ETV Bharat / business

ಬೈಜುಸ್ ಸಿಎಫ್​ಒ ಗೋಯಲ್ ರಾಜೀನಾಮೆ: ನಿತಿನ್ ಗೋಲಾನಿಗೆ ಹೆಚ್ಚುವರಿ ಹೊಣೆ - ಬೈಜೂಸ್​ನಲ್ಲಿ ಅಲ್ಪಾವಧಿಯ ಆದರೆ ಪರಿಣಾಮಕಾರಿ ಅವಧಿಯಲ್ಲಿ

ಬೈಜೂಸ್​ನ ಸಿಎಫ್​ಒ ಅಜಯ್ ಗೋಯಲ್ ರಾಜೀನಾಮೆ ನೀಡಿದ್ದಾರೆ.

BYJU's CFO Ajay Goel 'quits', Nitin Golani given addl responsibility as India CFO

author img

By ETV Bharat Karnataka Team

Published : Oct 24, 2023, 1:50 PM IST

ನವದೆಹಲಿ: ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಬೈಜೂಸ್​ನ ಮುಖ್ಯ ಹಣಕಾಸು ಅಧಿಕಾರಿ (Chief Financial Officer- CFO) ಅಜಯ್ ಗೋಯಲ್ ರಾಜೀನಾಮೆ ನೀಡಿದ್ದಾರೆ. 2022 ರ ಹಣಕಾಸು ವರ್ಷದ ಲೆಕ್ಕಪರಿಶೋಧನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅವರು ರಾಜೀನಾಮೆ ನೀಡಿದ್ದು, ಮತ್ತೆ ವೇದಾಂತಾ ಕಂಪನಿಗೆ ಮರಳಲಿದ್ದಾರೆ ಎಂದು ಬೈಜೂಸ್​ ಹೇಳಿಕೆಯಲ್ಲಿ ತಿಳಿಸಿದೆ.

ಉದ್ಯಮದ ಅನುಭವಿ ಪ್ರದೀಪ್ ಕಣಕಿಯಾ ಅವರನ್ನು ಬೈಜೂಸ್ ತನ್ನ ಹಿರಿಯ ಸಲಹೆಗಾರರಾಗಿ ನೇಮಿಸಿದ್ದು, ಅಧ್ಯಕ್ಷ (ಹಣಕಾಸು) ನಿತಿನ್ ಗೋಲಾನಿ ಅವರಿಗೆ ಕಂಪನಿಯ ಹಣಕಾಸು ಕಾರ್ಯವನ್ನು ನಿರ್ವಹಿಸಲು ಭಾರತದ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಯಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.

"ಮೂರು ತಿಂಗಳಲ್ಲಿ ಹಣಕಾಸು ವರ್ಷ 2022 ರ ಲೆಕ್ಕಪರಿಶೋಧನೆಯನ್ನು ಮುಗಿಸಲು ನನಗೆ ಸಹಾಯ ಮಾಡಿದ ಬೈಜೂಸ್​ನ ಸ್ಥಾಪಕರು ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬೈಜೂಸ್​ನಲ್ಲಿ ಅಲ್ಪಾವಧಿಯ ಆದರೆ ಪರಿಣಾಮಕಾರಿ ಅವಧಿಯಲ್ಲಿ ನನಗೆ ಸಿಕ್ಕ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ" ಎಂದು ಗೋಯೆಲ್ ಹೇಳಿದರು. ಹಣಕಾಸು ವರ್ಷ 2022 ಲೆಕ್ಕಪರಿಶೋಧನೆಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಅವರು ಕಂಪನಿಯಿಂದ ಹೊರನಡೆಯಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಣಕಾಸು ವರ್ಷ 2022 ರ ತನ್ನ ದೀರ್ಘಕಾಲದ ಬಾಕಿ ಇರುವ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಲು ಕಂಪನಿಯು ಕೆಲ ಅನುಮೋದನೆಗಳಿಗಾಗಿ ಕಾಯುತ್ತಿದೆ.

ಭಾರತ, ಇಂಗ್ಲೆಂಡ್ ಮತ್ತು ವೇಲ್ಸ್​ಗಳಲ್ಲಿ ಮಾನ್ಯತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪ್ರದೀಪ್ ಕಣಕಿಯಾ ಈ ಹಿಂದೆ ಪ್ರೈಸ್ ವಾಟರ್ ಹೌಸ್ ಮತ್ತು ಕೆಪಿಎಂಜಿಯಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ತಮ್ಮ ಮೂರೂವರೆ ದಶಕಗಳ ಅನುಭವವನ್ನು ಕಂಪನಿಯ ಏಳಿಗೆಗೆ ಧಾರೆ ಎರೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ಆಕಾಶ್ ಅನ್ನು ಬೈಜೂಸ್ ಸ್ವಾಧೀನಪಡಿಸಿಕೊಳ್ಳುವಲ್ಲಿ ನಿತಿನ್ ಗೋಲಾನಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕಂಪನಿಯು ಈ ತಿಂಗಳು ಹಣಕಾಸು ವರ್ಷ 2022 ರ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಬೆಂಗಳೂರು ಮೂಲದ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಬೈಜೂಸ್​ ಇದು ಆನ್ಲೈನ್ ಟ್ಯೂಷನ್ ಮತ್ತು ಕೋಚಿಂಗ್ ಸಂಸ್ಥೆಯಾಗಿದೆ. ಬೈಜೂಸ್ ಅನ್ನು 2011 ರಲ್ಲಿ ಬೈಜು ರವೀಂದ್ರನ್ ಸ್ಥಾಪಿಸಿದರು. 2015ರಲ್ಲಿ ಬೈಜೂಸ್ ದಿ ಲರ್ನಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಯಿತು. ಬೈಜೂಸ್ ಈಗ ಸುಮಾರು $ 8.4 ಬಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿದೆ.

ಇದನ್ನೂ ಓದಿ : ಫೇಕ್ ಲೋನ್ ಆ್ಯಪ್ ತಡೆಗೆ FACE ನೊಂದಿಗೆ ಗೂಗಲ್ ಒಪ್ಪಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.