ETV Bharat / business

ದೆಹಲಿಯಲ್ಲಿ ಅಶಿಸ್ತು ಹೆಚ್ಚು: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಬೇಸರ

ಇಲ್ಲಿನ ಜನರು ಸಂಚಾರ ನಿಯಮ ಪಾಲಿಸುತ್ತಿಲ್ಲ. ಹಾಗಾಗಿ ಇಲ್ಲಿಗೆ ಬರಲು ಅನಾನುಕೂಲವಾಗಿದೆ ಎಂದು ರಾಷ್ಟ್ರ ರಾಜಧಾನಿ ದೆಹಲಿ ಕುರಿತು ತಮ್ಮ ಅಭಿಪ್ರಾಯವನ್ನು ಇನ್ಫೋಸಿಸ್​ ಸಂಸ್ಥಾಪಕ ನಾರಾಯಣಮೂರ್ತಿ ಹಂಚಿಕೊಂಡಿದ್ದಾರೆ.

Delhi is one city where indiscipline  N R Narayana Murthy  All India Management Association  Infosys founder NR Narayana Murthy  ನಮ್ಮ ರಾಷ್ಟ್ರ ರಾಜಧಾನಿ ದೆಹಲಿವೊಂದು ಅಶಿಸ್ತು ನಗರ  ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ  ಲ್ಲಿನ ಜನರು ಸಂಚಾರ ನಿಯಮ ಪಾಲಿಸುತ್ತಿಲ್ಲ  ರಾಷ್ಟ್ರ ರಾಜಧಾನಿ ದೆಹಲಿ  ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್
ನಮ್ಮ ರಾಷ್ಟ್ರ ರಾಜಧಾನಿ ದೆಹಲಿವೊಂದು ಅಶಿಸ್ತು ನಗರ
author img

By

Published : Feb 22, 2023, 9:46 AM IST

Updated : Feb 22, 2023, 10:47 AM IST

ನವದೆಹಲಿ: ಭಾರತದಲ್ಲಿ ವಾಸ್ತವ ಎಂದರೆ ಭ್ರಷ್ಟಾಚಾರ, ಕೊಳಕು ರಸ್ತೆಗಳು ಮತ್ತು ಮಾಲಿನ್ಯ ಎಂದು ಈ ಹಿಂದೆ ಇನ್ಫೊಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣಮೂರ್ತಿ ಜರಿದಿದ್ದರು. ಈಗ ರಾಷ್ಟ್ರ ರಾಜಧಾನಿ ದೆಹಲಿ ಕುರಿತು ಕೆಲವೊಂದು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಉದಾಹರಣೆಯನ್ನು ಉಲ್ಲೇಖಿಸಿರುವ ಇನ್ಫೋಸಿಸ್ ಸಂಸ್ಥಾಪಕ ಎನ್​ ಆರ್ ನಾರಾಯಣಮೂರ್ತಿ ಅವರು, ನನಗೆ ದೆಹಲಿಗೆ ಬರಲು ಅನಾನುಕೂಲವಾಗಿದೆ. ಏಕೆಂದರೆ ಇದು ಅಶಿಸ್ತು ಅತಿ ಹೆಚ್ಚು ಇರುವ ನಗರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಎಐಎಂಎ) ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮೂರ್ತಿ, ಸಾರ್ವಜನಿಕ ಆಡಳಿತದಲ್ಲಿ ಅಪ್ರಾಮಾಣಿಕತೆಯ ಸಮಸ್ಯೆಗಳನ್ನು ತಪ್ಪಿಸಲು ಜನರು ವೈಯಕ್ತಿಕ ಆಸ್ತಿಗಿಂತ ಸಮುದಾಯದ ಆಸ್ತಿಯನ್ನು ಮೌಲ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು ಎಂದ ಅವರು, ದೆಹಲಿಗೆ ಬರಲು ನನಗೆ ತುಂಬಾ ಅನಾನುಕೂಲವಾಗಿದೆ. ಇದು ಅಶಿಸ್ತು ಹೆಚ್ಚಾಗಿರುವ ನಗರ. ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತೇನೆ. ನಾನು ನಿನ್ನೆ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದೆ. ಈ ವೇಳೆ ಟ್ರಾಫಿಕ್ ಸಿಗ್ನಲ್​ವೊಂದರ ಬಳಿ ರೆಡ್​ ಸಿಗ್ನಲ್​ ಹಾಕಿತ್ತು. ಆದರೆ ಆ ಸಮಯದಲ್ಲಿ ಕಾರು, ಬೈಕ್ ಮತ್ತು ಸ್ಕೂಟರ್ ಚಾಲಕರು ಯಾವುದೇ ಟ್ರಾಫಿಕ್​ ನಿಯಮವನ್ನು ಪಾಲಿಸದೆ ಸಿಗ್ನಲ್​ ಜಂಪ್ ಮಾಡುತ್ತಿದ್ದರು ಎಂಬುದನ್ನು ವಿವರಿಸಿದರು.

ಟ್ರಾಫಿಕ್​ ಸಿಗ್ನಲ್​ ಬಳಿ ನಾವು ಒಂದೆರಡು ನಿಮಿಷ ಕಾಯಲು ಸಾಧ್ಯವಿಲ್ಲ. ಅವರ ಬಳಿ ಹಣವಿದ್ದರೆ ಅವರು ಕಾಯುತ್ತಾರೆ ಎಂದು ನೀವು ಭಾವಿಸುತ್ತೀರಾ? ಖಂಡಿತ ಅವರು ಕಾಯುವುದಿಲ್ಲ. ಈ ವಿಷಯಗಳನ್ನು ನಮ್ಮ ಮಕ್ಕಳಿಗೆ ಕಲಿಸಿ, ಸರಿ ದಾರಿಯಲ್ಲಿ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.

ಓದಿ: ಗ್ಯಾಂಬಿಯಾದಲ್ಲಿ ಭಾರತ ಉತ್ಪಾದಿಸಿದ ಸಿರಪ್‌ನಿಂದ 66 ಮಕ್ಕಳ ಸಾವು, ದೊಡ್ಡ ಅವಮಾನ: ನಾರಾಯಣಮೂರ್ತಿ

ಕಾರ್ಪೊರೇಟ್ ಆಡಳಿತಕ್ಕೂ ಬರುವ ಮೊದಲ ಪಾಠವನ್ನು ತಮ್ಮ ಶಿಕ್ಷಕರಿಂದ ನಾವು ಕಲಿತಿದ್ದೇವೆ. ನಿಮ್ಮ ವೈಯಕ್ತಿಕ ಆಸ್ತಿಗಿಂತ ಸಮುದಾಯದ ಆಸ್ತಿಯನ್ನು ಉತ್ತಮವಾಗಿ ಪರಿಗಣಿಸಬೇಕು. ಜನರು ತತ್ವಗಳನ್ನು ಅನುಸರಿಸದ ಕಾರಣ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಅಪ್ರಾಮಾಣಿಕ ಪ್ರಕರಣಗಳು ನಡೆಯುತ್ತವೆ ಎಂದು ಇನ್ಫೋಸಿಸ್ ಸಂಸ್ಥಾಪಕರು ಹೇಳಿದರು.

ತಂತ್ರಜ್ಞಾನದ ಭವಿಷ್ಯದ ಕುರಿತು ಮಾತನಾಡಿದ ನಾರಾಯಣಮೂರ್ತಿ, ವಿಜ್ಞಾನವು ಪ್ರಕೃತಿಯನ್ನು ಬಹಿರಂಗಪಡಿಸುತ್ತದೆ. ಆದರೆ ತಂತ್ರಜ್ಞಾನವು ವಿಜ್ಞಾನದ ಶಕ್ತಿಯನ್ನು, ಮಾನವರ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸಲು, ಉತ್ಪಾದಕತೆಯನ್ನು ಸುಧಾರಿಸಲು, ವೆಚ್ಚವನ್ನು ಕಡಿಮೆ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುವುದು ಎಂದು ಹೇಳಿದರು.

ಕೃತಕ ಬುದ್ಧಿಮತ್ತೆಯು ಸಹಾಯಕ ತಂತ್ರಜ್ಞಾನಗಳಾಗುವ ಮೂಲಕ ನಮ್ಮ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸಿದೆ. ಕೃತಕ ಬುದ್ಧಿಮತ್ತೆಯು ಮನುಷ್ಯರನ್ನು ಬದಲಿಸುತ್ತದೆ ಎಂಬ ತಪ್ಪು ನಂಬಿಕೆ ಇದೆ ಎಂದು ನಾನು ಭಾವಿಸುತ್ತೇನೆ. ಮಾನವರು ಅದನ್ನು ಬದಲಿಸಲು ಕೃತಕ ಬುದ್ಧಿಮತ್ತೆಯನ್ನು ಅನುಮತಿಸುವುದಿಲ್ಲ ಎಂದರು.

ಓದಿ: ಅನಿವಾಸಿ ಭಾರತೀಯರು ದೇಶದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡಿ: ನಾರಾಯಣ ಮೂರ್ತಿ

Last Updated : Feb 22, 2023, 10:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.