ETV Bharat / business

ಶ್ರೀಲಂಕಾ ಸಂಕಷ್ಟಕ್ಕೆ ನೆರವಾದ ಭಾರತ: 1 ಶತಕೋಟಿ ಡಾಲರ್​ ಸಾಲದ ಮರು ಪಾವತಿ ಅವಧಿ ವಿಸ್ತರಣೆ! - ಈಟಿವಿ ಭಾರತ ಕರ್ನಾಟಕ

ಶ್ರೀಲಂಕಾಕ್ಕೆ ನೀಡಲಾಗಿದ್ದ 1 ಶತಕೋಟಿ ​ ಡಾಲರ್​ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ ಕೊಲಂಬೊದಲ್ಲಿರುವ ಭಾರತೀಯ ಹೈ ಕಮಿಷನ್ ತಿಳಿಸಿದೆ.

India extends $1 billion credit facility for Sri Lanka by a year
ಶ್ರೀಲಂಕಾಕ್ಕೆ ಸಂಕಷ್ಟಕ್ಕೆ ನೆರವಾದ ಭಾರತ: 1 ಶತಕೋಟಿ ಡಾಲರ್​ ಸಾಲದ ಮರು ಪಾವತಿ ಅವಧಿಯ ವಿಸ್ತರಣೆ!
author img

By

Published : May 30, 2023, 9:17 PM IST

ನವದೆಹಲಿ: ಶ್ರೀಲಂಕಾದ ನೆರವಿಗೆ ಭಾರತ ಮತ್ತೊಮ್ಮೆ ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾರ್ಚ್ 2022ರಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಶ್ರೀಲಂಕಾಕ್ಕೆ ನೀಡಲಾಗಿದ್ದ 1 ಶತಕೋಟಿ ಅಮೆರಿಕನ್​ ಡಾಲರ್​ ಸಾಲದ ಮರು ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಮಂಗಳವಾರ ಮಾಹಿತಿ ನೀಡಿದೆ. ಈ ಮೂಲಕ ಸಾಲದ ಮೊತ್ತವನ್ನು ಭಾರತಕ್ಕೆ ಹಿಂದಿರುಗಿಸಲು ಶ್ರೀಲಂಕಾಗೆ ಮತ್ತೊಂದು ವರ್ಷ ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಇದಕ್ಕೆ ಸಂಬಂಧಿಸಿದ ತಿದ್ದುಪಡಿ ಒಪ್ಪಂದಕ್ಕೆ ಅಧಿಕಾರಿಗಳು ಸಹಿ ಹಾಕಿದ್ದಾರೆ.

ಕೊಲಂಬೊದಲ್ಲಿರುವ ಭಾರತೀಯ ಹೈ ಕಮಿಷನ್ ಪ್ರಕಾರ, ಹಣಕಾಸು ಖಾತೆ ರಾಜ್ಯ ಸಚಿವ ಶೆಹನ್ ಸೆಮಾಸಿಂಘೆ, ಶ್ರೀಲಂಕಾದ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಕೊಲಂಬೊದಲ್ಲಿನ ಭಾರತೀಯ ಹೈ ಕಮಿಷನ್‌ನ ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದೇ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.

ಶ್ರೀಲಂಕಾ ಕಳೆದ ವರ್ಷದಿಂದ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಾರತವು ನೆರೆಯ ರಾಷ್ಟ್ರವಾಗಿರುವುದರಿಂದ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರು, ಶ್ರೀಲಂಕಾಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಹಾಯ ಮಾಡಿರುವುದಕ್ಕಿಂತಲೂ ಹೆಚ್ಚಿನದನ್ನು ಭಾರತ ಮಾಡಿದೆ ಎಂದು ಹೇಳಿದ್ದರು.

ಹಿಂದೂ ಮಹಾಸಾಗರದ ದ್ವೀಪಗಳು, ಕೊಲ್ಲಿ ರಾಷ್ಟ್ರಗಳು ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಒಳಗೊಂಡ ವಿಸ್ತೃತ ನೆರೆಹೊರೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದರು.

ಈ ತಿದ್ದುಪಡಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಸಾಲದ ಮರು ಪಾವತಿಗೆ ಇನ್ನೂ ಒಂದು ವರ್ಷದ ಅವಧಿಗೆ ಅಂದರೆ ಮಾರ್ಚ್ 2024 ರವರೆಗೆ ವಿಸ್ತರಿಸಲಾಗಿದೆ. ಕಳೆದ ವರ್ಷದಿಂದ, ಶ್ರೀಲಂಕಾ ಸರ್ಕಾರದ ಅಗತ್ಯತೆಗಳು ಮತ್ತು ಆದ್ಯತೆಗಳ ಪ್ರಕಾರ ಇಂಧನ, ಔಷಧಗಳು, ಆಹಾರ ಪದಾರ್ಥಗಳು ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳನ್ನು ತುರ್ತಾಗಿ ಆಮದು ಮಾಡಿಕೊಳ್ಳಲು ಈ ಸಾಲ ಸೌಲಭ್ಯ ನೆರವಾಗಿತ್ತು.

ಶ್ರೀಲಂಕಾದ ಅತ್ಯಂತ ಗಂಭೀರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ, ಭಾರತ ಸರ್ಕಾರವು ನೆರೆಹೊರೆಯವರಿಗೆ ಮೊದಲು ನೆರವು ಎಂಬ ನೀತಿಯನ್ನು ಅನುಸರಿಸುವ ಮೂಲಕ ಸಹಾಯ ಮಾಡಿತ್ತು. ಭಾರತ ಸರ್ಕಾರವು ಕಳೆದ ವರ್ಷ ಹಲವಾರು ಕ್ರೆಡಿಟ್ ಲೈನ್‌ಗಳು ಮತ್ತು ಕರೆನ್ಸಿ ಬೆಂಬಲದ ಮೂಲಕ ಶ್ರೀಲಂಕಾ ಸರ್ಕಾರಕ್ಕೆ ಸುಮಾರು 4 ಶತಕೋಟಿ ಯುಎಸ್ ಡಾಲರ್ ಮೌಲ್ಯದಷ್ಟು ಸಹಾಯವನ್ನು ಮಾಡಿದೆ.

ಅಗತ್ಯತೆಗಳು ಮತ್ತು ಆದ್ಯತೆಗಳ ಪ್ರಕಾರ ಇಂಧನ, ಔಷಧಗಳು, ಆಹಾರ ಪದಾರ್ಥಗಳು ಮತ್ತು ಕೈಗಾರಿಕಾ ಕಚ್ಚಾ ಸಾಮಗ್ರಿಗಳ ತಕ್ಷಣದ ಖರೀದಿಗಾಗಿ ಶ್ರೀಲಂಕಾ ಸರ್ಕಾರವು ಇದನ್ನು ಬಳಸಿದೆ. ಅಗತ್ಯವಿದ್ದಾಗ ಭಾರತ ಯಾವಾಗಲೂ ಶ್ರೀಲಂಕಾಕ್ಕೆ ಸಹಾಯ ಮಾಡಿತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಇದನ್ನೂ ಓದಿ: 2 ಸಾವಿರ ನೋಟ್​​ ಹಿಂಪಡೆದ ಆರ್​ಬಿಐ: 14 ಸಾವಿರ ಕೋಟಿ ಮೌಲ್ಯದ 2 ಸಾವಿರ ನೋಟ್​​ಗಳನ್ನ ಪಡೆದ ಎಸ್​​ಬಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.