ETV Bharat / business

ಚಿನ್ನ ಮತ್ತಷ್ಟು ದುಬಾರಿ: 2024ರ ಆರ್ಥಿಕ ವರ್ಷದಲ್ಲಿ 68 ಸಾವಿರ ತಲುಪಲಿದೆ ಬಂಗಾರದ ಬೆಲೆ!

author img

By

Published : Apr 1, 2023, 11:57 AM IST

ಚಿನ್ನ ಎಂದಿಗೂ ಸುರಕ್ಷಿತ ಹೂಡಿಕೆಯ ಮಾರ್ಗ. ವರ್ಷದಿಂದ ವರ್ಷಕ್ಕೆ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವಾಗಿದ್ದು, ಮುಂದಿನ ವರ್ಷ ಮತ್ತಷ್ಟು ಲಾಭ ನೀಡಲಿದೆ.

gold-price-will-reach-68-thousand-in-the-financial-year-2024

ಚೆನ್ನೈ: ಹೂಡಿಕೆ ವಿಚಾರದಲ್ಲಿ ಚಿನ್ನ ಎಂದಿಗೂ ಲಾಭದಾಯಕ. 2023ರ ಹಣಕಾಸು ವರ್ಷದ ಕಡೆಯ ದಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳ ಕಂಡಿದ್ದು, ಹೂಡಿಕೆದಾರರು ಲಾಭ ಮಾಡಿದರು. ಈ ಹಳದಿ ಲೋಹ 2024ರ ಹಣಕಾಸು ವರ್ಷದಲ್ಲಿ ಮತ್ತಷ್ಟು ಲಾಭ ತರಲಿದ್ದು, 10-15ರಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

2023 ಹಣಕಾಸು ವರ್ಷದಲ್ಲಿ ಬಂಗಾರದ ಬೆಲೆ 8000 ಸಾವಿರಕ್ಕೆ ಏರಿಕೆ ಕಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ 52 ಸಾವಿರದಿಂದ 60 ಸಾವಿರ ಆಗಿದ್ದು, ಶೇ 15ರಷ್ಟು ಲಾಭ ತಂದುಕೊಟ್ಟಿದೆ. ಈ ಮೂಲಕ ಇನ್ನಿತರ ಹೂಡಿಕೆ ಆಸ್ತಿಗಿಂತ ಚಿನ್ನವೇ ಲಾಭದಾಯಕ ಎಂಬುದನ್ನು ಮತ್ತೆ ಸಾಬೀತು ಮಾಡಿದೆ ಎಂದು ಎಲ್​ಕೆಪಿ ಸೆಕ್ಯೂರಿಟಿಸ್​ ಸಂಶೋಧಕ ವಿಶ್ಲೇಷಕ, ಉಪ ಅಧ್ಯಕ್ಷ ಜತೀನ್​ ತ್ರಿವೇದಿ ತಿಳಿಸಿದ್ದಾರೆ.

ಜಾಗತಿಕ ಹಣದುಬ್ಬರ ಹೆಚ್ಚಿರುವಾಗ ಸುರಕ್ಷತಾ ದೃಷ್ಟಿಯಿಂದಾಗಿ ಆರ್​ಒಐಗೆ ಸಂಬಂಧಿಸಿದಂತೆ ಚಿನ್ನ ಲಾಭದಾಯಕ. ಬಡ್ಡಿ ಚಕ್ರ ಸರಾಗವಾಗಿದ್ದು, ಮುಂದಿನ ಆರ್ಧಿಕ ವರ್ಷದಲ್ಲಿ ಶೇ 10 ರಿಂದ 15ರಷ್ಟು ಲಾಭವನ್ನು ಚಿನ್ನ ನೀಡಲಿದೆ ಎಂದಿದ್ದಾರೆ.

ಈಗಾಗಲೇ 60 ಸಾವಿರದ ಗಡಿಯಲ್ಲಿರುವ ಚಿನ್ನವು ಮುಂಬರುವ 2024ರ ಆರ್ಥಿಕ ವರ್ಷದಲ್ಲಿ 66 ಸಾವಿರದಿಂದ- 68 ಸಾವಿರ ಗಡಿ ತಲುಪಲಿದೆ. ಅಪಾಯಕಾರಿ ಸ್ವತ್ತುಗಳಲ್ಲಿನ ದುರ್ಬಲ ಮತ್ತು ಅನಿಶ್ಚಿತ ಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ ಶೇ 10-15 ಶೇಕಡಾ ಮತ್ತು ಚಿನಿವಾರ ಪೇಟೆಯಲ್ಲಿ ಚಿನ್ನದ ಮೇಲಿನ ಹೂಡಿಕೆಯಿಂದಾಗಿ ಶೇಕಡಾ 15-20 ರಷ್ಟು ಲಾಭ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ಮತ್ತೆ ಬಂಗಾರದ ಬೆಲೆ ಏರಿಕೆ ಕಂಡಿದ್ದು, ಈ ಕುರಿತು ಮಾತನಾಡಿರುವ ಮೊತಿಲಾಲ್​ ಒಸ್ವಾಲ್​ ಫೈನಾನ್ಷಿಯಲ್​ ಸರ್ವಿಸ್​ ಕಮಾಡಿಟಿ ರಿಸರ್ಚ್​, ಹಿರಿಯ ಉಪ ಅಧ್ಯಕ್ಷ ನವನೀತ್​ ದಮನಿ, ಡಾಲರ್​ ಸ್ಥಿರವಾಗಿರುವ ಹಿನ್ನೆಲೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶೇಕಡಾ 1 ಕ್ಕಿಂತ ಹೆಚ್ಚು ಲಾಭ ಗಳಿಸಿದೆ. ದೇಶೀಯ ವಾಹಿವಾಟಿನ ಬೆಲೆಗಳು ರೂ 59,500-60,300 ವ್ಯಾಪ್ತಿಯನ್ನು ಇದು ಹೊಂದಿದೆ ಎಂದಿದ್ದಾರೆ.

ಅಮೆರಿಕದ ಮ್ಯಾಕ್ರೋ ಡೇಟಾ ದುರ್ಬಲವಾದ ಬಳಿಕ ಹಿಂದಿನ ಸೆಷನ್​​ನಲ್ಲಿ ಚಿನ್ನದ ಬೆಲೆಗಳು ಹೆಚ್ಚಾದವು. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಅಮೆರಿಕ ಜಿಡಿಪಿ ಸ್ವಲ್ಪ ಕಡಿಮೆಯಾಗಿದೆ. 2.7 ಶೇಕಡಾದಿಂದ 2.6 ಶೇಕಡಾ ಇದೆ. ಈ ತಿಂಗಳಲ್ಲಿ ಕೊಮೆಕ್ಸ್​ ಚಿನ್ನ ಶೇ 7ರಷ್ಟು ಪ್ರತಿಶತ ಹೆಚ್ಚಲಿದೆ. ಅಮೆರಿಕದ ಬ್ಯಾಂಕಿಂಗ್ ಪ್ರಕ್ಷುಬ್ಧತೆ​ ಉದ್ಯಮ ಆರ್ಥಿಕತೆಯು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು. ಕಾಮೆಕ್ಸ್ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 1,955 ಡಾಲರ್​​ ಬೆಂಬಲ ಮತ್ತು ಪ್ರತಿ ಔನ್ಸ್‌ಗೆ 2,010 ಡಾಲರ್​ನಷ್ಟು ಪ್ರತಿರೋಧವನ್ನು ಹೊಂದಿದೆ. ಎಂಸಿಎಕ್ಸ್​ ಚಿನ್ನದ ಭವಿಷ್ಯ ಜೂನ್​ನಲ್ಲಿ ಪ್ರತಿ 10 ಗ್ರಾಂಗೆ 59,480 ರೂಗಳಲ್ಲಿ ಬೆಂಬಲವನ್ನು ಹೊಂದಿದ್ದು, ಪ್ರತಿ 10 ಗ್ರಾಂಗೆ 60,340 ರೂ.ಗಳಲ್ಲಿ ಪ್ರತಿರೋಧವನ್ನು ಹೊಂದಿದೆ.

ಇದನ್ನೂ ಓದಿ: ವಾಣಿಜ್ಯ ಸಿಲಿಂಡರ್​ ದರದಲ್ಲಿ 91 ರೂಪಾಯಿ ಇಳಿಕೆ: ಐದು ತಿಂಗಳ ಬಳಿಕ ಇದೇ ಮೊದಲು ಬೆಲೆ ಕಡಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.