ಹೈದರಾಬಾದ್(ತೆಲಂಗಾಣ): ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದ್ರೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಅಥವಾ ಅಪಘಾತಗಳಿಂದ ರೈಲುಗಳು ವಿಳಂಬವಾಗುತ್ತವೆ. ಇಲ್ಲವಾದಲ್ಲಿ ಪ್ರಯಾಣಿಕರು ಮತ್ತೊಂದು ರೈಲು ಪಡೆಯಲು ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹೀಗಿರುವಾಗ ಹೊರಗಡೆ ಯಾವುದಾದರೂ ಹೋಟೆಲ್ ರೂಮಿನಲ್ಲಿ ಉಳಿದುಕೊಳ್ಳಬೇಕೆಂದರೆ ಅದಕ್ಕೆ ತಗಲುವ ವೆಚ್ಚವೂ ಜಾಸ್ತಿಯಾಗುತ್ತದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಅಂತಹ ಜನರಿಗೆ ರಿಟೈರಿಂಗ್ ರೂಮ್ಗಳು ಮತ್ತು ವಸತಿ ನಿಲಯದ ಸೌಲಭ್ಯವನ್ನು ಒದಗಿಸುತ್ತಿದೆ. ಅನೇಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ.
IRCTC ಪ್ರಯಾಣಿಕರಿಗೆ ಕಡಿಮೆ ದರದ ವಸತಿ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ ಈ ರಿಟೈರಿಂಗ್ ರೂಮ್ ಬುಕಿಂಗ್ ಸೌಲಭ್ಯವನ್ನು ತಂದಿದೆ. ಈ ರೂಂಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬುಕ್ ಮಾಡಬಹುದು. ಎಸಿ, ನಾನ್ ಎಸಿ, ಸಿಂಗಲ್, ಡಬಲ್, ಡಾರ್ಮಿಟರಿ ಮಾದರಿಯ ರೂಮ್ಗಳು ಲಭ್ಯ ಇವೆ. ನೀವು ಕನಿಷ್ಠ ಒಂದು ಗಂಟೆಯಿಂದ ಗರಿಷ್ಠ 48 ಗಂಟೆವರೆಗೆ ಬುಕ್ ಮಾಡಬಹುದು. ಪ್ರದೇಶವನ್ನು ಅವಲಂಬಿಸಿ, ರೂಮ್ ಬುಕಿಂಗ್ ಶುಲ್ಕಗಳು ರೂ.100 ರಿಂದ ರೂ.700 ವರೆಗೆ ಇರುತ್ತದೆ. ಟಿಕೆಟ್ ರಿಜರ್ವೇಷನ್ ಓಕೆ ಆದವರಿಗೆ ಮಾತ್ರ ಈ ರೂಮ್ಗಳನ್ನು ಬುಕ್ ಮಾಡಬಹುದಾಗಿದೆ. ವೆಯ್ಟಿಂಗ್ ಲಿಸ್ಟ್ನಲ್ಲಿರುವ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಿಲ್ಲ. ದೇಶದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ರಿಟೈರಿಂಗ್ ರೂಮ್ ಸೌಲಭ್ಯ ಲಭ್ಯವಿದೆ. ಈ ರಿಟೈರಿಂಗ್ ರೂಂಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ.
ಆನ್‌ಲೈನ್‌ನಲ್ಲಿ ಬುಕಿಂಗ್ ಹೇಗೆ ಗೊತ್ತಾ?!
- ಮೊದಲು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಬೇಕು..
- IRCTC ಖಾತೆ ಸೆಕ್ಷನ್‌ಗೆ ಹೋಗಿ ಮೈ ಬುಕಿಂಗ್ ಮೇಲೆ ಕ್ಲಿಕ್ ಮಾಡಬೇಕು..
- ಕೆಳಗಿನಕಿ ಸ್ಕ್ರಾಲ್ ಮಾಡುವಾಗ 'ರಿಟೈರಿಂಗ್ ರೂಮ್' ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಪಿಎನ್‌ಆರ್ (PNR) ನಂಬರ್, ನೀವು ಸ್ಟೇ ಮಾಡಲು ಬಯಸುವ ನಿಲ್ದಾಣದ ವಿವರಗಳನ್ನು ಸಲ್ಲಿಸಬೇಕು..
- ನಂತರ ಚೆಕ್‌ಇನ್, ಚೆಕ್ ಔಟ್ ಡೇಟ್, ಬೆಡ್ ಟೈಪ್.. ಹೀಗೆ ಕೇಳಿದ ವಿವರಗಳನ್ನು ನೀಡಬೇಕು..
- ಸ್ಲಾಟ್ ಡ್ಯೂರೇಶನ್ (ಅವಧಿ), ಐಡಿ ಕಾರ್ಡ್ ಟೈಪ್ ಮುಂತಾದ ವಿವರಗಳನ್ನು ಸರಿಯಾಗಿ ನೋಡಿಕೊಂಡು ಪೇಮೆಂಟ್ ಮಾಡಬೇಕು..
- ಪೇಮೆಂಟ್ ಮಾಡಿದ ತಕ್ಷಣವೇ ನಿಮ್ಮ ರೂಮ್ ಬುಕಿಂಗ್ ಪ್ರಕ್ರಿಯೆ ಮುಗಿಯುತ್ತದೆ..
ಕ್ಯಾನ್ಸಿಲೇಷನ್ ಪಾಲಿಸಿ..: ಯಾವುದಾದರೂ ಕಾರಣದಿಂದ 48 ಗಂಟೆಗಳ ಹಿಂದೆಯೇ ರೂಮ್ ಬುಕ್ಕಿಂಗ್ ರದ್ದುಗೊಳಿಸಿದರೆ ಶೇಕಡಾ 10 ರಷ್ಟು ಹಣ ಕಟ್ಟಾಗಿ ಉಳಿದ ಮೊತ್ತ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಅದೇ ಪ್ರಯಾಣಕ್ಕೆ ಒಂದು ದಿನ ಮುನ್ನ ಕ್ಯಾನ್ಸಲ್ ಮಾಡಿದರೆ ಶೇಕಡಾ 50ರಷ್ಟು ಮೊತ್ತ ಕಟ್ಟಾಗಿ ಉಳಿದ ಮೊತ್ತ ನಿಮ್ಮ ಖಾತೆಗೆ ಜಮಾ ಆಗಲಿದೆ. ಆ ನಂತರ ರೂಮ್ ಕ್ಯಾನ್ಸಲ್ ಮಾಡಿದರೆ ಪ್ರಯೋಜನವಿಲ್ಲ. ನಿಮ್ಮ ಮೊತ್ತ ಸಂಪೂರ್ಣ ಕಡಿತವಾಗುತ್ತದೆ.
ಓದಿ: ಕಾಯ್ದಿರಿಸಿದ ಆಸನ ಮತ್ತೊಬ್ಬರಿಗೆ ಮಂಜೂರು: ₹40 ಸಾವಿರ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಗ್ರಾಹಕರ ಆಯೋಗ ಸೂಚನೆ