ETV Bharat / business

ಕ್ರೆಡಿಟ್​ ಸ್ಕೋರ್​ ಕುಸಿಯಲು ಕಾರಣವೇನು? ಸರಿಪಡಿಸಿಕೊಳ್ಳುವ ಬಗೆ ಇಲ್ಲಿದೆ..

ನಾವು ಪಡೆದ ಕ್ರೆಡಿಟ್ ವರದಿಯನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು. ನಮ್ಮ ಹಣಕಾಸು ನಿರ್ವಹಣೆಯಲ್ಲಿ ದೋಷ ಎಲ್ಲಿದೆ ಎಂಬುದನ್ನು ಕಂಡು ಹಿಡಿಯಬೇಕು.

How to Dispute a Credit Report Error  Credit Report Error  Credit score news  ಕ್ರೆಡಿಟ್​ ಸ್ಕೋರ್​ ಕುಸಿಯಲು ಕಾರಣವೇನು  ಕ್ರೆಡಿಟ್​ ವರದಿ ಪರಿಶೀಲಿಸುವುದು ಒಳಿತು  ವರದಿಯನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು  ನಮ್ಮ ಹಣಕಾಸು ನಿರ್ವಹಣೆಯಲ್ಲಿ ದೋಷ  ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸ  ತಪ್ಪುಗಳು ಕಂಡು ಬಂದರೆ ಸರಿಪಡಿಸಲು ಸಾಧ್ಯ  ಮುಂದಿನ ದಿನಗಳಲ್ಲಿ ಸಮಸ್ಯೆ  ಕ್ರೆಡಿಟ್​ ಸ್ಕೋರ್​ 750 ಅಂಕ
ಆಗಾಗ ಕ್ರೆಡಿಟ್​ ವರದಿ ಪರಿಶೀಲಿಸುವುದು ಒಳಿತು
author img

By

Published : May 19, 2023, 11:35 AM IST

ನೀವು ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಲು ಮರೆಯಬೇಡಿ. ಆಗ ತಪ್ಪುಗಳು ಕಂಡುಬಂದರೆ ಸರಿಪಡಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬಹುದು.

ಉದಾಹರಣೆಯೊಂದಿಗೆ ತಿಳಿಯೋಣ..: ರಾಜು ಖಾಸಗಿ ಕಂಪನಿ ಉದ್ಯೋಗಿ. ಒಳ್ಳೆಯ ಸಂಬಳ ಬರುತ್ತಿದೆ. ಕಳೆದ ತಿಂಗಳ ಹಿಂದೆ ಆತನಿಗೆ ಸ್ವಲ್ಪ ಹಣದ ಅವಶ್ಯಕತೆ ಇತ್ತು. ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಕಡಿಮೆ ಕ್ರೆಡಿಟ್ ಸ್ಕೋರ್ ಕಾರಣ ಬ್ಯಾಂಕ್‌ನವರು ಆತನ ಅರ್ಜಿ ತಿರಸ್ಕರಿಸಿದ್ದರು. ಇಲ್ಲಿಯವರೆಗೆ ಮಾಡಿದ ಸಾಲವನ್ನೆಲ್ಲ ತೀರಿಸಿದ ರಾಜುಗೆ ಕ್ರೆಡಿಟ್ ಸ್ಕೋರ್ ಏಕೆ ಕಡಿಮೆಯಾಗಿದೆ? ಎಂಬುದೇ ಅರ್ಥವಾಗಲಿಲ್ಲ.

ಕ್ರೆಡಿಟ್ ಬ್ಯೂರೋಗಳನ್ನು ಸಂಪರ್ಕಿಸಿ ವರದಿ ತೆಗೆದುಕೊಂಡ ನಂತರ ಕಳೆದ ಕೆಲವು ತಿಂಗಳುಗಳಿಂದ ಅಂಕಗಳು ಕಡಿಮೆಯಾಗುತ್ತಿರುವುದು ಗೊತ್ತಾಗಿದೆ. ತಮ್ಮ ಹೆಸರಿನಲ್ಲಿ ಯಾವುದೇ ಸಂಬಂಧವಿಲ್ಲದ ಸಾಲ ಖಾತೆ ಇರುವುದು ಪತ್ತೆಯಾಗಿದೆ. ಇದು ರಾಜುಗೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಅನೇಕರು ಎದುರಿಸುತ್ತಿರುವ ಸಮಸ್ಯೆ. ಆದ್ದರಿಂದ, ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಲು ಮರೆಯದಿರಿ.

* ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್​ ಸ್ಕೋರ್​ 750 ಅಂಕಗಳಿಗಿಂತ ಮೇಲೆ ಇದ್ದರೆ ಅದು ಉತ್ತಮ ಸ್ಕೋರ್ ಆಗಿರುತ್ತದೆ. ಅಂತಹವರಿಗೆ ಬ್ಯಾಂಕ್‌ಗಳು ಸುಲಭವಾಗಿ ಸಾಲ ನೀಡುತ್ತವೆ. ಸ್ಕೋರ್ ಉತ್ತಮವಾದಾಗ ಬಡ್ಡಿ ದರಗಳಲ್ಲಿ ರಿಯಾಯಿತಿ ಸಿಗುತ್ತದೆ.

* ನೀವು ಸಾಲದ ಕಂತುಗಳನ್ನು ಸರಿಯಾದ ಸಮಯದೊಳಗೆ ಪಾವತಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ, ಸಾಲದಾತ ಈ ವಿಷಯವನ್ನು ಕ್ರೆಡಿಟ್ ಬ್ಯೂರೋಗಳಿಗೆ ಸರಿಯಾಗಿ ವರದಿ ಮಾಡುವುದಿಲ್ಲ. ಮತ್ತು ಅದನ್ನು 'ತಡವಾಗಿ ಪಾವತಿ' ಎಂದು ಉಲ್ಲೇಖಿಸುತ್ತಾನೆ ಎಂದು ಭಾವಿಸೋಣ. ಆಗ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಪಾವತಿಯಲ್ಲಿ ಯಾವುದೇ ವಿಳಂಬವಾಗದೇ ಇದ್ದಾಗ ನೀವು ಈ ವಿಷಯವನ್ನು ಸಾಲದಾತರ ಗಮನಕ್ಕೆ ತರಬೇಕು. ವರದಿ ಸರಿಪಡಿಸಲು ಕೇಳಿಕೊಳ್ಳಿ.

* ನಿಮ್ಮ ಹೆಸರು, ವಿಳಾಸ, ಪ್ಯಾನ್ ಇತ್ಯಾದಿಗಳಲ್ಲಿ ಯಾವುದೇ ತಪ್ಪುಗಳು ಅಥವಾ ಮುದ್ರಣದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಹೆಸರು ಅಥವಾ ಇತರ ವಿವರಗಳಲ್ಲಿ ಯಾವುದೇ ತಪ್ಪು ಸರಿಪಡಿಸಲು ಪ್ರಯತ್ನಿಸಿ. ಇದರಿಂದ ಸ್ಕೋರ್ ಕಡಿಮೆಯಾಗದೇ ಇರಬಹುದು. ಆದರೆ, ನೀವು ಸಾಲವನ್ನು ತೆಗೆದುಕೊಳ್ಳಲು ಬಯಸಿದಾಗ, ನಿಮ್ಮ ದಾಖಲೆಗಳು ಸರಿ ಇಲ್ಲದೇ ಇದ್ದಾಗ ನೀವು ಕೆಲವು ತೊಂದರೆಗಳನ್ನು ಎದುರಿಸಬಹುದು.

* ಗೃಹ, ವಾಹನ ಸಾಲ ಪಡೆದವರು ಒಂದು ಬ್ಯಾಂಕ್​ನಿಂದ ಮತ್ತೊಂದು ಬ್ಯಾಂಕ್​ಗೆ ಸಾಲ ವರ್ಗಾವಣೆ ಮಾಡುವುದು ಸಹಜ. ಅಂತಹ ಸಂದರ್ಭಗಳಲ್ಲಿ ಎರಡೂ ಸ್ಥಳಗಳಲ್ಲಿ ಬಾಕಿ ಇದೆ ಎಂದು ವರದಿಯಲ್ಲಿ ಕಾಣಿಸಬಹುದು. ಅಂತಹ ಸಂದರ್ಭಗಳಲ್ಲಿ, ನಿಮ್ಮ ಹಳೆಯ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಸಾಲ ಪಾವತಿಸಲಾಗಿದೆ ಎಂದು ಕ್ರೆಡಿಟ್ ಬ್ಯೂರೋಗಳಿಗೆ ತಿಳಿಸಲು ಹೇಳಿ.

* ಕೆಲವೊಮ್ಮೆ ಇನ್ನೊಬ್ಬ ವ್ಯಕ್ತಿ ತೆಗೆದುಕೊಂಡ ಸಾಲದ ವಿವರಗಳು ನಿಮ್ಮ ಕ್ರೆಡಿಟ್ ವರದಿಯಲ್ಲಿ ಕಾಣಿಸಬಹುದು. ಹೆಸರುಗಳು, ವಿಳಾಸ ಮತ್ತು ಪ್ಯಾನ್‌ಗಳಲ್ಲಿನ ತಪ್ಪುಗಳಿಂದಾಗಿ ಈ ವಿಷಯಗಳು ಸಂಭವಿಸುತ್ತವೆ. ನಿಮ್ಮ ಕ್ರೆಡಿಟ್ ವರದಿಯಲ್ಲಿ ಅಂತಹ ದೋಷಗಳನ್ನು ನೀವು ಕಂಡುಕೊಂಡರೆ, ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್‌ ಗಮನಕ್ಕೆ ತನ್ನಿ. ಕ್ರೆಡಿಟ್ ಬ್ಯೂರೋಗಳಿಗೆ ಸಹ ತಿಳಿಸಿ.

* ಕ್ರೆಡಿಟ್ ಕಾರ್ಡ್‌ನಲ್ಲಿ ಬ್ಯಾಂಕ್‌ಗಳು ಮಿತಿಯನ್ನು ಹೆಚ್ಚಿಸುತ್ತವೆ. ಆದರೆ, ಈ ವಿಷಯವನ್ನು ಬ್ಯೂರೋಗಳಿಗೆ ತಿಳಿಸಲಾಗುವುದಿಲ್ಲ. ನೀವು ಹೊಸ ಮಿತಿಯವರೆಗೆ ಕಾರ್ಡ್ ಬಳಸುತ್ತೀರಿ ಎಂದು ಭಾವಿಸೋಣ. ನಂತರ ನೀವು ಹೆಚ್ಚು ಬಳಸಿದ್ದರಿಂದ ಸ್ಕೋರ್ ಕಡಿಮೆಯಾಗಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ಖಾತೆಯ ವಿವರಗಳಲ್ಲಿ ಅಂತಹ ತಪ್ಪುಗಳಿದ್ದರೆ, ತಕ್ಷಣ ಸಂಬಂಧಪಟ್ಟ ಬ್ಯಾಂಕ್ ಅನ್ನು ಸಂಪರ್ಕಿಸಬೇಕು. ಪಾವತಿಗಳನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಿ.

ನಿಮ್ಮ ವರದಿಯಲ್ಲಿನ ಪ್ರತಿ ವಿವರವನ್ನೂ ಎಚ್ಚರಿಕೆಯಿಂದ ಪರಿಗಣಿಸಿ. ಸಣ್ಣ ತಪ್ಪನ್ನೂ ನಿರ್ಲಕ್ಷಿಸಬೇಡಿ. ಸಂಬಂಧಪಟ್ಟ ಬ್ಯಾಂಕ್, ಬ್ಯಾಂಕೇತರ ಹಣಕಾಸು ಸಂಸ್ಥೆ/ ಕ್ರೆಡಿಟ್ ಬ್ಯೂರೋವನ್ನು ತಕ್ಷಣವೇ ಸಂಪರ್ಕಿಸಿ ಸರಿಪಡಿಸಿ. ಕನಿಷ್ಠ 3 ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸುವ ಅಭ್ಯಾಸ ಮಾಡಿಕೊಳ್ಳಿ.

ಇದನ್ನೂ ಓದಿ: ಹೆಚ್​ಬಿಎಸ್​ಸಿ ಬ್ಯಾಂಕ್​ಗೆ 1.73 ಕೋಟಿ ರೂಪಾಯಿ ದಂಡ ವಿಧಿಸಿದ ಆರ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.