ETV Bharat / business

Explained: ಡಿಜಿಟಲ್ ಆರ್ಥಿಕತೆ.. ಜಗತ್ತನ್ನು ಭಾರತ ಏಕೆ ಮುನ್ನಡೆಸಬಹುದು? - PM modi

ಜಿ20 ಅಧ್ಯಕ್ಷತೆ ವಹಿಸಿರುವ ಭಾರತವು ಡಿಜಿಟಲ್ ಆರ್ಥಿಕತೆ ಅಳವಡಿಸಿಕೊಳ್ಳುವಲ್ಲಿ ಜಗತ್ತನ್ನು ಏಕೆ ಮುನ್ನಡೆಸಬಹುದು ಕುರಿತ ವರದಿ ಇಲ್ಲಿದೆ.

explained-why-india-can-lead-the-world-in-embracing-digital-economy
Explained: ಡಿಜಿಟಲ್ ಆರ್ಥಿಕತೆ.. ಜಗತ್ತನ್ನು ಭಾರತ ಏಕೆ ಮುನ್ನಡೆಸಬಹುದು?
author img

By ETV Bharat Karnataka Team

Published : Sep 9, 2023, 8:06 PM IST

ನವದೆಹಲಿ: ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾರತವು ಡಿಜಿಟಲ್ ಆರ್ಥಿಕತೆಯಲ್ಲಿನ ತನ್ನ ಸಾಧನೆಗಳು ಹಾಗೂ ವಿಶೇಷವಾಗಿ ಡಿಜಿಟಲ್ ಹಣಕಾಸು ವಹಿವಾಟುಗಳನ್ನು ವಿಶ್ವದ ಇತರ ರಾಷ್ಟ್ರಗಳಿಗೆ ಪ್ರದರ್ಶಿಸಲು ಮತ್ತು ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನೆರವಾಗಲು ಸಿದ್ಧವಾಗಿದೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಜಿ20 ಡಿಜಿಟಲ್ ಆರ್ಥಿಕ ಮಂತ್ರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (India's digital public infrastructure) ಜಾಗತಿಕ ಸವಾಲುಗಳಿಗೆ ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ನೀಡುತ್ತದೆ ಎಂದು ಹೇಳಿದ್ದರು. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ರೂಪಾಂತರವು ಅಭೂತಪೂರ್ವವಾಗಿದೆ. ಇದು 2015ರಲ್ಲಿ ನಮ್ಮ ಡಿಜಿಟಲ್ ಇಂಡಿಯಾ ಉಪಕ್ರಮದೊಂದಿಗೆ ಪ್ರಾರಂಭವಾಯಿತು. ನಾವೀನ್ಯತೆಯ ಬಗ್ಗೆ ನಮ್ಮ ಅಚಲ ನಂಬಿಕೆಯಿಂದ ನಡೆಸಲ್ಪಟ್ಟಿದೆ. ಭಾರತವು 850 ಮಿಲಿಯನ್​ (85 ಕೋಟಿ)ಕ್ಕೂ ಹೆಚ್ಚು ಇಂಟರ್​ನೆಟ್​ ಬಳಕೆದಾರರನ್ನು ಹೊಂದಿದ್ದು, ವಿಶ್ವದ ಕೆಲವು ಅಗ್ಗದ ಡೇಟಾ ವೆಚ್ಚಗಳನ್ನು ಆನಂದಿಸುತ್ತಿದೆ ಎಂದಿದ್ದರು.

ಡಿಜಿಟಲೀಕರಣಕ್ಕೆ ತ್ರಿಶಕ್ತಿ ಬಳಕೆ: ಆಡಳಿತದಲ್ಲಿ ಬದಲಾವಣೆ ತರಲು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಒಳಗೊಳ್ಳುವಿಕೆ, ವೇಗವಾಗಿ ಮತ್ತು ಪಾರದರ್ಶಕವಾಗಿಸಲು ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ. ನಮ್ಮ ಅನನ್ಯ ಡಿಜಿಟಲ್ ಗುರುತಿನ ವೇದಿಕೆಯಾದ ಆಧಾರ್, 1.3 ಬಿಲಿಯನ್‌ (130 ಕೋಟಿ)ಗಿಂತಲೂ ಹೆಚ್ಚು ಜನರನ್ನು ಒಳಗೊಂಡಿದೆ. ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ತ್ವರಿತಗೊಳಿಸಲು ನಾವು JAM (ಜಾಮ್​) ಎಂದರೆ ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್ (Jan Dhan bank accounts, Aadhaar, and Mobile) ತ್ರಿಶಕ್ತಿಯನ್ನು ಬಳಸಿಸಿಕೊಂಡಿದ್ದೇವೆ. ಪ್ರತಿ ತಿಂಗಳು ನಮ್ಮ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐ (Unified Payment Interface)ನಲ್ಲಿ ಸುಮಾರು 10 ಬಿಲಿಯನ್ (1000 ಕೋಟಿ) ವಹಿವಾಟುಗಳು ನಡೆಯುತ್ತವೆ ಎಂದು ಪ್ರಧಾನಿ ತಿಳಿಸಿದ್ದರು.

ಜಿ20 ಡಿಜಿಟಲ್ ಆರ್ಥಿಕ ಮಂತ್ರಿಗಳ ಸಭೆಯ ನಂತರ ಬಿಡುಗಡೆಯಾದ ದಾಖಲೆಯು ಡಿಜಿಟಲ್ ಕ್ಷೇತ್ರ ಎಲ್ಲ ದೇಶಗಳಿಗೆ, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಗಣನೀಯ ಸವಾಲಾಗಿದೆ ಎಂದು ತಿಳಿಸಿದೆ. ಹಿಂದಿನ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಕೈಗೊಂಡ ಡಿಜಿಟಲ್ ಅಂತರಗಳನ್ನು ಕಡಿಮೆ ಮಾಡಲು ಎಲ್ಲರಿಗೆ ಅಂತರ್ಗತ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ತುರ್ತು ಕ್ರಮದ ಬಗ್ಗೆ ಉಲ್ಲೇಖಿಸಲಾಗಿದೆ.

ಸಿಯುಟಿಎಸ್​ (CUTS) ಸಂಶೋಧನಾ ನಿರ್ದೇಶಕ ಅಮೋಲ್ ಕುಲಕರ್ಣಿ, ಕಳೆದ ಐದು ವರ್ಷಗಳಲ್ಲಿ ಭಾರತವು ಮೊಬೈಲ್ ಫೋನ್‌ಗಳನ್ನು ಬಳಸುವುದರಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಯುಐಡಿಎಐ ಮತ್ತು ಜನಧನ್ ಖಾತೆಗಳು ಬ್ಯಾಂಕಿಂಗ್‌ನಂತಹ ಸರ್ಕಾರಿ ಹಣಕಾಸು ಸೇವೆಗಳಿಗೆ ಪ್ರವೇಶ ಪಡೆಯಲು ಜನರಿಗೆ ಸಹಾಯ ಮಾಡಿದವು. ಇದು ಭಾರತದ ಒಂದು ಸ್ಪಷ್ಟವಾದ ಯಶಸ್ಸು ಎಂದು ಈಟಿವಿ ಭಾರತ್​ಗೆ ತಿಳಿಸಿದರು.

ಬಟನ್​ ಒತ್ತಿದರೆ ಸಾಕು ಹಣ ವರ್ಗಾವಣೆ: ಡಿಜಿಟಲ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ನಾವು ಸಾಕಷ್ಟು ಕಾರ್ಯವಿಧಾನಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಯುಪಿಐ ಹೊಂದಿದ್ದೇವೆ. ಇದು ಬಟನ್‌ನ ಕ್ಲಿಕ್‌ನಲ್ಲಿ ಹಣದ ವರ್ಗಾವಣೆಯನ್ನು ಸಕ್ರಿಯಗೊಳಿಸುತ್ತದೆ. ಇದೊಂದು ಕ್ರಾಂತಿಯೇ ಸರಿ. ಭಾರತವು ಇ-ಕಾಮರ್ಸ್‌ನ ಪ್ರಜಾಪ್ರಭುತ್ವೀಕರಣವನ್ನು ಆವಿಷ್ಕರಿಸುತ್ತಿದೆ. ಮಾತ್ರವಲ್ಲದೆ ಆನ್‌ಲೈನ್‌ನಲ್ಲಿ ಸರಕು ಮತ್ತು ಸೇವೆಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಸಾಮರ್ಥ್ಯವನ್ನು ಸಾರ್ವತ್ರಿಕಗೊಳಿಸುತ್ತಿದೆ ಎಂದು ಹೇಳಿದರು.

ಆದರೆ, ಡಿಜಿಟಲ್ ಆರ್ಥಿಕತೆ ಮತ್ತು ಹಣಕಾಸು ವಹಿವಾಟುಗಳ ಜೊತೆಗೆ ಸೈಬರ್ ಭದ್ರತೆಯ ಸಮಸ್ಯೆಯೂ ಬರುತ್ತದೆ. ಡಿಜಿಟಲ್ ಆರ್ಥಿಕತೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ನಾವು ಸೈಬರ್ ಭದ್ರತೆಯಲ್ಲೂ ಪ್ರಗತಿ ಸಾಧಿಸಬೇಕಾಗಿದೆ. ನಾವು ಇತರ ದೇಶಗಳ ವಿಶ್ವಾಸಾರ್ಹ ಮಾದರಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಕುಲಕರ್ಣಿ ಅಭಿಪ್ರಾಯಪಟ್ಟರು.

ಅದೇ ರೀತಿಯಾಗಿ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಮಕ್ಕಳು ಮತ್ತು ಯುವಕರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಸೈಬರ್ ಶಿಕ್ಷಣ ಮತ್ತು ಸೈಬರ್ ಜಾಗೃತಿ, ಅವರ ಉತ್ತಮ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಡಿಜಿಟಲ್ ಪರಿಸರದಲ್ಲಿ ಮಾನವ ಹಕ್ಕುಗಳನ್ನು ಗೌರವಿಸುವುದು ಪ್ರಮುಖವಾಗಿದೆ ಎಂದು ಜಿ20 ಡಿಜಿಟಲ್ ಆರ್ಥಿಕ ಮಂತ್ರಿಗಳ ಸಭೆಯ ದಾಖಲೆಯೂ ಹೇಳಿದೆ.

ಮತ್ತೊಂದೆಡೆ, ಡಿಜಿಟಲ್ ಆರ್ಥಿಕತೆಯ ಪ್ರಗತಿಯು ಜನರನ್ನು ಹೊರಗಿಡುವ ಅಪಾಯಗಳಿಗೂ ಕಾರಣವಾಗಿದೆ ಎಂದು ಕುಲಕರ್ಣಿ ಗಮನಸೆಳೆದರು. ಇದರಲ್ಲಿ ಗ್ರಾಮೀಣ ಪ್ರದೇಶದ ಜನರು ಮತ್ತು ವೃದ್ಧರು ಸೇರಿದ್ದಾರೆ. ಇದಕ್ಕೆ ಮನರೇಗಾ ಒಂದು ಉದಾಹರಣೆ. ಬಯೋಮೆಟ್ರಿಕ್ ಮೂಲಕ ಹಾಜರಾತಿಯನ್ನು ಗುರುತಿಸಲು ಸಾಧ್ಯವಾಗದ ಕಾರ್ಮಿಕರು ತಮ್ಮ ಪಾವತಿಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಈ ವರ್ಷ ಜಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು ಈಗ ಒಂದು ಭವಿಷ್ಯದ ಮೈತ್ರಿ (One Future Alliance - OFA)ಗೆ ಒತ್ತಾಯಿಸುತ್ತಿದೆ. ಇದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure)ನ ಭವಿಷ್ಯವನ್ನು ಸಂಯೋಜಿಸಲು, ರೂಪಿಸಲು, ಮತ್ತು ವಿನ್ಯಾಸಗೊಳಿಸಲು ಎಲ್ಲ ದೇಶಗಳು ಮತ್ತು ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಆಫ್ರಿಕನ್ ದೇಶಗಳು ಭಾರತದ ಡಿಜಿಟಲ್ ಆರ್ಥಿಕತೆಯಿಂದ ಲಾಭ ಪಡೆಯಲು ಸಾಕಷ್ಟು ಅವಕಾಶಗಳನ್ನು ಹೊಂದಿವೆ ಎಂದು ಕುಲಕರ್ಣಿ ಹೇಳಿದರು. 55 ರಾಷ್ಟ್ರ ಆಫ್ರಿಕನ್ ಯೂನಿಯನ್ ಅನ್ನು ಶನಿವಾರ ಜಿ20ನ ಖಾಯಂ ಸದಸ್ಯತ್ವಕ್ಕೆ ಶನಿವಾರ ಭಾರತ ಆಹ್ವಾನಿಸಿದೆ.

ಇದನ್ನೂ ಓದಿ: G20 Summit: ಆಫ್ರಿಕನ್ ಯೂನಿಯನ್​ಗೆ G20 ಖಾಯಂ ಸದಸ್ಯತ್ವ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.