ETV Bharat / business

ಸರ್ಚ್ ಇಂಜಿನ್ ಆ್ಯಂಟಿಟ್ರಸ್ಟ್ ಪ್ರಕರಣ.. ನ್ಯಾಯಾಲಯದಲ್ಲಿ ಗೂಗಲ್​ ಸಿಇಒ ಸುಂದರ್ ಪಿಚೈ ಹೇಳಿದ್ದೇನು? - ಇಂಟರ್ನೆಟ್ ಎಕ್ಸ್‌ಪ್ಲೋರರ್

ಗೂಗಲ್ ತನ್ನ ಸರ್ಚ್ ಇಂಜಿನ್ ಅನ್ನು ಎಲ್ಲ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಇತರ ಸಾಧನಗಳಲ್ಲಿ ಇಂಟರ್ನೆಟ್ ಬ್ರೌಸರ್ ಆಗಿ ಬಳಸಲು ಆಯಾ ಕಂಪನಿಗಳಿಗೆ ಸಾವಿರಾರು ಮಿಲಿಯನ್ ಡಾಲರ್‌ಗಳನ್ನು ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

Google CEO defends paying Apple for default  Sundar Pichai defends monopoly  Google pays tech companies for default search  Default search engine on devices google  ಸರ್ಚ್ ಇಂಜಿನ್ ಆಂಟಿಟ್ರಸ್ಟ್ ಪ್ರಕರಣ  ನ್ಯಾಯಾಲಯದಲ್ಲಿ ಗೂಗಲ್​ ಸಿಇಒ ಸುಂದರ್ ಪಿಚೈ  ಗೂಗಲ್ ತನ್ನ ಸರ್ಚ್ ಇಂಜಿನ್  ಪ್ರಮುಖ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಇತರ ಸಾಧನ  ಇತರ ಸಾಧನಗಳಲ್ಲಿ ಇಂಟರ್ನೆಟ್ ಬ್ರೌಸರ್  ಗೂಗಲ್ ಒಡೆತನದ ಕಂಪನಿ ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ  ಇಂಟರ್ನೆಟ್ ಎಕ್ಸ್‌ಪ್ಲೋರರ್  ಗೂಗಲ್ ಕ್ರೋಮ್‌ನಲ್ಲಿ ಆಸಕ್ತಿದಾಯಕ ಬದಲಾವಣೆ
ಸರ್ಚ್ ಇಂಜಿನ್ ಆಂಟಿಟ್ರಸ್ಟ್ ಪ್ರಕರಣ
author img

By ETV Bharat Karnataka Team

Published : Oct 31, 2023, 8:26 AM IST

Updated : Oct 31, 2023, 9:00 AM IST

ವಾಷಿಂಗ್ಟನ್, ಅಮೆರಿಕ: ಗೂಗಲ್ ಒಡೆತನದ ಕಂಪನಿ ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಅವರು ಸೋಮವಾರ ಅಮೆರಿಕ ನ್ಯಾಯಾಲಯದಲ್ಲಿ ಸರ್ಚ್ ಇಂಜಿನ್ ಆ್ಯಂಟಿಟ್ರಸ್ಟ್ ಪ್ರಕರಣದಲ್ಲಿ ಸಾಕ್ಷ್ಯ ನೀಡಿದರು. ಮೈಕ್ರೋಸಾಫ್ಟ್ ಕಂಪನಿಯು ತನ್ನ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಸುಧಾರಿಸುತ್ತಿಲ್ಲ ಎಂದು ಹೇಳಲಾಗಿದೆ. ಆದರೆ, ಗೂಗಲ್ ಕ್ರೋಮ್‌ನಲ್ಲಿ ಆಸಕ್ತಿದಾಯಕ ಬದಲಾವಣೆಗಳನ್ನು ಕಂಡು ಬಂದಿದೆ. ಇದನ್ನು ಜನರು ಇಷ್ಟಪಟ್ಟಿದ್ದಾರೆ. ಇದರಿಂದಾಗಿ ಗೂಗಲ್‌ನ ಏಕಸ್ವಾಮ್ಯವನ್ನು ಸ್ಥಾಪಿಸಲಾಯಿತು. ಅಮೆರಿಕ ಸರ್ಕಾರ ಮತ್ತು 38 ರಾಜ್ಯಗಳು ಈ ದೊಡ್ಡ ಪ್ರಮಾಣದ ಸ್ಪರ್ಧೆಯ ವಿರೋಧಿ ಪ್ರಕರಣದಲ್ಲಿ ಗೂಗಲ್ ವಿರುದ್ಧ ಹೋರಾಡುತ್ತಿವೆ. ಗೂಗಲ್ ತನ್ನ ಸರ್ಚ್ ಇಂಜಿನ್ ಅನ್ನು ಎಲ್ಲ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್ ಬ್ರೌಸರ್ ಆಗಿ ಬಳಸಲು ಫೋನ್ ತಯಾರಕರಿಗೆ $26 ಶತಕೋಟಿಗಿಂತ ಹೆಚ್ಚು ಹಣ ನೀಡಿದೆ ಎಂಬ ಆರೋಪಗಳಿವೆ.

ಮೈಕ್ರೋಸಾಫ್ಟ್ ಮತ್ತು ಅದರ ಇಂಟರ್ನೆಟ್ ಬ್ರೌಸರ್ ‘ಎಕ್ಸ್‌ಪ್ಲೋರರ್’ 2008 ರಲ್ಲಿ ಮಾರುಕಟ್ಟೆಯಲ್ಲಿ ನಿಶ್ಚಲತೆ ಇತ್ತು. ಮೈಕ್ರೋಸಾಫ್ಟ್ ತನ್ನ ಬ್ರೌಸರ್ ಅನ್ನು ಸುಧಾರಿಸಲು ಉತ್ಸುಕರಾಗಿರಲಿಲ್ಲ. ಈ ವೇಳೆ ಮಾರುಕಟ್ಟೆಯಲ್ಲಿ ಕ್ರೋಮ್ ಅನ್ನು ಪ್ರಾರಂಭಿಸಲಾಯಿತು. ದಿನ ಕಳೆದಂತೆ ಇದು ಅತೀ ಹೆಚ್ಚು ಸುಧಾರಣೆಗಳನ್ನು ಮಾಡಿತು. ಗೂಗಲ್ 2008 ರಲ್ಲಿ ಕ್ರೋಮ್ ಬ್ರೌಸರ್ ಅನ್ನು ಪ್ರಾರಂಭಿಸಿತು. ಆದರೆ, ಎಕ್ಸ್‌ಪ್ಲೋರರ್ ಅನ್ನು ಜೂನ್ 2022 ರಲ್ಲಿ ಶಾಶ್ವತವಾಗಿ ಮುಚ್ಚಲಾಯಿತು.

ಪಿಚೈ ಪ್ರಕಾರ, ಬಳಕೆದಾರರು ಕ್ರೋಮ್ ಅನ್ನು ಬಳಸಲು ಬಯಸದಿದ್ದರೆ, ಅವರು ಇತರ ಬ್ರೌಸರ್‌ಗಳನ್ನು ಸುಲಭವಾಗಿ ಬಳಸಬಹುದು ಎಂದು ಗೂಗಲ್ ಈ ವ್ಯವಸ್ಥೆಯನ್ನು ಮಾಡಿದೆ. ಈ ಪ್ರಕರಣದಲ್ಲಿ ಪಿಚೈ ತನ್ನ 'ಸ್ಟಾರ್ ಸಾಕ್ಷಿ' ಎಂದು ಗೂಗಲ್ ಈ ಹಿಂದೆ ಹೇಳಿತ್ತು. 8 ವಾರಗಳ ವಿಚಾರಣೆ ಬಳಿಕ ಪ್ರಕರಣ ಅಂತಿಮ ಹಂತಕ್ಕೆ ಬಂದಿದೆ.

ಚೆನ್ನೈನಲ್ಲಿ ವಾಸವಾಗಿದ್ದು, ನಂತರ ಅಮೆರಿಕಕ್ಕೆ ಬಂದಿದ್ದು, ಇಲ್ಲಿ ಗೂಗಲ್ ನಲ್ಲಿ ಕೆಲಸ ಮಾಡಿ 2015ರಲ್ಲಿ ಕಂಪನಿಯ ಸಿಇಒ ಆಗಿದ್ದು ಹೇಗೆ ಎಂಬುದರ ಬಗ್ಗೆ ಪಿಚೈ ಅವರು ತಿಳಿಸಿದರು. Chrome ನಲ್ಲಿ ಆರಂಭಿಕ ಹೂಡಿಕೆ ಮತ್ತು ನಾವೀನ್ಯತೆ ಬಳಕೆದಾರರಿಗೆ ಅನೇಕ ಪ್ರಯೋಜನಗಳನ್ನು ತಂದಿದೆ. ಈ ಕಾರಣದಿಂದ ಅನೇಕ ವೆಬ್‌ಸೈಟ್‌ಗಳು ಜನಪ್ರಿಯವಾಗಿವೆ. ಇಂಟರ್ನೆಟ್‌ನಲ್ಲಿ ವಿಷಯಗಳನ್ನು ಹುಡುಕಲು Chrome ಅನ್ನು ಬಳಸಲು ಜನರು ಸುಲಭವಾಗಿ ಕಂಡುಕೊಂಡಿದ್ದಾರೆ. ಏಕಸ್ವಾಮ್ಯ ಸಾಧಿಸಿದ್ದು ಹೀಗೆ, ಇದಕ್ಕಾಗಿ ಯಾವುದೇ ಅಕ್ರಮವನ್ನು ಕಂಪನಿ ಮಾಡಿಲ್ಲ ಎಂದು ಪಿಚೈ ಹೇಳಿಕೊಂಡಿದ್ದಾರೆ.

ಗೂಗಲ್ ಇಂಟರ್ನೆಟ್ ಸರ್ಚ್ ಇಂಜಿನ್ ಕ್ಷೇತ್ರದಲ್ಲಿ ಏಕಸ್ವಾಮ್ಯವನ್ನು ಪಡೆಯಲು ಮತ್ತು ಅದರ ಮೂಲಕ ಡಿಜಿಟಲ್ ಜಾಹೀರಾತುಗಳನ್ನು ಪಡೆಯಲು ಕಾನೂನುಬಾಹಿರ ವಿಧಾನಗಳನ್ನು ಅಳವಡಿಸಿಕೊಂಡಿದೆ ಮತ್ತು ಫೋನ್ ಉತ್ಪಾದನಾ ಕಂಪನಿಗಳಿಗೆ ಹಣವನ್ನು ನೀಡುವುದು ತಪ್ಪು ಎಂದು ಸಾಬೀತಾದರೆ ಕಂಪನಿಯು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅದರ ವ್ಯಾಪಾರ ಅಭ್ಯಾಸಗಳು ಬದಲಾಗಬೇಕು. ಇದು ಸರ್ಚ್ ಇಂಜಿನ್‌ಗಳು ಮತ್ತು ಜಾಹೀರಾತುಗಳಿಂದ ಹೆಚ್ಚು ಗಳಿಸುವ ಕಂಪನಿಯಾಗಿ ದೀರ್ಘಕಾಲ ಉಳಿಯದಿರುವ ಸಾಧ್ಯತೆಯಿದೆ ಎಂದು ತಜ್ಞರ ಮಾತಾಗಿದೆ.

ಓದಿ: ಗೂಗಲ್​ ಸರ್ಚ್​ ಇಂಜಿನ್​ ಪ್ರಾಬಲ್ಯಕ್ಕೆ ಸರಿಯಲ್ಲದ ತಂತ್ರಜ್ಞಾನದ ಬಳಕೆಗಳೇ ಕಾರಣ ಎಂದ ಸತ್ಯ ನಾದೆಲ್ಲಾ

Last Updated : Oct 31, 2023, 9:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.