ETV Bharat / business

ಕ್ರಿಪ್ಟೋ ಸಮಸ್ಯೆಗೆ ತ್ವರಿತ ಗಮನ ಅಗತ್ಯ: ನಿರ್ಮಲಾ ಸೀತಾರಾಮನ್ ಪ್ರತಿಪಾದನೆ

ಕ್ರಿಪ್ಟೋ ಸ್ವತ್ತುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ಗಮನಹರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

G20 meeting
ಜಿ20 ಹಣಕಾಸು ಮಂತ್ರಿಗಳ ಸಭೆ
author img

By

Published : Apr 15, 2023, 11:05 AM IST

ವಾಷಿಂಗ್ಟನ್: ಕ್ರಿಪ್ಟೋ ಸ್ವತ್ತುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತ್ವರಿತವಾಗಿ ಗಮನ ನೀಡಬೇಕು ಮತ್ತು ಜಿ 20ರ ಪ್ರತಿಕ್ರಿಯೆ ಆರ್ಥಿಕತೆಯನ್ನು ಹಾನಿಯಿಂದ ರಕ್ಷಿಸುವ ಸಂದರ್ಭದಲ್ಲಿ ಯಾವುದೇ ಸಂಭಾವ್ಯ ಪ್ರಯೋಜನಗಳನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಶುಕ್ರವಾರ ವಾಷಿಂಗ್ಟನ್‌ನಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಧಾನ ಕಚೇರಿಯಲ್ಲಿ ಜಿ20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳೊಂದಿಗೆ "ಕ್ರಿಪ್ಟೋ ಆಸ್ತಿಗಳ ಮ್ಯಾಕ್ರೋಫೈನಾನ್ಷಿಯಲ್ ಇಂಪ್ಲಿಕೇಶನ್ಸ್" ಕುರಿತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತ ಪ್ರಸ್ತುತ ಜಿ 20 ರಾಷ್ಟ್ರಗಳ ವಾರ್ಷಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಕ್ರಿಪ್ಟೋಗೆ ಸಂಬಂಧಿಸಿದ ಸಮಸ್ಯೆಗಳು ಜಿ 20 ದೇಶಗಳ ನಡುವೆ ಚರ್ಚೆಯ ಪ್ರಮುಖ ಅಂಶ. ಮತ್ತು ಈ ವಲಯವನ್ನು ನಿಯಂತ್ರಿಸುವ ತುರ್ತು ಕುರಿತು ಸದಸ್ಯ ರಾಷ್ಟ್ರಗಳಲ್ಲಿ ಸರ್ವಾನುಮತವಿದೆ. ಈ ವಿಷಯದ ಕುರಿತು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಮತ್ತು ಬ್ಯಾಂಕ್ ಫಾರ್ ಇಂಟರ್​ ನ್ಯಾಷನಲ್​​ ಸೆಟ್ಲ್‌ಮೆಂಟ್‌ನ ಜಾಗತಿಕ ತಜ್ಞರು ಅಧಿವೇಶನ ಆಯೋಜಿಸಿದ್ದರು.

ಇದನ್ನೂ ಓದಿ: ಜಿ 20 ಪ್ರತಿನಿಧಿಗಳಿಗಾಗಿ ಲೇಸರ್​ ಸೌಂಡ್​ ಅಂಡ್​ ಲೈಟ್​ ಕಾರ್ಯಕ್ರಮ; ಆಗ್ರಾ ಕೋಟೆಯ ಮೇಲ್ಛಾವಣಿಯಲ್ಲಿ ಬಿರುಕು

ನೀತಿ ಮತ್ತು ನಿಯಂತ್ರಕ ಚೌಕಟ್ಟಿನ ಪ್ರಮುಖ ಅಂಶಗಳನ್ನು ಹೊರತರುವಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಹಣಕಾಸು ಸ್ಥಿರತೆ ಮಂಡಳಿ (ಎಫ್‌ಎಸ್‌ಬಿ) ಕಾರ್ಯವನ್ನು ಜಿ 20 ಅಂಗೀಕರಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ರಿಪ್ಟೋ ಆಸ್ತಿಗಳ ಸ್ಥೂಲ ಆರ್ಥಿಕ ಮತ್ತು ನಿಯಂತ್ರಕ ದೃಷ್ಟಿಕೋನಗಳನ್ನು ಸಂಯೋಜಿಸುವ ಸಂಶ್ಲೇಷಣೆಯ ಕಾಗದದ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.

ಕ್ರಿಪ್ಟೋ ಸ್ವತ್ತುಗಳ ಮೇಲೆ ಜಾಗತಿಕವಾಗಿ ಸಂಘಟಿತ ನೀತಿ ಪ್ರತಿಕ್ರಿಯೆಯನ್ನು ಹೊಂದಲು G20 ಸದಸ್ಯರಲ್ಲಿ ಒಮ್ಮತವಿದೆ ಎಂದು ಸೀತಾರಾಮನ್​​ ಹೇಳಿದರು. ಇದು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ನಿರ್ದಿಷ್ಟವಾದವುಗಳನ್ನು ಒಳಗೊಂಡಂತೆ ಸಂಪೂರ್ಣ ಅಪಾಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. "ಕ್ರಿಪ್ಟೋ ಸ್ವತ್ತುಗಳೊಂದಿಗೆ ವ್ಯವಹರಿಸುವ ಸ್ವತಂತ್ರ ದೇಶವನ್ನು ಹೊಂದಲು ಸಾಧ್ಯವಿಲ್ಲ ಎಂದು G20 ಮತ್ತು ಅದರ ಸದಸ್ಯರು ಒಪ್ಪುತ್ತಾರೆ ಮತ್ತು ಕ್ರಿಪ್ಟೋ ಸ್ವತ್ತುಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ಜಾಗತಿಕವಾಗಿ ಸಂಘಟಿತವಾದ ತಿಳಿವಳಿಕೆ ಹೊಂದಿರಬೇಕು" ಎಂದು ಜಿ20 ಸಭೆಯ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿ ನಿರ್ಮಲಾ ಸೀತಾರಾಮನ್ ಹೇಳಿದರು.

"ಇದು ಕೇವಲ ಕ್ರಿಪ್ಟೋ ಆಸ್ತಿ ನಿಯಂತ್ರಕ ಸಮಸ್ಯೆ ಅಲ್ಲ, ಅಲ್ಲಿ ದೇಶಗಳು ಒಗ್ಗೂಡಬೇಕು. ಕ್ರಿಪ್ಟೋ ನಿಯಂತ್ರಣದ ಬಗ್ಗೆ "ಎಲ್ಲಾ ಜಿ 20 ಸದಸ್ಯರಲ್ಲಿ ಹೆಚ್ಚಿನ ಸ್ವೀಕಾರವಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಕ್ರಿಪ್ಟೋ ಸ್ವತ್ತುಗಳ ಮೇಲಿನ ಯಾವುದೇ ಕ್ರಮವು ಜಾಗತಿಕವಾಗಿರಬೇಕು" ಎಂದು ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಫ್ಟೊ ಜಾಗತಿಕ ನೀತಿಗಳ ಬಗ್ಗೆ G20 ನಾಯಕರ ಒಪ್ಪಿಗೆ ಇದೆ; ನಿರ್ಮಲಾ ಸೀತಾರಾಮನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.