ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮುಂದುವರಿದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ನಿನ್ನೆಯಷ್ಟೇ ಎರಡೂ ಇಂಧನಗಳ ದರವನ್ನು ಪ್ರತಿ ಲೀಟರ್‌ಗೆ ತಲಾ 80 ಪೈಸೆಯಷ್ಟು ಏರಿಸಿದ್ದವು. ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಾಗಿವೆ. ಕಳೆದ ಎರಡು ವಾರಗಳಲ್ಲಿ ತೈಲ ದರ ಲೀಟರ್‌ಗೆ 9.20 ರೂ. ಜಾಸ್ತಿಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 104.61 ರೂ., ಡೀಸೆಲ್ ದರ ರೂ.95.07 ರಿಂದ ರೂ., ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 84 ಪೈಸೆ ಮತ್ತು 85 ಪೈಸೆ ಏರಿಕೆಯಾಗಿದೆ. ಹೆಚ್ಚಳದೊಂದಿಗೆ, ಪೆಟ್ರೋಲ್ ಬೆಲೆ 119.67 ರೂ. ಹಾಗೂ ಡೀಸೆಲ್ 103.92 ರೂ.ಗೆ ಮಾರಾಟವಾಗಲಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 110.24 ರೂಪಾಯಿ ಇದ್ದು, ಡೀಸೆಲ್‌ಗೆ 94.01 ರೂ.ಯಲ್ಲಿ ಮಾರಾಟವಾಗುತ್ತಿದೆ.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 40 ಪೈಸೆ ಹೆಚ್ಚಳ: 2 ವಾರದಲ್ಲಿ 12ನೇ ಬಾರಿ ಏರಿಕೆ