ETV Bharat / business

HDFC ಬ್ಯಾಂಕ್​ನ ಸಾಲ ವಿತರಣೆಯಲ್ಲಿ ಶೇ.21.5 ರಷ್ಟು ಹೆಚ್ಚಳ

author img

By

Published : Jul 4, 2022, 4:40 PM IST

ಜೂನ್ 30, 2022 ರ ಹೊತ್ತಿಗೆ ಹೆಚ್​ಡಿಎಫ್​ಸಿ ಬ್ಯಾಂಕಿನ ಠೇವಣಿ ಸರಿಸುಮಾರು 16,05,000 ಕೋಟಿ ರೂ. ಆಗಿದೆ. ಜೂನ್ 30, 2021ರಲ್ಲಿ ಇದು 13,45,800 ಕೋಟಿ ಇತ್ತು. ಈ ವರ್ಷ ಇದು ಸುಮಾರು ಶೇ.19.3 ರಷ್ಟು ಹೆಚ್ಚಾಗಿದೆ.

HDFC ಬ್ಯಾಂಕ್
HDFC ಬ್ಯಾಂಕ್

ನವದೆಹಲಿ: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಸಾಲ ಕೊಡುವುದರಲ್ಲಿ ಶೇ. 21.5 ರಷ್ಟು ಏರಿಕೆಯಾಗಿದ್ದು, 13, 95,000 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಖಾಸಗಿ ವಲಯದ ಹೆಚ್‌ಡಿಎಫ್‌ಸಿ ಬ್ಯಾಂಕ್ ಸೋಮವಾರ ತಿಳಿಸಿದೆ. ಕಳೆದ ವರ್ಷ ಜೂನ್ 30ಕ್ಕೆ 11,47,700 ಕೋಟಿ ರೂ. ಕ್ರೆಡಿಟ್ ಬುಕ್ ಇತ್ತು.

ಬ್ಯಾಂಕ್​ನ ಒಟ್ಟಾರೆ ಎಲ್ಲಾ ವರ್ಗಾವಣೆ ಇಂಟರ್-ಬ್ಯಾಂಕ್ ಪ್ರಮಾಣಪತ್ರಗಳ ಮತ್ತು ಬಿಲ್‌ಗಳ ಮರು ರಿಯಾಯಿತಿ ಮೂಲಕ ಆದ ಹಿನ್ನೆಲೆ ಜೂನ್ 30, 2021 ಕ್ಕಿಂತ ಸುಮಾರು 22.5 ಪ್ರತಿಶತದಷ್ಟು ಸಾಲ ವಿತರಣೆ ಹೆಚ್ಚಾಗಿದೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಜೂನ್ 30, 2022 ರ ಹೊತ್ತಿಗೆ ಬ್ಯಾಂಕಿನ ಠೇವಣಿ ಸರಿಸುಮಾರು 16,05,000 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಬ್ಯಾಂಕ್‌ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತ ಶೇ 5.9ಕ್ಕೆ ಇಳಿಕೆ

ಏಪ್ರಿಲ್ 4 ರಂದು, ಭಾರತದ ಅತಿದೊಡ್ಡ ಖಾಸಗಿ ಸಾಲದಾತ ಹೆಚ್‌ಡಿಎಫ್‌ಸಿ ಬ್ಯಾಂಕ್ ಸುಮಾರು USD 40 ಶತಕೋಟಿ ಮೌಲ್ಯದ ವ್ಯವಹಾರದಲ್ಲಿ ಅತಿದೊಡ್ಡ ದೇಶಿಯ ಸಾಲದಾತರನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿಕೊಂಡಿತು. ಇದು ಹಣಕಾಸು ಸೇವೆಗಳ ಟೈಟಾನ್ ಅನ್ನು ರಚಿಸಿತು. ಪ್ರಸ್ತಾವಿತ ಘಟಕವು ಸುಮಾರು 18 ಲಕ್ಷ ಕೋಟಿ ರೂ.ಗಳ ಒಟ್ಟು ಆಸ್ತಿಯನ್ನು ಹೊಂದಿರುತ್ತದೆ. ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟು FY24 ರ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ವಿಲೀನವು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.