ETV Bharat / business

ತಪ್ಪಾಗಿ ಕಳುಹಿಸಿದ ಯುಪಿಐ ಪೇಮೆಂಟ್​ ವಾಪಸ್ ಪಡೆಯಬಹುದಾ? ತಕ್ಷಣ ಏನು ಮಾಡಬಹುದು? - ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್

ತಪ್ಪಾದ ವ್ಯಕ್ತಿಗೆ ಯುಪಿಐ ಮೂಲಕ ಹಣ ಕಳುಹಿಸಿದರೆ ಹಣ ಮರಳಿ ಪಡೆಯಲು ಏನು ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

Sent money by mistake? Here's how to reverse your UPI transaction

author img

By ETV Bharat Karnataka Team

Published : Oct 27, 2023, 6:06 PM IST

ಬೆಂಗಳೂರು: ಯುಪಿಐ ಮೂಲಕ ಹಣ ಪಾವತಿ ಮಾಡುವಾಗ ತಪ್ಪಾದ ವ್ಯಕ್ತಿಗೆ ಹಣ ಕಳುಹಿಸಿದರೆ ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಒಂದಿಷ್ಟು ಮುಖ್ಯವಾದ ಮಾಹಿತಿ. ಸಾಮಾನ್ಯವಾಗಿ ಯುಪಿಐ ಪೇಮೆಂಟ್​ಗಳು ಕ್ಷಣಾರ್ಧದಲ್ಲಿ ಮುಗಿದುಹೋಗುತ್ತವೆ ಮತ್ತು ಅವುಗಳನ್ನು ಹಿಂಪಡೆಯಲಾಗುವುದಿಲ್ಲ. ಆದಾಗ್ಯೂ ಕೆಲ ಪ್ರಕರಣಗಳಲ್ಲಿ ತಪ್ಪಾಗಿ ಕಳುಹಿಸಿದ ಮೊತ್ತವನ್ನು ಮರಳಿ ಕಳುಹಿಸಲು ಅಥವಾ ರಿಫಂಡ್ ಮಾಡಲು ನೀವು ಮನವಿ ಮಾಡಬಹುದು.

ಯುಪಿಐ ಪೇಮೆಂಟ್​ ಮರಳಿ ಪಡೆಯುವ ಕೆಲ ವಿಧಾನಗಳು ಹೀಗಿವೆ:

ಹಣ ಪಡೆದವರನ್ನು ತಕ್ಷಣ ಸಂಪರ್ಕಿಸಿ: ನೀವು ತಪ್ಪು ವ್ಯಕ್ತಿಗೆ ಯುಪಿಐ ಪಾವತಿ ಮಾಡಿದ್ದರೆ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ತಕ್ಷಣ ಅವರನ್ನು ಸಂಪರ್ಕಿಸುವುದು ಮತ್ತು ನಿಮ್ಮ ಹಣವನ್ನು ಮರಳಿಸುವಂತೆ ಕೇಳುವುದು. ಹಣ ಪಡೆದವರು ಒಳ್ಳೆಯವರಾಗಿದ್ದರೆ ಅವರು ತಮ್ಮ ಕಡೆಯಿಂದ ಪೇಮೆಂಟ್​ ಅನ್ನು ಹಿಮ್ಮುಖಗೊಳಿಸಬಹುದು.

ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪನಿಯನ್ನು ಸಂಪರ್ಕಿಸಿ: ಹಣ ಪಡೆದವರು ಹಣ ಮರಳಿಸಲು ಸಾಧ್ಯವಾಗದಿದ್ದರೆ ಅಥವಾ ಹಾಗೆ ಮಾಡಲು ಅವರು ಇಷ್ಟಪಡದಿದ್ದರೆ, ಸಹಾಯಕ್ಕಾಗಿ ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಪೂರೈಕೆದಾರರನ್ನು ಸಂಪರ್ಕಿಸಬಹುದು. ನೀವು ಅವರಿಗೆ ವಹಿವಾಟು ಉಲ್ಲೇಖ ಸಂಖ್ಯೆ (ಯುಟಿಆರ್), ದಿನಾಂಕ ಮತ್ತು ವಹಿವಾಟಿನ ಮೊತ್ತ ಎಷ್ಟು ಎಂಬುದನ್ನು ತಿಳಿಸಬೇಕಾಗುತ್ತದೆ. ನಂತರ ಅವರು ನಿಮ್ಮ ಪರವಾಗಿ ಯುಪಿಐ ಆಟೋ-ರಿವರ್ಸಲ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.

ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿರಿ: ಯುಪಿಐ ಸ್ವಯಂ-ರಿವರ್ಸಲ್ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ದಿನಗಳು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ, ನಿಮ್ಮ ಹಿಮ್ಮುಖ ಪೇಮೆಂಟ್​ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಪೂರೈಕೆದಾರರ ಸಂಪರ್ಕದಲ್ಲಿರುವುದು ಮುಖ್ಯ.

ಗಮನಿಸಿ: ಯುಪಿಐ ವಹಿವಾಟುಗಳು ಇನ್ನೂ ಬಾಕಿ ಇರುವ ಪೆಂಡಿಂಗ್ ಅಥವಾ ವಿಫಲವಾದ ಸ್ಥಿತಿಯಲ್ಲಿದ್ದರೆ ಮಾತ್ರ ಅವುಗಳನ್ನು ಹಿಮ್ಮುಖಗೊಳಿಸಬಹುದು. ಒಮ್ಮೆ ವಹಿವಾಟು ಯಶಸ್ವಿಯಾದ ನಂತರ, ಅದನ್ನು ಹಿಮ್ಮುಖಗೊಳಿಸಲು ಸಾಧ್ಯವಿಲ್ಲ.

ಯುಪಿಐ ಪೇಮೆಂಟ್​ ಮಾಡುವಾಗ ಈ ವಿಷಯಗಳು ಗಮನದಲ್ಲಿರಲಿ: ಹಣ ಕಳುಹಿಸುವವರ ಯುಪಿಐ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವಾಗ ಜಾಗರೂಕರಾಗಿರಿ. ಪಾವತಿ ಮಾಡುವ ಮೊದಲು ವಿವರಗಳನ್ನು ಎರಡು ಬಾರಿ ಪರಿಶೀಲಿಸಿ. ವ್ಯಾಪಾರಿಯ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಪಾವತಿ ಮಾಡುವ ಮೊದಲು ಅವರ ವಿವರಗಳನ್ನು ಕ್ರಾಸ್ ಚೆಕ್ ಮಾಡುವುದು ಯಾವಾಗಲೂ ಉತ್ತಮ. ನಿಮ್ಮ ಯುಪಿಐ ವಹಿವಾಟುಗಳನ್ನು ಟ್ರ್ಯಾಕ್ ಮಾಡಿ ಮತ್ತು ಯಾವುದೇ ಅನಧಿಕೃತ ವಹಿವಾಟುಗಳನ್ನು ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪನಿಗೆ ತಕ್ಷಣ ವರದಿ ಮಾಡಿ.

ಇದನ್ನೂ ಓದಿ: ಎಫ್​ಡಿ ನಿಯಮದಲ್ಲಿ ಬದಲಾವಣೆ: ಆರ್​ಬಿಐ ಹೊಸ ಅಧಿಸೂಚನೆಯಲ್ಲೇನಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.