ನವದೆಹಲಿ : ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಆಧಾರಿತ ಉತ್ಪನ್ನಗಳ ಬೆಲೆ ಸುಮಾರು ಒಂದೂವರೆ ವರ್ಷಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ ಮತ್ತು ಫೆಬ್ರವರಿ ತಿಂಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ತಾಪಮಾನ ಹೆಚ್ಚಾದ ಕಾರಣ ಬೆಲೆಗಳು ಹೆಚ್ಚಳ ಮಟ್ಟದಲ್ಲೇ ಉಳಿಯುವ ನಿರೀಕ್ಷೆಯಿದೆ.
ಹಣದುಬ್ಬರ vs ಬಡ್ಡಿ ದರ : ಕಳೆದ ವರ್ಷ ಜುಲೈನಿಂದ ಎರಡಂಕಿಯಲ್ಲಿರುವ ಗೋಧಿ ಮತ್ತು ಗೋಧಿ ಉತ್ಪನ್ನಗಳ ಚಿಲ್ಲರೆ ಬೆಲೆಗಳು ಏರಿಕೆ ಮಟ್ಟದಲ್ಲಿರುವುದು ಬಡ್ಡಿ ದರಗಳು, ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ನಿಂದ ಸಾಲ ಪಡೆಯುವ ಮತ್ತು ಪಾವತಿಸುವ ರೆಪೋ ಮತ್ತು ರಿವರ್ಸ್ ರೆಪೋ ದರಗಳ ಮೇಲೆ ನೇರವಾದ ಸಂಬಂಧ ಹೊಂದಿದೆ. ಇದು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮತ್ತು ಇತರ ಸಾಲಗಳ ಬಡ್ಡಿ ದರಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಗೋಧಿ ಬೆಲೆ : ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಉತ್ಪನ್ನಗಳ ಬೆಲೆಗಳು ಅಕ್ಟೋಬರ್ 2021 ರಿಂದ ಹೆಚ್ಚಾಗಲು ಆರಂಭಿಸಿದವು. ಅಕ್ಟೋಬರ್ 2020 ಕ್ಕೆ ಹೋಲಿಸಿದರೆ ಇವುಗಳ ಬೆಲೆಗಳು ಶೇ 1 ರಷ್ಟು ದುಬಾರಿಯಾದವು. ಆದರೆ ಅದರ ನಂತರ ಗೋದಿ ಬೆಲೆಗಳು ವರ್ಷದಿಂದ ವರ್ಷಕ್ಕೆ ಮುಂದಿನ 14 ತಿಂಗಳುಗಳ ಕಾಲ ಸತತವಾಗಿ ಏರಲಿವೆ ಎಂದು ಊಹಿಸುವುದು ಸಾಧ್ಯವಿರಲಿಲ್ಲ. ಆಹಾರ ಭದ್ರತೆ ಕಾಪಾಡಿಕೊಳ್ಳುವುದಕ್ಕಾಗಿ ಭಾರತವು ಸಾಕಷ್ಟು ಗೋದಿ ದಾಸ್ತಾನು ಕಾಯ್ದಿಟ್ಟುಕೊಂಡಿರುವುದು ಗಮನಾರ್ಹ.
ಅಂಕಿ ಅಂಶಗಳ ಪ್ರಕಾರ ಮೇ 2022ರ ತಿಂಗಳಲ್ಲಿ 10 ಬೇಸಿಸ್ ಪಾಯಿಂಟ್ನಷ್ಟು ಅಂದರೆ ಶೇ 8.6 ರಿಂದ 8.5 ಕ್ಕೆ ಕುಸಿದಿದ್ದು (ಶೇಕಡಾ 1ರ ಹತ್ತನೇ ಒಂದು ಭಾಗ) ಹೊರತುಪಡಿಸಿ, ಗೋಧಿ ಮತ್ತು ಗೋಧಿ ಉತ್ಪನ್ನಗಳ ಬೆಲೆಗಳು ಸತತವಾಗಿ ಏರಿಕೆಯಾಗಿವೆ. ಕಳೆದ ವರ್ಷ ಜುಲೈನಲ್ಲಿ ಗೋಧಿ ಮತ್ತು ಗೋಧಿ ಉತ್ಪನ್ನಗಳ ಚಿಲ್ಲರೆ ಹಣದುಬ್ಬರವು ಶೇ 10.7 ರ ಎರಡಂಕಿಯ ಮಾರ್ಕ್ ಅನ್ನು ಮುಟ್ಟಿದಾಗ ಪರಿಸ್ಥಿತಿ ಇನ್ನಷ್ಟು ಜಟಿಲವಾಯಿತು. ಅಂದಿನಿಂದ ಗೋಧಿ ಬೆಲೆಗಳು ಮೇಲ್ಮಟ್ಟದಲ್ಲೇ ಉಳಿದಿವೆ.
ಇದಲ್ಲದೆ, ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಈ ವರ್ಷದ ಜನವರಿಯಲ್ಲಿ, ಗೋಧಿ ಮತ್ತು ಗೋಧಿ ಉತ್ಪನ್ನಗಳ ಚಿಲ್ಲರೆ ಹಣದುಬ್ಬರವು ಶೇ 20 ರ ಗಡಿಯನ್ನು ದಾಟಿದೆ. ಇತ್ತೀಚಿನ ಅವಧಿಯಲ್ಲಿ ಗೋಧಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆ ಇತ್ತಾದರೂ, ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಆಹಾರದ ಕಣಜ ಎಂದು ಕರೆಯಲ್ಪಡುವ ಪಂಜಾಬ್ ರಾಜ್ಯದಲ್ಲಿ ಫೆಬ್ರವರಿ ತಿಂಗಳಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನದಿಂದಾಗಿ ಅದು ಸಾಧ್ಯವಾಗಲಿಲ್ಲ.
CPI ನಲ್ಲಿ ಗೋಧಿ ಉತ್ಪನ್ನಗಳು : ಗೋಧಿ ಮತ್ತು ಗೋಧಿ ಸಂಬಂಧಿತ ಉತ್ಪನ್ನಗಳು ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (CPI) ಶೇ 3.89 ರಷ್ಟು ಸಂಯೋಜಿತ ತೂಕವನ್ನು ಹೊಂದಿವೆ. ಆದಾಗ್ಯೂ, ಚಿಲ್ಲರೆ ಹಣದುಬ್ಬರಕ್ಕೆ ಅವುಗಳ ಕೊಡುಗೆ ಕ್ರಮವಾಗಿ ಡಿಸೆಂಬರ್ 2022 ಮತ್ತು ಜನವರಿ 2023 ರಲ್ಲಿ ಕ್ರಮವಾಗಿ ಶೇ 11.4 ಮತ್ತು 11.0 ಆಗಿತ್ತು. ಚಿಲ್ಲರೆ ಹಣದುಬ್ಬರ ಸೂಚ್ಯಂಕದಲ್ಲಿ ಅವುಗಳ ತೂಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿರುವ ಇತರ ಆಹಾರ ಪದಾರ್ಥಗಳೆಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳು, ಮಸಾಲೆಗಳು ಮತ್ತು ಸಿದ್ಧಪಡಿಸಿದ ಊಟ, ತಿಂಡಿಗಳು, ಸಿಹಿತಿಂಡಿಗಳು ಇತ್ಯಾದಿ. ತರಕಾರಿಗಳು CPI ನಲ್ಲಿ ಶೇ 6.04 ತೂಕವನ್ನು ಹೊಂದಿವೆ ಮತ್ತು ಡಿಸೆಂಬರ್ 2022 ರಲ್ಲಿ ಮತ್ತು ಜನವರಿ 2023 ರಲ್ಲಿ ಕ್ರಮವಾಗಿ ಚಿಲ್ಲರೆ ಹಣದುಬ್ಬರಕ್ಕೆ ಅವುಗಳ ಕೊಡುಗೆ ಋಣಾತ್ಮಕ ಶೇ 18.0 ಮತ್ತು ಋಣಾತ್ಮಕ ಶೇ 11.5 ಆಗಿದೆ.
ಆರ್‌ಬಿಐ ಆದೇಶ : ಕಳೆದ ವರ್ಷ ಜುಲೈನಿಂದ ಎರಡಂಕಿಯಲ್ಲಿದ್ದ ಗೋಧಿ ಮತ್ತು ಗೋಧಿ ಉತ್ಪನ್ನಗಳ ಬೆಲೆ ಏರಿಕೆಯು ತರಕಾರಿ ಬೆಲೆಗಳಲ್ಲಿನ ತೀವ್ರ ಹಣದುಬ್ಬರ ಇಳಿತದಿಂದಾಗಿ ಸಮತೋಲನಗೊಂಡಿವೆ. ಹೆಚ್ಚುತ್ತಿರುವ ಏಕದಳ ಧಾನ್ಯಗಳ ಬೆಲೆಗಳಿಂದಾಗಿ ಚಿಲ್ಲರೆ ಹಣದುಬ್ಬರದ ಮೇಲೆ ಒತ್ತಡವಿದೆ. ವಿಶೇಷವಾಗಿ ಗೋಧಿ, ಪ್ರೋಟೀನ್ ಆಧಾರಿತ ಆಹಾರ ಪದಾರ್ಥಗಳು ಮತ್ತು ಮಸಾಲೆಗಳ ಮೇಲೆ ಹಣದುಬ್ಬರದ ಸಾಧ್ಯತೆ ಇದೆ. ಗೋಧಿ ಮತ್ತು ಇತರ ಆಹಾರ ಉತ್ಪನ್ನಗಳ ಹೆಚ್ಚಿನ ಚಿಲ್ಲರೆ ಬೆಲೆಗಳು 1934 ರ RBI ಕಾಯಿದೆಯ ಸೆಕ್ಷನ್ 45ZA ಪ್ರಕಾರ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಬಡ್ಡಿ ದರಗಳ ಮೇಲೆ ನೇರ ಪರಿಣಾಮ ಬೀರುತ್ತವೆ.
RBI ಕಾಯಿದೆಯ ಸೆಕ್ಷನ್ 45ZA ನ ಉಪವಿಭಾಗ 1 ರ ಪ್ರಕಾರ, ಕೇಂದ್ರ ಸರ್ಕಾರವು ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ, ಪ್ರತಿ ಐದು ವರ್ಷಗಳಿಗೊಮ್ಮೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಹಣದುಬ್ಬರದ ಗುರಿಯನ್ನು ನಿರ್ಧರಿಸುತ್ತದೆ. ಕಾನೂನಿನ ಅಡಿಯಲ್ಲಿ, RBI ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು 2% ಕ್ಕಿಂತ ಹೆಚ್ಚಿಲ್ಲದ ವ್ಯತ್ಯಾಸದೊಂದಿಗೆ 4% ನಲ್ಲಿ ನಿರ್ವಹಿಸುವುದು ಕಡ್ಡಾಯವಾಗಿದೆ. ಚಿಲ್ಲರೆ ಹಣದುಬ್ಬರವು ಸರ್ಕಾರವು ನಿಗದಿಪಡಿಸಿದ ಶೇ 6 ಕ್ಕಿಂತ ಹೆಚ್ಚಿದ್ದರೆ ಆಗ ಅದು ಸರ್ಕಾರಕ್ಕೆ ಕಾರಣಗಳನ್ನು ವಿವರಿಸಬೇಕಾಗುತ್ತದೆ.
ರೆಪೋ ದರಗಳನ್ನು ಹೆಚ್ಚಿಸುವುದು : CPI ಹೆಸರಿನಲ್ಲಿ ಅಳೆಯಲಾಗುವ ಚಿಲ್ಲರೆ ಬೆಲೆಗಳನ್ನು ಕಡಿಮೆ ಮಾಡಲು RBI ಮೇ 2022 ರಿಂದ ಗೋಧಿ ಮತ್ತು ಗೋಧಿ ಉತ್ಪನ್ನಗಳ ಚಿಲ್ಲರೆ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇ 8.5 ರಷ್ಟು ಹೆಚ್ಚಾದಾಗ ಬಡ್ಡಿದರಗಳನ್ನು ಪರಿಷ್ಕರಿಸುತ್ತಿದೆ. ಅಂದಿನಿಂದ ಆರ್‌ಬಿಐ ಬಡ್ಡಿ ದರಗಳನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು (2.5%) ಹೆಚ್ಚಿಸಿದೆ.
ಕೆಲವು ವಲಯಗಳಿಂದ ನಿರೀಕ್ಷೆಯ ಹೊರತಾಗಿಯೂ, ರಿಸರ್ವ್ ಬ್ಯಾಂಕ್ ತನ್ನ ದರ ಏರಿಕೆಯನ್ನು ಇನ್ನೂ ನಿಲ್ಲಿಸಿಲ್ಲ ಮತ್ತು ಕಳೆದ ತಿಂಗಳು ಘೋಷಿಸಿದ ಹಣಕಾಸು ನೀತಿಯಲ್ಲಿ ರೆಪೊ ದರವನ್ನು ಮತ್ತೆ 25 ಮೂಲಾಂಕಗಳಷ್ಟು ಹೆಚ್ಚಿಸಿದೆ. ಈ ವರ್ಷದ ಫೆಬ್ರುವರಿಯಲ್ಲಿ ಅಸಾಧಾರಣವಾಗಿ ಹೆಚ್ಚಿನ ತಾಪಮಾನದ ಕಾರಣದಿಂದಾಗಿ ಮೇಲ್ಮಟ್ಟದಲ್ಲಿಯೇ ಗೋಧಿ ಬೆಲೆಗಳು ಮುಂದುವರಿಯುವ ನಿರೀಕ್ಷೆ ಇರುವುದರಿಂದ ಹಾಗೂ ಬೇಸಿಗೆಯ ಆರಂಭದೊಂದಿಗೆ ತರಕಾರಿಗಳ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಹಣದುಬ್ಬರ ನಿರ್ವಹಣೆ ಮಾಡುವುದು ಆರ್ಬಿಐಗೆ ಇನ್ನಷ್ಟು ಕಷ್ಟವಾಗಲಿದೆ.
ಇಂಥ ಪರಿಸ್ಥಿತಿಯಲ್ಲಿ, ಮುಂದಿನ ದಿನಗಳಲ್ಲಿ ಯಾವುದೇ ಬಡ್ಡಿದರ ಕಡಿತ ಮಾಡುವುದು ಆರ್ಬಿಐಗೆ ಕಷ್ಟಕರ ಮತ್ತು ಇದರ ಪರಿಣಾಮವಾಗಿ ಗೃಹ ಸಾಲಗಳು, ವಾಹನ ಸಾಲಗಳು ಮತ್ತು ವೈಯಕ್ತಿಕ ಸಾಲಗಳಂತಹ ಸಾಲಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗುವ ನಿರೀಕ್ಷೆಯಿಲ್ಲ.
ಇದನ್ನೂ ಓದಿ : ಭಾರತದಲ್ಲಿ ಗೋಧಿ, ಅಕ್ಕಿ ಮೇಲಿನ ಸಬ್ಸಿಡಿ ತೆಗೆದುಹಾಕುವಂತೆ ಅಮೆರಿಕ ಸೆನೆಟರ್ ಒತ್ತಾಯ