ETV Bharat / business

ಚೀನಾದಿಂದ ಸೋಲಾರ್​ ಮಾಡ್ಯೂಲ್​ ಆಮದಿಗೆ ಭಾರತ ಬ್ರೇಕ್: ದೇಶಿಯ ಉತ್ಪಾದನೆಗೆ ಒತ್ತು...

Global energy think tank Ember Report: ಚೀನಾದಿಂದ ಭಾರತವು ಸೌರ ಮಾಡ್ಯೂಲ್ ಆಮದು ಮಾಡಿಕೊಳ್ಳುವುದನ್ನು ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡಿದೆ. 2022ರ ಮೊದಲಾರ್ಧದಲ್ಲಿ 9.8 ಜಿಡಬ್ಯ್ಲೂನಿಂದ 2023ರವರೆಗಿನ ಅವಧಿಯಲ್ಲಿ ಕೇವಲ 2.3 ಜಿಡಬ್ಯ್ಲೂಗೆ ಕುಸಿದಿದೆ ಎಂದು ಗ್ಲೋಬಲ್ ಎನರ್ಜಿ ಥಿಂಕ್ ಟ್ಯಾಂಕ್ ಎಂಬರ್ ವರದಿ ಹೇಳಿದೆ.

author img

By PTI

Published : Sep 14, 2023, 11:42 AM IST

Global energy think tank Ember Report
ಚೀನಾದಿಂದ ಸೋಲಾರ್​ ಮಾಡ್ಯೂಲ್​ ಆಮದಿಗೆ ಭಾರತ ಬ್ರೇಕ್: ದೇಶೀಯ ಉತ್ಪಾದನೆಗೆ ಒತ್ತು...

ನವದೆಹಲಿ: ಭಾರತವು 2023ರ ಮೊದಲಾರ್ಧದಲ್ಲಿ ಚೀನಾದಿಂದ ಸೋಲಾರ್ ಮಾಡ್ಯೂಲ್ ಆಮದಿನಲ್ಲಿ ಶೇಕಡಾ 76 ರಷ್ಟು ಗಣನೀಯ ಪ್ರಮಾಣದಲ್ಲಿ ಕಡಿತ ಮಾಡಿದೆ. ಇದು ಸೌರ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ನವದೆಹಲಿಯ ದೃಢವಾದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ನೂತನ ವರದಿ ಗುರುವಾರ ತಿಳಿಸಿದೆ.

ಚೀನಾದಿಂದ ಸೌರ ಮಾಡ್ಯೂಲ್ ಆಮದು ಮಾಡಿಕೊಳ್ಳುವುದನ್ನು ವರ್ಷದಿಂದ ವರ್ಷಕ್ಕೆ ತೀರಾ ಇಳಿಕೆ ಕಂಡಿದ್ದು, 2022ರ ಮೊದಲಾರ್ಧದಲ್ಲಿ 9.8 ಜಿಡಬ್ಲ್ಯೂನಿಂದ 2023ರ ಅವಧಿವರೆಗೆ ಭಾರತದಲ್ಲಿ 2.3 ಜಿಡಬ್ಲ್ಯೂಗೆ ಕುಸಿದಿದೆ ಎಂದು ಗ್ಲೋಬಲ್ ಎನರ್ಜಿ ಥಿಂಕ್ ಟ್ಯಾಂಕ್ ಎಂಬರ್ ವರದಿ ಹೇಳಿದೆ. ಈ ಕಾರ್ಯತಂತ್ರದ ಬದಲಾವಣೆಯು ಸುಂಕಗಳ ಹೇರಿಕೆಯೊಂದಿಗೆ, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಆಗಿದೆ. ಜೊತೆಗೆ ದೇಶಿಯ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿಗೆ ಆದ್ಯತೆ ನೀಡುವುದು ಭಾರತದ ಚಿಂತನೆಯಾಗಿದೆ.

ಎಂಬರ್​ನಲ್ಲಿನ ಭಾರತ ವಿದ್ಯುಚ್ಛಕ್ತಿ ನೀತಿ ವಿಶ್ಲೇಷಕರಾದ ನೆಶ್ವಿನ್ ರಾಡ್ರಿಗಸ್ ಅವರು, "ಸೌರ ಘಟಕಗಳ ಆಮದುಗಳಿಗಾಗಿ ಭಾರತವು ಚೀನಾದ ಮೇಲೆ ಹಿಂದೆ ಅವಲಂಬಿತವಾಗಿತ್ತು. 2022ರ ನಂತರದ ಅವಧಿಯಲ್ಲಿ ಆಮದಿನಲ್ಲಿ ನಿಜವಾಗಿಯೂ ಕಡಿಮೆಯಾಗಿದೆ. ಇತ್ತೀಚಿನ ನೀತಿ ಮಧ್ಯಸ್ಥಿಕೆಗಳಿಗೆ ಧನ್ಯವಾದಗಳು, ದೇಶಿಯ ಉತ್ಪಾದನೆಯು ವೇಗವನ್ನು ಪಡೆಯುತ್ತಿದೆ" ಎಂದು ಹೇಳಿದ್ದಾರೆ.

ಸೌರ ಉತ್ಪಾದನೆಯಲ್ಲಿ ಸ್ವಾವಲಂಬನೆ: "ಭಾರತವು ಸೌರ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಸಾಧಿಸುತ್ತಿರುವುದರಿಂದ, ಚೀನಾದ ಮಾಡ್ಯೂಲ್‌ಗಳು ಮತ್ತು ಸೆಲ್ಸ್​ ಮೇಲಿನ ಅವಲಂಬನೆಯು ತೀರಾ ಕಡೆಮೆಯಾಗಿದೆ. ಪ್ರಸ್ತುತ ನಿರ್ಣಾಯಕವಾದದ್ದು, ಸೌರ ಅಳವಡಿಕೆಯ ರಾಷ್ಟ್ರೀಯ ವಿದ್ಯುಚ್ಛಕ್ತಿ ಯೋಜನೆಯೊಂದಿಗೆ ವೇಗವನ್ನು ಕಾಪಾಡಿಕೊಳ್ಳಲು ಸಮರ್ಥವಾದ ನೀತಿ ರಚಿಸುವುದು ಬುಹುಮುಖ್ಯವಾಗಿದೆ" ಎಂದು ಅವರು ವಿವರಿಸಿದ್ದಾರೆ.

ಆಮದುಗಳನ್ನು ಕಡಿತಗೊಳಿಸಲು ಮತ್ತು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಭಾರತವು ಏಪ್ರಿಲ್ 2022 ರಿಂದ ಸೌರ ಮಾಡ್ಯೂಲ್‌ಗಳ ಮೇಲೆ 40 ಪ್ರತಿಶತ ಮತ್ತು ಸೌರ ಸೆಲ್ಸ್​ಗಳ ಮೇಲೆ ಶೇ 25ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಲು ಪ್ರಾರಂಭಿಸಿತು. ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ದೃಢವಾದ ದೇಶಿಯ ಸೌರ ಉತ್ಪಾದನಾ ವ್ಯವಸ್ಥೆಯನ್ನು ಪೋಷಿಸುವ ದೇಶ ಬದ್ಧತೆಯೊಂದಿಗೆ ಸುಸ್ಥಿರತೆ ಮತ್ತು ಶಕ್ತಿಯ ಸ್ವಾವಲಂಬನೆಯ ರಾಷ್ಟ್ರದ ವಿಶಾಲ ಗುರಿಗಳನ್ನು ಹೊಂದಿದೆ.

ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ: ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ರಾಷ್ಟ್ರೀಯ ಯೋಜನೆಗಳಾದ ನವೀಕರಿಸಬಹುದಾದ ಮತ್ತು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ (NDCs) ಪ್ರಕಾರ, ಭಾರತವು 2030ರ ವೇಳೆಗೆ ತ್ಯಾಜ್ಯರಹಿತ ಇಂಧನ ಆಧಾರಿತ ಸಂಪನ್ಮೂಲಗಳಿಂದ 500 ಜಿಡಬ್ಯ್ಲೂ ವಿದ್ಯುತ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸಾಧಿಸಲು ಬದ್ಧವಾಗಿದೆ.

2023ರ ಮೊದಲಾರ್ಧದಲ್ಲಿ ಚೀನಾದ ಸೌರ ಫಲಕಗಳ ರಫ್ತು ಶೇಕಡಾ 3 ರಷ್ಟು ಏರಿಕೆಯಾಗಿದೆ. ಇದು ವಿಶ್ವದಾದ್ಯಂತ ಒಟ್ಟು 114 ಜಿಡಬ್ಯ್ಲೂ ಅನ್ನು ತಲುಪಿದೆ ಎಂದು ವರದಿ ಹೇಳಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ರಫ್ತು ಮಾಡಿದ 85 ಜಿಡಬ್ಯ್ಲೂಗಿಂತ ಗಣನೀಯ ಏರಿಕೆಯನ್ನು ಸೂಚಿಸುತ್ತದೆ. ಸೋಲಾರ್ ಪ್ಯಾನಲ್ ತಯಾರಿಕಾ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯವು ಜಾಗತಿಕ ಮಾರುಕಟ್ಟೆ ಪಾಲನ್ನು ಸುಮಾರು 80 ಪ್ರತಿಶತವನ್ನು ಹೊಂದಿದೆ. ಇದು ಗಮನಾರ್ಹ ಜಾಗತಿಕ ಪರಿಣಾಮಗಳನ್ನು ಹೊಂದಿದೆ. 2023 ರ ಮೊದಲಾರ್ಧದಲ್ಲಿ ಚೀನಾದಿಂದ ರಫ್ತು ಮಾಡಲಾದ ಸೌರ ಮಾಡ್ಯೂಲ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಯುರೋಪ್‌ಗೆ ಉದ್ದೇಶಿಸಲಾಗಿದ್ದು, ಇದು ರಫ್ತಿನ ಶೇಕಡಾ 52.5 ರಷ್ಟಿದೆ.

ಯುರೋಪ್ ವಿಶ್ವದಾದ್ಯಂತ ಅತ್ಯಂತ ಗಣನೀಯವಾದ ಸಂಪೂರ್ಣ ಬೆಳವಣಿಗೆಯನ್ನು ಅನುಭವಿಸಿತು. ಚೀನಾದಿಂದ ರಫ್ತುಗಳು ವರ್ಷದಿಂದ ವರ್ಷಕ್ಕೆ (21 ಜಿಡಬ್ಯ್ಲೂ) 47 ಪ್ರತಿಶತದಷ್ಟು ಹೆಚ್ಚುತ್ತಿವೆ. 2023ರ ಮೊದಲಾರ್ಧದಲ್ಲಿ 44 ಜಿಡಬ್ಯ್ಲೂಗೆ ಹೋಲಿಸಿದರೆ, ಈ ವರ್ಷ ಒಟ್ಟು 65 ಜಿಡಬ್ಯ್ಲೂಗೆ ತಲುಪಿದೆ. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಚೀನಾದ ರಫ್ತು ವೇಗವಾಗಿ ವಿಸ್ತರಣೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2023 ರ ಮೊದಲಾರ್ಧದಲ್ಲಿ ಚೀನಾದಿಂದ ಸೌರ ಫಲಕಗಳ ಆಮದುಗಳಲ್ಲಿ ದಕ್ಷಿಣ ಆಫ್ರಿಕಾವು 438 ಶೇಕಡಾ (2.7 ಜಿಡಬ್ಯ್ಲೂ) ಗಮನಾರ್ಹ ಹೆಚ್ಚಳವನ್ನು ಕಂಡಿದೆ.

ಈ ಉಲ್ಬಣವು ಆಫ್ರಿಕಾದ ಒಟ್ಟಾರೆ ಬೆಳವಣಿಗೆಗೆ 187 ಶೇಕಡಾ (3.7 ಜಿಡಬ್ಯ್ಲೂ) ಕೊಡುಗೆ ನೀಡಿತು. ಇದು ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಆಫ್ರಿಕಾದ ನಂತರ, ಮಧ್ಯಪ್ರಾಚ್ಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ, 2023ರ ಮೊದಲಾರ್ಧದಲ್ಲಿ 64 ಶೇಕಡಾ ಬೆಳವಣಿಗೆ (2.4 ಜಿಡಬ್ಯ್ಲೂ) ಕಂಡಿದೆ. ಸೋಲಾರ್ ಪ್ಯಾನಲ್ ರಫ್ತು ಹೆಚ್ಚಳದ ಹೊರತಾಗಿಯೂ, ಸೋಲಾರ್ ಮಾಡ್ಯೂಲ್ ರಫ್ತು ಮತ್ತು ಸ್ಥಾಪಿತ ಪಿವಿ ಸಾಮರ್ಥ್ಯದ ನಡುವಿನ ಅಂತರವು ಜಾಗತಿಕವಾಗಿ ವಿಸ್ತರಿಸುತ್ತಿದೆ ಎಂದು ವರದಿ ವಿವರಿಸಿದೆ. (ಪಿಟಿಐ)

ಇದನ್ನೂ ಓದಿ: ಭಾರತ - ಮಧ್ಯಪ್ರಾಚ್ಯ- ಯುರೋಪ್​ ಕಾರಿಡಾರ್​: ಮುಂಬರುವ ಚುನಾವಣೆಗಳಲ್ಲಿ ಮೋದಿ- ಬೈಡನ್​ಗೆ ಲಾಭ ತರುವುದೇ? ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.