ETV Bharat / business

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: ಅಪಾಯದಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ? - How to manage risk factors in the stock market

ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಹಜ. ಇದರ ನಡುವೆ ಅಪಾಯದ ಮಟ್ಟಗಳನ್ನು ಅರಿತು ಉತ್ತಮ ಹೂಡಿಕೆ ಮಾಡುವುದರಿಂದ ಲಾಭ ಪಡೆಯಬಹುದು ಎಂಬುದನ್ನು ಮರೆಯಬಾರದು.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಅಪಾಯದ ಅಂಶವನ್ನು ಹೇಗೆ ನಿಭಾಯಿಸಬೇಕು?
how-to-deal-with-risk-factor-while-investing-in-stock-market
author img

By

Published : Jan 16, 2023, 1:17 PM IST

ನಮ್ಮ ಅಗತ್ಯಗಳನ್ನು ಪೂರೈಸುವಂತಹ ಕೆಲವು ದೀರ್ಘ ಮತ್ತು ಅಲ್ಪಕಾಲಿಕ ಅಗತ್ಯತೆಗಳಿಗೆ ಅನುಗುಣವಾಗಿ ನಮ್ಮ ಸಂಪಾದನೆಯ ಹೂಡಿಕೆ ಮಾಡುತ್ತೇವೆ. ಈ ಮೂಲಕ ನಮ್ಮ ಗುರಿಗಳನ್ನು ಪೂರೈಸಲು ಯಾವ ಯೋಜನೆ ಉತ್ತಮವಾಗಿದೆ ಎಂಬುದರ ಕುರಿತ ಒಂದು ತಿಳುವಳಿಕೆ ಹೊಂದಿರಬೇಕಿದೆ. ಯಾವುದೇ ಯೋಜನೆಗಳನ್ನು ಆರಿಸಿಕೊಳ್ಳುವ ಮುನ್ನ ಹೂಡಿಕೆಯ ಮೊತ್ತ, ಅದರ ಅವಧಿ ಮತ್ತಿತರ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಇದರ ಜೊತೆಗೆ ಉತ್ತಮ ನಿರ್ಧಾರ ಕೈಗೊಳ್ಳುವ ಮುನ್ನ ಅದರ ಅನಾನುಕೂಲತೆ ಬಗ್ಗೆ ಅರ್ಥೈಸಿಕೊಳ್ಳುವುದು ಕೂಡ ಪ್ರಮುಖವಾಗಿದೆ.

ಲಾಭ ಗಳಿಸುವ ಉದ್ದೇಶದಿಂದ ನಾವು ಹೂಡಿಕೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ನಷ್ಟಕ್ಕೆ ಒಳಗಾಗುತ್ತೇವೆ. ನಷ್ಟದ ಬಗ್ಗೆ ಯಾವುದೇ ಲೆಕ್ಕಾಚಾರ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಇದು ಆಲೋಚಿಸಬೇಕಾಗಿರುವ ಪ್ರಮುಖ ಅಂಶ ಎಂಬುದನ್ನು ಮರೆಯಕೂಡದು. ವಿಶೇಷವಾಗಿ ಷೇರು ಮಾರುಕಟ್ಟೆ ಆಧಾರಿತ ಯೋಜನೆಯಲ್ಲಿ ಇದರ ಬಗ್ಗೆ ನಿರ್ಲಕ್ಷ್ಯ ಬೇಡ. ವಿಶೇಷವಾಗಿ ಷೇರು ಮಾರುಟ್ಟೆಯಲ್ಲಿ ಆಯ್ಕೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕು, ನಷ್ಟವಿಲ್ಲದೇ ಯಾವುದೇ ಲಾಭ ಸಿಗದು ಎಂಬುದನ್ನು ತಿಳಿಯಬೇಕು.

ಅಪಾಯದ ಮಟ್ಟದ ಅರಿವಿರಲಿ: ಅನೇಕ ಹೂಡಿಕೆ ಯೋಜನೆಯಲ್ಲಿ ಅಪಾಯಕಾರಿ ಅಂಶಗಳು ಕೂಡ ಅವಲಂಬಿತವಾಗಿರುತ್ತದೆ. ಇಂತಹ ನಷ್ಟವನ್ನು ಸರಿದೂಗಿಸುವ ಅನೇಕ ಕ್ರಮಗಳು ಮ್ಯೂಚುವಲ್​ ಫಂಡ್​ಗಳು ಹೊಂದಿದೆ. ಎಲ್ಲಾ ಯೋಜನೆಗಳು ಅಪಾಯದ ಅಂಶವನ್ನು ಹೊಂದಿರುತ್ತವೆ ಎಂಬ ಒಂದು ಪರಿಕಲ್ಪನೆ ಹೊಂದಿರುತ್ತೇವೆ. ಆದರೆ, ಎಲ್ಲ ಯೋಜನೆಗಳಿಗೂ ಇದು ಅನ್ವಯವಾಗುವುದಿಲ್ಲ ಎಂಬುದನ್ನು ಮರೆಯಬೇಡಿ.

ಪ್ರತಿಯೊಂದು ಯೋಜನೆಯೂ ವಿಭಿನ್ನ ಅಪಾಯವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಹಣದ ಯೋಜನೆಗಳನ್ನು ಕಡಿಮೆ ಅಪಾಯ, ಮಧ್ಯಮ ಅಪಾಯ, ಮಧ್ಯಮ ಹೆಚ್ಚಿನ ಅಪಾಯ ಮತ್ತು ಹೆಚ್ಚಿನ ಮತ್ತು ಅತಿಹೆಚ್ಚಿನ ಅಪಾಯ ಎಂದು ವರ್ಗೀಕರಿಸಲಾಗುತ್ತದೆ. ಇದನ್ನು ಫಂಡ್​ ರಿಸ್ಕ್​ ಮೀಟರ್​ ಎನ್ನಲಾಗುವುದು. ಇದು ಮಾರುಕಟ್ಟೆ ಮೌಲ್ಯ, ಹಣದ ಚಂಚಲತೆ ಮತ್ತು ನಗದು ರೂಪದ ಪರಿವರ್ತನೆ ಎಂದು ಗುರುತಿಸಲಾಗಿದೆ. ಹೂಡಿಕೆದಾರರು ಫಂಡ್​ಗಳ ಆಯ್ಕೆಯನ್ನು ಇಂತಹ ರಿಸ್ಕ್​​ಮೀಟರ್​ಗಳ ಬಗ್ಗೆ ಗಮನ ಹರಿಸಬೇಕು.

ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಹಜ: ಷೇರು ಮಾರುಕಟ್ಟೆ ಎಂದಿಗೂ ಒಂದೇ ಹಂತದಲ್ಲಿ ನಡೆಯುವುದಿಲ್ಲ. ಮಾರುಕಟ್ಟೆಯಲ್ಲಿ ಇಳಿಕೆ ಮತ್ತು ಏರಿಕೆಯಾಗುತ್ತಿದ್ದಂತೆ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂಪಡೆಯುವುದು ಕಾಣಬಹುದಾಗಿದೆ. ಇದು ದೀರ್ಘದ ಹೂಡಿಕೆ ಮೇಲೆ ಹಾನಿ ಮಾಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಹಜ ಎಂಬುದನ್ನು ಹೂಡಿಕೆದಾರರು ಅರ್ಥೈಸಿಕೊಳ್ಳಬೇಕು. ಅಪಾಯ ಆಧಾರಿತ ಹೂಡಿಕೆಯನ್ನು ರಿಟರ್ನ್​ಗಳ ಭರವಸೆ ಇವೆ. ಅತಿ ಹೆಚ್ಚಿನ ಅಪಾಯದೊಂದಿಗಿನ ಯೋಜನೆ ಏರಿಳಿತಗಳ ನಡುವೆಯೂ ಉತ್ತಮ ರಿಟರ್ನ್​ಗಳನ್ನು ಹೊಂದಿರುತ್ತದೆ. ಉತ್ತಮ ಯೋಜನೆ ಮತ್ತು ಅರ್ಥೈಸಿಕೊಳ್ಳುವಿಕೆ ಮೂಲಜ ಹೂಡಿಕೆ ವೇಳೆ ಕೆಲವು ಅನಿರೀಕ್ಷಿತ ಅಪಾಯಗಳ ಬಗ್ಗೆ ಕೂಡ ನಾವು ಸಿದ್ದವಾಗಿರಬೇಕು. ಇದರಿಂದ ಉತ್ತಮ ಲಾಭ ಸಾಧ್ಯವಿದೆ.

ಷೇರು ಮಾರುಕಟ್ಟೆಯ ಏರಿಳಿತಗಳು ಏನೇ ಆಗಿದ್ದರೂ, ಕೆಲವು ಷೇರುಗಳು ಸ್ಥಿರವಾದ ಕಾರ್ಯಕ್ಷಮತೆಯನ್ನು ತೋರಿಸುತ್ತವೆ. ಒಂದು ರೀತಿಯಲ್ಲಿ, ಇವುಗಳನ್ನು ರಕ್ಷಣಾತ್ಮಕ ಷೇರುಗಳೆಂದು ಪರಿಗಣಿಸಬಹುದು. ಇಂಥ ರಕ್ಷಣಾತ್ಮಕ ಷೇರುಗಳನ್ನು ಗುರುತಿಸಬೇಕು.

ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಜೂಜಾಟಕ್ಕೆ ಸಮ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.