ETV Bharat / business

ವರ್ಷದ ಮೊದಲ ತಿಂಗಳೇ ಬ್ಯಾಂಕ್​ಗಳಿಗೆ ಸಾಲು ಸಾಲು ರಜೆ; ಗ್ರಾಹಕರೇ ಬೇಗ ಕೆಲಸ ಮುಗಿಸಿ - bank holidays information

ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಯಾವೆಲ್ಲಾ ರಾಜ್ಯಗಳಲ್ಲಿ ಯಾವ ದಿನಾಂಕದಂದು ಬ್ಯಾಂಕ್​ಗಳಿಗೆ ರಜೆ ಇರುತ್ತದೆ ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ.

ಜನವರಿ ತಿಂಗಳ ಬ್ಯಾಂಕ್​ ರಜೆ
ಜನವರಿ ತಿಂಗಳ ಬ್ಯಾಂಕ್​ ರಜೆ
author img

By ETV Bharat Karnataka Team

Published : Dec 28, 2023, 11:23 AM IST

ನವದೆಹಲಿ: 2024 ರ ಜನವರಿ ತಿಂಗಳ ಬ್ಯಾಂಕ್​ ರಜಾ ದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ದೇಶದ ವಿವಿಧೆಡೆ ವಿಶೇಷ ದಿನಗಳ ನಿಮಿತ್ತ ಯಾವೆಲ್ಲಾ ದಿನ ರಜೆ ಇರುತ್ತದೆ ಎಂಬುದರ ಮಾಹಿತಿ ನೀಡಲಾಗಿದೆ. ಹೀಗಾಗಿ ಗ್ರಾಹಕರು ಈ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಬೇಕಿದೆ.

ಆರ್‌ಬಿಐ ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರ ಭಾಗವಾಗಿ, 2024 ರ ಜನವರಿ ತಿಂಗಳ ರಜಾದಿನಗಳ ಪಟ್ಟಿಯನ್ನು ಸಹ ಪ್ರಕಟ ಮಾಡಿದೆ. ಇದರಲ್ಲಿ ರಾಷ್ಟ್ರೀಯ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳು ಸೇರಿವೆ. ಹಾಗಾದರೆ ಯಾವ ದಿನಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ ಎಂಬುದನ್ನು ಇಲ್ಲಿ ನೋಡೋಣ.

ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿದೆ

  • ಜನವರಿ 1 (ಸೋಮವಾರ): ಹೊಸ ವರ್ಷದ ಹಿನ್ನೆಲೆ ದೇಶಾದ್ಯಂತ ಬ್ಯಾಂಕ್ ರಜೆ
  • ಜನವರಿ 11 (ಗುರುವಾರ): ಮಿಜೋರಾಂನಲ್ಲಿ ಮಿಷನರಿ ದಿನದ ಕಾರಣ ರಜೆ
  • ಜನವರಿ 12 (ಶುಕ್ರವಾರ): ಸ್ವಾಮಿ ವಿವೇಕಾನಂದ ಜಯಂತಿಯಂದು ಪಶ್ಚಿಮಬಂಗಾಳದಲ್ಲಿ ಬ್ಯಾಂಕ್ ರಜೆ
  • ಜನವರಿ 13 : ಎರಡನೇ ಶನಿವಾರದ ರಜೆ
  • ಜನವರಿ 14 (ಭಾನುವಾರ): ಲೋಹ್ರಿ ಹಬ್ಬದ ಹಿನ್ನೆಲೆ ಪಂಜಾಬ್ ಸೇರಿ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ ಇಲ್ಲ
  • ಜನವರಿ 15 (ಸೋಮವಾರ): ಸಂಕ್ರಾಂತಿ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ
  • ಜನವರಿ 16 (ಮಂಗಳವಾರ): ಪೊಂಗಲ್ ಹಬ್ಬಕ್ಕೆ ತಮಿಳುನಾಡು ರಾಜ್ಯದಲ್ಲಿ ಬ್ಯಾಂಕ್ ರಜೆ
  • ಜನವರಿ 17 (ಬುಧವಾರ): ತಿರುವಳ್ಳುವರ್ ದಿನದಂದು ತಮಿಳುನಾಡಿನಲ್ಲಿ ರಜೆ
  • ಜನವರಿ 23 (ಮಂಗಳವಾರ): ತುಸು ಪೂಜೆ ಕಾರಣಕ್ಕಾಗಿ ಬಂಗಾಳ ಮತ್ತು ಅಸ್ಸೋಂನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
  • ಜನವರಿ 25 (ಗುರುವಾರ): ಹಿಮಾಚಲ ಪ್ರದೇಶ ಸ್ಥಾಪನೆ ದಿನ ಹಿನ್ನೆಲೆ ಆ ರಾಜ್ಯದಲ್ಲಿ ರಜೆ
  • ಜನವರಿ 26 (ಶುಕ್ರವಾರ): ಗಣರಾಜ್ಯೋತ್ಸವದಂದು ದೇಶದ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ
  • ಜನವರಿ 27 ನಾಲ್ಕನೇ ಶನಿವಾರ
  • ಜನವರಿ 31 (ಬುಧವಾರ): ಮಿ ಡ್ಯಾಂ ಮಿ ಫೈ ಹಿನ್ನೆಲೆ ಅಸ್ಸೋಂನಲ್ಲಿ ಬ್ಯಾಂಕ್ ರಜೆ

ರಜಾದಿನಗಳಲ್ಲಿ ಹಣಕಾಸಿನ ವಹಿವಾಟು ನಡೆಸುವುದು ಹೇಗೆ?: ಜನವರಿ ತಿಂಗಳಲ್ಲಿ ಒಟ್ಟಾರೆ 13 ದಿನ ಬ್ಯಾಂಕ್ ರಜೆಗಳಿದ್ದರೂ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಯುಪಿಐ ಮತ್ತು ಎಟಿಎಂ ಸೇವೆಗಳು ಸಹ ಮುಂದುವರಿಯಲಿವೆ. ಆದ್ದರಿಂದ ನೀವು ಬ್ಯಾಂಕ್‌ಗಳಿಗೆ ಹೋಗದೆಯೇ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು.

ಇದನ್ನೂ ಓದಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನ: ಅತ್ಯಂತ ಹಳೆಯ ಪಕ್ಷಕ್ಕೆ 138ನೇ ವಾರ್ಷಿಕೋತ್ಸವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.