ETV Bharat / business

ನೆಮ್ಮದಿಯ ನಿವೃತ್ತಿ ಜೀವನ... ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಅತ್ಯುತ್ತಮ ಆಯ್ಕೆ - ಸ್ಥಿರ ಠೇವಣಿಗಳಲ್ಲಿ ಹೂಡಿಕೆ

ಸ್ಥಿರ ಠೇವಣಿಯು ಪ್ರಮುಖ ಹೂಡಿಕೆಯ ವಿಧಗಳಲ್ಲಿ ಒಂದು. ಹೂಡಿಕೆಯ ರಕ್ಷಣೆ, ಆದಾಯದ ಗ್ಯಾರಂಟಿ, ಬಯಸಿದಂತೆ ಸಮಯವನ್ನು ಆಯ್ಕೆ ಮಾಡುವ ನಮ್ಯತೆಯು ನಮಗೆ ಸ್ಥಿರ ಠೇವಣಿಗಳಲ್ಲಿ ಸಿಗುವ ಪ್ರಯೋಜನಗಳಾಗಿವೆ. ಜೊತೆಗೆ ಅಗತ್ಯ ಬಿದ್ದಾಗ ನಗದು ಹಿಂಪಡೆಯುವಿಕೆಗೆ ಅವಕಾಶವನ್ನು ಇವು ಒಳಗೊಂಡಿರುತ್ತದೆ.

fixed-deposits-best-option-for-investment
ನೆಮ್ಮದಿಯ ನಿವೃತ್ತಿ ಜೀವನ... ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಅತ್ಯುತ್ತಮ ಆಯ್ಕೆ
author img

By

Published : Jun 18, 2023, 11:00 PM IST

ಹೈದರಾಬಾದ್: ನಮ್ಮ ಜೀವನ ಸುಖಮಯವಾಗಿರಲು ಒಂದು ಉತ್ತಮ ಉದ್ಯೋಗ ಇರಬೇಕು. ಈ ಉದ್ಯೋಗದಿಂದ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಬಹುದು. ನಮಗೆ ಬೇಕಾದ ವಸ್ತುಗಳನ್ನು, ಇಷ್ಟವಾದ ಉಡುಪುಗಳನ್ನು ಕೊಳ್ಳಬಹುದು. ಉದ್ಯೋಗವು ನಮ್ಮ ಜೀವನಕ್ಕೆ ಬೇಕಾದ ಅನುಕೂಲಗಳನ್ನು ಒದಗಿಸುತ್ತದೆ. ಆದರೆ ಉದ್ಯೋಗದಿಂದ ನಿವೃತ್ತಿ ಹೊಂದಿದ ಬಳಿಕ ನಮ್ಮ ಗತಿಯೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.

ಒಂದಲ್ಲ ಒಂದು ದಿನ ಎಲ್ಲ ಉದ್ಯೋಗಿಗಳು ತಮ್ಮ ವೃತ್ತಿಯಿಂದ ನಿವೃತ್ತಿ ಹೊಂದುತ್ತಾರೆ. ಆರ್ಥಿಕವಾಗಿ ಶಿಸ್ತು ಇರುವವರಿಗೆ ನಿವೃತ್ತಿ ಜೀವನ ಸುಖಮಯವಾಗಿರುತ್ತದೆ. ಆದರೆ ಹಲವರು ತಮ್ಮ ನಿವೃತ್ತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ತಪ್ಪು ಮಾಡುತ್ತಾರೆ. ಇದರಿಂದಾಗಿ ತಮ್ಮ ನಿವೃತ್ತಿ ಜೀವನದಲ್ಲಿ ಆರಾಮಾಯಕ ಜೀವನ ನಡೆಸಲು ವಿಫಲರಾಗುತ್ತಾರೆ. ಹೂಡಿಕೆಯೊಂದಿಗೆ ನಮ್ಮ ನಿವೃತ್ತಿ ಜೀವನವನ್ನು ಸುಂದರಗೊಳಿಸಲು ಸುರಕ್ಷಿತ ಆದಾಯವನ್ನು ನೀಡುವ ಸ್ಥಿರ ಠೇವಣಿಗಳತ್ತ ನಾವು ಮುಖ ಮಾಡಬೇಕು.

ಸ್ಥಿರ ಠೇವಣಿಯ ಲಾಭಗಳು: ಸ್ಥಿರ ಠೇವಣಿಯು ಪ್ರಮುಖ ಹೂಡಿಕೆಯ ವಿಧಗಳಲ್ಲಿ ಒಂದು. ಹೂಡಿಕೆಯ ರಕ್ಷಣೆ, ಆದಾಯದ ಗ್ಯಾರಂಟಿ, ಬಯಸಿದಂತೆ ಸಮಯವನ್ನು ಆಯ್ಕೆ ಮಾಡುವ ನಮ್ಯತೆಯು ನಮಗೆ ಸ್ಥಿರ ಠೇವಣಿಗಳಲ್ಲಿ ಸಿಗುವ ಪ್ರಯೋಜನಗಳಾಗಿವೆ. ಜೊತೆಗೆ ಅಗತ್ಯ ಬಿದ್ದಾಗ ನಗದು ಹಿಂಪಡೆಯುವಿಕೆಗೆ ಅವಕಾಶವನ್ನು ಇವು ಒಳಗೊಂಡಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ತಮ್ಮ ಸ್ಥಿರ ಠೇವಣಿ ದರಗಳನ್ನು ಗಣನೀಯವಾಗಿ ಹೆಚ್ಚಿಸಿವೆ. ಕೆಲವು ಬ್ಯಾಂಕ್‌ಗಳು ಶೇ. 8.5ರಿಂದ 9ರವರೆಗೆ ಬಡ್ಡಿಯನ್ನು ನೀಡುತ್ತವೆ. ಜೊತೆಗೆ ಆರ್‌ಬಿಐ ರೆಪೊ ದರವನ್ನು ನಿಶ್ಚಲಗೊಳಿಸಿದೆ. ಈ ಸಂದರ್ಭದಲ್ಲಿ ನಿವೃತ್ತಿಯ ದಿನಗಳಿಗೆ ಸ್ಥಿರ ಠೇವಣಿಗಳನ್ನು ಆಯ್ಕೆ ಮಾಡುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳನ್ನು ನೋಡೋಣ.

ಠೇವಣಿ ಹೂಡಲು ಸರಿಯಾದ ಸ್ಥಳ: ಸ್ಥಿರ ಠೇವಣಿಗಳ ಸೇವೆಯನ್ನು ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು (NBFC) ವಿವಿಧ ಬಡ್ಡಿ ದರಗಳಲ್ಲಿ ನೀಡುತ್ತವೆ. ಸರ್ಕಾರಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಕೆಲವು ಸಣ್ಣ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತವೆ. ಕೆಲವು ಇತರ ಕಾರ್ಪೊರೇಟ್‌ಗಳು ಸುಮಾರು ಶೇ.9ರಷ್ಟು ಬಡ್ಡಿ ನೀಡುತ್ತವೆ.

ಸಣ್ಣ ಬ್ಯಾಂಕ್‌ಗಳು ಮತ್ತು NBFCಗಳಲ್ಲಿ ಹೂಡಿಕೆಯನ್ನು ಆಯ್ಕೆ ಮಾಡುವಾಗ CRISIL ಮತ್ತು ICRAನಂತಹ ರೇಟಿಂಗ್ ಏಜೆನ್ಸಿಗಳು ನೀಡುವ ರೇಟಿಂಗ್‌ಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಮಾರುಕಟ್ಟೆಯಲ್ಲಿನ ವಿಶ್ವಾಸಾರ್ಹತೆ, ಸಾಲ ಮರುಪಾವತಿ ಸಾಮರ್ಥ್ಯ ಮತ್ತು ಬ್ಯಾಂಕಿಂಗ್​ ಸಂಸ್ಥೆಗಳ ಇತಿಹಾಸವನ್ನು ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು.

ಸ್ಥಿರ ಠೇವಣಿಯಲ್ಲಿನ ಬಡ್ಡಿ ಲಭ್ಯತೆ: ಸ್ಥಿರ ಠೇವಣಿಗಳನ್ನು ಸಂಚಿತ ಮತ್ತು ಸಂಚಿತವಲ್ಲದ ಠೇವಣಿಗಳೆಂದು ವರ್ಗೀಕರಿಸಲಾಗಿದೆ. ಸಂಚಿತ ಠೇವಣಿಯಲ್ಲಿ ಅಸಲು ಮೇಲಿನ ಬಡ್ಡಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಸ್ಥಿರ ಠೇವಣಿಗಳ ಅವಧಿ ಮುಗಿದ ನಂತರ, ಅಸಲು ಮತ್ತು ಬಡ್ಡಿಯನ್ನು ಠೇವಣಿದಾರರಿಗೆ ಪಾವತಿಸಲಾಗುತ್ತದೆ. ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಆರು ತಿಂಗಳು ಮತ್ತು ವಾರ್ಷಿಕವಾಗಿಯೂ ಪಾವತಿಸಲಾಗುತ್ತದೆ. ಸಂಚಿತ ಸ್ಥಿರ ಠೇವಣಿಯು ದೀರ್ಘಾವಧಿಯ ಠೇವಣಿಗಳನ್ನು ಹೊಂದಿರುತ್ತದೆ. ನಿವೃತ್ತಿ ನಿಧಿಯನ್ನು ಹೊಂದ ಬಯಸುವವರು ಇದನ್ನು ಆರಿಸಿಕೊಳ್ಳಬಹುದು.

ಎಚ್ಚರಿಕೆಯಿಂದ ಸ್ಥಿರ ಠೇವಣಿ ಆರಿಸಿ: ಸ್ಥಿರ ಠೇವಣಿಗಳು ನಿಗದಿತ ಅವಧಿಯವರೆಗೆ ಇರುತ್ತದೆ. ಅವಧಿ ಮುಗಿಯುವ ನಡುವೆಯೇ ನಮ್ಮ ಠೇವಣಿಯನ್ನು ಹಿಂಪಡೆದರೆ ಕೆಲವು ಶುಲ್ಕಗಳು ಅನ್ವಯಿಸುತ್ತವೆ. ಆದ್ದರಿಂದ, ಅವಧಿಯನ್ನು ಆಯ್ಕೆ ಮಾಡುವಾಗ ಸ್ವಲ್ಪ ದೂರದೃಷ್ಟಿಯಿಂದ ಆಯ್ಕೆ ಮಾಡಬೇಕು. ಸಾಧ್ಯವಾದಷ್ಟು ಎಲ್ಲಾ ಠೇವಣಿಗಳನ್ನು ಬೇರೆ ಬೇರೆ ಅವಧಿಗೆ ನಿರ್ಧಾರ ಮಾಡಿ.

ಹೆಚ್ಚುವರಿ ಬಡ್ಡಿ ಗಳಿಕೆ: ಕೆಲವೊಮ್ಮೆ ನಮ್ಮ ಸ್ಥಿರ ಠೇವಣಿ ಕಡಿಮೆ ಬಡ್ಡಿಯನ್ನು ನೀಡಬಹುದು. ಅಂತಹ ಸಂದರ್ಭಗಳಲ್ಲಿ, ಹಳೆ ಠೇವಣಿಯನ್ನು ರದ್ದುಗೊಳಿಸಿ ಮತ್ತು ಹೊಸ ಠೇವಣಿಯನ್ನು ತೆರೆಯಬೇಕು. ಇದರಿಂದ ಬಡ್ಡಿ ನಷ್ಟವನ್ನು ತಪ್ಪಿಸಬಹುದು. ಉದಾಹರಣೆಗೆ ಎರಡು ವರ್ಷಗಳ ಹಿಂದೆ ನೀವು ಐದು ವರ್ಷಗಳವರೆಗೆ ಠೇವಣಿ ಇಟ್ಟಿದ್ದೀರಿ ಎಂದು ಭಾವಿಸೋಣ. ಚಾಲ್ತಿಯಲ್ಲಿರುವ ಬಡ್ಡಿ ದರಗಳ ಪ್ರಕಾರ ಆಗ ಅದು ಶೇ.5.5ಕ್ಕಿಂತ ಹೆಚ್ಚಿರಲಿಲ್ಲ. ಆದರೆ, ಈಗ ಬ್ಯಾಂಕ್‌ಗಳು ಮೂರು ವರ್ಷಕ್ಕೆ ಶೇ.7ರಿಂದ 7.5ರಷ್ಟು ಬಡ್ಡಿ ನೀಡುತ್ತಿವೆ. ಹಾಗಾಗಿ ಆ ಠೇವಣಿ ರದ್ದು ಮಾಡಿ ಹೊಸ ಠೇವಣಿ ಇಡಬಹುದು. ಎಫ್‌ಡಿಗಳನ್ನು ವಿಶ್ವಾಸಾರ್ಹ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಸ್ಥಿರ ಠೇವಣಿಗಳ ಅವಧಿ ಮುಗಿಯುವ ಮೊದಲು ಠೇವಣಿದಾರರು ಸಾಲವನ್ನು ತೆಗೆದುಕೊಳ್ಳಲು ಪ್ರಯತ್ನಿಸಬಹುದು.

ತೆರಿಗೆ ಅನ್ವಯ: ಸ್ಥಿರ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯು ನಿರ್ದಿಷ್ಟ ಪ್ರಮಾಣದ ತೆರಿಗೆಗೆ ಒಳಪಟ್ಟಿರುತ್ತದೆ. ಹಣಕಾಸು ವರ್ಷದಲ್ಲಿ ಬಡ್ಡಿ ಆದಾಯವು ರೂ.40,000 (ಹಿರಿಯ ನಾಗರಿಕರಿಗೆ ರೂ 50,000) ಗಿಂತ ಕಡಿಮೆ ಇದ್ದರೆ ಬ್ಯಾಂಕ್​ಗಳು ತೆರಿಗೆ ಕಡಿತ ಮಾಡುವುದಿಲ್ಲ. ಹೆಚ್ಚಿನ ಬಡ್ಡಿ ಪಡೆಯುವ ಸಾಧ್ಯತೆ ಇರುವವರು ನಮೂನೆ 15G ಮತ್ತು ನಮೂನೆ 15H (ಹಿರಿಯ ನಾಗರಿಕರು)ನ್ನು ಬ್ಯಾಂಕ್‌ಗಳಿಗೆ ಸಲ್ಲಿಸಬೇಕು.

ಆನ್‌ಲೈನ್‌ನಲ್ಲಿ ಹೂಡಿಕೆ: ಇಂದು ಬ್ಯಾಂಕಿಂಗ್ ಮೊಬೈಲ್ ಆ್ಯಪ್‌ಗಳಲ್ಲಿ ಸುಲಭವಾಗಿ ಠೇವಣಿ ಇಡಬಹುದು. ಈಗ ಸ್ಥಿರ ಠೇವಣಿ ಮಾಡಲು ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ. ಕಾರ್ಪೊರೇಟ್ ಎಫ್‌ಡಿಗಳು ಮತ್ತು ಎನ್‌ಸಿಡಿಗಳನ್ನು ಡಿಮ್ಯಾಟ್ ಖಾತೆಯ ಸಹಾಯದಿಂದ ಮಾಡಬಹುದು.

ಇದನ್ನೂ ಓದಿ : Work Culture: ಕೆಲಸ ಮಾಡುವ ಸಂಸ್ಥೆಯ ಬಗ್ಗೆ ಹೆಮ್ಮೆಯಿದೆ ಎಂದ ಶೇ 86ರಷ್ಟು ಉದ್ಯೋಗಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.