ETV Bharat / business

'ನನಗೆಲ್ಲವೂ ಅವಳೇ, ಆಕೆಯಿಂದಲೇ ಈ ಮಟ್ಟಕ್ಕೆ ಬೆಳೆದೆ': ಪತ್ನಿಯನ್ನು ಕೊಂಡಾಡಿದ ಸುಂದರ್​ ಪಿಚೈ - ಅಂಜಲಿ ತನ್ನ ಶಾಲಾ ಶಿಕ್ಷಣ

ಗೂಗಲ್‌ ಸಿಇಒ ಸುಂದರ್ ಪಿಚೈ ಅವರ ಯಶೋಗಾಥೆ ಎಲ್ಲೆಡೆ ಸಿಗುತ್ತದೆ. ಆದರೆ ಅವರ ವೈಯಕ್ತಿಕ ಜೀವನದ ಕುತೂಹಲಕರ ಸಂಗತಿ ಗೊತ್ತೇ?.

Anjali Pichai And Sundar Pichai Love Story  Google ceo Sundar Pichai  Sundar Pichai life story  ಪತ್ನಿಯನ್ನು ಕೊಂಡಾಡಿದ ಸುಂದರ್​ ಪಿಚೈ  ಅವಳಿಂದಲೇ ನಾನು ಈ ಮಟ್ಟದಲ್ಲಿದ್ದೇನೆ  ಸುಂದರ್ ಪಿಚೈ ಯಾರು  ಸುದ್ದಿ ವೆಬ್‌ಸೈಟ್‌ಗಳು ಮತ್ತು ಪತ್ರಿಕೆ  ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು  ಪತಿ ಪತ್ನಿಯರ ನಡುವಿನ ಬಾಂಧವ್ಯ  ರಾಜಸ್ಥಾನದ ಕೋಟಾದಲ್ಲಿ ಜನಿಸಿದರು  ಅಂಜಲಿ ತನ್ನ ಶಾಲಾ ಶಿಕ್ಷಣ  ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ಪ್ರೇಮ ಕಥೆ
ಪತ್ನಿಯನ್ನು ಕೊಂಡಾಡಿದ ಸುಂದರ್​ ಪಿಚೈ
author img

By

Published : May 1, 2023, 9:43 AM IST

ಹೈದರಾಬಾದ್ (ತೆಲಂಗಾಣ): ಸಂಬಂಧದಲ್ಲಿ ಪತಿ-ಪತ್ನಿಯರಾದರೂ ಅವರ ನಡುವಿನ ಬಾಂಧವ್ಯ ಆಪ್ತ ಸ್ನೇಹಿತರಂತಿರುತ್ತದೆ. ಪರಸ್ಪರರ ನಡುವೆ ಅಂಥದ್ದೊಂದು ಅತ್ಯುತ್ತಮ ಬೆಂಬಲ ವ್ಯವಸ್ಥೆಯನ್ನು ಇಬ್ಬರೂ ಹೊಂದಿರುತ್ತಾರೆ. ಈ ಮಾತು ಅಂಜಲಿ ಪಿಚೈ ಮತ್ತು ಸುಂದರ್ ಪಿಚೈ ಚೆನ್ನಾಗಿ ಬಲ್ಲರು. ಸುಂದರ್ ಪಿಚೈ ಜಾಗತಿಕ ಸರ್ಚ್‌ ಎಂಜಿನ್ ದೈತ್ಯ ಕಂಪನಿ ಗೂಗಲ್‌ನ ಸಿಇಒ. ಆದರೆ ಅಂಜಲಿ ಪಿಚೈ ಬಗ್ಗೆ ಹೆಚ್ಚಿನವರಿಗೆ ಹೆಚ್ಚೇನೂ ತಿಳಿದಿಲ್ಲ. ಸುಂದರ್ ಅವರ ವೃತ್ತಿಜೀವನವನ್ನು ಭದ್ರಪಡಿಸುವಲ್ಲಿ ಅಂಜಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂಬುದು ಗಮನಾರ್ಹ.

ಜನವರಿ 11, 1971 ರಂದು ರಾಜಸ್ಥಾನದ ಕೋಟಾದಲ್ಲಿ ಅಂಜಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಕೋಟಾದಲ್ಲಿಯೇ ಮುಗಿಸಿದ್ದಾರೆ. ಕೆಮಿಕಲ್ ಇಂಜಿನಿಯರಿಂಗ್​ಗಾಗಿ ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದರು. ಐಐಟಿಯಲ್ಲಿ ಅವರು ಸುಂದರ್‌ ಪಿಚೈ ಅವರನ್ನು ಭೇಟಿಯಾದರು. ಮೊದಲ ವರ್ಷದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಕಾಲಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರು ಮದುವೆಯಾಗಲು ನಿರ್ಧರಿಸಿದರು. ದಂಪತಿಗೆ ಈಗ ಕಾವ್ಯ ಎಂಬ ಮಗಳು ಮತ್ತು ಕಿರಣ್ ಎಂಬ ಮಗ ಇದ್ದಾರೆ. ತಮ್ಮ ಬದುಕಿನ ಕಷ್ಟ-ಸುಖದ ಬಗ್ಗೆ ಸುಂದರ್​ ಅವರು ಕಾರ್ಯಕ್ರಮವೊಂದರಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.

"ನಾನು ಈ ಮಟ್ಟಕ್ಕೆ ಬೆಳೆಯಲು ಅಂಜಲಿಯೇ ಕಾರಣ. ನಾವು ಮೊದಲು ಭೇಟಿಯಾದದ್ದು ಐಐಟಿ ಖರಗ್‌ಪುರದಲ್ಲಿ. ತುಂಬಾ ಬ್ಯುಸಿಯಾಗಿದ್ದ ನನ್ನನ್ನು ಬದಲಾಯಿಸಿದ್ದು ಅವಳೇ. ಅವಳಿಗೆ ಪ್ರಪೋಸ್ ಮಾಡುವಾಗ ನನ್ನ ಟೆನ್ಶನ್ ಆಕಾಶಕ್ಕೆ ತಲುಪಿತ್ತು. ಅಂಜಲಿಗೆ ನನ್ನ ಮನಸ್ಸಿನಲ್ಲಿರುವ ಮಾತು ಹೇಳುವುದಕ್ಕಿಂತಲೂ ಗೂಗಲ್‌ನಲ್ಲಿ ಈ ಸ್ಥಾನವನ್ನು ಪಡೆಯುವುದೇ ನನಗೆ ಸುಲಭವಾಗಿತ್ತು" ಎಂದು ಸುಂದರ್ ಪಿಚೈ ತಮ್ಮ ಪ್ರೇಮಕಥೆ ಹೇಳುತ್ತಾರೆ.

"ಆ ಸಂದರ್ಭದಲ್ಲಿ ನಾನು ಆರ್ಥಿಕವಾಗಿ ಸ್ಥಿರವಾಗಿಲ್ಲದಿದ್ದರೂ ಅಂಜಲಿ ನನ್ನನ್ನು ನಂಬಿದ್ದಳು. ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದೇ ಆಕೆಯ ದೊಡ್ಡತನ. ಬಿ.ಟೆಕ್ ನಂತರ ಮಾಸ್ಟರ್ಸ್ ಮಾಡಲು ಅಮೆರಿಕಕ್ಕೆ ಹೋಗಿದ್ದೆ. ಆಗ ಅಂಜಲಿ ವ್ಯಾಪಾರ ವಿಶ್ಲೇಷಕರಾಗಿ ಆಕ್ಸೆಂಚರ್​ನಲ್ಲಿ ಕೆಲಸಕ್ಕೆ ಸೇರಿದರು. ಅಮೆರಿಕದಿಂದ ಕರೆ ಮಾಡುವುದು ತುಂಬಾ ದುಬಾರಿಯಾಗಿತ್ತು. ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ. ಆರು ತಿಂಗಳ ಕಾಲ ನಾವು ಮಾತನಾಡಿಯೇ ಇರಲಿಲ್ಲ. ಆ ಅಂತರ ನಮ್ಮ ಸಂಬಂಧವನ್ನು ಇನ್ನಷ್ಟು ಹತ್ತಿರವಾಗಿಸಿತು. ನಾನು ಕೆಲಸಕ್ಕೆ ಸೇರಿದ ನಂತರ ಆಕೆಯ ಚಿಕ್ಕಪ್ಪನ ಅನುಮತಿ ಪಡೆದು ನಾವಿಬ್ಬರು ಮದುವೆಯಾದೆವು" ಎಂದು ಪಿಚೈ ವಿವರಿಸಿದ್ದಾರೆ.

"ನನ್ನ ಜೀವನದ ಪ್ರತಿಯೊಂದು ಪ್ರಮುಖ ಸನ್ನಿವೇಶದಲ್ಲೂ ಆಕೆಯ ಮುಖ್ಯ ಪಾತ್ರವಿದೆ. ಹಲವು ಪ್ರಮುಖ ವಿಷಯಗಳಲ್ಲಿ ಅನುಮಾನ ಬಂದಾಗ ಅಂಜಲಿ ನನಗೆ ಅತ್ಯುತ್ತಮ ಸಲಹೆಗಾರ್ತಿ. ಅವರು ನನಗೆ ತಕ್ಷಣದ ಪರಿಹಾರ ಸೂಚಿಸುತ್ತಾರೆ. ಮೈಕ್ರೋಸಾಫ್ಟ್, ಯಾಹೂ, ಟ್ವಿಟರ್ ಮುಂತಾದ ಕಂಪನಿಗಳಿಂದ ಹಲವು ಅವಕಾಶಗಳು ಬಂದಾಗ ನನಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗ ಅಂಜಲಿ ಗೂಗಲ್ ತೊರೆಯಬೇಡಿ ಎಂಬ ಸಲಹೆ ನೀಡಿದರು. ಅದನ್ನು ಅನುಸರಿಸಿದ್ದರಿಂದ ನಾನು ಈ ಮಟ್ಟದಲ್ಲಿ ಇದ್ದೇನೆ. ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಂಡಿರುವ ಆಕೆಯಿಂದ ನಾನು ಯಾವಾಗಲೂ ಹೊಸದನ್ನೇ ಕಲಿಯುತ್ತೇನೆ" ಎನ್ನುತ್ತಾರೆ ಪಿಚೈ.

"ಅಂಜಲಿಯದ್ದು ಸ್ವತಂತ್ರ ಭಾವನೆಗಳು. ಮಹಿಳೆಯರಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ನಾವು ಅಮೆರಿಕಕ್ಕೆ ಬಂದ ನಂತರ, ಅವಳು ಸ್ಟ್ಯಾನ್‌ಫೋರ್ಡ್‌ನಲ್ಲಿ ತನ್ನ ಸ್ನಾತಕೋತ್ತರ ಪದವಿ ಮುಗಿಸಿದಳು. ಮನೆಯ ಜವಾಬ್ದಾರಿಗಳು ಮತ್ತು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಇಂಟ್ಯೂಟ್‌ನಲ್ಲಿ ಬಿಸಿನೆಸ್ ಆಪರೇಷನ್ ಮ್ಯಾನೇಜರ್ ಆಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸ ಮತ್ತು ಕುಟುಂಬವನ್ನು ಹೇಗೆ ಸಮತೋಲನಗೊಳಿಸಬೇಕು ಎಂಬುದನ್ನು ಅಂಜಲಿಯಿಂದ ಕಲಿಯಬಹುದು" ಎಂದು ತಮ್ಮ ಪತ್ನಿಯನ್ನು ಪಿಚೈ ಕೊಂಡಾಡಿದರು.

"ಅಂಜಲಿ ಇತರರ ಕಷ್ಟಗಳನ್ನು ಅರಿತು ಅವರಿಗೆ ಸಹಾಯ ಮಾಡುವಲ್ಲಿ ಮುಂದಾಳತ್ವ ವಹಿಸುತ್ತಾರೆ. ಅನೇಕ ದತ್ತಿಗಳ ಪರವಾಗಿ ಸೇವೆ ಸಲ್ಲಿಸುವುದರೊಂದಿಗೆ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಮತ್ತು ಅಮೆರಿಕನ್ ಇಂಡಿಯಾ ಫೌಂಡೇಶನ್‌ನಂತಹ ಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡುತ್ತಾರೆ. ಕ್ಯಾಲಿಫೋರ್ನಿಯಾದ 'ದಿ ಬೇ ಏರಿಯಾ ಡಿಸ್ಕವರಿ ಮ್ಯೂಸಿಯಂ'ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬರಾಗಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಅಂಜಲಿ ಶ್ರಮಿಸುತ್ತಿದ್ದಾರೆ. ಇದು ಆಫ್ರಿಕನ್ನರ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂರಕ್ಷಣೆಗಾಗಿ ಸಾಂಸ್ಕೃತಿಕ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದೆ. ಇದೆಲ್ಲವೂ ನನಗೆ ಸ್ಫೂರ್ತಿ ನೀಡುತ್ತದೆ" ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಮನದಾಳ ಹೇಳಿದರು.

ಇದನ್ನೂ ಓದಿ: ಚಾಟ್​ಜಿಪಿಟಿಗಿಂತ ಪ್ರಬಲ AI ತಯಾರಿಸಲಿದೆ ’ಗೂಗಲ್​ ಡೀಪ್​ ಮೈಂಡ್​’

ETV Bharat Logo

Copyright © 2025 Ushodaya Enterprises Pvt. Ltd., All Rights Reserved.