ETV Bharat / business

G20 ಸಭೆ: ಜಾಗತಿಕ ಆರ್ಥಿಕತೆಗೆ ಸ್ಥಿರತೆಯನ್ನು ನೀಡುವ ವಿತ್ತೀಯ ವ್ಯವಸ್ಥೆಗೆ ಪ್ರಧಾನಿ ಮೋದಿ ಕರೆ

ಭಾರತದ G20 ಅಧ್ಯಕ್ಷತೆಯಲ್ಲಿ ಮೊದಲ ಮಂತ್ರಿ ಮಟ್ಟದ ಸಂವಾದ - ಬೆಂಗಳೂರಿನಲ್ಲಿ ನಡೆದ ಜಿ20 ಸಭೆ - ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ - ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ವಿತ್ತೀಯ ಕೊರತೆ ಬಗ್ಗೆ ಗಮನ ಸೆಳೆದ ಪ್ರಧಾನಿ

G20 Meet PM Modi urges monetary systems to bring back stability to global economy
ಪ್ರಧಾನಿ ಮೋದಿ
author img

By

Published : Feb 25, 2023, 7:41 AM IST

ಬೆಂಗಳೂರು: ಜಾಗತಿಕ ಆರ್ಥಿಕತೆಗೆ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರಲು ವಿಶ್ವದ ಪ್ರಮುಖ ಆರ್ಥಿಕತೆಗಳು ಮತ್ತು ವಿತ್ತೀಯ ವ್ಯವಸ್ಥೆ ಕಾರ್ಯನಿರ್ವಹಿಸ ಬೇಕು. ಜಾಗತಿಕವಾಗಿ ಪರಿಣಾಮ ಬೀರುವ ಸಮರ್ಥನೀಯ ಸಾಲದ ಮಟ್ಟಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಕುಸಿತ ಕಂಡು ಬರುತ್ತಿರುವ ಬಗ್ಗೆ ಪ್ರಧಾನಿ ಮೋದಿ ಜಿ20 ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಗಮನ ಸೆಳೆದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಜಿ20 ಪ್ರೆಸಿಡೆನ್ಸಿ ಅಡಿಯಲ್ಲಿ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಭಾರತದ G20 ಅಧ್ಯಕ್ಷತೆಯಲ್ಲಿ ಮೊದಲ ಮಂತ್ರಿ ಮಟ್ಟದ ಸಂವಾದವಾಗಿದೆ ಮತ್ತು ಮುಂದಿನ ದಿನಗಳ ಆರ್ಥಿಕ ಬೆಳವಣಿಗೆಗೆ ಇದು ಫಲದಾಯಕ ಸಭೆ ಎಂದು ಹೇಳಿ ಶುಭಾಶಯ ತಿಳಿಸಿದರು.

ಇಂದಿನ ಸಭೆಯಲ್ಲಿ ಭಾಗವಹಿಸುವವರು ಜಗತ್ತು ಗಂಭೀರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಜಾಗತಿಕ ಹಣಕಾಸು ಮತ್ತು ಆರ್ಥಿಕತೆಯ ನಾಯಕತ್ವವನ್ನು ಪ್ರತಿನಿಧಿಸುತ್ತಿದ್ದಾರೆ. ಹೆಚ್ಚುತ್ತಿರುವ ಭೌಗೋಳಿಕ - ರಾಜಕೀಯ ಉದ್ವಿಗ್ನತೆಗಳು, ಜಾಗತಿಕ ಪೂರೈಕೆ ಸರಪಳಿಗಳಲ್ಲಿನ ಅಡೆತಡೆಗಳು, ಏರುತ್ತಿರುವ ಬೆಲೆಗಳು, ಆಹಾರ ಮತ್ತು ಇಂಧನ ಭದ್ರತೆ, ಅನೇಕ ದೇಶಗಳ ಕಾರ್ಯಸಾಧ್ಯತೆಯ ಮೇಲೆ ಪರಿಣಾಮ ಬೀರುವ ಸಮರ್ಥನೀಯ ಸಾಲದ ಮಟ್ಟಗಳು ಮತ್ತು ತ್ವರಿತವಾಗಿ ಸುಧಾರಿಸಲು ಅಸಮರ್ಥತೆಯಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲಿನ ನಂಬಿಕೆ ಕುಸಿಯುತ್ತಿದೆ ಎಂದು ಅವರು ಪ್ರಸ್ತಾಪಿಸಿದರು.

"ನಮ್ಮ G20 ಪ್ರೆಸಿಡೆನ್ಸಿಯ ವಿಷಯವು ಈ ಅಂತರ್ಗತ ದೃಷ್ಟಿಯನ್ನು ಉತ್ತೇಜಿಸುತ್ತದೆ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂದ ಅವರು, ವಿಶ್ವ ಜನಸಂಖ್ಯೆ 8 ಶತಕೋಟಿ ದಾಟಿದ್ದರೂ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯು ನಿಧಾನವಾಗುತ್ತಿದೆ. ಹವಾಮಾನ ಬದಲಾವಣೆ ಮತ್ತು ಹೆಚ್ಚಿನ ಸಾಲದ ಮಟ್ಟಗಳಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು ಬಲಪಡಿಸುವ ಅಗತ್ಯವಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

"ಕೋವಿಡ್​ ಸಮಯದಲ್ಲಿ ಡಿಜಿಟಲ್ ಪಾವತಿಗಳು ಸಂಪರ್ಕರಹಿತ ಮತ್ತು ತಡೆರಹಿತ ವಹಿವಾಟು ಹೆಚ್ಚಾಗಿದೆ. ಡಿಜಿಟಲ್ ಫೈನಾನ್ಸ್‌ನಲ್ಲಿ ಅಸ್ಥಿರತೆ ಮತ್ತು ದುರುಪಯೋಗದ ಸಂಭವನೀಯ ಅಪಾಯವನ್ನು ನಿಯಂತ್ರಿಸಲು ಮಾನದಂಡಗಳನ್ನು ಅಭಿವೃದ್ಧಿಪಡಿಸುವಾಗ ತಂತ್ರಜ್ಞಾನದ ಶಕ್ತಿಯನ್ನು ಅನ್ವೇಷಿಸಲು ಮತ್ತು ಬಳಸಿಕೊಳ್ಳುವ ಬಗ್ಗೆ ಜಿ20ಯಲ್ಲಿ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

"ನಮ್ಮ ಡಿಜಿಟಲ್ ಪಾವತಿಗಳ ವ್ಯವಸ್ಥೆಯನ್ನು ಉಚಿತ ಸಾರ್ವಜನಿಕ ಒಳಿತಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ದೇಶದಲ್ಲಿ ಆಡಳಿತ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಸುಲಭವಾದ ಜೀವನಶೈಲಿಯನ್ನು ಆಮೂಲಾಗ್ರವಾಗಿ ಪರಿವರ್ತಿಸಿದೆ. UPI ಯಂತಹ ಉದಾಹರಣೆಗಳು ಇತರ ಹಲವು ದೇಶಗಳಿಗೆ ಟೆಂಪ್ಲೇಟ್ ಆಗಿರಬಹುದು. ನಮ್ಮ ಅನುಭವವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಮತ್ತು G20 ಇದಕ್ಕೆ ಒಂದು ವೇದಿಕೆಯಾಗಿದೆ" ಎಂದು ಮೋದಿ ಬಣ್ಣಿಸಿದರು.

G20 Meet PM Modi urges monetary systems to bring back stability to global economy
ನಿರ್ಮಲಾ ಸೀತಾರಾಮನ್​ ಫ್ರೆಂಚ್ ಆರ್ಥಿಕ, ಹಣಕಾಸು, ಕೈಗಾರಿಕಾ ಮತ್ತು ಡಿಜಿಟಲ್ ಸಾರ್ವಭೌಮತ್ವದ ಸಚಿವ ಬ್ರೂನೋ ಲೆ ಮೈರ್ ಅವರನ್ನು ಭೇಟಿ ಮಾಡಿದರು

ಟರ್ಕಿಗೆ ಸಂತಾಪ: ಮೋದಿ ವಿಡಿಯೋ ಕಾನ್ಫರೆನ್ಸ್ ನಂತರ ಮೊದಲ ಜಿ 20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆ ನಡೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಜಂಟಿಯಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮೊದಲ ಜಿ 20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆಯನ್ನು ಪ್ರಾರಂಭಿಸಿದರು, ಟರ್ಕಿಯ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದರು. ಅಲ್ಲಿ ಉಂಟಾದ ಸಾವುನೋವಿಗೆ ಶಾಂತಿ ಕೋರಿ ಒಂದು ನಿಮಿಷ ಮೌನವನ್ನು ಆಚರಿಸಿದರು.

ಮೊದಲ ಜಿ20 ಎಫ್‌ಎಂಸಿಬಿಜಿಯ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಫ್ರೆಂಚ್ ಆರ್ಥಿಕ, ಹಣಕಾಸು, ಕೈಗಾರಿಕಾ ಮತ್ತು ಡಿಜಿಟಲ್ ಸಾರ್ವಭೌಮತ್ವದ ಸಚಿವ ಬ್ರೂನೋ ಲೆ ಮೈರ್ ಅವರನ್ನು ಭೇಟಿ ಮಾಡಿದರು.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ತಗಾದೆ ತೆಗೆದ ಪಾಕ್‌; ಛೀಮಾರಿ ಹಾಕಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.