ಹೈದರಾಬಾದ್: ಟ್ವಿಟರ್‌ನ ಮುಖ್ಯಸ್ಥ ಎಲೋನ್ ಮಸ್ಕ್ (ಪ್ರಸ್ತುತ X) ಮತ್ತೊಂದು ಬದಲಾವಣೆ ಪ್ರಾರಂಭಿಸಲಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಡಾರ್ಕ್ ಮೋಡ್‌ನಲ್ಲಿ ನೋಡಲಾಗುವುದು ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಲೈಟ್, ಡಾರ್ಕ್ ಮತ್ತು ಡಿಮ್ ಮೋಡ್‌ಗಳು ಸೆಟ್ಟಿಂಗ್‌ಗಳಲ್ಲಿನ ಡಿಸ್‌ಪ್ಲೇ ಆಯ್ಕೆಗಳಲ್ಲಿ ಲಭ್ಯವಿದೆ. ಮಸ್ಕ್ ಅವರ ಈ ನಿರ್ಧಾರ ಜಾರಿಯಾದರೆ ಡಾರ್ಕ್ ಮೋಡ್ ಮಾತ್ರ ಉಳಿಯುತ್ತದೆ.
ಎಲೋನ್ ಮಸ್ಕ್ ಕೆಲವು ತಿಂಗಳ ಹಿಂದೆ ಟ್ವಿಟರ್ ಖರೀದಿಸಿದ್ದರು. ಅಂದಿನಿಂದ, ಅದರಲ್ಲಿ ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ಮಾಡಲಾಗುತ್ತಿದೆ. ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳ ನೀಲಿ ಟಿಕ್ ಅನ್ನು ಇದ್ದಕ್ಕಿದ್ದಂತೆ ತೆಗೆದು ಹಾಕಲಾಗಿದೆ. ತಿಂಗಳಿಗೆ ಇಷ್ಟು ಮೊತ್ತ ಪಾವತಿಸಿದರೆ ಸಾಮಾನ್ಯರಿಗೂ ಆ ‘ಟಿಕ್’ ನೀಡುವುದಾಗಿ ಘೋಷಿಸಿದರು. ಅದರ ನಂತರ ನೋಡಲು ಮತ್ತು ಟ್ವೀಟ್ ಮಾಡಲು ಮಿತಿ ಇದೆ. ಬಳಕೆದಾರರ ತೀವ್ರ ವಿರೋಧದಿಂದಾಗಿ, ಅವರು ಸ್ವಲ್ಪ ಹಿಂದೆ ಸರಿದಿದ್ದಾರೆ.
ಟ್ವಿಟರ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಿರುವ ಎಲೋನ್ ಮಸ್ಕ್ ಈ ವಾರ ತನ್ನ ಟ್ವಿಟ್ಟರ್ ಹೆಸರನ್ನು 'X' ಎಂದು ಬದಲಾಯಿಸಿದ್ದಾರೆ. ಟ್ವಿಟರ್ ಲೋಗೋದಲ್ಲಿನ ಕ್ವಿಲ್ ಅನ್ನು ತೆಗೆದುಹಾಕಲಾಗಿದೆ ಮತ್ತು 'ಎಕ್ಸ್' ಅನ್ನು ಸೇರಿಸಿದ್ದಾರೆ. ಹೀಗಿರುವಾಗ ಟ್ವಿಟರ್ ಅನ್ನು ಶೀಘ್ರದಲ್ಲಿಯೇ ಸೂಪರ್ ಆಪ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಲಾಯಿತು. ಇತ್ತೀಚೆಗೆ, ಇಡೀ ವೇದಿಕೆಯು ಡಾರ್ಕ್ ಮೋಡ್‌ಗೆ ಹೋಗಲಿದೆ. ಇದು ಎಲ್ಲ ರೀತಿಯಿಂದಲೂ ಒಳ್ಳೆಯದು”ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಟ್ವಿಟರ್ ಬಳಕೆದಾರರು ಈ ಬದಲಾವಣೆಗೆ ಪ್ರತಿಕ್ರಿಯಿಸುತ್ತಿದ್ದಾರೆ. ನನಗೂ ಕಪ್ಪು ಇಷ್ಟ. ಆದರೆ, ಡಾರ್ಕ್ ಮೋಡ್ ಬಳಸುವುದು ಅಷ್ಟು ಒಳ್ಳೆಯದಲ್ಲ ಎಂದು ನೆಟಿಜನ್ ಒಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಹಲವು ಜನರು ಇಷ್ಟಪಡುವ ಆಯ್ಕೆಯನ್ನು ತೆಗೆದುಹಾಕುವುದು ಒಳ್ಳೆಯದಲ್ಲ. ಇದು ಉದ್ದೇಶಪೂರ್ವಕವಾಗಿ ಜನರನ್ನು ಟ್ವಿಟರ್ ತೊರೆಯುವಂತೆ ಮಾಡುತ್ತಿದೆ ಎಂದು ನೆಟಿಜನ್ ಅಭಿಪ್ರಾಯಪಟ್ಟಿದ್ದಾರೆ.
"ಇದು ಭಯಾನಕ ನಿರ್ಧಾರವಾಗಿದೆ. ಸೂರ್ಯನ ಬೆಳಕು ಮತ್ತು ಸುತ್ತಮುತ್ತಲಿನ ವಾತಾವರಣವು ಪ್ರಕಾಶಮಾನವಾಗಿದ್ದಾಗ ಡಾರ್ಕ್ ಮೋಡ್‌ನಲ್ಲಿ ಓದುವುದು ತುಂಬಾ ಕಷ್ಟ. ಇದು ಕಣ್ಣುಗಳ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ. ಪಠ್ಯ ಆಧಾರಿತ ಪ್ಲಾಟ್‌ಫಾರ್ಮ್‌ನಲ್ಲಿ ಡಾರ್ಕ್‌ಮೋಡ್ ಅನ್ನು ಹಾಕುವುದು ಭಯಾನಕವಾಗಿದೆ. ಈ ಅರ್ಥಹೀನ ಬದಲಾವಣೆಯನ್ನು ಮರುಚಿಂತನೆ ಮಾಡಿ ಟ್ವಿಟರ್, ಕ್ಷಮಿಸಿ ಎಕ್ಸ್' ಎಂದು ಬಳಕೆದಾರರು ತಮ್ಮ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
ಓದಿ: ಜಾಹೀರಾತು ನೀಡದಿದ್ದರೆ 'gold' tick ರದ್ದು: ಬ್ರ್ಯಾಂಡ್ಗಳಿಗೆ Twitter ಹೊಸ ನಿಯಮ