ಹೈದರಾಬಾದ್: ವಿದೇಶಿ ಪ್ರವಾಸಗಳಿಗೆ ನಗದು, ಫಾರೆಕ್ಸ್ ಕಾರ್ಡ್ ಮತ್ತು ಟ್ರಾವೆಲ್ ಚೆಕ್‌ಗಳಿದ್ದರೂ ಕ್ರೆಡಿಟ್ ಕಾರ್ಡ್‌ಗಳು ಸಹ ಕೆಲವು ಪ್ರಯೋಜನಗಳನ್ನು ನೀಡುತ್ತವೆ. ಬ್ಯಾಂಕ್ ಬಜಾರ್ ಸಿಇಒ ಆದಿಲ್ ಶೆಟ್ಟಿ ಅವರು ವಿದೇಶಿ ಪ್ರವಾಸಿಗಳ ಮೇಲೆ ಕ್ರೆಡಿಟ್ ಕಾರ್ಡ್‌ಗಳ ಪ್ರಯೋಜನಗಳನ್ನು ವಿವರಿಸಿದ್ದು, ಇವುಗಳನ್ನು ಬಳಸಲು ಸುಲಭವಾಗಿದೆ ಎಂದು ಹೇಳುತ್ತಾರೆ.
ಅಗತ್ಯವಿದ್ದಾಗ ನಗದು ಹಿಂಪಡೆಯುವವರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಬಹುಮಾನ, ಕ್ಯಾಶ್‌ಬ್ಯಾಕ್ ಹಾಗೂ ಖರೀದಿಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಆದ್ದರಿಂದ ವಿದೇಶಿ ಪ್ರವಾಸದ ವೇಳೆ ನಗದು ಮತ್ತು ಫಾರೆಕ್ಸ್ ಕಾರ್ಡ್‌ಗಳ ಜೊತೆಗೆ ಕ್ರೆಡಿಟ್ ಕಾರ್ಡ್‌ಗಳನ್ನು ಒಯ್ಯುವುದು ಅಥವಾ ಹೊಂದುವುದು ಈಗಿನ ಅಗತ್ಯವಾಗಿದೆ.
ಸೂಕ್ತವಾದ ಕಾರ್ಡ್: ಮಾರುಕಟ್ಟೆಯಲ್ಲಿ ಹಲವು ರೀತಿಯ ಕ್ರೆಡಿಟ್ ಕಾರ್ಡ್‌ಗಳು ಲಭ್ಯ ಇವೆ. ಕಾರ್ಡ್ ಆಧಾರದ ಮೇಲೆ ಪ್ರಯೋಜನಗಳನ್ನು ಹೊರತರಲಾಗುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಪಡೆದುಕೊಳ್ಳುವ ಮೊದಲು, ಈ ಕೆಳಗಿನವುಗಳನ್ನು ಪರಿಶೀಲಿಸಿ.
ಇದು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ವಹಿವಾಟು ಶುಲ್ಕ, ತಡವಾದ ಪಾವತಿ ಶುಲ್ಕಗಳು, ಬಹುಮಾನಗಳು, ರಿಯಾಯಿತಿಗಳು ಮತ್ತು ಎಲ್ಲಾ ವಿವರಗಳನ್ನು ಮತ್ತು ನೀವು ಭೇಟಿ ನೀಡುವ ದೇಶದಲ್ಲಿ ಈ ಕಾರ್ಡ್‌ಗಳು ಚಲಾವಣೆ ಆಗುತ್ತವೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸುವುದು ಉತ್ತಮ ಹಾಗೂ ಅಗತ್ಯವೂ ಕೂಡಾ.
ಮಾಹಿತಿ ಹಂಚಿಕೊಳ್ಳಿ: ಪ್ರಯಾಣಕ್ಕೆ ಹೊರಡುವ ಮೊದಲು, ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಯೊಂದಿಗೆ ನೀವು ತೆರಳುವ ಸ್ಥಳದ ವಿವರಗಳನ್ನು ಹಂಚಿಕೊಳ್ಳಿ. ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಅಪ್ಲಿಕೇಶನ್ ಮೂಲಕ ವಹಿವಾಟುಗಳನ್ನು ಮಾಡಬಹುದೆಂದು ಖಚಿತಪಡಿಸಿಕೊಳ್ಳಿ. ನಿಮ್ಮದೇ ಆದ ಕಾರ್ಡ್ ಅನ್ನು ನಿರ್ಬಂಧಿಸುವ ಆಯ್ಕೆಯನ್ನು ಆರಿಸಿಕೊಳ್ಳಿ, ಇಲ್ಲದಿದ್ದರೆ ಕಾರ್ಡ್ ಅಮಾನ್ಯವಾಗುತ್ತದೆ.
ಏಕೆಂದರೆ ಬ್ಯಾಂಕ್‌ಗಳು ನಿಮ್ಮ ವಹಿವಾಟುಗಳನ್ನು ಮೋಸ ಎಂದು ಶಂಕಿಸುವ ಸಾಧ್ಯತೆ ಇರುತ್ತದೆ. ತಾತ್ಕಾಲಿಕವಾಗಿ ಕಾರ್ಡ್‌ನ ವಹಿವಾಟುಗಳನ್ನು ನಿರ್ಬಂಧಿಸಬಹುದು. ಆ ಸಂದರ್ಭದಲ್ಲಿ ಕಾರ್ಡ್ ಅನ್ನು ಅನ್‌ಬ್ಲಾಕ್ ಮಾಡಲು ನೀವು ತಕ್ಷಣ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಬೇಕು.
ವಿಮಾ ಸೌಲಭ್ಯ: ನೀವು ಬಳಸುತ್ತಿರುವ ಕ್ರೆಡಿಟ್ ಕಾರ್ಡ್ ಆಧಾರದ ಮೇಲೆ ಹಲವಾರು ಪ್ರಯೋಜನಗಳಿವೆ. ಅದರಲ್ಲಿ ವಿಮೆಯೂ ಒಂದು. ಇದು ಸರಕುಗಳ ನಷ್ಟ, ಪಾಸ್‌ಪೋರ್ಟ್, ಪ್ರಯಾಣ ವಿಳಂಬ, ಅಪಘಾತಗಳು ಮತ್ತು ವಿಮಾನಗಳ ರದ್ದತಿಯ ಸಂದರ್ಭದಲ್ಲಿ ಪರಿಹಾರವನ್ನು ನೀಡುತ್ತದೆ.
ಆದರೂ ವಿವಿಧ ರೀತಿಯ ಕಾರ್ಡ್‌ಗಳಿಗೆ ವಿಮಾ ಕೊಡುಗೆಗಳು ಬದಲಾಗುತ್ತವೆ. ಪ್ರಯಾಣಿಸುವ ಮೊದಲು ನಿಮ್ಮ ಆಯ್ಕೆಯ ಕಾರ್ಡ್ ನೀಡುವ ವಿಮಾ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಬೇಕು. ಕೆಲವು ಕಾರ್ಡ್ ಕಂಪನಿಗಳು ದೇಶೀಯ ಪ್ರಯಾಣಕ್ಕೆ ವಿಮೆಯನ್ನು ಒದಗಿಸುವುದಿಲ್ಲ. ಅಲ್ಲದೇ, ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ವಿಧಿಸಲಾಗುವ ಶುಲ್ಕಗಳು ಮತ್ತು ವಿದೇಶಿ ವಹಿವಾಟು ಶುಲ್ಕವನ್ನು ಪರಿಶೀಲಿಸಿ.
ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳು: ವಿದೇಶದಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಕೊಂಡೊಯ್ಯುವುದು ಉತ್ತಮ. ಒಂದು ಕಾರ್ಡ್ ನಿರಾಕರಿಸಿದರೆ, ಇನ್ನೊಂದು ಕಾರ್ಡ್ ಸೂಕ್ತವಾಗಿ ಬರುತ್ತದೆ. ಕಾರ್ಡ್‌ಗಳು ವೀಸಾ, ಮಾಸ್ಟರ್‌ಕಾರ್ಡ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್‌ನಂತಹ ವಿವಿಧ ನೆಟ್‌ವರ್ಕ್‌ಗಳಿಗೆ ಸೇರಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೇ ಎಲ್ಲ ಕಾರ್ಡ್‌ಗಳನ್ನು ಒಂದೇ ಇಟ್ಟುಕೊಳ್ಳಬೇಡಿ. ಅವುಗಳನ್ನು ವಿವಿಧ ಪಾಕೆಟ್ ಅಥವಾ ಪರ್ಸ್‌ಗಳಲ್ಲಿ ಇರಿಸಿಕೊಳ್ಳುವುದು ಉತ್ತಮವಾಗಿದೆ.
ಒಂದು ಕಾರ್ಡ್ ಕಳೆದು ಹೋದರೆ, ಇನ್ನೊಂದನ್ನು ಅವಲಂಬಿಸಬಹುದು. ಅದಕ್ಕೂ ಮೊದಲು, ಪ್ರತಿ ಕಾರ್ಡ್‌ನ ವಿವರಗಳನ್ನು ಬರೆಯಬೇಕು. ಕಾರ್ಡ್ ಕಳೆದುಹೋದರೆ ಅದರ ಸೇವೆ ಸ್ಥಗಿತಗೊಳಿಸಲು ತಕ್ಷಣವೇ ಸಂಬಂಧಿಸಿದ ಬ್ಯಾಂಕ್‌ಗೆ ತಿಳಿಸಬೇಕಾಗುತ್ತದೆ.
ಇದನ್ನೂ ಓದಿ: ಕೋವಿಡ್‌ನಿಂದ ವಿಮಾನ ಸಂಸ್ಥೆಗಳಿಗೆ ₹19 ಸಾವಿರ ಕೋಟಿ, ಏರ್ಪೋರ್ಟ್‌ಗಳಿಗೆ ₹5 ಸಾವಿರ ಕೋಟಿ ನಷ್ಟ