ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ವಿಶ್ವದ ಪ್ರಮುಖ ಮನರಂಜನಾ ದೈತ್ಯ ಡಿಸ್ನಿ ಬುಧವಾರ ಆಘಾತಕಾರಿ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಸಂಸ್ಥೆ ಸುಮಾರು 7 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. 2022 ಅಂತ್ಯದಲ್ಲಿ ಕಂಪನಿ ನೇತೃತ್ವ ವಹಿಸಿಕೊಂಡ ಬಳಿಕ ಸಿಇಒ ಬಾಬ್ ಇಗರ್ ತೆಗೆದುಕೊಂಡ ಮೊದಲ ಪ್ರಮುಖ ಹಾಗೂ ಕಠಿಣ ನಿರ್ಧಾರ ಇದಾಗಿದೆ.
ಈ ಬಗ್ಗೆ ಮಾತನಾಡಿರುವ ಬಾಬ್ ಇಗರ್ "ನಾನು ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ವಿಶ್ವಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆ ಮತ್ತು ಸಮರ್ಪಣೆಗಾಗಿ ನನಗೆ ಅಪಾರ ಗೌರವ ಮತ್ತು ಮೆಚ್ಚುಗೆ ಇದೆ" ಎಂದು ಅವರು ಇತ್ತೀಚೆಗೆ ಹೇಳಿದ್ದಾರೆ.
-
Disney plans to cut 7,000 jobs and reward shareholders
— ANI Digital (@ani_digital) February 9, 2023 " class="align-text-top noRightClick twitterSection" data="
Read @ANI Story | https://t.co/LzXIWjJJGR#Disney #layoffs #GlobalWorkforce pic.twitter.com/WJyg4kQMFq
">Disney plans to cut 7,000 jobs and reward shareholders
— ANI Digital (@ani_digital) February 9, 2023
Read @ANI Story | https://t.co/LzXIWjJJGR#Disney #layoffs #GlobalWorkforce pic.twitter.com/WJyg4kQMFqDisney plans to cut 7,000 jobs and reward shareholders
— ANI Digital (@ani_digital) February 9, 2023
Read @ANI Story | https://t.co/LzXIWjJJGR#Disney #layoffs #GlobalWorkforce pic.twitter.com/WJyg4kQMFq
ಕಂಪನಿಯ 2021 ರ ವಾರ್ಷಿಕ ವರದಿಯ ಪ್ರಕಾರ, 2021ನೇ ಸಾಲಿನ ಅಕ್ಟೋಬರ್ 2 ರ ಹೊತ್ತಿಗೆ ವಿಶ್ವಾದ್ಯಂತ 190,000 ಜನರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅವರಲ್ಲಿ ಶೇ 80 ರಷ್ಟು ಪೂರ್ಣ ಪ್ರಮಾಣದ ನೌಕರರನ್ನು ನೇಮಿಸಿಕೊಳ್ಳಲಾಗಿತ್ತು. ವಾಲ್ಟ್ ಡಿಸ್ನಿ ಸ್ಟ್ರೀಮಿಂಗ್ ಸೇವೆ ಆರಂಭವಾದ ಬಳಿಕ ಕಳೆದ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಕುಸಿತ ಕಂಡಿತ್ತು. ನೆಟ್‌ಫ್ಲಿಕ್ಸ್‌ಗೆ ಸ್ಟ್ರೀಮಿಂಗ್ ಆರ್ಕೈವಲ್ ಆಗಿರುವ Disney+ ಗೆ ಚಂದಾದಾರರು, ಮೂರು ತಿಂಗಳ ಹಿಂದಿನದ್ದಕ್ಕೆ ಹೋಲಿಸಿದರೆ ಡಿಸೆಂಬರ್ 31 ರಂದು 168.1 ಮಿಲಿಯನ್ ಗ್ರಾಹಕರ ಪೈಕಿ ಶೇ 1ರಷ್ಟು ಕುಸಿತ ಕಂಡಿದೆ ಎಂದು ವರದಿಯಾಗಿದೆ.
ಸುಮಾರು ಎರಡು ದಶಕಗಳ ಕಾಲ ಕಂಪನಿಯನ್ನು ಮುನ್ನಡೆಸಿದ ನಂತರ ಬಾಬ್ ಚೇಪಕ್ 2020ರಲ್ಲಿ CEO ಸ್ಥಾನದಿಂದ ಕೆಳಗಿಳಿದ ನಂತರ ಇಗರ್ ಅವರನ್ನು ಸಿಇಒ ಆಗಿ ನೇಮಕ ಮಾಡಲಾಗಿತ್ತು. ಕಂಫನಿ ತನ್ನ ವೆಚ್ಚವನ್ನು ಕಡಿಮೆ ಮಾಡಲು ತನ್ನದೇ ಆದ ಪ್ರಯತ್ನದಲ್ಲಿದೆ. ನೆಟ್‌ಫ್ಲಿಕ್ಸ್ ತನ್ನ ನೂರಾರು ಮಿಲಿಯನ್ ಜಾಗತಿಕ ಚಂದಾದಾರರಲ್ಲಿ ಪಾಸ್‌ವರ್ಡ್ ಹಂಚಿಕೆಯನ್ನು ಬಂದ್ ಮಾಡುವ ಕಾರ್ಯಕ್ಕೆ ಮುಂದಾಗಿದೆ.
ಕೆನಡಾ, ನ್ಯೂಜಿಲ್ಯಾಂಡ್, ಪೋರ್ಚುಗಲ್ ಮತ್ತು ಸ್ಪೇನ್‌ನಲ್ಲಿ ಪಾಸ್‌ವರ್ಡ್ ಹಂಚಿಕೆಯನ್ನು ಭೇದಿಸಲು ಪ್ರಾರಂಭಿಸಿದೆ ಎಂದು ನೆಟ್‌ಫ್ಲಿಕ್ಸ್ ಬುಧವಾರ ಬಹಿರಂಗಪಡಿಸಿತು. ಈ ಮೂಲಕ ಸೋರಿಕೆ ಆಗುತ್ತಿರುವ ಆದಾಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದು, ಆದಾಯ ಹೆಚ್ಚಿಸಿಕೊಳ್ಳಲು ಅದು ವಿಶ್ವಾದ್ಯಂತ ತನ್ನ ಹೊಸ ನೀತಿಯನ್ನು ಹೊರತರಲು ಮುಂದಾಗಿದೆ.
ಕಳೆದ ತಿಂಗಳು ಇಂಟರ್ನೈಟ್ ದೈತ್ಯ ಗೂಗಲ್ ಸಹ 12 ಸಾವಿರ ನೌಕರರನ್ನು ತೆಗೆದು ಹಾಕುವುದಾಗಿ ಘೋಷಣೆ ಮಾಡಿತ್ತು. ವಿಶ್ವ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರ ಕೈಗೊಂಡಿತ್ತು. ಈ ಬಗ್ಗೆ ತುಸು ಭಾರವಾಗಿಯೇ ತನ್ನ ನೌಕರರಿಗೆ ಸಂಸ್ಥೆಯ ಸಿಇಒ ಸುಂದರ್ ಪಿಚೈ ಇ- ಮೇಲೆ ಸಂದೇಶ ಕಳುಹಿಸಿದ್ದರು. ಅನಿವಾರ್ಯವಾಗಿ ನೌಕರರನ್ನು ತೆಗೆದು ಹಾಕಬೇಕಾದ ಪರಿಸ್ಥಿತಿ ಎಂದು ಭಿನ್ನವಿಸಿಕೊಂಡಿದ್ದರು.
ಇದಾದ ಬಳಿಕ ಇನ್ನೊಂದು ಪ್ರಮುಖ ಐಟಿ ಕಂಪನಿ ಐಬಿಎಂ ಸಹ ತನ್ನ ನೌಕರರನ್ನು ವಜಾ ಮಾಡುವುದಾಗಿ ಘೋಷಣೆ ಮಾಡಿತ್ತು. ಸುಮಾರು 3,900 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಣೆ ಮಾಡಿತ್ತು.
ಇದನ್ನು ಓದಿ: ಅನಿವಾಸಿ ಭಾರತೀಯರು ದೇಶದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡಿ: ನಾರಾಯಣ ಮೂರ್ತಿ