ನವ ದೆಹಲಿ: ಭಾರತದ ಸ್ಮಾರ್ಟ್‌ವಾಚ್ ಮಾರುಕಟ್ಟೆಯು ಜಾಗತಿಕವಾಗಿ ಬೃಹದಾಕಾರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಈ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ವಿಶೇಷ ಪ್ರಗತಿ ಕಾಣುತ್ತಿದ್ದು ಈ ವರ್ಷಾರಂಭದಿಂದ 171 ಪ್ರತಿಶತದಷ್ಟು ಬೆಳೆದಿದೆ ಎಂದು ಕೌಂಟರ್ಪಾಯಿಂಟ್ ರಿಸರ್ಚ್ ಎಂಬ ಸಂಸ್ಥೆಯು ತನ್ನ ಹೊಸ ವರದಿಯಲ್ಲಿ ತಿಳಿಸಿದೆ. ಹಣದುಬ್ಬರ ಮತ್ತು ಪ್ರಾದೇಶಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ವರ್ಷದ ಆರಂಭದಿಂದಲೂ ಸ್ಮಾರ್ಟ್ ವಾಚ್ ಮಾರುಕಟ್ಟೆ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ.
2022ರ ಮೊದಲ ತ್ರೈಮಾಸಿಕದಲ್ಲಿ ದೇಶದ ಸ್ಮಾರ್ಟ್‌ವಾಚ್ ಮಾರುಕಟ್ಟೆ ಶೇ 171 ದಷ್ಟು ಬೆಳೆಯುವ ಮೂಲಕ ಜಗತ್ತಿನ ದೊಡ್ಡ ಮಾರುಕಟ್ಟೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತದ ಹಬ್ಬದ ಸೀಸನ್‌ಗಳು. ಭಾರತದ ಬ್ರಾಂಡ್ಗಳು ತಮ್ಮ ಉತ್ಪನ್ನವನ್ನು ಕೈಗೆಟುಕುವ ದರದಲ್ಲಿ ನೀಡುತ್ತಿವೆ. ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವುದೂ ಸಹ ಬೆಳವಣಿಗೆಗೆ ಕೊಡುಗೆ ನೀಡಿದಂತೆ ಎಂದು ಮಾರುಕಟ್ಟೆ ವಿಶ್ಲೇಷಕ ಅಂಶಿಕ ಜೈನ್ ಹೇಳುತ್ತಾರೆ.
ಇತ್ತೀಚೆಗೆ ಬಿಡುಗಡೆಗೊಂಡ ಆ್ಯಪಲ್ ವಾಚ್ 8 ಸೀರಿಸ್ ಹೆಚ್ಚು ಮಾರಾಟವಾಗುತ್ತಿದ್ದು, ಇದು ಶೇ 48 ರಷ್ಟು ಬೆಳವಣಿಗೆ ಕಂಡಿದೆ. ವರ್ಷದಿಂದ ವರ್ಷಕ್ಕೆ ನಾಯ್ಸ್ ವಾಚ್ ಮಾರಾಟ ಕೂಡ ಹೆಚ್ಚಾಗುತ್ತಿದ್ದು ಇದು ಶೇ 218 ರಷ್ಟು ಬೆಳೆದಿದ್ದು, ಭಾರತದ ಮಾರುಕಟ್ಟೆಯ ಟಾಪರ್ ಆಗಿದೆ. ನಾಯ್ಸ್ ಇಂಡಿಯಾಗೆ ಹೋಲಿಕೆ ಮಾಡಿದರೆ ಫಿಟ್ಬಿಟ್ ಸಂಸ್ಥೆಯು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ್ದು, ಎರಡನೇ ಸ್ಥಾನದಲ್ಲಿದೆ.
ಸ್ಯಾಮ್ಸಂಗ್ ನ್ಯೂ ಗ್ಯಾಲಕ್ಸಿ ವಾಚ್ 5 ಸೀರಿಸ್ 62ರಷ್ಟು ಏರಿಕೆ ಕಂಡಿದೆ. ಲೈಟರ್ ವರ್ಷನ್ ಒಎಸ್ ಹೊಂದಿರುವ ಬೇಸಿಕ್ ಸ್ಮಾರ್ಟ್‌ವಾಚ್ ಹೆಚ್ಚು ಕೈಗೆಟುಕುವ ದರದಲ್ಲಿದ್ದು, ಜಾಗತಿಕ ಮಾರುಕಟ್ಟೆ ಬೆಳೆವಣಿಗೆ ಪ್ರಮುಖ ಅಂಶವಾಗಿದೆ. ಕ್ಯೂ3 2022 ರಲ್ಲಿ ಎಚ್ಎಲ್ಒಎಸ್ ಸ್ಮಾರ್ಟ್‌ವಾಚ್ ಸಾಗಣೆ 23 ಪ್ರತಿಶತದಷ್ಟು ವೃದ್ಧಿಯಾಗಿದ್ದು, ಮೂಲ ಸ್ಮಾರ್ಟ್‌ವಾಚ್ ಸಾಗಣೆಗಳು ದ್ವಿಗುಣಗೊಂಡಿದೆ. ಒಟ್ಟು ಮಾರುಕಟ್ಟೆಯ 35 ಪ್ರತಿಶತವನ್ನು ಹೊಂದಿದೆ ಎಂದು ಸಂಶೋಧನಾ ವಿಶ್ಲೇಷಕ ವೊಜಿನ್ ಸನ್ ತಿಳಿಸಿದ್ದಾರೆ.
2020ರ ವರ್ಷದ ಕೊನೆಯ ಹಂತದಿಂದ 2022 ರವರೆಗೆ ಸ್ಮಾರ್ಟ್ ವಾಚ್ ಸಾಗಣೆಯಲ್ಲಿ ಉತ್ತರ ಅಮೆರಿಕ ಅತಿದೊಡ್ಡ ಮಾರುಕಟ್ಟೆ ಹೊಂದಿದ್ದು, ಇಲ್ಲಿನ ಪ್ರಗತಿ ಶೇ 21 ರಷ್ಟು ಹೆಚ್ಚಿದೆ. ಭಾರತ ಜಾಗತಿಕವಾಗಿ ಎರಡನೇ ಅತಿದೊಡ್ಡ ಮಾರುಕಟ್ಟೆ ಹೊಂದಿದೆ ಎಂದು ವರದಿ ವಿಶ್ಲೇಷಿಸುತ್ತದೆ.
ಇದನ್ನೂ ಓದಿ: ನೋ ಕಾಸ್ಟ್ EMI ಆಯ್ಕೆ ಮಾಡುವಿರಾ? ಈ ವಿಷಯಗಳನ್ನು ತಿಳಿಯಿರಿ..