ETV Bharat / business

ನಾನು ರಾಜಕುಮಾರಿ ಅಲ್ಲ, ಅನುಭವದಿಂದ ಕಲಿತವಳು; ನೈಕಾ ಸಿಇಒ ಅದ್ವೈತ ನಾಯರ್​​ - ಪರಿಶ್ರಮದ ಜೊತೆಗೆ ಅನುಭವ ಕೂಡ ಅಗಾಧ

ಉದ್ಯಮದಲ್ಲಿನ ಯಶಸ್ಸಿನ ಕುರಿತು ನೈಕಾ ಫ್ಯಾಷನ್​ ಸಿಇಒ ಅದ್ವೈತ ನಾಯರ್ ಮನ ಬಿಚ್ಚಿ ಮಾತನಾಡಿದ್ದಾರೆ. ಅವರ ಯಶೋಗಾಥೆ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ರಾಜಕುಮಾರಿ ಅಲ್ಲ, ಅನುಭವದಿಂದ ಕಲಿತವರು; ನೈಕಾ ಸಿಇಒ ಅದ್ವೈತ ನಾಯರ್​​
i-am-not-a-princess-learned-by-experience-advaita-nair-is-the-ceo-of-nykaa
author img

By

Published : Jan 21, 2023, 1:49 PM IST

ಯಶಸ್ಸು ಎಂಬುದು ಒಂದೇ ದಿನದಿಂದ ಸಾಧ್ಯವಾಗುವುದಿಲ್ಲ. ಅದರ ಹಿಂದೆ ಪರಿಶ್ರಮದ ಜೊತೆಗೆ ಅನುಭವ ಕೂಡ ಅಗಾಧ. ಇಂತಹ ಎಲ್ಲಾ ಅನುಭವಗಳನ್ನು ನಾವು ಜೀವನದಲ್ಲಿ ಕಲಿಯಲು ಸಾಧ್ಯವಿಲ್ಲ. ಹಲವು ಅನುಭವವನ್ನು ನೋಡಿ, ಅಥವಾ ಕೇಳಿ ಕಲಿಯಬೇಕು. ಅದರಲ್ಲೂ ವೃತ್ತಿ ಯಶಸ್ಸಿನಲ್ಲಿ ಇಂತಹ ಹಲವು ಅನುಭವಗಳು ಮಾರ್ಗದರ್ಶನ ನೀಡುತ್ತವೆ. ಇಂತಹ ಅನುಭವಗಳು, ಉದ್ಯೋಗ ಸ್ಥಳದಲ್ಲಿನ ವಾತಾವರಣಗಳ ಕುರಿತು ನೈಕಾ ಫ್ಯಾಷನ್​ ಸಿಇಒ ಅದ್ವೈತ ನಾಯರ್​ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನೈಕಾ ಯಶಸ್ಸಿನಿಂದಾಗಿ ಅನೇಕ ಮಂದಿ ನಾನು ರಾಜಕುಮಾರಿಯಾಗಿದ್ದೇನೆ ಎಂದು ಭಾವಿಸುತ್ತಾರೆ. ಆದರೆ, ನನ್ನ ತಾಯಿ ನನಗೆ ಉದ್ಯಮ ಮಾಡುವ ಐಡಿಯಾ ಹೇಳಿಕೊಟ್ಟವರು. ಈ ಹಿನ್ನೆಲೆ ಯಾವ ಕ್ಷೇತ್ರ ಉತ್ತಮ ಎಂದು ನಾನು ಚಿಂತಿಸಲು ಆರಂಭಿಸಿದೆ. ಮಾರ್ಕೆಟಿಂಗ್ ಮತ್ತು ಹೂಡಿಕೆಯಂತಹ ಎಲ್ಲಾ ಅಂಶಗಳಲ್ಲಿ ನನ್ನ ಪಾತ್ರವೇನು ಎಂಬುದರ ಕುರಿತು ಚಿಂತಿಸಿದೆ. ಅನೇಕ ತಿರಸ್ಕರಗಳನ್ನು ಕಂಡಿದ್ದೇನೆ. ನನ್ನ ಸಾಮರ್ಥ್ಯ ಏನು ಎಂಬುದನ್ನು ತಿಳಿಯದ ಕಾರಣ ಅನೇಕ ವರ್ಷ ಉದ್ಯೋಗವನ್ನು ಮಾಡಿದೆ.

ಆದರೆ ನಾನು ಅದನ್ನು ಸಾಕಷ್ಟು ಸವಾಲಾಗಿ ಪರಿಗಣಿಸಲಿಲ್ಲ. ನನ್ನ ತಾಯಿಯೊಂದಿಗೆ ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದೆ. ಬೆಳಗ್ಗೆ ಬೇಗ ಏಳುವುದು ರೋಮಾಂಚನಕಾರಿಯಾಗಿರಬೇಕು. ನನ್ನ ಕೌಶಲ್ಯಗಳನ್ನು ಚುರುಕುಗೊಳಿಸಲು. ಕೆಲಸ ಬದುಕಿನ ಭಾಗವಾಗಬೇಕು. ಅದನ್ನೇ ನಾನು ಬಯಸಿದ್ದೆ. ನೈಕಾ ನನಗೆ ಎಲ್ಲವನ್ನೂ ಕೊಟ್ಟಳು. ಇದೇ ಕಾರಣದಿಂದ ನಾನು ಅದನ್ನು ಉತ್ಸಾಹದಿಂದ ಮಾಡುತ್ತಿದ್ದೇನೆ. ನೀವು ಅಂತಹ ಕೆಲಸದ ವಾತಾವರಣವನ್ನು ಬಯಸಲು ಇಚ್ಚಿಸಿದರೆ, ಈ ಸರಳ ನಿಯಮಗಳನ್ನು ಅನುಸರಿಸಿ ಎಂದು ಸಲಹೆಯನ್ನು ನೀಡಿದ್ದಾರೆ

ಕಷ್ಟಪಟ್ಟು ಕೆಲಸ ಮಾಡಿ, ಯಶಸ್ಸು ತಾನಾಗೇ ಬರುತ್ತೆ: ಸಾಧಿಸುವ ಚಲದಿಂದ ಕಷ್ಟಪಟ್ಟು ಕೆಲಸ ಮಾಡಿ. ಇದೇ ಕೂಡ ಯಶಸ್ಸಿನ ಮಂತ್ರ. ಇದು ಎಂತಹ ಕಷ್ಟದ ಪ್ರಾಜೆಕ್ಟ್​​ ಅನ್ನು ಧೈರ್ಯದಿಂದ ಎದುರಿಸಲು ಸಾಧ್ಯ ಮಾಡುತ್ತದೆ. ಅಲ್ಲದೇ ಈ ವರ್ಗಾವಣೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಗೊಳ್ಳಿ. ಆರೋಗ್ಯದ ಬಗ್ಗೆ ಗಮನ ನೀಡುವಾಗ ಯಾರು ಕೂಡ ಒಂದೇ ಸ್ಥಾನದಲ್ಲಿ ಕುಗ್ಗಲು ಸಾಧ್ಯವಿಲ್ಲ.

ನಾಯಕರು ತೊಂದರೆ ನೀಡುವಾಗ ಅವರ ಬೆಂಬಲಿಗರು ಅಲ್ಲಿ ನಿಲ್ಲಲು ಸಾಧ್ಯವಿಲ್ಲ. ನಿಮ್ಮ ಮನಸ್ಸು ಸೂಕ್ಷ್ಮವಾಗುತ್ತದೆ. ಅದೇ ರೀತಿ ನಿರ್ಧಾರದಲ್ಲೂ ಒಂದೇ ವಿಷಯಕ್ಕೆ ಅಂಟಿಕೊಂಡಿರಬೇಕು. ಇದೇ ತತ್ವಗಳನ್ನು ಹಲವರು ಕಂಪನಿಗಳನ್ನು ಗಮನಿಸಿದ ಬಳಿಕ ನಾನು ಕಲಿತು, ಅನುಸರಿಸುತ್ತಿದ್ದೇನೆ ಬೇರೆಯವರನ್ನು ಸಂತೋಷಗೊಳಿಸಲು ನಾವು ನಮ್ಮ ಶಕ್ತಿಯನ್ನು ಖರ್ಚು ಮಾಡುತ್ತೇವೆ. ಅವರಿಗೆ ಏನು ಬೇಕು ಎಂಬುದನ್ನು ಪತ್ತೆ ಮಾಡುವಲ್ಲಿ ನಾವು ನಾವು ಬಳಲುತ್ತೇವೆ. ನೀವು ನಿಮ್ಮಂತೆ ಇರಬೇಕು. ಎಂತಂಹ ಟೀಕೆ ಎದುರಾದರೂ ನೀವು ನಿಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎನ್ನುತ್ತಾರೆ ಅದ್ವೈತ ನಾಯರ್.

ಯಾರೀದು ಅದ್ವೈತ ನಾಯರ್​: ನೈಕಾ ಮತ್ತು ಪ್ರಸ್ತುತ ನೈಕಾ ಫ್ಯಾಷನ್​ ಸಿಇಒ ಆಗಿರುವ ಅದ್ವೈತ ನಾಯರ್​, ಯೆಲ್​ನಲ್ಲಿ ಅರ್ಥಶಾಸ್ತ್ರ ಅಧ್ಯಯನಕ್ಕೆ ಮುಂದಾದರು. ಆದರೆ, ಅಲ್ಲಿರುವವರೆಲ್ಲ ಅರ್ಥಶಾಸ್ತ್ರ ವಿದ್ಯಾರ್ಥಿಗಳು ಎಂದು ಅರಿತ ಅದ್ವೈತ ಅವರಿಗಿಂತ ತಾನು ಯಾವುದೇ ಭಿನ್ನತೆ ಇಲ್ಲ ಎಂದು ಅರಿತು, ಅನ್ವಯಿಕ ಅರ್ಥಶಾಸ್ತ್ರವನ್ನು ಆರಿಸಿಕೊಂಡರು.

ಪದವಿ ಪಡೆದ ನಂತರ, ಅವರು ನ್ಯೂಯಾರ್ಕ್‌ನಲ್ಲಿ ನಿರ್ವಹಣಾ ಸಲಹಾ ಸಂಸ್ಥೆ ಬೈನ್ ಅಂಡ್​​ ಕಂಪನಿಯಲ್ಲಿ ಒಂದು ವರ್ಷ ಉದ್ಯೋಗ ನಿರ್ವಹಿಸಿದ್ದರು. ಬಳಿಕ ಅವರ ತಾಯಿ ಫಲ್ಗುಣಿ ನಾಯರ್ ಜೊತೆ ನೈಕಾ ಉದ್ಯಮದಲ್ಲಿ ಭಾಗಿಯಾದರು.

ಇದನ್ನೂ ಓದಿ: ಹೈದರಾಬಾದ್​ನ ಗೋಲ್ಡ್​ ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು: ಹೀಗಿದೆ ಇದರ ವಿಶೇಷತೆ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.