ನವದೆಹಲಿ: ಎಚ್ಡಿಎಫ್ಸಿ ಬ್ಯಾಂಕ್ ಇಂದಿನಿಂದ ಅಂದರೆ ಜುಲೈ 1ರಿಂದ ಎಚ್ಡಿಎಫ್ಸಿ ಲಿಮಿಡೆಟ್ನೊಂದಿಗೆ ವಿಲೀನವಾಗುತ್ತಿದೆ. ಇದು ಭಾರತದ ಕಾರ್ಪೋರೇಟ್ ಜಗತ್ತಿನ ಇತಿಹಾಸದ ದೊಡ್ಡ ಡೀಲ್ ಆಗಿದೆ. ಈ ಡೀಲ್ ವಿಚಾರದಲ್ಲಿ ಎಚ್ಡಿಎಫ್ಸಿ ಅಧ್ಯಕ್ಷರಾದ ದೀಪಕ್ ಪರೇಕ್ ಅತ್ಯಂತ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈ ಡೀಲ್ ಜಾರಿಗೆ ಬರುವ ಒಂದು ದಿನದ ಮುಂದೆ ಅಂದರೆ ಜೂನ್ 30ರಂದು ದೀಪಕ್ ಪರೇಖ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಶೇರ್ ಹೋಲ್ಡರ್ಗೆ ಶುಕ್ರವಾರ ಪತ್ರ ಬರೆಯುವ ಮೂಲಕ ಅವರು ಈ ವಿಚಾರ ತಿಳಿಸಿದ್ದಾರೆ.
ಸಿಬ್ಬಂದಿಗಳಿಗೆ ಕಡೆಯ ಪತ್ರ ಬರೆದ ಪರೇಖ್: ತಮ್ಮ ಓಟಕ್ಕೆ ಬ್ರೇಕ್ ಹಾಕುವ ಸಮಯ ಬಂದಿದೆ ಎಂದು ಶೇರುದಾರರಿಗೆ ಅವರು ಪತ್ರದಲ್ಲಿ ತಿಳಿಸಿದ್ದಾರೆ. 78 ವರ್ಷದ ಪರೇಕ್ ಎಚ್ಡಿಎಫ್ಸಿ ಗ್ರೂಪ್ನೊಂದಿಗೆ ಕಳೆದ 46 ವರ್ಷಗಳಿಂದ ಜೊತೆಗೆ ಇದ್ದಾರೆ. ಅಂತಿಮ ವಿದಾಯದ ಪತ್ರವನ್ನು ಬರೆದಿರುವ ಅವರು, ಎಚ್ಡಿಎಫ್ಸಿ ಬ್ಯಾಂಕ್ ಇನ್ನಷ್ಟು ಬಲಶಾಲಿಯಾಗಲಿದೆ. ಇದೀಗ ಗೃಹ ಸಾಲವೂ ಸೇರಲಿದೆ. ಎಚ್‌ಡಿಎಫ್‌ಸಿಯ ಗೃಹ ಸಾಲವನ್ನು ಹೊಂದಿರುವ ದೇಶದಲ್ಲಿ ಲಕ್ಷಾಂತರ ಜನರನ್ನು ಬ್ಯಾಂಕ್ ಹೊಂದಿರುತ್ತದೆ. ವಿಲೀನದ ಬ್ಯಾಂಕ್ ಹೊಂದಿರುವ 12 ಕೋಟಿ ಗ್ರಾಹಕರಿಗೆ ಇದನ್ನು ದಯವಿಟ್ಟು ಹೇಳಿ ಎಂದಿದ್ದಾರೆ.
-
In #DeepakParekh’s retirement, I feel the same today as I felt the day Sachin Tendulkar retired. A true titan in the financial world, a crisis advisor to both governments and many senior industrialists, he has been instrumental in making #HDFC a trusted and a household name. pic.twitter.com/f527BEm3dw
— Harsh Goenka (@hvgoenka) June 30, 2023 " class="align-text-top noRightClick twitterSection" data="
">In #DeepakParekh’s retirement, I feel the same today as I felt the day Sachin Tendulkar retired. A true titan in the financial world, a crisis advisor to both governments and many senior industrialists, he has been instrumental in making #HDFC a trusted and a household name. pic.twitter.com/f527BEm3dw
— Harsh Goenka (@hvgoenka) June 30, 2023In #DeepakParekh’s retirement, I feel the same today as I felt the day Sachin Tendulkar retired. A true titan in the financial world, a crisis advisor to both governments and many senior industrialists, he has been instrumental in making #HDFC a trusted and a household name. pic.twitter.com/f527BEm3dw
— Harsh Goenka (@hvgoenka) June 30, 2023
ಬ್ಯಾಂಕ್‌ನ ಭವಿಷ್ಯವೂ ಆಶಾದಾಯಕವಾಗಿದೆ. ಇದು ತಮ್ಮ ಕಡೆಯ ಸಂಪರ್ಕ ಎಂದು ಶೇರ್ ಹೋಲ್ಡರ್ಗೆ ತಿಳಿಸಿರುವ ಪರೇಖ್, ನಾವು ಭವಿಷ್ಯದ ಬೆಳವಣಿಗೆಯತ್ತ ಸಾಗುತ್ತಿದ್ದೇವೆ. ಎಚ್ಡಿಎಫ್ಸಿಯಲ್ಲಿ ಕೆಲಸ ಮಾಡಿದ ಅನುಭವ ಅಮೂಲ್ಯವಾದದ್ದು ಆಗಿದೆ. ನಮ್ಮ ಇತಿಹಾಸನವನ್ನು ಅಳಿಸಲಾಗುವುದಿಲ್ಲ. ನಮ್ಮ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದಿದ್ದಾರೆ.
ಎಚ್ಡಿಎಫ್ಸಿ ಲಿಮಿಟೆಡ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ವಿಲೀನವೂ ವಿಶ್ವ ವಾಣಿಜ್ಯ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ವಿಲೀನದಿಂದ ಎಚ್ಡಿಎಫ್ಸಿ ಬ್ಯಾಂಕ್ ವಿಶ್ವದ ಐದನೇ ದೊಡ್ಡ ಬ್ಯಾಂಕ್ ಸಾಲಿಗೆ ಸೇರಿದೆ. ಎಚ್ಡಿಎಫ್ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳ 14.09 ಲಕ್ಷ ಕೋಟಿಯಾಗಿದೆ. ಇದರ ಜೊತೆಗೆ ಜಗತ್ತಿನ ನಾಲ್ಕನೇ ಮೌಲ್ಯಯುತ ಬ್ಯಾಂಕ್ ಆಗಿದೆ. ವಿಶ್ವದ ಐದು ದೊಡ್ಡ ಬ್ಯಾಂಕ್‌ಗಳಲ್ಲಿ ಭಾರತೀಯ ಬ್ಯಾಂಕ್‌ನ ಹೆಸರೂ ಸೇರಿರುವುದು ಮೊದಲ ಬಾರಿ ಆಗಿದೆ.
ಭಾವುಕ ಬೀಳ್ಕೊಡುಗೆ: ಇನ್ನು ಪರೇಖ್ ಅವರ ನಿವೃತ್ತಿ ಬಗ್ಗೆ ಆರ್ಪಿಜಿ ಎಂಟರ್ ಪ್ರೈಸಸ್ ಅಧ್ಯಕ್ಷ ಹರ್ಷ ಗೊನೆಕ ಟ್ವೀಟ್ ಮಾಡಿದ್ದಾರೆ. ಇಂದು ದೀಪಕ್ ಪರೇಖ್ ಅವರು ನಿವೃತ್ತಿಯಾಗುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ನಿವೃತ್ತಿಯಾದಾಗ ಆದ ಭಾವನೆ ಇದೀಗ ಪರೇಖ್ ನಿವೃತ್ತಿ ಸಂದರ್ಭದಲ್ಲಿ ಮೂಡುತ್ತಿದೆ. ಆರ್ಥಿಕ ಜಗತ್ತಿನಲ್ಲಿ ಅವರೊಬ್ಬ ಧೀಮಂತ. ಸರ್ಕಾರ ಮತ್ತು ಅನೇಕ ಹಿರಿಯ ಕೈಗಾರಿಕೋದ್ಯಮಿಗಳಿಗೆ ಅವರು ಸಲಹೆ ನೀಡಿದ್ದಾರೆ. ಎಚ್ಡಿಎಫ್ಸಿ ಮನೆ ಮಾತು ಆಗಿ ನಂಬಿಕೆ ಮೂಡಲು ಪ್ರಮುಖ ಕಾರಣರಲ್ಲಿ ಅವರು ಒಬ್ಬರು ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Fiscal deficit: ₹2.10 ಲಕ್ಷ ಕೋಟಿಗಿಳಿದ ಭಾರತದ ವಿತ್ತೀಯ ಕೊರತೆ