ಬೆಂಗಳೂರು: ಚುಮುಚುಮು ಚಳಿಯನ್ನೇ ಹೊದ್ದುಕೊಂಡು ಬದುಕುವ ಕಾಶ್ಮೀರಿಗಳ ಭೋಜನ ಶೈಲಿಯೇ ಬೇರೆ. ಮಾಂಸದೂಟ, ಸಾಲ್ಟ್ ಟೀ, ಕಾಶ್ಮೀರಿ ಕೆಹ್ವಾ ಕಣಿವೆಯ ವಿಶೇಷ ಖಾದ್ಯ. ಕಾಶ್ಮೀರಕ್ಕೆ ಸೀಮಿತವಾಗಿದ್ದ ಈ ಕಣಿವೆಯ ಪದಾರ್ಥಗಳೀಗ ಬೆಂಗಳೂರಿನಲ್ಲೂ ಲಭ್ಯವಿವೆ.
ನಿಜ, ಕಾಶ್ಮೀರಿ ಮಹಿಳಾ ಉದ್ಯಮಿಯೊಬ್ಬರು ಬೆಂಗಳೂರು ದಕ್ಷಿಣದಲ್ಲಿ ಕಾಶ್ಮೀರಿ ಫುಡ್ ಸ್ಟೈಲ್ನ ಹೋಟೆಲ್ ಅನ್ನು ಆರಂಭಿಸಿದ್ದಾರೆ. ಇದು ಕಾಶ್ಮೀರದ ಅಭಿರುಚಿ ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ.
ಶ್ರೀನಗರದವರಾದ ಅಜ್ಮತ್ ಅಲಿ ಮಿರ್ ಅವರು, ಕಾಶ್ಮೀರೇತರ ಕುಟುಂಬವನ್ನು ವಿವಾಹವಾಗಿದ್ದಾರೆ. ಕಂಪ್ಯೂಟರ್ ಇಂಜಿನಿಯರ್ ಪಡೆದಿರುವ ಇವರು ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದಾರೆ. ಇಲ್ಲಿಯೇ ಕಾಶ್ಮೀರಿ ಸ್ಟೈಲ್ನ ಸರ್ಪೋಶ್ ಹೆಸರಿನ ಹೋಟೆಲ್ ಶುರು ಮಾಡಿದ್ದಾರೆ.
ವಾಜ್ವಾನ್, ನನ್ ಟೀ ಸ್ಪೆಷಲ್: ಕಾಶ್ಮೀರದ ಏಳು ಖಾದ್ಯಗಳಲ್ಲಿ ವಿಶೇಷ ಊಟವಾದ ವಾಜ್ವಾನ್ ಇಲ್ಲಿ ಲಭ್ಯವಿದೆ. ಅಲ್ಲದೆ, ಕಾಶ್ಮೀರಿ ಕೆಹ್ವಾ ಮತ್ತು ನನ್-ಚಾಯ್ (ಉಪ್ಪು ಚಹಾ) ಇಲ್ಲಿನ ವಿಶೇಷ. ಕಾಶ್ಮೀರದಲ್ಲಿ ಸಿಗುವ ರುಚಿಯಂತೆಯೇ ಇಲ್ಲಿ ಭೋಜನವನ್ನು ತಯಾರು ಮಾಡಲಾಗುತ್ತದೆ.
ಕಾಶ್ಮೀರಿಗಳಿಗೆ ತಮ್ಮ ಮಣ್ಣಿನ ಸೊಗಡಿನ ಭೋಜನ ಕೈತಪ್ಪಬಾರದು ಎಂದು ಯೋಚಿಸಿ, ಬೆಂಗಳೂರಿನಲ್ಲಿಯೇ ಕಾಶ್ಮೀರಿ ಸರ್ಪೋಶ್ ಆರಂಭಿಸಿದೆ. ಇಲ್ಲಿರುವ ಕಾಶ್ಮೀರಿಗಳಿಗೆ ಇದು ನೆರವಾಗಲಿದೆ. ಅಲ್ಲದೇ, ಬೇರೆಯವರು ಕೂಡ ಇದನ್ನು ರುಚಿ ನೋಡಿ ಸವಿಯಬಹುದು. ಕಣಿವೆಯಲ್ಲಿ ಸಿಗುವ ರುಚಿಯಂತೆಯೇ ಇಲ್ಲಿ ಊಟ ಇರುತ್ತದೆ ಎನ್ನುತ್ತಾರೆ ಉದ್ಯಮಿ ಅಜ್ಮತ್ ಅಲಿ ಮಿರ್.
ಹೋಟೆಲಲ್ಲಿದೆ ಕಾಶ್ಮೀರಿ ಸಂಸ್ಕೃತಿ: ಊಟ, ತಿನಿಸು ಮಾತ್ರವಲ್ಲದೇ ರೆಸ್ಟೋರೆಂಟ್ ಅನ್ನು ಕಾಶ್ಮೀರಿಗಳ ಸಂಸ್ಕೃತಿಯ ಮಾದರಿಯಲ್ಲೇ ರೂಪಿಸಲಾಗಿದೆ. ಸರ್ಪೋಶ್ ಅನ್ನು ಬಿದಿರಿನಿಂದ ರೂಪಿಸಿದ ವಸ್ತುಗಳು, ದೊಡ್ಡ ತಾಮ್ರದ ತಟ್ಟೆ, ಕಾಶ್ಮೀರಿ ಕರಕುಶಲ ವಸ್ತುಗಳು ಮತ್ತು ಕಲಾಕೃತಿಗಳನ್ನು ಎಲ್ಲೆಡೆ ಪ್ರದರ್ಶಿಸಲಾಗಿದೆ.
ಇದನ್ನೂ ಓದಿ:ತನ್ನದೇ ಕೇಸ್ ವಾದಿಸಲು 68 ರ ಪ್ರಾಯದಲ್ಲಿ ಕಾನೂನು ಓದಿ ವಕೀಲನಾದ ವ್ಯಕ್ತಿ!