕ್ಸ್ ಎಂಬುದು ಕಂಪನಿಯ ಆನ್‌ಲೈನ್ ಗ್ರಾಹಕ ಆರ್ಡರ್​ಗಳ ಪೂರೈಕೆ ಸರಪಳಿಯಾಗಿದೆ. ಇದು ಉತ್ಪನ್ನವನ್ನು ಉತ್ಪಾದನೆಯ ಹಂತದಿಂದ ಗ್ರಾಹಕರಿಗೆ ತಲುಪಿಸುವ ಹಂತಕ್ಕೆ ಪಡೆಯುವ ಪ್ರಕ್ರಿಯೆಯಾಗಿದೆ. ಇದು ದಾಸ್ತಾನು, ಶಿಪ್ಪಿಂಗ್, ಗೋದಾಮು ಮತ್ತು ವಿತರಣೆಯನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ಲಾಜಿಸ್ಟಿಕ್ಸ್‌ ವಿಷಯದಲ್ಲಿ ನೋಡುವುದಾದರೆ ಇಕಾಮರ್ಸ್ ಕಂಪನಿಯು ಪರಿಣಾಮಕಾರಿ ನಿರ್ವಹಣಾ ವ್ಯವಸ್ಥೆಯನ್ನು ಹೊಂರುತ್ತದೆ. ಈ ಕಂಪನಿಗಳು ತಮ್ಮ ದಾಸ್ತಾನುಗಳನ್ನು ನಿರ್ವಹಿಸುವ ಅಗತ್ಯವಿರುತ್ತದೆ ಮತ್ತು ಗರಿಷ್ಠ ಮಾರಾಟದ ಅವಧಿಯಲ್ಲಿ ಉತ್ಪನ್ನಗಳ ಕೊರತೆಯಾಗದಂತೆ ಯೋಜನೆ ಮತ್ತು ಮುನ್ಸೂಚನೆಯನ್ನು ನೀಡಬೇಕು.

ಉತ್ಪನ್ನಗಳನ್ನು ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಸಾಗಿಸಲು ಮತ್ತು ಅಗತ್ಯವಿದ್ದಾಗ ಅವುಗಳನ್ನು ಗೋದಾಮಿನಲ್ಲಿ ಇರಿಸಲು ವ್ಯವಸ್ಥೆಯನ್ನು ಹೊಂದಿರಬೇಕು. ಅಂತಿಮವಾಗಿ, ವಿತರಣಾ ಚಾನೆಲ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದನ್ನು ಮತ್ತು ಗ್ರಾಹಕರಿಗೆ ಸರಕುಗಳ ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಈ ಕಂಪನಿಗಳ ಜವಾಬ್ದಾರಿಯಾಗಿರುತ್ತದೆ.
ಇದನ್ನೂ ಓದಿ : ಭಾರತವನ್ನು ದೂಷಿಸುವ ಬದಲು ವಾಸ್ತವ ಅರಿಯಿರಿ; ಪಾಶ್ಚಿಮಾತ್ಯ ಟೀಕಾಕಾರರಿಗೆ ಸಚಿವೆ ಸೀತಾರಾಮನ್​​ ಟಾಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.