ನವದೆಹಲಿ: ನೋಯ್ಡಾದ ಕೆಲವು ಪ್ರದೇಶಗಳಲ್ಲಿ ನಡೆಯುತ್ತಿರುವ ಪ್ರಕರಣಗಳು ಜನರಲ್ಲಿ ಭೀತಿ ಮೂಡಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯ ಅಧಿಕಾರಿಗಳು ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ.
ಇಲ್ಲಿನ ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಗೆ ಭೇಟಿ ನೀಡಿರುವ ಅಧಿಕಾರಿಗಳು ತಮ್ಮ ಪ್ಲಾಟ್ಗಳಲ್ಲಿ ಬ್ಯಾಚುಲರ್, ಪಿಜಿ ಹಾಗೂ ಲಿನ್ ಇನ್ ರಿಲೇಶನ್ಶಿಫ್ನಲ್ಲಿಇರುವವರಿಗೆ ಇನ್ಮುಂದೆ ಮನೆ ವಸತಿ ನೀಡದಿರುವಂತೆ ಕೋರಿದ್ದಾರೆ. ಈ ಸಂಬಂಧ ಪ್ಲಾಟ್ ಮಾಲೀಕರೊಂದಿಗೆ ಸಮಾಲೋಚಿಸಿ ನಿರ್ಧಾರವೊಂದಕ್ಕೆ ಬರಲಾಗಿದೆ.
ಸಭೆ ಬಳಿಕ ಎಮರಾಲ್ಡ್ ಕೋರ್ಟ್ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್, ಪೇಯಿಂಗ್ ಗೆಸ್ಟ್ ವಸತಿ, ಅತಿಥಿ ಗೃಹ, ಸಹ ಜೀವನ ನಡೆಸುವವರಿಗೆ ಅಥವಾ ಅವಿವಾಹಿತರು, ವಿದ್ಯಾರ್ಥಿಗಳಿಗೆ ಮನೆ ನೀಡದಂತೆ ನಿರ್ಧರಿಸುವಂತೆ ಮಾಡುವಲ್ಲಿ ಮಾಲೀಕರ ಮನವೊಲಿಕೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಫ್ಲಾಟ್‌ಗಳಲ್ಲಿ ಆಕ್ಷೇಪಾರ್ಹ ಚಟುವಟಿಕೆಗಳ ಸಾಧ್ಯತೆ ಹಿನ್ನೆಲೆಯಲ್ಲಿ ನೋಯ್ಡಾ ಸ್ಥಳೀಯ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜನವರಿ 1, 2023 ರಿಂದ, ಎಮರಾಲ್ಡ್ ಕೋರ್ಟ್‌ನಲ್ಲಿ ಪೇಯಿಂಗ್ ಗೆಸ್ಟ್ ವಸತಿ, ಅತಿಥಿ ಗೃಹ, ಸಹ ಜೀವನ ನಡೆಸುವವರಿಗೆ ಅಥವಾ ಅವಿವಾಹಿತರು, ವಿದ್ಯಾರ್ಥಿಗಳಿಗೆ ಮನೆ ನೀಡದಂತೆ ನಿರ್ಣಯ ಅಂಗೀಕರಿಸಲಾಯಿತು ಎಂದು RWS ಅಧ್ಯಕ್ಷ ಉದಯ್ ಭನ್ ಟಿಯೋಟಿಯಾ ಹೇಳಿದ್ದಾರೆ.
ಅಲ್ಲದೇ, ಈಗಾಗಲೇ ಪಿಜಿ, ಬ್ಯಾಚುಲರ್, ಸಹಜೀವನ ನಡೆಸುತ್ತಿರುವವರಿಗೆ ಮನೆ ಖಾಲಿ ಮಾಡುವಂತೆ ಮಾಲೀಕರು ಸೂಚಿಸಿದ್ದು, ಇದಕ್ಕೆ 30 ದಿನಗಳ ಗಡುವು ಕೂಡ ನೀಡಲಾಗಿದೆ ಎಂದು ಇಲ್ಲಿನ ನಿವಾಸಿ ಭಾನ್ ಥೆಟಿಯ ತಿಳಿಸಿದ್ದಾರೆ.
ಇದನ್ನೂ ಓದಿ: ನಿಶ್ಚಿತಾರ್ಥ ಮಂಟಪದಲ್ಲೇ ರಂಪಾಟ ಮಾಡಿದ ಯುವತಿ.. ಕಾರಣ?