ETV Bharat / business

ಕಳ್ಳರಿಂದ ಮೋಸ ಹೋದರೆ 'ಸೈಬರ್​ ವಿಮೆ' ಮೂಲಕ ನಷ್ಟವಾಗದಂತೆ ಎಚ್ಚರ ವಹಿಸಿ! - ಹೊಸ ರೀತಿಯ ವಂಚನೆಗಳೊಂದಿಗೆ ದರೋಡೆ

ಸೈಬರ್​ ಕಳ್ಳರು ಕಾಲಕಾಲಕ್ಕೆ ಹೊಸ ರೀತಿಯ ಕುತಂತ್ರಗಳಿಗೆ ಮುಂದಾಗುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರು ಕೂಡಾ ಅನೇಕ ಮಾರ್ಗಗಳನ್ನು ಕಂಡುಹಿಡಿಯುದ್ದಾರೆ.

Cyber Insurance  losses if you are cheated by cyber thieves  Cyber crime news  ಕಳ್ಳರಿಂದ ಮೋಸ ಹೋದರೆ  ಸೈಬರ್​ ವಿಮೆ ಮೂಲಕ ನಷ್ಟವಾದಂತೆ ಎಚ್ಚರ ವಹಿಸಿ  ಕಾಲಕಾಲಕ್ಕೆ ಹೊಸ ರೀತಿಯಿಂದ ಕಳ್ಳತನ  ಪೊಲೀಸರು ಸಹ ಅನೇಕ ಮಾರ್ಗ  ಸೈಬರ್​ ವಿಮೆ ಬಗ್ಗೆ ಪರಿಚಯ  ವೈಯಕ್ತಿಕ ಮಾಹಿತಿಯು ಬಹಳ ಮೌಲ್ಯಯುತ  ಹೊಸ ರೀತಿಯ ವಂಚನೆಗಳೊಂದಿಗೆ ದರೋಡೆ  ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಿಗೆ ಸರಿಯಾದ ಸಾಫ್ಟ್‌ವೇರ್
ಕಳ್ಳರಿಂದ ಮೋಸ ಹೋದರೆ ಸೈಬರ್​ ವಿಮೆ ಮೂಲಕ ನಷ್ಟವಾದಂತೆ ಎಚ್ಚರ ವಹಿಸಿ
author img

By

Published : Mar 31, 2023, 8:23 AM IST

ಆಧುನಿಕ ಡಿಜಿಟಲ್ ಕಾಲಘಟ್ಟದಲ್ಲಿ ವೈಯಕ್ತಿಕ ಮಾಹಿತಿ ಕಾಪಾಡುವುದು ಒಂದು ಸವಾಲು. ಅನೇಕರು ತಮ್ಮ ಫೋನ್, ಕಂಪ್ಯೂಟರ್‌ಗಳಲ್ಲಿ ತಮ್ಮ ಅಮೂಲ್ಯ ಮಾಹಿತಿಯನ್ನು ಮರೆಮಾಡುತ್ತಿದ್ದಾರೆ. ಅನಿರೀಕ್ಷಿತ ಸಂದರ್ಭಗಳು ಅಥವಾ ಕೆಲವೊಮ್ಮೆ ವಸ್ತುಗಳು ಸೈಬರ್ ಅಪರಾಧಿಗಳ ಕೈ ಸೇರಿಬಿಡುತ್ತವೆ. ಇದು ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಇಂತಹ ತೊಂದರೆಗಳು ಎದುರಾದಾಗ ನಿಮಗೆ ಸೈಬರ್ ವಿಮೆ ಸಹಾಯಕ್ಕೆ ಬರುತ್ತದೆ. ಏನಿದು ಸೈಬರ್ ವಿಮೆ?.

ತಂತ್ರಜ್ಞಾನ ಬೆಳೆಯುತ್ತಿದೆ. ಸೈಬರ್ ಕಳ್ಳರು ಕಾಲಕಾಲಕ್ಕೆ ಹೊಸ ಸ್ವರೂಪದ ವಂಚನೆಗಳೊಂದಿಗೆ 'ದರೋಡೆ' ಮಾಡುತ್ತಿದ್ದಾರೆ. ಫೋನ್‌ ಮತ್ತು ಕಂಪ್ಯೂಟರ್‌ಗಳಿಗೆ ಸರಿಯಾದ ಸಾಫ್ಟ್‌ವೇರ್ ಬಳಸುವುದರ ಜೊತೆಗೆ ಸೈಬರ್ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ಮರೆಯಬೇಡಿ. 18 ವರ್ಷ ಮೇಲ್ಪಟ್ಟ ಯಾರಾದರೂ ಈ ವಿಮೆ ಪಡೆಯಬಹುದು. 1 ಲಕ್ಷ ರೂ.ಯಿಂದ 1 ಕೋಟಿ ರೂ ಮೌಲ್ಯದ ಪಾಲಿಸಿ ತೆಗೆದುಕೊಳ್ಳಬಹುದು. ಇವುಗಳನ್ನು ಆಯ್ಕೆ ಮಾಡುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಚಾರಗಳಿವೆ.

* ಕಾರ್ಡ್‌ಗಳಿಗೆ ಪಾಲಿಸಿ: ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು/ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಬಳಸುವಾಗ ಯಾವುದೇ ವಂಚನೆಯ ಸಂದರ್ಭದಲ್ಲಿ ಸೈಬರ್ ಭದ್ರತಾ ಕವರ್ ಅನ್ವಯಿಸುತ್ತದೆಯೇ? ಎಂದು ಪರಿಶೀಲಿಸಿ. ನಂತರವೇ ಪಾಲಿಸಿಯನ್ನು ಆಯ್ಕೆ ಮಾಡಿ. ಉದಾಹರಣೆಗೆ, KYC ನಿಯಮಗಳನ್ನು ಪೂರೈಸದ ಕಾರಣ, ಬ್ಯಾಂಕ್ ಖಾತೆ/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ನಿರ್ಬಂಧಿಸಲಾಗುತ್ತದೆ. ಇ-ಮೇಲ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡುವುದರಿಂದ ಮೋಸವಾಗಬಹುದು. ಖಾತೆ ಅಥವಾ ಕಾರ್ಡ್‌ನಿಂದ ಹಣವನ್ನು ಹಿಂಪಡೆಯಲಾಗುತ್ತದೆ. ಅಂತಹ ಸಂದರ್ಭಗಳಲ್ಲಿಯೂ ವಿಮಾ ಪಾಲಿಸಿ ಹಣಕಾಸಿನ ನಷ್ಟ ಭರಿಸುವಂತಿರಬೇಕು.

* ಮಾಹಿತಿ ಕಳ್ಳತನದ ಸಂದರ್ಭದಲ್ಲಿ..: ಫೋನ್‌ ಅಥವಾ ಕಂಪ್ಯೂಟರ್‌ಗಳಲ್ಲಿ ಸಂಗ್ರಹವಾಗಿರುವ ವೈಯಕ್ತಿಕ ಮಾಹಿತಿ ಕದ್ದು ಅದರ ಮೂಲಕ ವಂಚನೆ ಮಾಡಿದರೆ ಏನು ಮಾಡಬೇಕು?. ಹೌದು, ಅಂತಹ ಸಂದರ್ಭಗಳಲ್ಲಿ ಸೈಬರ್ ವಿಮೆ ರಕ್ಷಣೆ ನೀಡಬೇಕು. ಉದಾಹರಣೆಗೆ, ವಂಚಕರು ವ್ಯಕ್ತಿಯ ಪ್ಯಾನ್ ಅಥವಾ ಆಧಾರ್ ವಿವರಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾವಿಸೋಣ. ಈ ಸಂದರ್ಭದಲ್ಲಿ ಆಗುವ ನಷ್ಟವನ್ನು ವಿಮಾ ಕಂಪನಿ ಭರಿಸಬೇಕಾಗುತ್ತದೆ. ವಿಮೆ ತೆಗೆದುಕೊಳ್ಳುವಾಗ ಇದನ್ನು ಪರಿಶೀಲಿಸಿ.

* ಸಾಮಾಜಿಕ ವೇದಿಕೆಗಳಲ್ಲಿ...: ಸಾಮಾಜಿಕ ವೇದಿಕೆಗಳಿಂದ ಗುರುತಿನ ವಿವರ ತೆಗೆದುಕೊಂಡು ಸೈಬರ್ ದಾಳಿ ನಡೆಸಿದರೆ?. ಇದರಿಂದ ರಕ್ಷಣೆ ಪಡೆಯುವ ವೆಚ್ಚವನ್ನು ಭರಿಸಲು ವಿಮಾ ಪಾಲಿಸಿ ಇರಬೇಕು. ವೈಯಕ್ತಿಕ ಕಿರುಕುಳದ ಸಂದರ್ಭದಲ್ಲಿ ತಗಲುವ ವೆಚ್ಚಕ್ಕೂ ಪರಿಹಾರ ನೀಡಬೇಕು.

* ಮಾಲ್‌ವೇರ್‌ನಿಂದ ರಕ್ಷಣೆ: ಕಿರು ಸಂದೇಶಗಳು ಅಥವಾ ಇ-ಮೇಲ್‌ಗಳ ಮೂಲಕ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಪ್ರವೇಶಿಸುವ ಮಾಲ್‌ವೇರ್ ಮೂಲಕ ನಮ್ಮ ಸಾಧನಗಳಿಂದ ಮಾಹಿತಿ ಇತರರ ಕೈಗೆ ಹೋಗಬಹುದು. ಸಾಮಾನ್ಯವಾಗಿ, ಸೈಬರ್ ಕಳ್ಳರು ಬಳಕೆದಾರರ ಹೆಸರು, ಪಾಸ್‌ವರ್ಡ್‌ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಉಂಟಾದ ಎಲ್ಲಾ ನಷ್ಟಗಳನ್ನು ಪಾಲಿಸಿ ಭರಿಸುತ್ತದೆ. ಪಾಲಿಸಿಯನ್ನು ತೆಗೆದುಕೊಳ್ಳುವಾಗ ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಾಲ್‌ವೇರ್ ದಾಳಿಯ ಸಂದರ್ಭದಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಡೇಟಾ ಮರುಸ್ಥಾಪಿಸುವ ವೆಚ್ಚವನ್ನು ಸಹ ಸೈಬರ್ ವಿಮೆ ಪಾವತಿಸುತ್ತದೆ.

ಇದಲ್ಲದೇ, "ಸೈಬರ್ ವಿಮೆಯು ಡಿಜಿಟಲ್ ಸಾಧನಗಳಲ್ಲಿ ನಿಮ್ಮ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದು, ಅದರಿಂದ ಉಂಟಾಗುವ ಪರಿಣಾಮಗಳಿಗೆ ಪರಿಹಾರ ಒದಗಿಸುವುದು, ಸೈಬರ್ ಅಪರಾಧಗಳಿಂದ ಉಂಟಾಗುವ ಯಾವುದೇ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳ ಚಿಕಿತ್ಸೆ ಮತ್ತು ವೆಚ್ಚಗಳ ಪಾವತಿಯನ್ನು ಈ ವಿಮಾ ಪಾಲಿಸಿ ಒಳಗೊಂಡಿದೆ" ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಮುಖ್ಯ ತಾಂತ್ರಿಕ ಅಧಿಕಾರಿ ಟಿ.ಎ.ರಾಮಲಿಂಗಂ ಹೇಳುತ್ತಾರೆ.

ಇದನ್ನೂ ಓದಿ: ಒಂದೇ ದಿನದಲ್ಲಿ 12 ರೈಲ್ವೆ ಇಂಜಿನ್‌ಗಳನ್ನು ತಯಾರಿಸಿ ದಾಖಲೆ ಬರೆದ ಸಿಎಲ್​ಡಬ್ಲ್ಯೂ​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.