ETV Bharat / business

ಅಮೂಲ್​, ಮದರ್​ ಡೈರಿ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ - ಈಟಿವಿ ಭಾರತ ಕರ್ನಾಟಕ

ದೇಶಾದ್ಯಂತ ಮಾರಾಟವಾಗುವ ಅಮೂಲ್ ಮತ್ತು ಮದರ್​ ಡೈರಿ​ ಹಾಲಿನ ದರ ಏರಿಕೆಯಾಗಲಿದೆ. ನಾಳೆಯಿಂದ ಗ್ರಾಹಕರು ಪ್ರತಿ ಲೀಟರ್‌ ಹಾಲಿಗೆ ಎರಡು ರೂಪಾಯಿ ಹೆಚ್ಚುವರಿ ನೀಡಬೇಕಾಗಿದೆ.

Amul Mother Dairy hike milk prices
Amul Mother Dairy hike milk prices
author img

By

Published : Aug 16, 2022, 3:20 PM IST

ನವದೆಹಲಿ: ಕಳೆದ ಫೆಬ್ರವರಿ​ ತಿಂಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ಎರಡು ರೂ. ಏರಿಸಿದ್ದ ಅಮೂಲ್ ಹಾಗೂ ಮದರ್ ಡೈರಿ ಇದೀಗ ಮತ್ತೆ ಬೆಲೆಯಲ್ಲಿ ಏರಿಸಿದೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಸಲ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಅಮೂಲ್​ ಹಾಗೂ ಮದರ್ ಡೈರಿ ಪ್ರತಿ ಲೀಟರ್​ ಹಾಲಿನಲ್ಲಿ ಎರಡು ರೂ. ಹೆಚ್ಚಿಸಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಅಮೂಲ್ ಗೋಲ್ಡ್​ ಬೆಲೆ ಇದೀಗ ಪ್ರತಿ ಅರ್ಧ ಲೀಟರ್​ಗೆ 31 ರೂ, ಅಮೂಲ್ ತಾಜಾ ಅರ್ಧ ಲೀಟರ್​ಗೆ 25 ರೂ, ಹಾಗೂ ಅಮೂಲ್ ಶಕ್ತಿ ಅರ್ಧ ಲೀಟರ್​​ಗೆ 28 ರೂಪಾಯಿ ಆಗಲಿದೆ. ಎಂಆರ್​ಪಿಯಲ್ಲಿ ಶೇ. 4ರಷ್ಟು ಜಾಸ್ತಿಯಾಗಿದೆ. ಮದರ್ ಡೈರಿ ಕೂಡ ಹಾಲಿನ ಉತ್ಪನ್ನಗಳಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಸದ್ಯ ಟೋನ್ಡ್ ಹಾಲು ಪ್ರತಿ ಲೀಟರ್​ಗೆ 51 ರೂ. ಇದ್ದು, ಡಬಲ್ ಟೋನ್ಡ್ ಹಾಲಿನ ದರ ಲೀಟರ್​ಗೆ 45 ರೂ ಆಗಲಿದೆ.

ಇದನ್ನೂ ಓದಿ: ಗ್ರಾಹಕರ ಜೇಬಿಗೆ ಕತ್ತರಿ: ಅಮೂಲ್​ ಹಾಲಿನ ದರದಲ್ಲಿ ಲೀಟರ್​ಗೆ 2 ರೂ. ಏರಿಕೆ

ಹಾಲಿನ ಉತ್ಪಾದನೆಯ ವೆಚ್ಚ ಹೆಚ್ಚಳವಾಗಿರುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೂಲ್ ಕಂಪನಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.